ಅರಣ್ಯ ತಪ್ಪಲಲ್ಲಿ ತಪಸ್ವಿ ಕ್ಷೇತ್ರ ಕುಂದೇಶ್ವರ ಕಥಾ
Team Udayavani, Sep 2, 2017, 12:26 PM IST
ಕುಂದಾಪುರ ಉಡುಪಿಯಿಂದ 35 ಕಿಲೋ ಮೀಟರ್ ದೂರದಲ್ಲಿದೆ. ಸುಮಾರು 45 ಕಿ.ಮೀ. ಸಮುದ್ರದ ಅಂಚನ್ನೂ ಹೊಂದಿದ್ದು ಸಮುದ್ರ ಮಟ್ಟದಿಂದ 26 ಅಡಿ ಎತ್ತರದಲ್ಲಿದೆ. ತತ್ಸಂಬಂಧಿತ ನಿಸರ್ಗ ಸೌಂದರ್ಯವನ್ನೂ ಹೊಂದಿರುವ ತಾಲೂಕು ಕುಂದಾಪುರ. ಇದರ ಸಮತಟ್ಟಾದ ಒಳಪ್ರದೇಶದಲ್ಲಿ ಕೆಲವು ಕಾಡು ಪ್ರಾಣಿಗಳನ್ನು ಹೊಂದಿರುವ ದಟ್ಟವಾದ ಅರಣ್ಯ ಪ್ರದೇಶವೂ ಉಂಟು.
ಕುಂದವರ್ಮನೆಂಬ ಅರಸ ಪಂಚಗಂಗಾವಳಿಯ ಹತ್ತಿರ ಕುಂದೇಶ್ವರ ದೇವಾಲಯವನ್ನು ಕಟ್ಟಿಸಿದ್ದರಿಂದ ಈ ಪ್ರದೇಶಕ್ಕೆ ಮೊದಲು ಕುಂದಾಪುರವೆಂದೂ, ಆನಂತರದಲ್ಲಿ ಕುಂದಾಪುರವೆಂದೂ ಹೆಸರು ಬಂತೆಂಬ ಪ್ರತೀತಿ ಇದೆ. ಈ ಗುಡಿಯಲ್ಲಿ ಆಳುಪರ ಕಾಲದ ಶಿಲಾಶಾಸನಗಳಿವೆ. ಪೋರ್ಚುಗೀಸರು ಕಟ್ಟಿದ ಕೋಟೆಯ ಅವಶೇಷಗಳಿವೆ.
ಇಂತಿಪ್ಪ ಕುಂದಾಪುರದಲ್ಲಿ ಹಲವಾರು ದೇವಾಲಯಗಳಿವೆ. ಅವುಗಳಲ್ಲಿ ಪ್ರಮುಖವಾದುದು ಕುಂದೇಶ್ವರ. ತಲೆ-ತಲಾಂತರಗಳಿಂದ ಬಂದ ಅಭಿಪ್ರಾಯದಂತೆ ಕುಂದೇಶ್ವರ, ಕುಂದಾಪುರದ ಹೆಸರಿಗೆ ಕಾರಣ. ಬಸ್ ನಿಲ್ದಾಣದಿಂದ ಮುಂದೆ ಬಂದು ತಿರುವಿನಲ್ಲಿ ಬಲಕ್ಕೆ ನಡೆದರೆ ಕುಂದೇಶ್ವರ ದೇವಾಲಯದ ಮಹಾದ್ವಾರ ಕಾಣುತ್ತದೆ. ಅಲ್ಲಿಂದ ಎದುರುಗಡೆ ದೇವಾಲಯ ಗೋಚರಿಸತೊಡಗುತ್ತದೆ. ಹತ್ತಾರು ಹೆಜ್ಜೆ ನಡೆದು ಬರುವಾಗ ಮಾರ್ಗಮಧ್ಯದಲ್ಲಿ ಗುರು ರಾಘವೇಂದ್ರರಾಯರ ಮಠ ಹಾಗೂ ಹೃಷಿಕೇಶ ಮಾದರಿಯ ಧ್ಯಾನಸ್ಥ ಶಿವನ ಗಂಗಾವತರಣ ವಿಗ್ರಹ ಹೊಂದಿದ ಕೆರೆ ಕಾಣುತ್ತದೆ. ಇವೆರಡರ ಮುಂದೆ ಕುಂದೇಶ್ವರ ದೇವಾಲಯವಿದೆ
ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶ ದಲ್ಲಿ ಕುಂದವರ್ಮನೆಂಬ ಅರಸ ಪಂಚಗಂಗಾವಳಿಯ ಹತ್ತಿರ ಕಟ್ಟಿಸಿದ ಕುಂದೇಶ್ವರ ದೇವಾಲಯದಿಂದ ಇದಕ್ಕೆ ಕುಂದಾಪುರವೆಂದು ಹೆಸರಾಯಿತು- ಎನ್ನಲಾಗಿದೆ. ದಕ್ಷಿಣದ ಸಿರಿನಾಡು ಎಂಬ ಗ್ರಂಥದಲ್ಲಿ ಪೋರ್ಚುಗೀಸರು ಕುಂದಾಪುರಕ್ಕೆ ಕಾಲಿಡುವ ಮೊದಲು ಕುಂದಾಪುರ ಕುಂದವರ್ಮನೆಂಬ ತುಂಡರಸನ ಅಧಿಪತ್ಯಕ್ಕೆ ಸೇರಿತ್ತು. ಕುಂದೇಶ್ವರ ಇವನ ಮನೆದೇವರು. ಇಂದಿನ ಕುಂದೇಶ್ವರ ದೇವಾಲಯ ಶಿವಭಕ್ತನಾದ ಇವನ ಸೃಷ್ಟಿ. ಕುಂದೇಶ್ವರನಿಂದಲೇ ಈ ಊರಿಗೆ ಕುಂದಾಪುವೆಂದು ನಾಮಕರಣವಾಗಿದೆ- ಎಂದು ಉಲ್ಲೇಖೀಸಲಾಗಿದೆ.
