ವಿದೇಶಿ ಪಿಚ್‌ನಲ್ಲಿ ಕುಲದೀಪ್‌ ಸ್ಪಿನ್‌ ಪಂಚ್‌


Team Udayavani, Jul 7, 2018, 12:01 PM IST

3.jpg

ವಿದೇಶಿ ಪಿಚ್‌ಗಳಲ್ಲಿ ವಿಕೆಟ್‌ ಪಡೆಯಲು ವೇಗದ ಬೌಲರ್‌ಗಳೇ ಪರದಾಡುವಂತಹ ಸಂದರ್ಭದಲ್ಲಿ ಒಂದೇ ಪಂದ್ಯದಲ್ಲಿ ಐದು ವಿಕೆಟ್‌ ಪಡೆಯುವ ಮೂಲಕ ಲೆಗ್‌ಸ್ಪಿನ್ನರ್‌ ಕುಲದೀಪ್‌ ಯಾದವ್‌ ಭರವಸೆ ಮೂಡಿಸಿದ್ದಾರೆ. 
ಇಂಗ್ಲೆಡ್‌ನ‌ಲ್ಲಿರುವ ಪಿಚ್‌ಗಳು ಪ್ರಮುಖವಾಗಿ ವೇಗದ ಬೌಲರ್‌ಗಳಿಗೆ ಹೇಳಿ ಮಾಡಿಸಿದಂತಿರುತ್ತದೆ. ಜತೆಗೆ ಈವರೆಗೆ ಭಾರತೀಯ ಸ್ಪಿನ್ನರ್‌ಗಳು ಯಾರೂ ಸಹ ವಿದೇಶಿ ಪಿಚ್‌ಗಳಲ್ಲಿ ಮಿಂಚಿದಿಲ್ಲ. ಆದರೆ, ಮಂಗಳವಾರ ವಿದೇಶದಲ್ಲಿ ಆಡಿದ ತಮ್ಮ ಮೊದಲ ಪಂದ್ಯದಲ್ಲಿಯೇ ಬಲಿಷ್ಠ ಇಂಗ್ಲೆಂಡ್‌ ತಂಡದ ಐವರು ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡುವ ಮೂಲಕ ಮೂಲಕ ತಮ್ಮ ಸಾಮರ್ಥಯ ಸಾಬೀತುಪಡಿಸಿದ್ದಾರೆ. 

ಆ ಮೂಲಕ ಸ್ಪಿನ್ನರ್‌ಗಳ ಆಟ ಇಂಗ್ಲೆಂಡ್‌ನ‌ಲ್ಲಿ ನಡೆಯುವುದಿಲ್ಲ ಎಂಬ ಭಾವನೆಯಲ್ಲಿದ್ದ ಇಂಗ್ಲೆಂಡ್‌ ಆಟಗಾರರಿಗೆ ಎಚ್ಚರಿಕೆಯ ಸಂದೇಶ ಕಳುಹಿಸಿದ್ದಾರೆ. ಮೊದಲ ಪಂದ್ಯದಲ್ಲೇ ಕುಲದೀಪ್‌ ದಾಳಿಗೆ ಹೆದರಿದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಇದೀಗ ಕುಲದೀಪ್‌ ಬೌಲಿಂಗ್‌ ಎದುರಿಸಲು ಹಲವು ತಂತ್ರಗಳನ್ನು ರೂಪಿಸುತ್ತಿದ್ದಾರೆ. 
ಇದರೊಂದಿಗೆ ಮಂಗಳವಾರ ಓಲ್ಡ್‌ ಟ್ರಾಪೋರ್ಡ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಐದು ವಿಕೆಟ್‌ ಪಡೆದ ಮೊದಲ ರಿಸ್ಟ್‌ ಬೌಲರ್‌ ಎಂಬ ಹೆಗ್ಗಳಿಕೆಗೆ ಕುಲದೀಪ್‌ ಪಾತ್ರವಾಗಿದ್ದಾರೆ. ಜತೆಗೆ ಟಿ20 ಕ್ರಿಕೆಟ್‌ ಮಾದರಿಯಲ್ಲಿ ಐದು ವಿಕೆಟ್‌ ಪಡೆದ 3ನೇ ಭಾರತೀಯ ಬೌಲರ್‌ ಎನಿಸಿಕೊಂಡಿದ್ದಾರೆ. ಈ ಮೊದಲು ಯಜುವೇಂದ್ರ ಚಾಹಲ್‌ ನಾಲ್ಕು ಓವರ್‌ಗಳಲ್ಲಿ 25 ರನ್‌ ನೀಡಿ 6 ವಿಕೆಟ್‌ ಪಡೆದಿದ್ದರು. ನಂತರದಲ್ಲಿ ವೇಗಿ ಭುವನೇಶ್ವರ್‌ ಕುಮಾರ್‌ 24 ರನ್‌ ನೀಡಿ 5 ವಿಕೆಟ್‌ ಪಡೆದಿದ್ದರು. 

