ಪೇಸ್‌ ಫೇಸ್‌ಗೆ ಮಸಿ ಬಳಿಯುವ ಯತ್ನ


Team Udayavani, Apr 7, 2018, 9:49 AM IST

4-a.jpg

ಅನುಮಾನವೇಬೇಡ, 44 ವರ್ಷದ ಲಿಯಾಂಡರ್‌ ಪೇಸ್‌ ಈಗಲೂ ದೇಶದ ನಂಬರ್‌ ಒನ್‌ ಆಟಗಾರ. ವಿಪರ್ಯಾಸವೆಂದರೆ, ಇಂಥ ಪ್ರಚಂಡ ಆಟಗಾರನೊಂದಿಗೆ ಡಬಲ್ಸ್‌ ಆಟದಲ್ಲಿ ಜತೆಯಾಗಲು ದೇಶದ ಎಲ್ಲಾ ಆಟಗಾರರು ಹಿಂದೇಟು ಹಾಕುತ್ತಾರೆ. ಆಟಗಾರರ ಮನದೊಳಗೆ ಸೇರಿಕೊಂಡಿರುವ “ಅಹಂ’ ಎಂಬ ರೋಗ ಅವರನ್ನು ಹೇಗೆ ಬೇಕೋ ಹಾಗೆ ಆಡಿಸುತ್ತಿದೆ.  

ವೈಯಕ್ತಿಕ ಟೆನಿಸ್‌ನಲ್ಲಿ ಭಾರತದ ಆಟಗಾರರ ಸ್ಥಾನಮಾನಗಳು ಸಾಕಷ್ಟು ಕೆಳಹಂತದಲ್ಲಿರುವುದು ನಿಜವಾದರೂ ಭಾರತದ ಡೇವಿಸ್‌ ಕಪ್‌ ತಂಡ ಮೇರಾ ಭಾರತ್‌ ಮಹಾನ್‌ ಎಂಬ ಪರಿಸ್ಥಿತಿಯನ್ನು ದಶಕಗಳಿಂದಲೂ ಉಳಿಸಿಕೊಂಡಿದೆ. ದೇಶ ಈಗ ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ ಐಟಿಎಫ್ ರ್ಯಾಕಿಂಗ್‌ನಲ್ಲಿ 20ನೇ ಸ್ಥಾನದಲ್ಲಿದೆ, ಈ ಸಾಧನೆ ಕಳಪೆಯೇನಲ್ಲ! ಇಂತಿಪ್ಪ ಸಾಧನೆಗೆ ಬಹುದೊಡ್ಡ ಕೊಡುಗೆ ನೀಡಿದವರಾರು ಎಂದು ನೋಡಿದಾಗ, ಮೊದಲ ಪಂಕ್ತಿಯಲ್ಲಿ ಬರುವ ಹೆಸರು ಲಿಯಾಂಡರ್‌ ಪೇಸ್‌ರದ್ದು.

ಈ ಸ್ಪರ್ಧೆಯಲ್ಲಿ ಅತಿ ಹೆಚ್ಚಿನ ಪಂದ್ಯ ಗೆದ್ದಿದ್ದು ಲಿಯಾಂಡರ್‌(90 ಪಂದ್ಯ). ಅತಿ ಹೆಚ್ಚಿನ ಡಬಲ್ಸ್‌ ಪಂದ್ಯ ಗೆದ್ದಿದ್ದು ಇದೇ ಲಿಯಾಂಡರ್‌ (42 ಪಂದ್ಯ). ಅತ್ಯುತ್ತಮ ಡಬಲ್ಸ್‌ ಪ್ರದರ್ಶನದ ಮಾತು ಬಂದರೆ ಮಹೇಶ್‌ ಭೂಪತಿ ಜೊತೆ ಲಿಯಾಂಡರ್‌ 25-2ರ ಗೆಲುವು ಸೋಲಿನ ಅನುಪಾತ ಹೊಂದಿದ್ದಾರೆ. ಇವೆಲ್ಲವುಗಳ ನಡುವೆ ಲಿಯಾಂಡರ್‌ ಪೇಸ್‌ 27 ವರ್ಷಗಳ ಕಾಲ ಡೇವಿಸ್‌ ಕಪ್‌ನಲ್ಲಿ ದೇಶಕ್ಕಾಗಿ ಆಡುತ್ತಲೇ ಇದ್ದಾರೆ, ವಾವ್‌Ø!

