ಒಲಿಂಪಿಕ್ಸ್‌ಗೂ ಕಬಡ್ಡಿ ಸೇರ್ಪಡೆಯಾಗಲಿ
ಕನ್ನಡಿಗ ಕಬಡ್ಡಿ ತಾರೆ ಸುಕೇಶ್ ಹೆಗ್ಡೆ ಸಂದರ್ಶನ
Team Udayavani, Dec 28, 2019, 6:05 AM IST
ದೇಶಿ ಕ್ರೀಡೆ ಕಬಡ್ಡಿ ಒಲಿಂಪಿಕ್ಸ್‌ಗೆ ಸೇರ್ಪಡೆಯಾಬೇಕು. 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಕಬಡ್ಡಿಗೆ ಅವಕಾಶ ಲಭಿಸಿದರೆ ದೇಶವನ್ನು ಪ್ರತಿನಿಧಿಸಬೇಕು ಎಂಬ ಆಸೆಯಿದೆ ಎಂದು ಪ್ರೊ ಕಬಡ್ಡಿ ಲೀಗ್‌ನ ಬೆಂಗಾಲ್ ತಂಡದ ಸ್ಟಾರ್ ಆಟಗಾರ ಸುಕೇಶ್ ಹೆಗ್ಡೆ “ಉದಯವಾಣಿ’ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಅಖೀಲ ಭಾರತ ಅಂತರ್ ವಿವಿ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಕ್ರೀಡಾಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗರ ಪ್ರಜ್ಞ ಗೌರವ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಿಹಿಸಿದ ಸಂದರ್ಭದಲ್ಲಿ ನಡೆದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
* ಕಬಡ್ಡಿ ಆಸಕ್ತಿ ಹುಟ್ಟಿದ್ದು ಹೇಗೆ?
ನಾನು ಕಾರ್ಕಳದ ಅಜೆಕಾರಿನಲ್ಲಿ ಹುಟ್ಟಿ ಬೆಳೆದದ್ದು. ಬಾಲ್ಯದಿಂದಲೇ ಕಬಡ್ಡಿ ಬಗ್ಗೆ ಆಸಕ್ತಿ ಇತ್ತು. ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುವ ಸಂದರ್ಭ ಅನೇಕ ಪಂದ್ಯಗಳಲ್ಲಿ ಭಾಗವಹಿಸಿದ್ದೆ. ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿವಿಯನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ್ದೇನೆ.
* ಪ್ರೊ ಕಬಡ್ಡಿ ಬಗ್ಗೆ ಅನಿಸಿಕೆ?
ಪ್ರೊ ಕಬಡ್ಡಿ ಲೀಗ್ ದೇಶಿ ಆಟಕ್ಕೆ ಹೊಸ ಆಯಾಮ ನೀಡಿದೆ. ಹೊಸ ಪ್ರತಿಭೆಗಳಿಗೆ ವೇದಿಕೆ ಆಗುವುದರ ಜತೆಗೆ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ. ತೆಲುಗು ಟೈಟಾನ್ಸ್, ಗುಜರಾತ್, ತಮಿಳ್ ತಲೈವಾಸ್ ಮತ್ತು ಬೆಂಗಾಲ್ ವಾರಿಯರ್ ತಂಡದಲ್ಲಿ ಆಡಿದ್ದೇನೆ. ಅಲ್ಲಿ ಹಿರಿಯ -ಕಿರಿಯ ಆಟಗಾರರ ಸಲಹೆ ಪಡೆದುಕೊಂಡಿದ್ದೇನೆ. ಇದೀಗ ಬೆಂಗಾಲ್ ವಾರಿಯರ್, ಭಾರತ ತಂಡದ ಕಬಡ್ಡಿ ಆಟಗಾರ ಮಣೀಂದರ್ ಸಿಂಗ್ ಅವರೊಂದಿಗೆ ಆಡಲು ಅವಕಾಶ ದೊರಕಿದೆ. ಅವರಿಂದ ಸಲಹೆಗಳನ್ನು ಪಡೆದು ಮುಂದೆ ಭಾರತ ತಂಡವನ್ನು ಪ್ರತಿನಿಧಿಸುವ ಹಂಬಲವಿದೆ.
* ಯುವಕರಿಗೆ ಸಂದೇಶವೇನು?
ಭಾರತದ ಮಣ್ಣಿನ ಕ್ರೀಡೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ವಿದೇಶದಲ್ಲೂ ಪ್ರೊ ಕಬಡ್ಡಿ ಮಾದರಿಯ ಪಂದ್ಯಾಟ ನಡೆಯುವಂತಾಗಬೇಕು. ಇಂದು ಬೆಂಗಳೂರಿನಲ್ಲಿ ಅನೇಕ ಕಬಡ್ಡಿ ಕ್ಲಬ್‌ಗಳು ಹುಟ್ಟಿಕೊಂಡಿವೆ. ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಬಡ್ಡಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಒಲಪಿಕ್ಸ್‌ನಲ್ಲಿ ಕಬಡ್ಡಿ ಸೇರ್ಪಡೆ ಆಗಬೇಕೆಂಬುವುದು ನನ್ನ ಆಶಯ.
* ಅಭಿಮಾನಿಗಳ ಪ್ರೋತ್ಸಾಹ ಹೇಗಿದೆ?
ಮಂಗಳೂರು, ಕಾರ್ಕಳದಲ್ಲಿ ಬೆಳೆದಿದ್ದರಿಂದ ಇಲ್ಲಿನ ಪರಿಸರದ ಬಗ್ಗೆ ಪರಿಚಯವಿದೆ. ಇಲ್ಲಿನ ಮೀನು ಊಟ ತುಂಬ ಇಷ್ಟ. ಜನ ಗುರುತಿಸಿ ಆಟೋಗ್ರಾಫ್, ಸೆಲ್ಫಿ ಪಡೆಯುತ್ತಿದ್ದಾರೆ. ಕಬಡ್ಡಿ ಕ್ರೀಡಾಪಟುಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ. ಖುಷಿ ಅನಿಸುತ್ತಿದೆ.
* ಇಷ್ಟಪಡುವ ಇತರ ಕ್ರೀಡೆ ಹಾಗೂ ಕ್ರೀಡಾಪಟು ಯಾರು?
ವಾಲಿಬಾಲ್ ಇಷ್ಟದ ಆಟ. ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿ ಇಷ್ಟ.ದ ತಾರೆಯರು.
* ಕಾರ್ತಿಕ್ ಚಿತ್ರಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.