ಈ ದೇವಾಲಯವು ಈಗ ಜೀರ್ಣೋದ್ಧಾರ ಹೊಂದಿದ್ದರೂ ಕೆಲವು ಅವಶೇಷಗಳ ಆಧಾರದಿಂದ ಈ ದೇಗುಲದ ಮೂಲ ರಚನೆ ಹೊಯ್ಸಳರ ಕಾಲದ ಮಧ್ಯಭಾಗದಲ್ಲಿ ಆಗಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಸಮುದ್ರ ತೀರದಿಂದ ಪೂರ್ವಕ್ಕೆ ಈ ದೇವಾಲಯವನ್ನು ನಿರ್ಮಿಸಲಾಗಿದೆ.
ಸಾಕಷ್ಟು ವಿಶಾಲವಾದ ಹೊರಪ್ರಾಕಾರ; ಮಹಾದ್ವಾರಕ್ಕೆ ಎದುರಾಗಿ ಬಲಿಪೀಠ; ಒಳ ಪ್ರಾಕಾರದಲ್ಲಿ ಒಂದು ನಂದಿ ಮಂಟಪ ಮತ್ತು ಪ್ರದಕ್ಷಿಣಾಪಥದ ಸುತ್ತಲೂ ಚಂದ್ರಶಾಲೆ(ಒಳಪೌಳಿ); ಒಳ ಪ್ರಾಕಾರದ ನಡುವೆ ಗರ್ಭಗೃಹ. ಇವು ದೇವಾಲಯದ ಮುಖ್ಯ ಅಂಗಗಳು. ಗರ್ಭಗೃಹದ ಒಳಗೆ ನೆಲಕ್ಕೆ ಕಗ್ಗಲ್ಲ ಚಪ್ಪಡಿಗಳನ್ನು ಹಾಸಿ ಸದೃಢಗೊಳಿಸಲಾಗಿದೆ.
ಇಲ್ಲಿ ಸ್ಥಳಾವಕಾಶ ತೀರ ಕಡಿಮೆ. ಇದರ ಕೇಂದ್ರ ಭಾಗದಲ್ಲಿ ಸರಳ ರೀತಿಯಲ್ಲಿ ಕೆತ್ತಲ್ಪಟ್ಟ ಕಲ್ಲಿನ ದೊಡ್ಡ ಪಾಣಿಪೀಠ. ತೀರ್ಥ ಹರಿದು ಹೋಗಲು ಇರುವ ಸೋಮಸೂತ್ರದ ಭಾಗವೂ ಸರಳವಾಗಿದ್ದು ನೇರವಾಗಿ ಕತ್ತರಿಸಲ್ಪಟ್ಟ ಮೂತಿಯನ್ನು ಹೊಂದಿದೆ. ಪಾಣೀಪೀಠದಲ್ಲಿ ಶ್ರೀ ಕುಂದೇಶ್ವರನ ಪ್ರತಿಷ್ಠೆ. ಈಶಿವಲಿಂಗವನ್ನು ರುದ್ರಾಕ್ಷಿ ಶಿಲೆಯಿಂದ ಮಾಡಿದ್ದು, ಇದರ ಹೊರಮೈ ತುಂಬ ಸೊಗಸಾಗಿದೆ. ಇದರ ಶಿರೋಭಾಗ ಅಡ್ಡಕ್ಕೆ ತುಂಡರಿಸಲ್ಪಟ್ಟ ಕಂಬದಂತೆ ಚಪ್ಪಟೆಯಾಗಿದೆ.
ಹಾಗಾಗಿ ಇದೊಂದು ಅಪೂರ್ವ ಶಿವಲಿಂಗ.
