ಶ್ರೀ ಕೃಷ್ಣಾರ್ಪಣ ಮಸ್ತು : ನಿತ್ಯ ಅರ್ಚನೆಯಾದ ಲಕ್ಷ ತುಳಸಿ ಆಮೇಲೆ ಏನಾಗುತ್ತೆ?
Team Udayavani, May 4, 2019, 6:27 AM IST
ಪ್ರತಿದಿನ ನಡೆಯುವ ಉಡುಪಿಯ ಕೃಷ್ಣನ ಲಕ್ಷ ತುಳಸಿ ಅರ್ಚನೆಯನ್ನು ನೋಡುವುದೇ ಚಂದ. ನಂತರ- ಇಷ್ಟೊಂದು ತುಳಸಿ ಎಲ್ಲಿಂದ ಬರುತ್ತದೆ? ಯಾರು ತಂದು ಕೊಡುತ್ತಾರೆ? ಪೂಜೆ ಎಲ್ಲ ಮುಗಿದ ಮೇಲೆ ಈ ತುಳಸಿಯನ್ನು ಏನು ಮಾಡುತ್ತಾರೆ? ಹೀಗೊಂದಷ್ಟು ರಾಶಿ, ರಾಶಿ ಪ್ರಶ್ನೆಗಳು ಜೊತೆಯಾಗದೇ ಇರದು…
ಉಡುಪಿಯ ಕೃಷ್ಣ ಮಠಕ್ಕೆ ಹೋದರೆ ಬೆಳ್ಳಂಬೆಳಗ್ಗೆಯೇ ವಿಶೇಷ ಲಕ್ಷ ತುಳಸಿ ಅರ್ಚನೆ ನೋಡಬಹುದು. ಪ್ರತಿದಿನ ತಪ್ಪದೇ ಅರ್ಚನೆ ನಡೆಯುತ್ತದೆ. ವೈಭವೋಪೇತ ಪೂಜೆ ಪುನಸ್ಕಾರದ ನಂತರ- ಇಷ್ಟೊಂದು ತುಳಸಿ ಎಲ್ಲಿಂದ ಬರುತ್ತದೆ? ಯಾರು ತಂದು ಕೊಡುತ್ತಾರೆ? ಪೂಜೆ ಎಲ್ಲ ಮುಗಿದ ಮೇಲೆ ಈ ತುಳಸಿಯನ್ನು ಏನು ಮಾಡುತ್ತಾರೆ? ಹೀಗೊಂದಷ್ಟು ರಾಶಿ ಕೌತುಕಗಳು ಎದ್ದೇಳದೇ ಇರದು.
ಹೌದು, ಭಕ್ತಿಯ ಪರಕಾಷ್ಠೆಯಲ್ಲಿ ಮುಳುಗಿ, ವಿಷ್ಣು ಸಹಸ್ರನಾಮ ಪಠಿಸುತ್ತಲೇ ಪ್ರತಿ ತುಳಸಿ ಗಿಡದಿಂದ ಇಳಿಯುವುದು. ಅದಕ್ಕಾಗಿಯೇ ಭಕ್ತರ ದಂಡು ಇದೆ. ಇದರ ಹಿಂದೆ ದೊಡ್ಡ ಕಥೆಯೇ ಇದೆ.
