ಕಂಬದಹಳ್ಳಿ ಬಸದಿಗಳ ತವರು


Team Udayavani, Apr 28, 2018, 12:22 PM IST

2vffd.jpg

ನಾಗಮಂಗಲ ತಾಲ್ಲೂಕಿನಲ್ಲಿ ಎರಡು ಸ್ತಂಭ ಶಾಸನಗಳಿವೆ. ಅದರಲ್ಲಿ ಒಂದು ಕೆಳೆಗೆರೆಯ ಸ್ತಂಭ  ಶಾಸನ. ಮತ್ತೂಂದು ಕಂಬದಹಳ್ಳಿಯ ಮಾನಸ್ತಂಭ. ಮಾನಸ್ತಂಭವಿರುವುದು ಅಲ್ಲಿಯ ಇತಿಹಾಸ ಪ್ರಸಿದ್ಧವಾದ ಪಂಚಕೂಟ ಬಸದಿಯ ಮುಂಭಾಗದಲ್ಲಿ. ಎತ್ತರವಾದ ಆಯತಾಕಾರದ ಜಗುತಿಯ ಆಧಾರದಲ್ಲಿ ಸ್ಥಿರವಾಗಿ ನಿಂತಿರುವ ಈ ಸ್ತಂಭವು ಸುಮಾರು 50 ಅಡಿ ಎತ್ತರವಾಗಿದೆ. ಈ ಸ್ತಂಭದ ದಂಡ ಹಾಗು ಬೋದಿಗೆಗಳು ಅಷ್ಟ ಕೋನಾಕೃತಿಯಲ್ಲಿವೆ. ಇದರ ಚೌಕಟ್ಟಿನ ಮೇಲೆ ಆಸನ ರೂಢ ದ್ವಿಭುಜಯಕ್ಷ ಸಿದ್ಧಾಯಿಕನ ಮೂರ್ತಿ ಇದೆ. ಈ ಭವ್ಯವಾದ ಮಾನಸ್ತಂಭದ ಕಾರಣದಿಂದಲೇ ಈ ಗ್ರಾಮವನ್ನು ಕಂಬದಹಳ್ಳಿ ಎಂದು ಕರೆಯುತ್ತಾರೆ.

ಕಂಬದ ಮೇಲಿನ ಶಾಸನ
ಜಗುತಿಯನ್ನು ಏರಿ ಹೋದರೆ ಕಂಬದ ಬುಡದಲ್ಲಿ ನಾಲ್ಕು ಆಯತಾಕಾರದ ಶಿಲಾ ಹಲಗೆಗಳಲ್ಲಿ ಶಾಸನಗಳನ್ನು ಕೆತ್ತಲಾಗಿದೆ. ಕಂಬದ ಉತ್ತರ, ದಕ್ಷಿಣ ಮತ್ತು ಪೂರ್ವ ಮುಖದ ಹಲಗೆಗಳಲ್ಲಿ ಜೈನ ಯತಿಗಳ ವಿವರ ಗಳನ್ನು ಕೆತ್ತಲಾಗಿದೆ. ಪಶ್ಚಿಮ ದಿಕ್ಕಿನಲ್ಲಿರುವ ಹಲಗೆಯಲ್ಲಿ ಅತಿಮುಖ್ಯವಾದ ದತ್ತಿ ಶಾಸನವನ್ನು ಕೆತ್ತಲಾಗಿದೆ. 

ಶಾಸನದ ಮೂರು ದಿಕ್ಕುಗಳಲ್ಲಿ ಜೈನ ಪರಂಪರೆಯ ಮಹಾ ಮುನಿಗಳಾದ ಅನಂತ ವೀರ್ಯ, ಬಾಲಚಂದ್ರ, ಕಳನೆಲೆ ದೇವ, ಆಶೊ¤àಪವಸಿ, ಹೇಮ ನಂದಿ ಮುನೀಶ್ವರ, ವಿನಯಾನಂದಯತಿ ಅಥವಾ ವಿನಯನಂದಿ ದೇವ, ಹಾಗು ಪಲ್ಲ ಪಂಡಿತ ಯತಿಗಳ ಹೆಸರುಗಳನ್ನು ಕೆತ್ತಲಾಗಿದೆ. ಪಲ್ಲಪಂಡಿತ ಯತಿಗಳು ವಿದ್ವಾಂಸರಾಗಿದ್ದು ವ್ಯಾಕರಣ ಶಾಸ್ತ್ರದಲ್ಲಿ ಪಾಂಡಿತ್ಯವನ್ನು ಪಡೆದಿದ್ದರು ಎಂಬ ಅಂಶ ಶಾಸನದಿಂದ ತಿಳಿದುಬರುತ್ತದೆ. ಈ ಶಾಸನದಲ್ಲಿ ಇವರನ್ನು ಅಭಿಮಾನಧನಿ, ಚಿಂತಾಮಣಿ, ಕಾಮಧೇನು, ಕಲ್ಪವೃಕ್ಷ ಹಾಗು ಮಹಾದಾನಿ ಎಂದು ವರ್ಣಿಸಲಾಗಿದೆ. 