ಪೇಸ್‌ರ  ಈ ದೇಶದ  ಪರ ಆಡುವ ಉತ್ಕಟ ಮನೋಭಾವ ಟೆನಿಸ್‌ ತರಹದ ತೀರಾ ವೈಯಕ್ತಿಕ ಹಣ, ಸಾಧನೆಯ ಆಟದಲ್ಲಿ ತೀರಾ ತೀರಾ ಅಪರೂಪವಾದುದು.ಅವರ ಬಗ್ಗೆ ಯಾವುದೇ ಅಭಿಮಾನವನ್ನು ಹೊಂದಿಲ್ಲದೆ ಅವರ ಸಾಧನೆ ನೋಡಿದರೂ ಅವರ ಹಿರಿಮೆಗೆ ತಲೆಬಾಗಲೇಬೇಕಾಗುತ್ತದೆ. ಇಂತಹ ಲಿಯಾಂಡರ್‌ ಪೇಸ್‌ ಅವರಿಗೆ ಬರಲಿರುವ ಚೀನಾ ಎದುರಿನ ಡೇವಿಸ್‌ ಕಪ್‌ ಮುಖಾಮುಖೀಯ ಡಬಲ್ಸ್‌ ಆಡಲು ಮತ್ತೂಮ್ಮೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

ಫೇಸ್‌ಗೆ ಮಸಿ ಬಳಿವ ಯತ್ನ! 