ಹಂತ ಒಂದು
ಉಡುಪಿ ನಗರದ ನಾಲ್ಕು ಕಡೆ ಅಮೆರಿಕದ ಒಂಭತ್ತು ಪೇಟೆಂಟ್‌ಗಳನ್ನು, ಒಂದು ಜಾಗತಿಕ ಪೇಟೆಂಟ್ ಪಡೆದು ಮಲ್ಟಿ ನ್ಯಾಷನಲ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ ಪೆಜತ್ತಾಯ ವಿವಿಧ ಹೆಸರುಗಳ ತುಳಸಿವನಗಳನ್ನು ನಿರ್ವಹಿಸುತ್ತಿದ್ದಾರೆ. ಮುಂಬೈನ ಜ್ಯೋತಿಷಿ ಗುರುರಾಜ ಉಪಾಧ್ಯಾಯರು ಉಡುಪಿಯಲ್ಲಿ ನೆಲೆ ನಿಂತು ಪಡುಬೆಳ್ಳೆಯಲ್ಲಿ ಬೆಳೆಸಿರುವ ತುಳಸಿ ವನ, ಶ್ರೀಅದಮಾರು ಕಿರಿಯ ಶ್ರೀ ಈಶಪ್ರಿಯ
ತೀರ್ಥ ಶ್ರೀಪಾದರು ಶೀರೂರಿನ ಪೂರ್ವಾಶ್ರಮದ ಮನೆಯಲ್ಲಿ ಬೆಳೆಸುತ್ತಿರುವ ತುಳಸಿ, ಬಲಾಯಿಪಾದೆಯಲ್ಲಿ ಪುಂಡರೀಕಾಕ್ಷ ಭಟ್ ಅವರ ತುಳಸಿವನ, ಕೋಟೇಶ್ವರದ ಹಂಗಳೂರು ಬಡಾಕೆರೆ ರಾಮಚಂದ್ರ ವರ್ಣರು ವೇಣುಗೋಪಾಲಕೃಷ್ಣ ಸೇವಾ ಸಂಘದ ಆಶ್ರಯದಲ್ಲಿ ನಡೆಸುತ್ತಿರುವ ತುಳಸಿ ವನ, ಹೀಗೆ ವಿವಿಧೆಡೆಗಳಿಂದ ನಿತ್ಯ ತುಳಸಿ ಕುಡಿಗಳು ಮಠಕ್ಕೆ ಹರಿದುಬರುತ್ತವೆ. ರಾಮಚಂದ್ರ ವರ್ಣರಿಂದ ನಿತ್ಯ ಒಂದು ಲಕ್ಷ ಕುಡಿ ಬರುತ್ತಿದೆ. ಉಪ್ಪಳ ಕೊಂಡೆವೂರು ಸ್ವಾಮೀಜಿಯವರು ಬಸ್ ಮೂಲಕ ನಿತ್ಯ ತುಳಸಿ ಕುಡಿಗಳನ್ನು ಕಳುಹಿಸಿದರೆ, ಕಟೀಲಿನ ಹರಿನಾರಾಯಣ ಆಸ್ರಣ್ಣ, ವಾಸುದೇವ ಆಸ್ರಣ್ಣರು ವಾರಕ್ಕೊಮ್ಮೆ ಕಳುಹಿಸುತ್ತಾರೆ. ಕಾಸರಗೋಡು ತಾಲೂಕು ವರ್ಕಾಡಿಯ ಶ್ರೀವಿಷ್ಣುಮೂರ್ತಿ ದೇವಸ್ಥಾನದ ರಾಘವೇಂದ್ರ ಭಟ್, ಪ್ರತಿ ದ್ವಾದಶಿಗೆ ತುಳಸಿ ದಳಗಳನ್ನು ಸಮರ್ಪಿಸುತ್ತಾರೆ. ಪೆರಂಪಳ್ಳಿಯ ಸಾಯಿರಾಧಾ ಪ್ಯಾರಡೈಸ್ ವಠಾರ ಮನೋಹರ ಶೆಟ್ಟಿಯವರ ಜಾಗದಲ್ಲಿ ತುಳಸಿ ಬೆಳೆಸಲಾಗುತ್ತಿದೆ. ಇದಲ್ಲದೆ ಅಲ್ಪಸ್ವಲ್ಪ ತುಳಸಿ ಕುಡಿಗಳನ್ನು ತಂದುಕೊಡುವವರು ಪ್ರತ್ಯೇಕ. ಇವರಲ್ಲಿ ಬಹುತೇಕರು ವಿಷ್ಣುಸಹಸ್ರನಾಮವನ್ನು ಪಠಿಸುತ್ತ ಕುಡಿಗಳನ್ನು ಕೀಳುವಂತಹ ಶಿಸ್ತನ್ನು ಬೆಳೆಸಿಕೊಂಡಿದ್ದಾರೆ.
