ಗುಲಾನಿ ಕೊಕ್ಕರೆ- ಕಬ್ಬೆಕೊಕ್ಕರೆ


Team Udayavani, Feb 18, 2017, 2:47 PM IST

7.jpg

 ಇಂಗ್ಲೀಷಿನಲ್ಲಿ ಇದಕ್ಕೆ  ಲೆಸರ್‌ ಫ್ಲೆಮಿಂಗೋ ಅಂತಾರೆ. ಪ್ಲೇಮ್‌ ಅಂದರೆ ಬೆಂಕಿಯಜ್ವಾಲೆ. Lesser Flamingo (Phoenicopterus minor)RM  Duck +  + ಬೆಂಕಿಯಂತೆ ಉಜ್ವಲ ಗುಲಾಬಿ ಬಣ್ಣ ಎದ್ದು ಕಾಣುವುದರಿಂದ ಇದನ್ನು ಫ್ಲೇಮಿಂಗೋ ಎಂದು ಕರೆಯುವರು.   ಈ ಹಕ್ಕಿ ಕೊಕ್ಕರೆ, ಬಾತು, ಹಂಸ ಮೂರು ಪಕ್ಷಿಗಳ ವಿಶಿಷ್ಟ ಅಂಶಗಳನ್ನು ಒಳಗೊಂಡಿದೆ. ಹಾಗಾಗಿ ಇದನ್ನು ಜಲ ಪಕ್ಷಿಗಳ ಕುಟುಂಬದಿಂದ ಬೇರ್ಪಡಿಸಿ, ಪ್ರತ್ಯೇಕ  “ಫೋನಿ ಕಾಪ್ಟೆರಿಕ್ಸ’ ಕುಟುಂಬಕ್ಕೆ ಸೇರಿಸಲಾಗಿದೆ. 

 -90 ರಿಂದ 105 ಸೆಂ.ಮೀ ದೊಡ್ಡದು ಇದೆ.  ಬಳುಕುವ ಕುತ್ತಿಗೆ, ಉದ್ದ ಸಪೂರಾದ ಕಾಲಲ್ಲಿ ಚಿಕ್ಕ ಬೆರಳು ಇದ್ದು, ಜಾಲಪಾದ ಸಹ ಇದೆ. ಕೊಕ್ಕರೆಯಂತೆ ಕಂಡರೂ ಉಜ್ವಲ ಗುಲಾಬಿ ಬಣ್ಣ ಇದನ್ನು ಕೊಕ್ಕರೆಗಳಿಂದ ಪ್ರತ್ಯೇಕವಾಗಿ ಗುರುತಿಸಲು ಸಹಾಯವಾಗಿದೆ. 
ಪಕ್ಷಿಗಳಲ್ಲೆ ಅತಿ ವಿಶಿಷ್ಟ ಕೊಕ್ಕನ್ನು ಇದು ಹೊಂದಿದೆ. ಬಾಕುವಿನಂತೆ ಬಾಗಿದ ಮಧ್ಯದಲ್ಲಿ ಕೆಳಮುಖ ಬಾಗಿದಕೊಕ್ಕು ,ತುದಿಯಲ್ಲಿ ಕಪ್ಪು ಬಣ್ಣ ಇದ್ದು, ಸ್ವಲ್ಪ ಕೊಕ್ಕೆಯಂತೆ ಬಾಗಿರುತ್ತದೆ. ಕೊಕ್ಕಿನ ತುದಿಯಲ್ಲಿ ನೀರನ್ನುಜಾಲಾಡಿ, ನೀರಿನಿಂದ ಆಹಾರ ಸಂಗ್ರಹಿಸಲು ಜಾಲರಿಯಂತಹ ಭಾಗ ವಿಶಿಷ್ಟವಾದ ನಾಲಿಗೆ ಇದೆ.  