ಪಶ್ಚಿಮ ಮುಖದ ಶಾಸನ
ಈ ಶಾಸನದಲ್ಲಿ ಹೊಯ್ಸಳ ವಿಷ್ಣುವರ್ಧನನು ತನ್ನ ದಂಡನಾಯಕನಾಗಿದ್ದ ಗಂಗರಾಜನಿಗೆ ನೀಡಿದ್ದ ದತ್ತಿಯ ವಿವರವಿದೆ. ಚೋಳರಿಂದ ತಲಕಾಡನ್ನು ಗೆದ್ದ ಸಂದರ್ಭದಲ್ಲಿ, ಆ ವಿಜಯಕ್ಕೆ ಕಾರಣನಾದ ಮಹಾಪ್ರಧಾನಿ ಗಂಗರಾಜನನ್ನು ಕರೆದು, ನಿನಗೆ ಏನು ಬೇಕು ಕೇಳಿಕೋ ಎಂದನಂತೆ. ಆಗ ಗಂಗರಾಜನು, ಬಿಂಡಿಗನವಿಲೆಯ ತೀರ್ಥಕ್ಕೆಂದು ಭೂಮಿ ಕೇಳುತ್ತಾನೆ. ಆಗ ದೊರಕಿದ್ದೇ ಕಂಬದಹಳ್ಳಿಯ ಜಮೀನು. ಗಂಗರಾಜ ಅದನ್ನು ತನ್ನ ಗುರುಗಳಾದ ಶುಭಚಂದ್ರ ಸಿದ್ಧಾಂತ ದೇವನಿಗೆ ನೀಡುತ್ತಾನೆ. ಇವಿಷ್ಟು ಈ ಕಂಬದಲ್ಲಿರುವ ಶಾಸನದ ವಿವರ.

ಕಂಬದಹಳ್ಳಿಯ ಪಂಚಕೂಟ ಬಸದಿ
ಕಂಬದಹಳ್ಳಿಯ ಪಂಚಕೂಟ ಬಸದಿಗೆ ಸಾವಿರ ವರ್ಷಗಳ ಇತಿಹಾಸವಿದೆ. ಶ್ರವಣಬೆಳಗೂಳದಿಂದ ಕೇವಲ 12 ಕಿ.ಮಿ. ದೂರದಲ್ಲಿರುವ ಈ ಬಸದಿ, ಗಂಗರ ಕೊಡುಗೆ. ಕೇಂದ್ರ ಪುರಾತತ್ವ ಇಲಾಖೆಯ ವತಿಯಿಂದ ಜೀರ್ಣೋದ್ಧಾರವಾಗಿರುವ ಈ ಬಸದಿ ನಯನಮನೋಹರವಾಗಿದೆ.  ಹತ್ತು ವರ್ಷಗಳ ಹಿಂದೆ ಇದೇ ಬಸದಿ ಕುಸಿಯುವ ಹಂತದಲ್ಲಿತ್ತು. ಈ ಬಸದಿಯನ್ನು ಬುನಾದಿ ಇಲ್ಲದೆ ನಿರ್ಮಿಸಿರುವುದು ಇದಕ್ಕೆ ಪ್ರಮುಖ ಕಾರಣವಿರಬಹುದು. 2003-04 ರಲ್ಲಿ ನಡೆದ ತೀರ್ಥಂಕರ ಮಹಾವೀರರ 2600 ನೆಯ ಜಯಂತಿಯ ಉತ್ಸವದ ಸಂದರ್ಭದಲ್ಲಿ ಅನೇಕ ಜೈನಮಂದಿರಗಳ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿತ್ತು.  ಈ ಕಾರ್ಯಕ್ರಮದ ಅಡಿಯಲ್ಲಿ ಕಂಬದಹಳ್ಳಿಯ ಬಸದಿಯ ಅದೃಷ್ಟವೂ ಖುಲಾಯಿಸಿತು. ಬಸದಿಯು ತನ್ನ ಗತವೈಭವವನ್ನು ಮರಳಿ ಪಡೆಯಿತು. ಒಂದು ಅಡಿಯಷ್ಟು ವಾಲಿದ್ದ ಶಾಸನವಿರುವ ಕಂಬವನ್ನು ನೇರವಾಗಿ ನಿಲ್ಲಿಸಿ ತಳದಲ್ಲಿ ಭದ್ರವಾದ ಜಗುತಿಯನ್ನು ನಿರ್ಮಿಸಲಾಯಿತು. 

