ಕುಣಿಗಲ್‌ ಹುಡುಗಿಯ ಸ್ಕೇಟಿಂಗ್‌ ಪರಾಕ್ರಮ


Team Udayavani, Jan 27, 2018, 12:35 PM IST

25556.jpg

ಚಿಕ್ಕ ವಯಸ್ಸಿಗೆ ವಿಶ್ವ ಮಟ್ಟದ ಸಾಧನೆ. ಗಿನ್ನಿಸ್‌ ಸೇರಿದಂತೆ ಹಲವಾರು ದಾಖಲೆಗಳು ಈಕೆಯ ಹೆಸರಿನಲ್ಲಿ.ಇದು ಕುಣಿಗಲ್‌ನ ಸ್ಕೇಟಿಂಗ್‌ ಹುಡುಗಿಯ ಯಶೋಗಾಥೆ. 

ಹೆಸರು ರಕ್ಷಿತಾ ರಾಮ್‌. ಸದ್ಯ ಕುಣಿಗಲ್‌ನ ಜ್ಞಾನ ಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿನಿ. ತಂದೆ ಐಸ್‌ಕ್ಯಾಂಡಿ ವ್ಯಾಪಾರಿ. ದಿನವಿಡೀ ಬಿಸಿಲಿನಲ್ಲಿ ತಿರುಗಾಡುತ್ತಾರೆ, ಬಂದ ಹಣದಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಾರೆ. ಇನ್ನು ಮಗಳ ಸಾಧನೆಯನ್ನೇ ಬಯಸುತ್ತಿರುವ ತಾಯಿ. ಕಷ್ಟಗಳ ನಡುವೆಯೇ ಹಲವಾರು ಸಾಧನೆ ಮಾಡಿರುವ ರಕ್ಷಿತಾ ರಾಮ್‌, ಈಗ ಕುಣಿಗಲ್‌ ಸುತ್ತಮುತ್ತಲಿನ ಊರಿನ ಸೆಲೆಬ್ರಿಟಿ. 

ಬಾಲ್ಯದಿಂದಲೇ ಸ್ಕೇಟಿಂಗ್‌ ಕಲಿಕೆ 
ರಕ್ಷಿತಾ ರಾಮ್‌ 8ನೇ ತರಗತಿಯಿಂದಲೇ ಕೋಚ್‌ ರಂಗನಾಥ್‌ ಬಳಿ ತರಬೇತಿ ಪಡೆಯುತ್ತಿದ್ದಾರೆ. ಸ್ಕೇಟಿಂಗ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿರುವ ಈಕೆಗೆ ಬಾಲ್ಯದಿಂದಲೂ ರೋಲರ್‌ ಸ್ಕೇಟಿಂಗ್‌ ಎಂದರೆ ಪಂಚಪ್ರಾಣ. ಪ್ರೌಢಶಾಲಾ ಹಂತದಲ್ಲಿ ತರಬೇತಿ ಪಡೆದ ಬಳಿಕ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದಾಗ ಬೆಳಗಾವಿಯಲ್ಲಿ ನಡೆದ ಅತೀ ಉದ್ದದ ಸ್ಕೇಟ್ಲಾನ್‌ ಮ್ಯಾರಥಾನ್‌ ರಿಲೇಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸತತ 51 ಗಂಟೆಗಳ ಕಾಲ 4083 ರೌಂಡ್ಸ್‌ ಹಾಕಿ  ವಿಶ್ವ ದಾಖಲೆ ಮಾಡಿದ್ದಾರೆ. ಈ ಮೂಲಕ 2 ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ನಡೆದ ಸ್ಕೇಟಿಂಗ್‌ನಲ್ಲಿಯೂ ಗಿನ್ನಿಸ್‌ ದಾಖಲೆ ನಿರ್ಮಿಸಿದ್ದಾರೆ. ಇಂಡಿಯಾ ಬುಕ್‌ ಆಫ್ ರೆಕಾರ್ಡ್‌, ಗ್ಲೋಬಲ್‌ ರೆಕಾರ್ಡ್‌, ಇಂಡಿಯನ್‌ ಅಚೀವರ್ ಬುಕ್‌ ಆಫ್ ರೆಕಾರ್ಡ್‌, ಯೂನಿಕ್‌ ವರ್ಲ್ಡ್  ರೆಕಾರ್ಡ್‌ ಮತ್ತು ಏಷ್ಯಾ ಬುಕ್‌ ಆಫ್ ರೆಕಾರ್ಡ್‌ನಲ್ಲಿ ಈಕೆಯ ಹೆಸರು ದಾಖಲಾಗಿದೆ.

