ಆಗಸ್ಟ್‌ 15 ಅಂದರೆ…ಭಿನ್ನ ಉತ್ಸವ


Team Udayavani, Aug 18, 2018, 12:32 PM IST

22145.jpg

ಶಾಲಾ-ಕಾಲೇಜು, ಸರಕಾರಿ, ಖಾಸಗಿ ಕಚೇರಿ.. ಇತರೆಡೆ ಧ್ವಜಾರೋಹಣ, ಸಿಹಿ ಹಂಚಿ, ಸಾಂಸ್ಕೃತಿಕ ಕಾರ್ಯಕ್ರಮಕಷ್ಟೆ ಸೀಮಿತವಾಗಿದೆ.  ಅದೂ ಶಿಷ್ಟಾಚಾರಕ್ಕೆ? ಆದರೆ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಕೆಲಸ ಭಾಗಶಃ ಆಗುತ್ತಿಲ್ಲ ಎನ್ನುವ ಅಸಮಾಧಾನ ಬಹುತೇಕರಲ್ಲಿದೆ. ಆದರೆ ಈ ಬಾರಿ ಕೊಟ್ಟೂರಿನಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಸ್ಮರಿಸುವ ಕೆಲಸ ಆಯಿತು. ಅದು ಯಾವುದೇ ಶಾಲಾ, ಕಾಲೇಜಿನ ವೇದಿಕೆಯಲ್ಲಿ ಅಲ್ಲ. ಬದಲಾಗಿ ಸಾರ್ವಜನಿಕರಲ್ಲಿ. ಇದು ದೇಶಾಭಿಮಾನಿಗಳ ಹೃದಯ ಗೆದ್ದಿತು. ಕಾಲಗರ್ಭದಲ್ಲಿ ಸೇರಿದ್ದ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡಿಕೆ, ನೋಡಿ,  ಸ್ಮರಿಸಿ, ಯುವ ಪೀಳಿಗೆಗೆ ಪರಿಚಯಿಸುವ ವಿಶಿಷ್ಟ ಯೋಚನೆ ಇದು. ಇದನ್ನು ಜಾರಿ ಮಾಡಿದವರು ಊರಿನ ಬಣಕಾರ ಕೆಂಚಪ್ಪಗೆ. ನಡೆದಾಡುವ ಕೋಶ ಈ ಬಣಕಾರ ಕೆಂಚಪ್ಪ.
ಈ ಹೆಸರು ಏಕೆಂದರೆ, ಸ್ವಾತಂತ್ರÂ ಸಂಗ್ರಾಮದಲ್ಲಿ ಕೊಟ್ಟೂರು ಹಾಗೂ ಸುತ್ತಮುತ್ತಲಿನ ಸ್ವಾತಂತ್ರ್ಯ ಯೋಧರ ಬಗ್ಗೆ ಸುಲಲಿತವಾಗಿ ಮಾತನಾಡುವ ವ್ಯಕ್ತಿ ಅಂದರೆ ಇವರೇ. 65 ವಸಂತ ದಾಟಿರುವ ಕೆಂಚಪ್ಪ ನಿವೃತ್ತ ಕಂದಾಯ ನಿರೀಕ್ಷಕರು. ಇವರ ತಂದೆ ಬಣಕಾರ ಸಿದ್ಲಿಂಗಪ್ಪ ಹಾಗೂ ದೊಡ್ಡಪ್ಪ ಬಣಕಾರ ಗೌಡಪ್ಪ ಮೂಲತಃ ಸ್ವಾತಂತ್ರ್ಯ ಯೋಧರು. ಹೀಗಾಗಿ ಇವರ ಮನೆ ಹೋರಾಟಗಾರರ ಚಿಂತನ-ಮಂಥನಕ್ಕೆ ವೇದಿಕೆ ಆಗಿ, ಮಾತುಕತೆಗೆ ಕಿವಿ ಆಗುತ್ತಿದ್ದ ಕೆಂಚಪ್ಪನರು ಹೋರಾಟಗಾರರ ಆತ್ಮಸ್ಥೈರ್ಯ, ಗಟ್ಟಿತನಕ್ಕೆಲ್ಲ ಸಾಕ್ಷಿ$ ಆಗುತ್ತಿದ್ದರು.