 ಅಭಿವೃದ್ಧಿಯೇ ಮುಳುವಾಗಿದೆ
ಈಗ ಜೈನ ಸಮುದಾಯವು ಇಲ್ಲಿ ಒಂದು ಮಠವನ್ನು ಪ್ರತಿಷ್ಠಾಪಿಸಿ ಅದರ ಮೇಲ್ವಿಚಾರಣೆಗೆ ಒಬ್ಬರು ಗುರುಗಳನ್ನು ನೇಮಿಸಿದೆ. ಈ ಮಠದ ಆಶ್ರಯದಲ್ಲಿ ಒಂದು ಪ್ರೌಢಶಾಲೆ ಇದೆ. ಬಡ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿಯ ಸೌಕರ್ಯವನ್ನು ಕಲ್ಪಿಸಲಾಗಿದೆ. ಆದರೆ ಅಭಿವೃದ್ಧಿಯ ಮತ್ತು ಶ್ರದ್ಧಾ ಭಕ್ತಿಯ ಕಾರಣಗಳಿಂದ ಕಂಬದಹಳ್ಳಿಯ ಕಂಬಕ್ಕೆ ಮತ್ತೆ ಗಂಡಾಂತರ ಬಂದಿದೆ. ಈ ಮಾನಸ್ತಂಭ ದ ಮೇಲು¤ದಿಯಲ್ಲಿ ಬ್ರಹ್ಮಯಕ್ಷ ವಿಗ್ರಹವಿದೆ. ನೂರಾರು ವರ್ಷಗಳಿಂದ ಸ್ತಂಭವು ವಾಲಿತ್ತು. ಈಗ ಪುರಾತತ್ವ ಇಲಾಖೆಯವರು ಶ್ರಮವಹಿಸಿ ಅದನ್ನು ಸುಸ್ಥಿತಿಗೆ ತಂದನಂತರ ಸ್ತಂಭದ ಮೇಲಿರುವ ವಿಗ್ರಹಕ್ಕೆ ಪೂಜೆ ಸಲ್ಲಿಸಬೇಕೆಂಬ ಆಲೋಚನೆ ಸ್ಥಳೀಯರಿಗೆ ಬಂದಿತು. ಅದಕ್ಕಾಗಿ ಕಂಬದ ಸುತ್ತ ಕಬ್ಬಿಣದ ಮೆಟ್ಟಲುಗಳುಳ್ಳ ಒಂದು ಅಟ್ಟವನ್ನು ನಿರ್ಮಿಸಲಾಯಿತು. ಕಂಬಕ್ಕೆ ಕಬ್ಬಿಣದ  ಅನೇಕ ಕ್ಲಾಂಪ್‌ಗ್ಳನ್ನು ಹಾಕಿ ಬಿಗಿಗೊಳಿಸಲಾಯಿತು. ಕಂಬದಮೇಲೆ ಒಂದು ಅಮೂಲ್ಯ ಶಾಸನವಿದೆ ಎಂಬ ಅಂಶವನ್ನು ಜನ ಮರೆತರು. ಕಂಬದಮೇಲೆ ಜನ ಹತ್ತಿ ಮೋಜು ಮಾಡಿದರು. ಭಕ್ತರ ಭಾವಾವೇಶವನ್ನು ತಡೆಯಲು ಯಾರಿಂದ ಸಾಧ್ಯ? ಸ್ಮಾರಕ ಹಾಳಾದಾಗ ಮಾತ್ರ ಸರ್ಕಾರವನ್ನು ದೂರುವುದು. ಇದೇ ನಮ್ಮ ಜನರ ಮನೋಭಾವ. ಸುಮಾರು ಒಂದು ಸಾವಿರ ವರ್ಷಗಳಿಂದ ನಿರಾತಂಕವಾಗಿದ್ದ ಶಾಸನಕ್ಕೆ ಅದರ ಅಭಿವೃದ್ಧಿಯೇ ಈಗ ಮುಳುವಾಗಿದೆ.

ಕಂಬದಹಳ್ಳಿಯ ಮಾರ್ಗ
ಬೆಂಗಳೂರಿನಿಂದ ಹಾಸನಕ್ಕೆ ಹೋಗುವ ಹೆದ್ದಾರಿಯಲ್ಲಿ ಶ್ರೀ ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿದೆ. ಅಲ್ಲಿಂದ ಮುಂದೆ ಹೋದರೆ ಕದಬಹಳ್ಳಿ ಎಂಬ ಗ್ರಾಮ ಸಿಗುತ್ತದೆ. ಕದಬದಹಳ್ಳಿಯಿಂದ ಕಂಬದ ಹಳ್ಳಿಗೆ ಹೋಗಲು ಉತ್ತಮ ರಸ್ತೆ ಸೌಲಭ್ಯವಿದೆ. 