ಹಂತ ಎರಡು
ಹೀಗೆ ಬಂದ ತುಳಸಿ ಕುಡಿಗಳನ್ನು ನಿತ್ಯವೂ ಶ್ರೀಕೃಷ್ಣಮಠದಲ್ಲಿ ಸರಿಪಡಿಸಲು ಮೂರ್‍ನಾಲ್ಕು ಸಿಬ್ಬಂದಿಗಳಿದ್ದಾರೆ. ಬೆಳಗ್ಗೆ 9 ಗಂಟೆ ಹೊತ್ತಿಗೆ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಮಹಾಪೂಜೆಗೆ ಕುಳಿತರೆ 60 ಜನ ವೈದಿಕರು ಎರಡು ಬಾರಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾರೆ. ಈ ಸಾವಿರ ನಾಮದ ಸಂಖ್ಯೆ ಲಕ್ಷ ದಾಟುತ್ತದೆ. ಈ ಅವಧಿಯಲ್ಲಿ ತುಳಸಿದಳಗಳನ್ನು ಸ್ವಾಮೀಜಿಯವರು ಶ್ರೀಕೃಷ್ಣನಿಗೆ ಅರ್ಚನೆ ಮಾಡುತ್ತಾರೆ. ಈ ತೆರನಾಗಿ ಅರ್ಚನೆಗೊಂಡ ತುಳಸಿಯಲ್ಲಿ ಒಂದಿಷ್ಟು ಅಂಶ ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಣೆಯಾಗುತ್ತದೆ. “ಆರಂಭದಲ್ಲಿ ಸಾರ್ವಜನಿಕರ ಸಹಭಾಗಿತ್ವ ಕಡಿಮೆ ಇತ್ತು. ಈಗ ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಸುಮಾರು 150 ಭಕ್ತರು ಮನೆಗಳಿಂದಲೋ, ಬೇರೆ ಮನೆಗಳಿಂದಲೋ ತುಳಸಿ ಕುಡಿಗಳನ್ನು ತಂದುಕೊಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಜನಜಾಗೃತಿಯಾಗಿದೆ. ಜನರ ಸ್ಪಂದನೆಯಿಂದ ಇದು ಯಶಸ್ವಿಯಾಗಿ ನಡೆಯುತ್ತಿದೆ ಎನ್ನುತ್ತಾರೆ ಉಡುಪಿಯ ಶ್ರೀಕೃಷ್ಣಮಠ ಪರ್ಯಾಯ ಶ್ರೀಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ ರಾವ್.
ಹಂತ ಮೂರು
ಧರ್ಮಸ್ಥಳದ ಡಾ| ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದಂತೆ ಅರ್ಚನೆಗೊಂಡ ತುಳಸಿಕುಡಿಗಳು ಉದ್ಯಾವರ ಕುತ್ಪಾಡಿಯಲ್ಲಿರುವ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಫಾರ್ಮಸಿ ಕಾಲೇಜಿಗೆ ಸೇರುತ್ತಿದೆ. ಇಲ್ಲಿನ ಔಷಧಿ ತಯಾರಿಸಲು ಇದೇ ತುಳಸಿ ಕುಡಿಗಳನ್ನು ಬಳಸುವುದು. ಈ ಫಾರ್ಮಸಿ ಕಾಲೇಜಿನಲ್ಲಿ ಏನೇನೆಲ್ಲ ಇದೆ ಗೊತ್ತಾ?
ಫಾರ್ಮಸಿ ವಿಭಾಗದಲ್ಲಿ ಇತರ ಕಚ್ಚಾ ಸಾಮಗ್ರಿಗಳ ಸಂಸ್ಕರಣೆಯೂ ಸೇರಿದಂತೆ ಇತ್ತೀಚಿಗೆ 1.5 ಕೋಟಿ.ರೂ. ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋಕರಣಗಳನ್ನು ಸ್ಥಾಪಿಸಲಾಗಿದೆ. ಕಶಾಯವನ್ನು 35 ಅಡಿಯಿಂದ ಕೆಳಗೆ ಸ್ಪ್ರೆà ಮಾಡಿ ಬರುವಾಗ ಒಣಗಿ ಪೌಡರ್ ಆಗುವ ಸ್ಪ್ರೆ ಡ್ರೈಯರ್ ಕೂಡ ಇಲ್ಲಿದೆ. ಅಲ್ಲದೆ ಗಿಡಮೂಲಿಕೆಗಳ ಸಣ್ತೀವನ್ನು ಪಡೆಯುವ ಹರ್ಬ್ ಎಕ್ಸಾ$r$Åಕ್ಟರ್, ವ್ಯಾಕ್ಯೂಮ್ ಕಾನ್‌ಸೆಂಟ್ರೇಟರ್, ತೈಲ ಸಂಸ್ಕರಣ ಪಾತ್ರೆ, ಸ್ಪ್ರೆ ವಿದ್ ಸ್ಟೀಮ್ ಬಾಯ್ಲರ್ ಇತ್ಯಾದಿ ಯಂತ್ರಗಳನ್ನು ಅಳವಡಿಸಲಾಗಿದೆ.