ಫ್ಲೆಕ್ಸ್‌ ನಲ್ಲಿ ಐಡಿಯಾ ಕ್ಲಿಕ್‌ ಆಯ್ತು.. 
 ಈ ಸಲ ಸ್ವಾತಂತ್ರೋತ್ಸವ ಭಿನ್ನವಾಗಿರಬೇಕು. ಬರೀ ಸಿಹಿ ಹಂಚಿಕೆಯಲ್ಲಿ ಮುಗಿಯಬಾರದು ಅನ್ನೋ ಯೋಚನೆ ಬಂತು ಇವರಿಗೆ.  ಏಕೆಂದರೆ, ಸುಮ್ಮನೆ ಮಕ್ಕಿಕಾಮಕ್ಕಿ ಅಂತ ಯೋಧರನ್ನು ನೆನೆಯುತ್ತೇವೆ. ಆದರೆ, ಕೂಡ್ಲಿಗಿ ತಾಲ್ಲೂಕಿನಲ್ಲಿ ಸುಮಾರು  ಜನ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಲ್ಗೊಂಡವರ ಬಗ್ಗೆ ಮಾಹಿತಿ ಇಲ್ಲ.  ಈ ತಾಲೂಕಿನಲ್ಲಿ ಸೆರೆಮನೆ ವಾಸ ಅನುಭವಿಸಿದ್ದಾರೆ. ಅದರಲ್ಲಿ 34 ಜನ ಕೊಟ್ಟೂರಿನವರು. ಇಂಥವರ ಕೊಡುಗೆಯನ್ನು ವರ್ಷದಲ್ಲೊಮ್ಮೆಯೂ ಸ್ಮರಿಸದೇ ಇದ್ದರೆ ನಮ್ಮ ಜೀವನ ವ್ಯರ್ಥ ಎಂದು ತಿಳಿದ ಬಣಕಾರ ಕೆಂಚಪ್ಪರ ಯೋಚನೆ,  ಫ್ಲೆಕ್ಸ್‌ ರೂಪದಲ್ಲಿ ಜನ್ಮ ತಾಳಿತು.  ಹೋರಾಟಗಾರರ ಹೆಸರು, ಭಾವಚಿತ್ರ ಲಭ್ಯ ಶಿಕ್ಷೆಯಾದ  ವರ್ಷ ಯಾವುದು ?ತಿಂಗಳು ಎಷ್ಟು? ಯಾವ ಜೈಲಲ್ಲಿ ಸೆರೆಮನೆ ವಾಸ ಅನುಭವಿಸಿದರು ಇತ್ಯಾದಿ ಮಾಹಿತಿ ಹೊತ್ತು ಕೊಟ್ಟೂರಿನ ನ್ಯೂಕ್ಲಿಯರ್‌ ಪ್ರಿಂಟ್ಸ್‌ಗೆ ಹೋದರು. ಅಲ್ಲಿನ ಮಾಲೀಕ ಕಣವಿಮs… ಗುರುಬಸವರಾಜ ಸಹ ಸ್ವಾತಂತ್ರ್ಯ ಹೋರಾಟಗಾರರು, ಸೈನಿಕರ ಬಗ್ಗೆ ವಿಶೇಷ ಅಭಿಮಾನ ಉಳ್ಳವರು. ಹೀಗಾಗಿ, ಕೆಂಚಪ್ಪ ಕೊಟ್ಟ ಮಾಹಿತಿಗೆ ಒಂದು ರೂಪ ಕೊಟ್ಟು, ಬಸ್‌ ನಿಲ್ದಾಣ, ಉಜ್ಜಯಿನಿ ರಸ್ತೆಯಲ್ಲಿ ಫ್ಲೆಕ್ಸ್‌ ಕಟ್ಟಿದರು. ಅಲ್ಲದೆ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಗೆಳೆಯರ ವಾಟ್ಸಪ್‌, ಫೇಸ್‌ಬುಕ್‌ಗೆ ಕಳುಹಿಸಿದ್ದರಿಂದ ದೇಶ-ವಿದೇಶಗಳಲ್ಲಿ ನೆಲೆಸಿರುವ ಕೊಟ್ಟೂರಿಗರಿಗೂ ಈ ಸುದ್ದಿ ತಲುಪಿತು!.
 