ಕಳೆದ ಏಪ್ರಿಲ್‌ನಲ್ಲಿ ಉಜ್ಬೇಕಿಸ್ತಾನದ ಎದುರು ಆಡುವ ತಂಡದಿಂದ ಪೇಸ್‌ಗೆ ಕೊಕ್‌ ಕೊಡಲಾಗಿತ್ತು. ಅತ್ತ ಕೆನಡಾ ವಿರುದ್ಧದ ವಿಶ್ವ ಗ್ರೂಪ್‌ ಪ್ಲೇ ಆಫ್ನಲ್ಲೂ ಎಐಟಿಎ ಪೇಸ್‌ ಕಡೆ ನೋಡಿರಲಿಲ್ಲ. ಈಗ ಏಷಿಯಾ ಓಶಿಯಾನಿಯಾ ಮೊದಲ ಗುಂಪಿನ ಸ್ಪರ್ಧೆಗೆ ಪೇಸ್‌ರನ್ನು ಆರಿಸಲಾಗಿದೆ. ಅಷ್ಟಕ್ಕೂ ಈ ಮನುಷ್ಯನಿಗೀಗ ಬರೀ 44 ವರ್ಷ. ಹಾಗಂತ ಪೇಸ್‌ ಅಸಾಧಾರಣ ಪ್ರತಿಭೆಯೇನಲ್ಲ. ಭಾರತದ ತ್ರಿವರ್ಣ ಧ್ವಜ ಪ್ರತಿನಿಧಿಸುವ ಲಿಯಾಂಡರ್‌ರೇ ಬೇರೆ. ಸಿಂಗಲ್ಸ್‌ನಲ್ಲಿ ಅವತ್ತಿನ ವಿಶ್ವ ನಂ.7 ಆಟಗಾರ, ಹುಲ್ಲಿನಂಕಣದ ಮಿಸೈಲ್‌ ಗೋರಾನ್‌ ಇವಾನಿಸೆವಿಚ್‌ರನ್ನು, ಜಾನ್‌ ಸಿಮರೆಂಕ್‌ ತರಹದ ಟಾಪ್‌ ಆಟಗಾರರನ್ನು ಲಿಯಾಂಡರ್‌ ಸೋಲಿಸಿದ್ದು ಡೇವಿಸ್‌ ಕಪ್‌ ಮಾದರಿಯಲ್ಲಿಯೇ. ಡೇವಿಸ್‌ ಕಪ್‌ನಲ್ಲಿ ಪೇಸ್‌-ಭೂಪತಿ 24 ಸತತ ಡಬಲ್ಸ್‌ ಪಂದ್ಯ ಗೆದ್ದಿರುವುದು ವಿಶ್ವದಾಖಲೆ. ಅವರಿಬ್ಬರ ಜೊತೆಯಾಟ 303-103ರ ಸೋಲು-ಗೆಲುವನ್ನು ಕಂಡಿದೆ. ಇಂತಿಪ್ಪ ಪೇಸ್‌ರನ್ನು ಕಂಡರೆ ಯಾವುದೇ ಭಾರತೀಯ ಸಹ ಆಟಗಾರನಿಗೆ ಆಗಿಬರುವುದಿಲ್ಲ. ಅವರ ಜೊತೆ ಡಬಲ್ಸ್‌ಗೆ ಜೊತೆಯಾಗಲೂ ಎಲ್ಲರೂ ನಿರಾಕರಿಸುತ್ತಾರೆ. ಚೀನಾ ಜೊತೆಗಿನ ಟೈಗೂ ಅವರಿಂತ ಮೇಲಿನ ಸ್ಥಾನದ ತಮ್ಮನ್ನು ಮೀಸಲು ಆಟಗಾರನನ್ನಾಗಿ ಮಾಡಿದ್ದನ್ನೆ ನೆಪ ಮಾಡಿಕೊಂಡು ದಿವಿಜ್‌ ಶರನ್‌ ತೆರಳಲು ನಿರಾಕರಿಸುವುದು ಹುಬ್ಬೇರಿಸುವಂತಹ ವಿಷಯ.

ಈ ಶರನ್‌, ಈವರೆಗೆ ದೇಶವನ್ನು ಪ್ರತಿನಿಧಿಸುವ ಡೇವಿಸ್‌ ಕಪ್‌ನಲ್ಲಿ ಆಡಿಯೇ ಇಲ್ಲ. ಆದರೂ ಪೇಸ್‌ ವಿರುದ್ಧ ಲೊಚಗುಡುತ್ತಾರೆ. ಸಾವಿನ ಹತ್ತಿರ ಹೋಗಿ ಬಂದಿರುವ ಪೇಸ್‌ ಮಾತ್ರ ಎಲ್ಲ ಟೀಕೆಗೂ ರ್ಯಾಕೆಟ್‌ನಲ್ಲಿಯೇ ಉತ್ತರ ಎಂಬಂತೆ ಸುಮ್ಮನುಳಿದಿದ್ದಾರೆ.

ಇಗೋ ಎಂಬ ಸಾಂಕ್ರಾಮಿಕ ರೋಗ!