ವಿದೇಶಿ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳು ಮೋಡಿ ಮಾಡಿಲ್ಲ: ಯಾವುದೇ ತಂಡ ಭಾರತದ ಪ್ರವಾಹ ಕೈಗೊಳ್ಳುವ ಮೊದಲ ಭಾರತೀಯ ಸ್ಪಿನ್ನರ್‌ಗಳನ್ನು ಎದುರಿಸಲು ಸಮರ್ಥವಾದ ಬ್ಯಾಟ್ಸ್‌ಮನ್‌ಗಳೊಂದಿಗೆ ಬರುವಂತಹ ಪರಿಸ್ಥಿತಿ ಇಂದಿಗೂ ಮುಂದುವರಿದಿದೆ. ಆದರೆ, ಭಾರತೀಯರು ವಿದೇಶಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಭಾರತೀಯ ಸ್ಪಿನ್ನರ್‌ಗಳು ವಿಕೆಟ್‌ ಪಡೆಯಲು ಹರಸಾಹಸಪಡುತ್ತಾರೆ. ಇದರಿಂದಾಗಿಯೇ ಅನಿಲ್‌ ಕುಂಬ್ಳೆ, ಹರ್ಭಜನ್‌ ಸಿಂಗ್‌, ರವಿಚಂದ್ರನ್‌ ಅಶ್ವಿ‌ನ್‌ ಹಾಗೂ ರವೀಂದ್ರ ಜಡೇಜಾರಂತಹ ಸ್ಪಿನ್ನರ್‌ಗಳು ಸಹ ವಿದೇಶಿ ಪಿಚ್‌ಗಳಲ್ಲಿ ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಆದರೆ, ಕುಲದೀಪ್‌ ಮೊದಲ ಪಂದ್ಯದಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದ್ದು, ವಿದೇಶ ಪಿಚ್‌ಗಳಲ್ಲಿ ಭಾರತ ತಂಡಕ್ಕೆ ಅಸ್ತ್ರ ಸಿಕ್ಕಿದಂತಾಗಿದೆ. 

ಅಶ್ವಿ‌ನ್‌-ಜಡೇಜಾ ಮೀರಿಸುವ ಬೌಲಿಂಗ್‌:  ಒಂದು ಕಾಲದಲ್ಲಿ ಭಾರತೀಯ ಸ್ಪಿನ್‌ ಜೋಡಿಯಾಗಿದ್ದ ರವಿಚಂದ್ರನ್‌ ಅಶ್ವಿ‌ನ್‌ ಹಾಗೂ ರವೀಂದ್ರ ಜಡೇಜಾ ಜೋಡಿ ಪರ್ಯಾಯ ಎಂಬಂತೆ ಯುವಕರಾದ ಕುಲದೀಪ್‌ ಹಾಗೂ ಚಾಹಲ್‌ ಜೋಡಿ ಪ್ರದರ್ಶನ ನೀಡುತ್ತಿದ್ದಾರೆ. ಇದರಿಂದಾಗಿ ಈಗ ಟೀಂ ಇಂಡಿಯಾದಲ್ಲಿ ಪೈಪೋಟಿ ಶುರುವಾಗಿದೆ. ತಂಡದಲ್ಲಿ ಸ್ಥಾನ ಪಡೆಯಲು ಉತ್ತಮ ಪ್ರದರ್ಶನ ಬಿಟ್ಟು ಬೇರೆ ಆಯ್ಕೆಗಳಿಲ್ಲ. 