   ಗುಂಪು, ಗುಂಪಾಗಿ ಜಲಚರಗಳನ್ನು, ಜಲ ಸಸ್ಯಗಳನ್ನು, ನೀರಿನ ಸೂಕ್ಷ್ಮ ಜೀವಿಗಳನ್ನು ತನ್ನ ಡೊಂಕಾದ ಕೊಕ್ಕನ್ನು ನೀರಿನಲ್ಲಿ ಮುಳುಗಿಸಿ, ಮಣ್ಣನ್ನು ಕೆದಕಿ, ಚುಂಚಿನ ಜರಡಿಯಂತಹ ಭಾಗದಿಂದ ಜಾಲಾಡಿ, ತನ್ನ ಆಹಾರ ದೊಕಿಸಿಕೊಳ್ಳುತ್ತದೆ. ಸಾಕು ಬಾತುವಿನಂತೆ ದಪ್ಪ ಶರೀರ ಇದಕ್ಕೆ.  ಹಂಸದಂತೆ ಬಳಕುವ ಕುತ್ತಿಗೆ ಇದರ ವೈಶಿಷ್ಟ್ಯ. ಬಾಂಗ್ಲಾದೇಶ, ಸಿಲೋನ್‌, ಭಾರತ, ಪಾಕಿಸ್ತಾನದಲ್ಲೂ ಕಾಣಸಿಗುತ್ತದೆ. ಆದರೂ ಭಾರತದ ಕಚ್‌ ಪ್ರದೇಶವೇ ಈ ಹಕ್ಕಿಯ ನೆಲೆ. ಜಲಾಶಯಗಳ ಹಿನ್ನೀರು ಪ್ರದೇಶ, ಸಮುದ್ರ ನೀರು ಓಳ ನುಗ್ಗುವ ಗಜನೀ ಪ್ರದೇಶ ಇಲ್ಲೆಲ್ಲಾ ವಿಶೇಷವಾಗಿ ಕಾಣಬಹುದು. ಇದು ತ್ರಿಕೋಣಾಕಾರವಾಗಿ ವ್ಯೂಹ ರಚಿಸಿ, ಕುತ್ತಿಗೆಯನ್ನು ಮುಂದೆ ಚಾಚಿ, ಕಾಲನ್ನು ಹಿಂದೆಉದ್ದವಾಗಿ, ನೀಳವಾಗಿಸಿ ಹಾರುತ್ತದೆ. ಹೀಗೆ ಹಾರುವಾಗ ಪ್ರೈಮರಿ ಗರಿಗಳು-ರೆಕ್ಕೆಯ ತುದಿಯಗರಿ ಮತ್ತು ಸೆಕೆಂಡರಿ ಗರಿಳು -ದೊಡ್ಡ ಗರಿಗಳಿಗಿಂತ ಸ್ವಲ್ಪ ಹಿಂದಿರುವ ಚಿಕ್ಕಗರಿಯ ಅಡಿಭಾಗದ ಕಪ್ಪು ಬಣ್ಣ ಎದ್ದು ಕಾಣುವುದು. ಸ್ಕೆಪಲರಿಸ್‌ ಗರಿಗಳು-ರೆಕ್ಕೆಯ ಬುಡದ ಅಡಿ ಭಾಗದ ಗರಿ ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಪ್ರೌಢಾವಸ್ಥೆ ತಲುಪಿದ ಹಕ್ಕಿ 1.2 ಕೆ.ಜಿಯಿಂದ 2 ಕೆ.ಜಿ ಭಾರ ಇರುತ್ತದೆ.  ಇದರ ರೆಕ್ಕೆ ಬಿಚ್ಚಿದಾಗ ಅಗಲ 90 ರಿಂದ 100 ಸೆಂ.ಮೀ ಇರುವುದು. ಆಫ್ರಿಕಾದ‌ ಸರಹದ್ದಲ್ಲೂ ಇದೆ. ಸೆಪ್ಟೆಂಬರ್‌ನಿಂದ ಮಾರ್ಚ್‌ ಇದು ಮರಿಮಾಡುವ ಸಮಯ. 