2002ರಿಂದಲೇ ಮಹೇಶ್‌ ಹಾಗೂ ಲಿಯಾಂಡರ್‌ರ ನಡುವೆ ಇಗೋ ಹೊಡೆದಾಟಗಳು ಸಣ್ಣದಾಗಿ ನಡೆಯುತ್ತಿತ್ತು ಎನ್ನುವವರಿದ್ದಾರೆ. 2006ರಲ್ಲಿ ಏಷ್ಯನ್‌ ಕ್ರೀಡಾಕೂಟದಲ್ಲಿ ಚೀನೀ ತಂಡದ ಎದುರು ಈ ಜೋಡಿ ಸೋಲು ಅನುಭವಿಸಿದಾಗ, ಪೇಸ್‌ ಬಹಿರಂಗವಾಗಿ ಮಹೇಶ್‌ ಭೂಪತಿಯವರ ಬದ್ಧತೆಯನ್ನು ಪ್ರಶ್ನಿಸಿದರು. ಅವತ್ತು ಮುರಿದು ಹೋದ ಈ ಆಟಗಾರರ ಮನಸ್ಸು ಮತ್ತೆ ಒಂದುಗೂಡಲೇ ಇಲ್ಲ. 2011ರಲ್ಲಿ ಮತ್ತೆ ಒಗ್ಗೂಡಿದ ಪೇಸ್‌, ಭೂಪತಿ ಭಾಯಿ ಭಾಯಿ ಎಂದರು. ಚೆನ್ನೆç ಓಪನ್‌ ಗೆದ್ದರು. ಆಸ್ಟ್ರೇಲಿಯನ್‌ ಓಪನ್‌ನ ರನ್ನರ್‌ ಅಪ್‌ ಆದರು. ವರ್ಷಾಂತ್ಯದ ಎಟಿಪಿ ಚಾಂಪಿಯನ್‌ಶಿಪ್‌ನಲ್ಲಿ ಉಪಾಂತ್ಯ ಪ್ರವೇಶಿಸಿದರು. ಈ ಹಿನ್ನೆಲೆಯಿದ್ದೂ ಏಕಾಏಕಿ ಪೇಸ್‌ 2012ರ ತಮ್ಮ ಜೊತೆಗಾರನಾಗಿ ರಾಡಿಕ್‌ ಸ್ಟೆಪನೆಕ್‌ ಅವರನ್ನು ಆಯ್ಕೆ ಮಾಡಿಕೊಂಡರು. ತೀರಾ ಕಷ್ಟದಿಂದ ಟೆನಿಸ್‌ನಲ್ಲಿ ಮೇಲೆ ಬಂದ ಪೇಸ್‌ ಕೆಲವೊಮ್ಮೆ ಸೌಹಾರ್ದಕ್ಕೆ ಧಕ್ಕೆ ತರುತ್ತಾರೆ ಎಂಬ ಆರೋಪವಿದೆ. ವಿಚಿತ್ರ ಎಂದರೆ ಈವರೆಗೆ ಯಾವೊಬ್ಬ ಆಟಗಾರನೂ ಲಿಯಾಂಡರ್‌ ಜೊತೆಗೆ ತಾವೇಕೆ ಆಡಲು ಇಚ್ಛಿಸುವುದಿಲ್ಲ ಎಂಬುದನ್ನು ಹೇಳಿಲ್ಲ, ಅವರೊಂದಿಗೆ ಆಡದೇ ಇರುವುದಕ್ಕೆ ಇರುವ ಕಾರಣಗಳನ್ನು ಕುರಿತು ವಿವರಣೆಯನ್ನು ನೀಡಿಲ್ಲ.