“ಸುಮಾರು 20 ಕೆ.ಜಿ. ತುಳಸಿ ಕುಡಿಗಳನ್ನು ಹಾಕಿದರೆ, ಅದು ಒಣಗಿದಾಗ ಸಿಗುವುದು 2-3 ಕೆ.ಜಿ. ಮಾತ್ರ. ಇದರಿಂದ ಬೇರೆ ಬೇರೆ ಸಂಸ್ಕರಣ ಪ್ರಕ್ರಿಯೆಗಳನ್ನು ನಡೆಸಿ ಔಷಧಿಗಳನ್ನು ತಯಾರಿಸಲಾಗುತ್ತಿದೆ’ ಎನ್ನುತ್ತಾರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಫಾರ್ಮಸಿ ಪ್ರಧಾನ ವ್ಯವಸ್ಥಾಪಕ ಡಾ|ಮುರಳೀಧರ ಬಲ್ಲಾಳ್.
ಹೀಗೆ, ತೋಟದಿಂದ ಬಂದ ತುಳಸಿ ದೇವರ ಪೂಜೆಯಲ್ಲಿ ಭಾಗಿಯಾಗಿ, ನಂತರ ಆಯುರ್ವೇದ ಔಷಧವಾಗುತ್ತದೆ.
ಸರ್ವರೋಗಗಳಿಗೂ ತುಳಸಿಯೇ ಔಷಧ
ತೋಟ, ಗದ್ದೆಯ ಅಂಚಿನಲ್ಲಿ ಸಹಜವಾಗಿ ಕದಿರು ಬಿದ್ದು ಹುಟ್ಟಿ ಬೆಳೆಯುವ ತುಳಸಿಗೂ, ಪೋಷಿಸಿ ಬೆಳೆಸುವ ತುಳಸಿಗೂ ಗುಣಧರ್ಮದಲ್ಲಿ ವ್ಯತ್ಯಾಸವಿರುತ್ತದೆ. ಗಿಡಮೂಲಿಕೆಗಳು ಸಹಜವಾಗಿ ಬೆಳೆದಾಗ ಗುಣದಲ್ಲಿ ಬಲಿಷ್ಠವಾಗಿರುತ್ತವೆ. ಜೀವನಶೈಲಿ ಬದಲಾವಣೆಯಿಂದ ಬರುವ ದೀರ್ಘಕಾಲೀನ ಕಾಯಿಲೆ (ಮಧುಮೇಹ ಇತ್ಯಾದಿ), ಮೆಟಬೊಲಿಕ್ ಸಿಂಡ್ರೋಮ್, ಮಾನಸಿಕ ಒತ್ತಡ ಸಂಬಂಧಿತ ಕಾಯಿಲೆಗಳಿಗೆ ತುಳಸಿಯಿಂದ ಮಾಡಿದ ಔಷಧಿಗಳನ್ನು ಬಳಸುತ್ತಾರೆ. ಈ ಮೂರು ಬಗೆಯ ಗುಂಪುಗಳಲ್ಲಿ ಶೀತದಿಂದ ಹಿಡಿದು ಕ್ಯಾನ್ಸರ್‌ವರೆಗೆ ಎಲ್ಲ ವಿಧದ ಕಾಯಿಲೆಯೂ ಬರುತ್ತದೆ. ತುಳಸಿಯನ್ನು ಪೂರ್ತಿಯಾಗಿಯೂ, ಮಿಶ್ರಣವಾಗಿಯೂ ಬಳಸುತ್ತಾರೆ. ಮುಖ್ಯವಾಗಿ ಮಾತ್ರೆ, ಕ್ಯಾಪುÕಲ್, ಕಾಫ್ ಸಿರಪ್, ಮೂಗಿಗೆ ಹಾಕುವ ಅಣು ತೈಲದ ತಯಾರಿಕೆಯಲ್ಲಿ ಬಳಸುತ್ತಾರೆ.
ಚಿತ್ರಗಳು- ಆಸ್ಟ್ರೋ ಮೋಹನ್, ಪರಶುರಾಮ್ ಭಟ್
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.