   ಇದು ಸಂತಾನಾಭಿವೃದ್ದಿಗಾಗಿ ಗೂಡುಕಟ್ಟಿ, ಗುಂಪಾಗಿ ಇರುವ ಒಂದೇ ಒಂದು ಸ್ಥಳ 
ಭಾರತದ ಕಚ್‌ ಪ್ರದೇಶ‌.  ಸಾವಿರಾರು ಹಕ್ಕಿಗಳು ಗುಂಪಾಗಿ ನೆಲದ ಕೆಸರು ಮಣ್ಣನ್ನು,  ದಿಬ್ಬದಂತೆ ತ್ರಿಕೋನಾಕಾರದಲ್ಲಿ ಮಾಡಿ – ಮಧ್ಯದಲ್ಲಿ ಹೊಂಡ ನಿರ್ಮಿಸಿ, ಮಣ್ಣಿನಿಂದ ಗಿಲಾವುವಾಡಿ, ಒಣಗಿಸಿ ಗೂಡು ಮಾಡುತ್ತದೆ.  ಇದರಗೂಡಿನ ಎತ್ತರ 3 ಅಡಿ. ಇದರ ಮೇಲೆ ಒಂದು ಅಥವಾ 2 ನೀಲಿ ಛಾಯೆಯ ಬಿಳಿಬಣ್ಣದ ತತ್ತಿ ಇಡುತ್ತದೆ. ಮರಿ ಮೊಟ್ಟೆ ಒಡೆದು ಹೊರಬರಲು 32 ದಿನ ಬೇಕಾಗುವುದು. ಗಂಡು ಹೆಣ್ಣು ಒಂದೇ ರೀತಿ ಇರುವುದು, ಗೂಡು ಕಟ್ಟುವುದು, ಮರಿಗಳ ಪಾಲನೆ ಫೋಷಣೆ, ರಕ್ಷಣೆಗಂಡು – ಹೆಣ್ಣು ಎರಡೂ ಸೇರಿ ಮಾಡುವುವು.  

 ಪಾರಿವಾಳಗಳ ಕೋರ್ಪ್‌ ಚೀಲದಂತೆ ಇದಕ್ಕೂ ಕಾರ್ಪಚೀಲ ಇದೆ. ಇದರಲ್ಲಿ ಕಾರ್ಪ್‌ ಹಾಲನ್ನು ಉತ್ಪಾದಿಸುವುದು ಇದನ್ನು ತನ್ನಚುಂಚಿನ ಮೂಲಕ ಮರಿಗಳಿಗೆ ಕುಡಿಸುವುದು. ಕೆಲವೊಮ್ಮ ಗಟ್ಟಿಯಾದ ಆಹಾರವನ್ನು ಇದರಲ್ಲಿ ಮೆತ್ತನೆಗೊಳಿಸಿ, ಮರಿಗಳಿಗೆ ಕೊಡುವುದು. ಇದು ತುಂಬಾ ಔಷಧೀಯಗುಣ ಹೊಂದಿದೆ. ಪಾರಿವಾಳದ ಹಾಲಿನ ಸಂಶೋಧನೆ ನಡೆಯುತ್ತಿದೆ. ಇದರಲಿ Éರೋಗ ಪ್ರತಿರೋಧ ಶಕ್ತಿ, ಮತ್ತು ನರದೌರ್ಬಲ್ಯ, ಎಲುಬುಗಳ ದೃಢತೆ ಔಷಧ ಗುಣ ಇದೆ.  ಮಾನವರ ಹಾಲು, ಹಸುವಿನ ಹಾಲಿಗಿಂತಲೂ ಹೆಚ್ಚು ರೋಗ ಪ್ರತಿರೋಧ ಶಕ್ತಿ ಈ ಹಾಲಿನಲ್ಲಿದೆ. ಹಾಗಾಗಿ ಪಾರಿವಾಳ ಮತ್ತು ಕಬ್ಬೆ ಹಕ್ಕಿಗಳ ಕೋರ್ಪ್‌ ಹಾಲಿನ ಕುರಿತು ಸಂಶೋಧನೆ ನಡೆಯಬೇಕಾಗಿದೆ. 

