ಪಗಡೆ ಆಡೋಣ ಬನ್ನಿರೋ…
Team Udayavani, Oct 7, 2017, 7:30 AM IST
ಮಹಾಭಾರತದಿಂದ ಶುರುವಾದ ಈ ಆಟವನ್ನು ಮುಂದೆ ರಾಜ ವಂಶಸ್ಥರು ಹವ್ಯಾಸಕ್ಕಾಗಿ, ಮೋಜಿಗಾಗಿ ಆಡುವ ಸಂಪ್ರದಾಯ ರೂಢಿಗೆ ಬಂತು. ಇಂಥ ಆಟವನ್ನು ಜೂಜು ಇಲ್ಲದೇ ಕೇವಲ ಮನರಂಜನೆ, ಹವ್ಯಾಸಕ್ಕಾಗಿ ಕ್ರೀಡಾ ಮನೋಭಾವದಿಂದ ; ಮರೆತು ಹೋಗುತ್ತಿರುವ ಪುರಾತನ ಆಟವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಬೆಳದಿಂಗಳಲ್ಲಿ ಆಡುವ ಸಂಪ್ರದಾಯ ಇದೆ.
ಈ ಊರಲ್ಲಿ ಪಾಂಡವರಿಲ್ಲ, ಕೌರವರಿಲ್ಲ ಶಕುನಿಯಂತೂ ಇಲ್ವೇ ಇಲ್ಲ. ಆದರೂ ಇಲ್ಲಿ ಪಗಡೆ ಮಕ್ಕಳಾಟದಷ್ಟೇ ಸಹಜವಾಗಿ ಆಚರಣೆಯಲ್ಲಿದೆ. ಹಾಗಂತ ಇಲ್ಲಿ ಆಡುವುದು ಜೂಜು ಕೂಡ ಅಲ್ಲ, ಈ ಊರಿನವರಲ್ಲಿ ಪಗಡೆಯಾಟದ ಸ್ಪರ್ಧೆ ಪ್ರತಿ ವರ್ಷವೂ ನಡೆಯುತ್ತದೆ. ಗೆದ್ದವರಿಗೆ ಬಹುಮಾನ ಇದೆ, ಜೊತೆಗೆ ಪುರಾತನ ಕ್ರೀಡೆಯನ್ನು ಉಳಿಸುವ ಕಳಕಳಿಯೂ ಇದೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಬನ್ನಿಕಟ್ಟಿಯಲ್ಲಿ ಪ್ರತಿ ದಸರಾ ದಿಂದ ಪ್ರಾರಂಭವಾಗಿ, ಗೌರಿ ಹುಣ್ಣಿಮೆಯ ತನಕ ಪಗಡೆಯಾಡುತ್ತಾರೆ.
ಪಗಡೆ ಎಂದೊಡನೆ ನೆನಪಾಗುವುದು ಮಹಾಭಾರತದ ಶಕುನಿ… ಇಂದ್ರಪ್ರಸ್ಥ ಉದ್ಘಾಟನೆಯ ಸಂದರ್ಭದಲ್ಲಿ ಪಾಂಡವರ ಸಾಮ್ರಾಜ್ಯವನ್ನು ಕೌರವರ ಪಾಳಯದ ಶಕುನಿ ರಕ್ತ ರಹಿತವಾಗಿ ಗೆದ್ದು ಕೊಂಡಿದ್ದು, ‘ಪಗಡೆ’ಯಿಂದಲೇ..! ಪಗಡೆಯೆಂದರೆ ಕಾಯಿ, ಪಗಡೆ ಎಂದರೆ ದೋತಕ (ಜೂಜು); ಒತ್ತೆ ಇಡುವುದು ಎಂಬೆಲ್ಲಾ ಅರ್ಥಗಳಿವೆ. ಪಟ್ಟ ಎಂದರೆ ಭೂಮಿ ಇಲ್ಲವೆ ಮನಿ (ಚೌಕಾಕಾರದ ಕಾಣೆ) ಎಂತಲೂ ..ಒಟ್ಟು 56 ಚೌಕಾಕಾರದ ಅಧಿಕ(+) ಆಕಾರದ ಪಟ್ಟದಲ್ಲಿ,
6 ಜನರ ಎರಡು ತಂಡ ಅಂದರೆ- ಒಟ್ಟು 12 ಜನ ಸೇರಿ ಆಡುವ ಆಟ ಇದು. ಇದಕ್ಕೆ 8 ಮತ್ತು 8 ಒಟ್ಟು 16 ಕಾಯಿ(ಪಗಡಾ ಅಚ್ಚು)ಗಳನ್ನು ಬಳಸಿ, 6 ಕವಡೆಗಳನ್ನು ಬಳಸಿ ಆಡಲಾಗುತ್ತದೆ. ಈ ಆಟದಲ್ಲಿ ಎರಡು ವಿಧಗಳು. ‘ಮುಗಿಸೋ ಆಟ’ ಎಂಬುದು ಒಂದು. ಕಾಲ ಹರಣ ಮಾಡುವ ಇಲ್ಲವೇ ಪಂದ್ಯಕ್ಕಾಗಿ ಆಡುವ ಆಟ ಇನ್ನೊಂದು. ಎರಡನೇ ಬಗೆಯ ಆಟ ಮುಗಿಯಲು 15-20 ದಿನಗಳೇ ಬೇಕಾಗಬಹುದು.