ಪ್ರತ್ಯೇಕ ನಂದಿ ಮಂಟಪ
ಎತ್ತರವಾದ ಜಗುಲಿ; ಇದರ ಮೇಲೆ ನಾಲ್ಕು ಕಂಬಗಳು. ಇವುಗಳ ಮೇಲೆ ಮಂಟಪದ ಮಾಡು. ಕರಿಶಿಲೆಯಲ್ಲಿ ಕಡಿದಿರುವ ನಂದಿ ಚಿಕ್ಕದಾದರೂ ಸುಂದರವಾಗಿದೆ. ಹಿತ-ಮಿತವಾದ ಆಭರಣ. ನಡುವಿನಲ್ಲಿ ದೇಹ ಸುತ್ತಿ ಬಳಸಿರುವ ಒಂದು ವಸ್ತ್ರದ ಪಟ್ಟಿ. ಈ ಮಂಟಪಕ್ಕೀಗ ಹೊಸ ರೂಪ ಬಂದಿದೆ.
ಹೊಸ ಸೃಷ್ಟಿ
ಇತ್ತೀಚಿನ ವರ್ಷಗಳಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಹೊಸ ಸೃಷ್ಟಿಕಾರ್ಯ ನಡೆದಿದೆ. ಇಡೀ ದೇವಸ್ಥಾನ ಮರುಹುಟ್ಟು ಪಡೆದಿದೆ. ಗರ್ಭಗುಡಿ, ಗಣಪ ತಿ-ಅಮ್ಮನವರು-ನಾಗದೇವರು-ಅಯ್ಯಪ್ಪ ಸ್ವಾಮಿಯ ಗುಡಿಗಳು, ಒಳಪೌಳಿ ಮತ್ತು ಚಂದ್ರಶಾಲೆಗಳು, ನೈವೇದ್ಯದ ಮನೆ, ನಂದಿಮಂಟಪ, ಬಲಿಶಿಲೆಗಳು, ಪ್ರದಕ್ಷಿ$ಣ ಪಥ ಇವೆಲ್ಲ ಹೊಸ ರೂಪ ಪಡೆದಿವೆ. ಹೊರಭಾಗದಲ್ಲಿ ಅಷ್ಟ ದಿಕಾ³ಲಕ ವಿಗ್ರಹಗಳಿಂದ ಕಂಗೊಳಿಸುವ ಮತ್ತು ಕಿರುಗೋಪುರಗಳಿಂದ ಶೋಭಿಸುವ ಹೆಬ್ಟಾಗಿಲು, ಶಿಲೆಯ ಬಾಗಿಲು, ದ್ವಾರಪಾಲಕರ ವಿಗ್ರಹಗಳು- ಇವೆಲ್ಲ ಹೊಸ ಸೃಷ್ಟಿ.
ದೇವಾಲಯದ ಹೊರಾವರಣದಲ್ಲಿ ಇರುವ ಕೆರೆಯ ಹೂಳೆತ್ತಿ, ಹಳೆ ನೀರನ್ನೆಲ್ಲ ತೆಗೆದು ಶುದ್ಧೀಕರಿಸಲಾಗಿದೆ. ಕೆರೆಯ ಪ್ರವೇಶ ದ್ವಾರದಲ್ಲಿ ಅಲಂಕೃತ ಗೋಪುರ, ಸದೃಢ ಗೇಟು ಮತ್ತು ಪಾಗಾರ ರಚಿಸಲಾಗಿದ್ದು, ಕೆರೆಗೆ ಪ್ರದಕ್ಷಿಣೆ ಬರಲು ಮತ್ತು ಕೆರೆಯಲ್ಲಿ ನಡೆಯುವ ತೆಪ್ಪೋತ್ಸವ ಮತ್ತಿತರೆ ಉತ್ಸವಗಳನ್ನು ವೀಕ್ಷಿಸಲು ಮೀಸಲಾಗಿರಿಸಿದ್ದ ಸುಮಾರು ಹತ್ತು – ಹನ್ನೆರಡು ಅಡಿಗಳಷ್ಟು ವಿಸ್ತೀರ್ಣದ ನಾಲ್ಕೂ ದಿಕ್ಕಿನ ಪ್ರದಕ್ಷಿಣ ಪಥವನ್ನು ಸುಸ್ಥಿತಿಗೆ ತರಲಾಗಿದೆ.
ಹೃಷಿಕೇಶ ಮಾದರಿಯ ಧ್ಯಾನಸ್ಥ ಶಿವನ ಗಂಗಾವತರಣ ವಿಗ್ರಹ ಸ್ಥಾಪಿಸಿ, ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ. ಪ್ರತಿದಿನ ಕುಂದೇಶ್ವರ ಮತ್ತು ಪರಿವಾರದೇವತೆಗಳಿಗೆ ಅಭಿಷೇಕ, ಪೂಜೆ, ಮಂಗಳಾರತಿ, ರಾತ್ರಿ ಎಲ್ಲ ದೇವರಿಗೂ ಪೂಜೆ, ಮಂಗಳಾರತಿ ನಡೆಯುತ್ತವೆ.
ಕಡಕೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.