ತಂದೆಯಿಂದ ಐಸ್‌ಕ್ಯಾಂಡಿ ಮಾರಾಟ
ಹಳ್ಳಿ ಹಳ್ಳಿಗೆ ತೆರಳಿ ನಿತ್ಯ ಐಸ್‌ಕ್ಯಾಂಡಿ ಮಾರುವುದು ಈಕೆಯ ತಂದೆ ರಾಮು ಕೆಲಸ. ತಾಯಿ ಸುಧಾ ಬೋರಲಿಂಗನಪಾಳ್ಯ ಪ್ರಾಥಮಿಕ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕಿ. ಕ್ರೀಡೆಯಲ್ಲಿ ಸಾಕಷ್ಟು ಆಸಕ್ತಿ ಹೊಂದಿ ರುವ ರಕ್ಷಿತಾ ಓದಿನಲ್ಲಿ ಹಿಂದೆ ಬಿದ್ದಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.93.12 ಫ‌ಲಿತಾಂಶ ಪಡೆದಿದ್ದಾರೆ. ಕಾಲೇಜಿನಲ್ಲಿ ಪ್ರಾಚಾರ್ಯ ಕಪನಿಪಾಳ್ಯ ರಮೇಶ್‌ ಮತ್ತು ದೈಹಿಕ ಶಿಕ್ಷಣಾಧಿಕಾರಿ ನಾಗರಾಜ್‌ ಯಳವರ್‌ ಅವರು ಈಕೆಯ ಕ್ರೀಡಾಸಕ್ತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಕ್ರಿಕೆಟ್‌ನಲ್ಲೂ ರಕ್ಷಿತಾ ಪ್ರಚಂಡ ಆಟ
ಸ್ಕೇಟಿಂಗ್‌ ಜೊತೆಗೆ ಈಕೆ ಎಲ್ಲ ವಿಧವಾದ ಆಟಗಳಲ್ಲೂ ಭಾಗವಹಿಸುವ ಮೂಲಕ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಟೆನಿಸ್‌ಬಾಲ್‌ ಕ್ರಿಕೆಟ್‌ ಆಟವೂ ಈಕೆಗೆ ಅಚ್ಚುಮೆಚ್ಚು. ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಟೆನಿಸ್‌ಬಾಲ್‌ ಕ್ರಿಕೆಟ್‌ ಚಾಂಪಿಯನ್‌ಶಿಪ್‌ನಲ್ಲಿ
ಪಾಲ್ಗೊಂಡು ತಂಡಕ್ಕೆ ಚಿನ್ನದ ಪದಕ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 2017ರಲ್ಲಿ ಹೈದರಾಬಾದ್‌ನಲ್ಲಿ ನಡೆದ 25ನೇ ರಾಷ್ಟ್ರೀಯ ಫೆಡರೇಷನ್‌ ಕಪ್‌ ಟೆನಿಸ್‌ಬಾಲ್‌ ಕ್ರಿಕೆಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ತಂಡ 3ನೇ ಸ್ಥಾನ ಪಡೆಯುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.ಪಂಜಾಬ್‌ನ ಅನಂತಪುರದಲ್ಲಿ ನಡೆದ ಹಗ್ಗ-ಜಗ್ಗಾಟ ರಾಷ್ಟ್ರೀಯ ಸ್ಪರ್ಧೆಯಲ್ಲಿಯೂ ಪಾಲ್ಗೊಂಡಿದ್ದರು.

ಸೌಲಭ್ಯಗಳ ಕೊರತೆ, ಬತ್ತದ ಉತ್ಸಾಹ
ರಕ್ಷಿತಾ ಅವರ ಅಭ್ಯಾಸಕ್ಕೆ ಪೂರಕ ವಾತಾವರಣವಿಲ್ಲ. ಉತ್ತಮ ತರಬೇತುದಾರರು ದೊರಕಿದ್ದಾರೆ. ಆದರೆ, ಸರ್ಕಾರದಿಂದ ಅವರಿಗೆ ಪ್ರೋತ್ಸಾಹ ಸಿಕ್ಕಿಲ್ಲ. ಆದರೂ ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕೆಂಬ ಛಲದಿಂದ ಪ್ರತಿ ದಿನ ಅಭ್ಯಾಸ ನಡೆಸುತ್ತಿರುವ ಬಗ್ಗೆ ಅಲ್ಲಿನ ಊರಿನವರಿಗೆ ಹೆಮ್ಮೆ ಇದೆ.

ಪ್ರಾಚಾರ್ಯ ಕಪನಿಪಾಳ್ಯ ರಮೇಶ್‌ ಸಹಕಾರ ಇಲ್ಲದಿದ್ದರೆ ಅವಳಿಗೆ ಇಷ್ಟು ಎತ್ತರಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಮಗಳ ಸಾಧನೆಯ ಹಿಂದೆ ಕಾಲೇಜಿನ ಅಧ್ಯಾಪಕರ, ಸಹಪಾಠಿಗಳ ಪೋ›ತ್ಸಾಹ ಇದೆ.
ಸಿ.ಸುಧಾ, ತಾಯಿ

ರಕ್ಷಿತಾ ಕ್ರೀಡೆಯಲ್ಲಿ ಮಾತ್ರವಲ್ಲ. ಓದಿನಲ್ಲೂ ಮುಂದಿದ್ದಾಳೆ. ಮುಂದೊಂದು ದಿನ ಆಕೆ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಾಳೆ ಎಂಬ ಅಚಲ ವಿಶ್ವಾಸವಿದೆ. 
 ಕಪನಿಪಾಳ್ಯ ರಮೇಶ್‌, ಪ್ರಾಚಾರ್ಯ

ಎಸ್‌.ಎನ್‌.ನರಸಿಂಹಮೂರ್ತಿ

ಟಾಪ್ ನ್ಯೂಸ್

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

1-aaa

Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-aaasas

Team Indiaಕ್ಕೆ ಆಸೀಸ್‌ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು

Supreme Court

Sambhal ಮಸೀದಿ ಸಮೀಕ್ಷೆ ವಿರುದ್ಧ ಸುಪ್ರೀಂಗೆ ಮೊರೆ

1-tttttt

ICC ಇಂದು ಸಭೆ: ಚಾಂಪಿಯನ್ಸ್‌  ಟ್ರೋಫಿ; ಹೈಬ್ರಿಡ್‌ ಮಾದರಿಗೆ ಮತದಾನ?

1-reet

Maharashtra; ಚುನಾವಣೆ ಸೋಲಿನ ಬೆನ್ನಲ್ಲೇ ಮಹಾವಿಕಾಸ ಅಘಾಡಿಯಲ್ಲಿ ಬಿರುಕು?

Court-1

Puttur: ಮಹಿಳೆಗೆ ಬೈಕ್‌ ಢಿಕ್ಕಿ; ಸವಾರನಿಗೆ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.