ಯುವ ಪೀಳಿಗೆಗೆ ಸ್ಥಳೀಯ ಸ್ವಾತಂತ್ರ್ಯ ಹೋರಾಟಗರಾರರನ್ನು ಪರಿಚಯಿಸುವ ಕೆಲಸ ಯಶಸ್ವಿಗೊಂಡಿತು. ಈವರೆಗೂ ನಾಯಕರ ಹುಟ್ಟುಹಬ್ಬ, ಶುಭಾಶಯ ಕೋರುವ ಜಾಹೀರಾತು ಮತ್ತು ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದ ಕಟೌಟ್ಸ್‌, ಬ್ಯಾನರ್‌, ಪ್ಲೆಕ್ಸ್‌.. ಇತ್ಯಾದಿಗಳು ಜನರಲ್ಲಿ ಸ್ಥಳೀಯ ಸ್ವಾತಂತ್ರ್ಯ ಯೋಧರನ್ನು ಪರಿಚಯಿಸಿ, ಜಾಗೃತಿ ಮೂಡಿಸುವ ಕೆಲಸಕ್ಕೆ ಬಳಕೆ ಆಗಿದ್ದು ಉತ್ತಮ ಬೆಳವಣಿಗೆ. ಒಟ್ಟಿನಲ್ಲಿ, ಜನಮಾನಸದಿಂದ ಮರೆಯಾಗಿದ್ದವರನ್ನು ಸಾರ್ವಜನಿಕವಾಗಿ ಸ್ಮರಿಸಿ, ಯುವ ಜನಾಂಗದಲ್ಲಿ ದೇಶಭಕ್ತಿ ವೃದ್ಧಿಸುವಂತೆ ಮಾಡಿದ್ದಾರೆ ಎನ್ನುತ್ತಾರೆ ಕೊಟ್ಟೂರಿನ ಪಿ.ಎಂ ಬಸಲಿಂಗಯ್ಯ.

ಹೋರಾಟದ ಕೇಂದ್ರವೇ ಕೊಟ್ಟೂರು!.
1857-58 ರಿಂದ 1947 ರವರೆಗೆ ದೇಶದೆಲ್ಲೆಡೆ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿದ ದಿನಗಳವು. ಬಳ್ಳಾರಿ ಜಿಲ್ಲೆಯಲ್ಲೂ ಹೋರಾಟದ ಕಾವು ತೀವ್ರವಾಗಿತ್ತು. ಬಳ್ಳಾರಿ ಬಿಟ್ಟರೆ ಗರಿಷ್ಠ ಮಟ್ಟದಲ್ಲಿ ಸಕ್ರಿಯಗೊಂಡಿದ್ದು ಕೊಟ್ಟೂರು. ಉಜ್ಜಯಿನಿ, ತೂಲಹಳ್ಳಿ, ಹರಾಳು, ಕೋಗಳಿ.. ಗ್ರಾಮಗಳ ಹೋರಾಟಗಾರರಿಗೆ ಮತ್ತು ನಾನಾ ರಾಷ್ಟ್ರೀಯ ಆಂದೋಲನಗಳಿಗೆ ಕೊಟ್ಟೂರು ಕೇಂದ್ರಸ್ಥಾನ ಆಗಿತ್ತು! 1930 ರಲ್ಲಿ ಈಚಲ ಮರಗಳನ್ನು ಕಡಿದು, ಹೆಂಡ-ಸಾರಾಯಿ ಅಂಗಡಿಗಳ ಮುಂದೆ ಸತ್ಯಾಗ್ರಹ ಮಾಡಿದ್ದು ಕೊಟ್ಟೂರಿನಲ್ಲಿ ಸ್ವಾತಂತ್ರ್ಯ ಅಂದೋಲನದ ಮೈಲುಗಲ್ಲು. ಅಲ್ಲಿಂದ ಪ್ರಾರಂಭವಾದ ಹೋರಾಟದ ಹಾದಿ ರೋಚಕ ತಿರುವುಗಳನ್ನು ಪಡೆದುಕೊಂಡು, ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ತನ್ನದೇ ಕೊಡುಗೆ ನೀಡಿತು. 

 ಸ್ವರೂಪಾನಂದ ಕೊಟ್ಟೂರು

ಟಾಪ್ ನ್ಯೂಸ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಸಮುದ್ರದ ಮಧ್ಯೆ ಮೀನುಗಾರ ನಾಪತ್ತೆ

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.