ನೇರ ಪ್ರವೇಶ ಪಡೆದ ರೋಹನ್‌ ಬೋಪಣ್ಣ ತಮ್ಮ 2016ರ ರಿಯೋ ಒಲಂಪಿಕ್ಸ್‌ ಜೊತೆಗಾರನನ್ನಾಗಿ ತಮ್ಮ ನಂತರದ ರ್‍ಯಾಂಕಿಂಗ್‌ನ ಪೇಸ್‌ರನ್ನು ಆಯ್ದುಕೊಂಡಿರಲಿಲ್ಲ. 2012ರ ಸಮಯದಲ್ಲಂತೂ ಮಹೇಶ್‌, ಬೋಪಣ್ಣ ಅಲ್ಲದೆ ಸಾನಿಯಾ ಮಿರ್ಜಾ ಕೂಡ ಪೇಸ್‌ ಜೊತೆಗೆ ಆಡಬೇಕಾದುದಕ್ಕೆ ಅಸಮ್ಮತಿ ಸೂಚಿಸಿದ್ದರು. ಅಟ್ಲಾಂಟಾ ಒಲಂಪಿಕ್ಸ್‌ನಲ್ಲಿ ದೇಶದ ಏಕೈಕ ಟೆನಿಸ್‌ ಸಿಂಗಲ್ಸ್‌ ಕಂಚಿನ ಪದಕವನ್ನು ತಂದಿತ್ತ ಲಿಯಾಂಡರ್‌ ಪೇಸ್‌ ಬದಲು ಬೋಪಣ್ಣ ಸಾಕೇತ್‌ ಮೈನೇನಿ ಅವರನ್ನು ಆರಿಸಿಕೊಂಡರು. ಭಾರತದ ಜೀಶನ್‌ ಆಲಿಯಿಂದ ಆರಂಭಿಸಿ ನಿನ್ನೆ ಮೊನ್ನಿನ ರಾಮಕುಮಾರ್‌ ರಾಮನಾಥನ್‌ ತನಕ ಪೇಸ್‌ ಜೊತೆಯಾಟವಾಡಿದ್ದು ಹತ್ತಿಪ್ಪತ್ತು ಜನರ ಜೊತೆ ಅಲ್ಲ, ಬರೋಬ್ಬರಿ 110ಕ್ಕೂ ಹೆಚ್ಚು ಆಟಗಾರರೊಂದಿಗೆ! ಭಾರತದ ಆಟಗಾರರ ನಿರಾಕರಣೆ ವಿಶ್ವದ ಅಪ್ರತಿಮ ಆಟಗಾರ್ತಿಯರಾದ ಮಾರ್ಟಿನಾ ನವ್ರಾಟಿಲೋವಾ, ವಿಶ್ವದ ನಂಬರ್‌ ಒನ್‌ ಆಟಗಾರ್ತಿಯಾಗಿದ್ದ ಮಾರ್ಟಿನಾ ಹಿಂಗಿಸ್‌ ಅಂಥವರು ತಮ್ಮ ಡಬಲ್ಸ್‌ ಪಾರ್ಟನರ್‌ ಆಗಿ ಪೇಸ್‌ರನ್ನು ಆಯ್ದುಕೊಂಡಿದ್ದನ್ನು ನೋಡಿದಾಗ ಪೇಸ್‌ ಸ್ವಂತ ಸಾಧನೆಗಾಗಿ ಮಾತ್ರ ಆಡು¤ತಾರೆ ಎಂಬ ಆಕ್ಷೇಪಗಳ ಸತ್ಯಾಸತ್ಯತೆ ಗೊಂದಲವಾಗುತ್ತದೆ.