ಯುದ್ಧ ಗೆದ್ದಿದ್ದಕ್ಕೆ ಉಡುಗೊರೆ

ವಿಷ್ಣುವರ್ಧನ ಚೋಳರನ್ನು ತಲಕಾಡಿನಲ್ಲಿ ಗೆದ್ದ ಬಗ್ಗೆ ಹಾಗೂ ಈ ಸಂದರ್ಭದಲ್ಲಿ ತನ್ನ ಸೇನಾನಿ ಗಂಗರಾಜನಿಗೆ ಉಂಬಳಿ ಕೊಟ್ಟ ವಿಚಾರವಾಗಿ ಮತ್ತೂಂದು ಶಾಸನವು ಮಂಡ್ಯಜಿಲ್ಲೆ, ಮದ್ದೂರು ತಾಲ್ಲೂಕಿನ ತಿಪ್ಪೂರು ಗ್ರಾಮದ ಜಿನಗುಡ್ಡದ ಮೇಲಿದೆ. ಈ ಶಾಸನದ ಪ್ರಕಾರ ಹೊಯ್ಸಳರ ದಂಡನಾಯಕ ಗಂಗರಾಜನು ಚೋಳರ ದಂಡನಾಯಕ ಅದಮನಿಗೆ ಶರಣಾಗುವಂತೆ ಹೇಳಿಕಳುಹಿಸುತ್ತಾನೆ. ಅದಮನು ಇದಕ್ಕೆ ಉತ್ತರವಾಗಿ ಶರಣಾಗುವುದಿಲ್ಲ. ಬೇಕಿದ್ದರೆ ಯುದ್ಧಮಾಡಿ ಗೆದ್ದುಕೋ ಎನ್ನುತ್ತಾನೆ. ಆಗ, ಚೋಳರ ಅದಿಯಮ (ಅದಿಮ) ದಾಮೋದರ, ನರಸಿಂಗವರ್ಮ ಹಾಗೂ  ಹೊಯ್ಸಳರ ದೊರೆ ವಿಷ್ಣುವರ್ಧನನ ನಡುವೆ ಭೀಕರ ಯುದ್ಧ ನಡೆಯುತ್ತದೆ. 

  ದಂಡನಾಯಕ ಗಂಗರಾಜನು ಅದಿಯಮನ ನಿವಾಸವನ್ನು ಹೊಕ್ಕು ಅವನನ್ನು ಇರಿದು ಕೊಲ್ಲುತ್ತಾನೆ. ಚೋಳರ ಸೇನೆ ಕಂಗಾಲಾಗಿ ದಿಕ್ಕಾಪಾಲಾಗಿ ಓಡುತ್ತದೆ. ಈ ವಿಜಯದಿಂದ ಸಂಪ್ರೀತನಾದ ದೊರೆ ವಿಷ್ಣುವರ್ಧನ, ಗಂಗರಾಜನಿಗೆ “ನಿನಗೆ ಏನು ಬೇಕು ಕೇಳಿಕೊ ‘ಎನ್ನುತ್ತಾನೆ. ಗಂಗರಾಜನು, ಭುವನದಲ್ಲೇ ಶ್ರೇಷ್ಠವಾದ ತಿಪ್ಪೂರನ್ನು ಕೊಡಬೇಕೆಂದು ಕೇಳಿಕೊಳ್ಳುತ್ತಾನೆ. ದೊರೆಯು ಸಂತೋಷವಾಗಿ ತಿಪ್ಪೂರು ಮತ್ತು ಅದರ ಉಪಗ್ರಾಮಗಳಾದ ಗಾಜಲೂರು ಮುಂತಾದ ಗ್ರಾಮಗಳನ್ನು ಕೊಡುಗೆಯಾಗಿ ನಿಡುತ್ತಾನೆ. ಗಂಗರಾಜ ಈ ಗ್ರಾಮಗಳನ್ನು ತನ್ನ ಗುರುಗಳಾದ ಮೇಘಚಂದ್ರ ಸಿದ್ಧಾಂತ ದೇವನಿಗೆ ಕಾಣಿಕೆಯಾಗಿ ನೀಡುತ್ತಾನೆ.

ಮುಹಮ್ಮದ್‌ ಕಲೀಂಉಲ್ಲ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.