ಹ್ಯಾಟ್ರಿಕ್‌ ಪಡೆದ ಮೂರನೇ ಆಟಗಾರ: ಭಾರತ ತಂಡ ಸೇರಿಕೊಂಡಾಗಿನಿಂದಲೂ ಹಲವು ದಾಖಲೆಗಳಿಗೆ ಸಾಕ್ಷಿಯಾಗುತ್ತಿರುವ ಕುಲದೀಪ್‌ ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದರು. ಆ ಮೂಲಕ ಏಕದಿನ ಪಂದ್ಯದಲ್ಲಿ ಚೇತನ್‌ ಶರ್ಮಾ ಮತ್ತು ಕಪಿಲ್‌ ದೇವ್‌ ನಂತರ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಬೌಲರ್‌ ಎಂಬ ಕೀರ್ತಿಗೆ ಯಾದವ್‌ ಪಾತ್ರವಾಗಿದ್ದರು. 

ದಿಗ್ಗಜರಿಂದ ಮೆಚ್ಚುಗೆ: ಎಲ್ಲ ಮಾದರಿಯಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕುಲದೀಪ್‌ ಯಾದವ್‌ ದಿಗ್ಗಜ ಆಟಗಾರರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮಂಗಳವಾರ ಇಂಗ್ಲೆಂಡ್‌ ವಿರುದ್ಧ 5 ವಿಕೆಟ್‌ ಪಡೆದ ಹಿನ್ನೆಲೆಯಲ್ಲಿ ಹಲವಾರು ಹಿರಿಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುಲದೀಪ್‌ ಯಾದವ್‌ ಸ್ಪಿನ್‌ ಮೋಡಿಗೆ ಬೆರಗಾಗಿದ್ದ ಸ್ಪಿನ್‌ ದಿಗ್ಗಜ ಶೇನ್‌ ವಾರ್ನ್, ಕುಲದೀಪ್‌ ಯಾದವ್‌ ಬೌಲಿಂಗ್‌ ನಿಜಕ್ಕೂ ಅತ್ಯುತ್ತಮವಾಗಿದ್ದು, ಇದೇ ರೀತಿಯಾಗಿ ಅವರು ಬೌಲಿಂಗ್‌ ಮಾಡಿದ್ರೆ ಜಗತ್ತಿನ ಮತ್ತೂರ್ವ ಲೆಗ್‌ ಸ್ಪಿನ್ನರ್‌ ಪಾಕ್‌ನ ಯಾಸೀರ್‌ ಅವರಿಗೆ ಸವಾಲಾಗಬಲ್ಲರು ಎಂದು ಈ ಹಿಂದೆ ಟ್ವೀಟ್‌ ಮಾಡಿದ್ದರು. 

ವೆಂ.ಸುನೀಲ್‌ ಕುಮಾರ್‌

ಟಾಪ್ ನ್ಯೂಸ್

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Kundapura: ಬಾವಿಗೆ ಬಿದ್ದು ಯುವತಿ ಸಾವುKundapura: ಬಾವಿಗೆ ಬಿದ್ದು ಯುವತಿ ಸಾವು

Kundapura: ಬಾವಿಗೆ ಬಿದ್ದು ಯುವತಿ ಸಾವು

ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Kasaragod: ಚಪ್ಪರ ತೆಗೆಯುತ್ತಿದ್ದಾಗ ವಿದ್ಯುತ್‌ ಶಾಕ್‌: ಕಾರ್ಮಿಕನ ಸಾವು

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Kundapura: ಬಾವಿಗೆ ಬಿದ್ದು ಯುವತಿ ಸಾವುKundapura: ಬಾವಿಗೆ ಬಿದ್ದು ಯುವತಿ ಸಾವು

Kundapura: ಬಾವಿಗೆ ಬಿದ್ದು ಯುವತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.