  ತಮ್ಮ ಮರಿಗಳನ್ನು ತಮ್ಮ ಕಾಲಿನ ನಡುವೆ ಇರಿಸಿಕೊಂಡು ಕರೆದುಕೊಂಡು ಹೋಗುವುದು . ಹೀಗೆ ಸುಮಾರು 20 ಮೈಲಿ ದೂರ ಹೋದ ಉದಾಹರಣೆ ಸಿಗುವುದು. ಕೊಳಚೆ ಪ್ರದೇಶ, ಆಳವಿಲ್ಲದ ಕೆರೆ, ಜಲ ಸಸ್ಯ, ಜಂತುಗಳು, ಪಾಚಿ, ಮುಂತಾದವುಗಳನ್ನು ತನ್ನ ದಪ್ಪವಾದ ಮತ್ತು ಕೆಳಬಾಗಿದ ಕೊಕ್ಕು ಮತ್ತು ಸ್ಪಂಜಿನಂತಹ ತನ್ನ ನಾಲಿಗೆಯ ಸಹಾಯದಿಂದ ಶೇಖರಿಸಿ ತಿನ್ನುತ್ತದೆ.  ಕೆಲವೊಮ್ಮೆ ಬಾತುನಂತೆ ಈಜುವುದು. ಆಳ ನೀರಿನಲ್ಲಿ ಆಹಾರ ದೊರಕಿಸುವಾಗ ತಳ ಭಾಗದಲ್ಲಿ ಮಣ್ಣನ್ನು ಮುಟ್ಟಲು ಬಾತುಗಳಂತೆ ಬಾಲ ಮಾತ್ರನೀರಿನ ಮೇಲಿದ್ದಂತೆ ತಲೆಕೆಳಗಾಗಿ ಮುಳುಗುತ್ತದೆ. ಕೆಲವೊಮ್ಮೆ ಹೆಬ್ಭಾವಿನಂತೆ ಕೂಗುವುದು. ಆಹಾರ ಅರಸುವಾಗ ಗುಂಪಾಗಿ ಇದ್ದು, ಅತಿಯಾಗಿ ಶಬ್ದಮಾಡುವುದು. ಕಚ್‌ನಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿ ಸೇರುವುದು. ಇಲ್ಲಿ ಸುಮಾರು 5 ರಿಂದ 10 ಲಕ್ಷ ಸೇರುವುದರಿಂದ ಇದನ್ನು ಫ್ಲೆಮಿಂಗೋ ನಗರ ಎಂದು ಕರೆಯುತ್ತಾರೆ. 

ಇದು ಪ್ರಪಂಚದಲ್ಲೆ ಅತಿ ಹೆಚ್ಚು ಕಬ್ಬೆ ಹಕ್ಕಿಗಳಿರುವ ಜಾಗ.  ಫ್ಲಿಮಿಂಗೋಗಳ ಕೊರ್ಪಚೀಲದಲ್ಲಿ ತಯಾರಾಗುವ ಕಾರ್ಪ ಹಾಲು ಕೆಂಪು ಹಾಗೂ ಬಿಳಿ ರಕ್ತ ಕಣಗಳಿಂದ ಕೂಡಿದೆ. ಇದು ಮರಿಗಳಿಗೆ ಸುಲಭವಾಗಿ ಜೀರ್ಣವಾಗಲು ಅನುಕೂಲ ಕರವಾಗಿದೆ. ಇದಲ್ಲದೇ ಮರಿಗಳ ದೇಹದ ಉಷ್ಣತೆ ಕಾಪಾಡಲು ಸಹ ಸಹಾಯ ಮಾಡುತ್ತದೆ. 

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.