ಈ ದ್ವೇಷಮಯ ವಾತಾವರಣ ಈಗಲೂ ಮಾಯವಾ
ಗಿಲ್ಲ. ಆಡದ ನಾಯಕ ಮಹೇಶ್‌ ಭೂಪತಿಗೆ, ಪೇಸ್‌ ಕುರಿತಂತೆ ಸದಭಿಪ್ರಾಯವಿಲ್ಲ. ಭೂಪತಿಯ ಅವರ ನೆರಳಿನಲ್ಲಿರುವ ರೋಹನ್‌ ಬೋಪಣ್ಣ, ಪೇಸ್‌ ತಂಡದಲ್ಲಿ ಆಡುವುದಿದ್ದರೆ ನನಗೆ ರಜೆ ಕೊಡಿ ಎಂದಿದ್ದಾರೆ. ಈ ಸಮಯದಲ್ಲಿ ಕಠಿಣ ವಾಗಿ ವರ್ತಿಸಿರುವ ಎಐಟಿಎ, ಸರ್ಕಾರದ ಸೌಲಭ್ಯ  ಪಡೆಯುವ ಬೋಪಣ್ಣ ಕಮಕ್‌ಕಿಮಕ್‌ ಅನ್ನದೆ ಡಬಲ್ಸ್‌ ನಲ್ಲಿ ಪೇಸ್‌ ಜೊತೆ ಆಡಲೇಬೇಕು ಎಂದು ಆದೇಶಿಸಿದೆ. ಪೇಸ್‌ ಇನ್ನೊಂದು ಡಬಲ್ಸ್‌ ಪಂದ್ಯ ಗೆದ್ದುಬಿಟ್ಟರೆ ನಿಕೋಲಾ ಪೈಟ್ರವೇಲಿ ಅವರ 42 ಡಬಲ್ಸ್‌ ವಿಜಯದ ದಾಖಲೆಯನ್ನು ಮೀರಿ 43ಕ್ಕೆ ಏರುತ್ತಾರೆ. ಇದೇ ಕಾರಣದಿಂದ ಪೇಸ್‌ ಇನ್ನೊಂದು ಪಂದ್ಯ ಆಡಲು ಅವಕಾಶ ಕೊಡಿ ಎಂದರೇ? ರೋಹನ್‌ ಅತ್ಯುತ್ತಮ ಆಟಗಾರ. ಅವನ ಜೊತೆ ಆಡಲು ನಾನು ಹೆಮ್ಮೆಪಡುತ್ತೇನೆ ಎಂಬರ್ಥದ ಹೇಳಿಕೆ ನೀಡಿದರೆ? ಬಲ್ಲವರೇ ಹೇಳಬೇಕು.

ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

R.Ashok

Budget Allocation: ಇನ್ನೆರಡು ತಿಂಗಳಲ್ಲಿ ಶೇ. 45 ಪ್ರಗತಿ ಸಾಧ್ಯವೇ?: ಆರ್‌.ಅಶೋಕ್‌

JDS-DKS

Politics Discussion: ದಿಲ್ಲಿಯಲ್ಲಿ ಜೆಡಿಎಸ್‌ ಶಾಸಕರು-ಡಿ.ಕೆ.ಶಿವಕುಮಾರ್‌ ಮುಖಾಮುಖಿ

CM-siddu

HMP Virus: ಎಚ್‌ಎಂಪಿ ವೈರಸ್‌ ಭೀತಿ ಬೇಡ, ಪರೀಕ್ಷೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

DKSSuresh

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಿತ್ತುಕೊಂಡಿದ್ದಲ್ಲ, ಪಕ್ಷ ಕೊಟ್ಟಿದ್ದು: ಡಿ.ಕೆ.ಸುರೇಶ್‌

Tumakuru-Leopard

Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್‌!

Home whitewash more shocking than Australia defeat: Yuvraj

Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್‌ ಆಘಾತಕಾರಿ: ಯುವಿ

Krishna-Byregowda

Revenue: ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಗೆ ತಯಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

R.Ashok

Budget Allocation: ಇನ್ನೆರಡು ತಿಂಗಳಲ್ಲಿ ಶೇ. 45 ಪ್ರಗತಿ ಸಾಧ್ಯವೇ?: ಆರ್‌.ಅಶೋಕ್‌

JDS-DKS

Politics Discussion: ದಿಲ್ಲಿಯಲ್ಲಿ ಜೆಡಿಎಸ್‌ ಶಾಸಕರು-ಡಿ.ಕೆ.ಶಿವಕುಮಾರ್‌ ಮುಖಾಮುಖಿ

CM-siddu

HMP Virus: ಎಚ್‌ಎಂಪಿ ವೈರಸ್‌ ಭೀತಿ ಬೇಡ, ಪರೀಕ್ಷೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

DKSSuresh

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಿತ್ತುಕೊಂಡಿದ್ದಲ್ಲ, ಪಕ್ಷ ಕೊಟ್ಟಿದ್ದು: ಡಿ.ಕೆ.ಸುರೇಶ್‌

Tumakuru-Leopard

Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.