ಮಹಾಭಾರತದಿಂದ ಶುರುವಾದ ಈ ಆಟವನ್ನು ಮುಂದೆ ರಾಜ ವಂಶಸ್ಥರು ಹವ್ಯಾಸಕ್ಕಾಗಿ, ಮೋಜಿಗಾಗಿ ಆಡುವ ಸಂಪ್ರದಾಯ ರೂಢಿಗೆ ಬಂತು. ಇಂಥ ಆಟವನ್ನು ಜೂಜು ಇಲ್ಲದೇ ಕೇವಲ ಮನರಂಜನೆ, ಹವ್ಯಾಸಕ್ಕಾಗಿ ಕ್ರೀಡಾ ಮನೋಭಾವದಿಂದ ; ಮರೆತು ಹೋಗುತ್ತಿರುವ ಪುರಾತನ ಆಟವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಚಂದ್ರನ ಬೆಳದಿಂಗಳಲ್ಲಿ ಆಡುವ ಸಂಪ್ರದಾಯ ಇದೆ. ಇಲ್ಲಿನ ದೇವಸ್ಥಾನದ ಕಮಿಟಿಯವರೂ ಪಗಡೆ ಪಂದ್ಯವನ್ನು ಏರ್ಪಡಿಸಿ, ಆಟದಲ್ಲಿ ಗೆದ್ದವರಿಗೆ ಬಹುಮಾನ ನೀಡುತ್ತಾರೆ.
ಇಲ್ಲಿನ ಪಗಡೆ ತಜ್ಞರಲ್ಲೊಬ್ಬರಾದ ಪ್ರಕಾಶ ಮುರುಗೋಡು ಹೇಳುತ್ತಾರೆ; “ಈ ಆಟಾನಾ ನಾವು ಚಿಕ್ಕವರಿದ್ದಾಗ ಅಜ್ಜ-ಅಪ್ಪನಿಂದ ಕಲಿತುಕೊಂಡ್ವಿ. ಆಗ ಇಲ್ಲಿ ಕೆಲವೇ ಜನರು ಮಾತ್ರ ಪಗಡೆಯಾಟ ಬಲ್ಲವರಿದ್ದರು. ಈಗ ನೂರರಿಂದ ನೂರೈವತ್ತು ಜನರು ಸರಾಗವಾಗಿ ಪಗಡೆ ಆಡುವುದರಲ್ಲಿ ನಿಸ್ಸೀಮರು. ಬಿಡುವಿದ್ದಾಗ ಈ ಆಟವನ್ನು ಕಲಿಯಲು ಆಸಕ್ತಿಯುಳ್ಳವರಿಗೆ ಆಟದ ರೂಪ ರೇಷಗಳನ್ನು ವಿವರಿಸಿ, ಅವರೂ ಆಡುವಂತೆ ರೂಪಿಸುತ್ತಿದ್ದೇವೆ. ಇಂಥ ಪುರಾತನ ಆಟ. ಇಂದಿನ ಯಾಂತ್ರೀಕೃತ ಬದುಕಿನಿಂದಾಗಿ ಹಾಳಾಗಿದೆ. ಈ ಹಿಂದೆ ಟಿ.ವಿ. ಇಲ್ಲದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಬರ್ತಿದ್ರು..
ಗ್ರಾಮೀಣ ಜನರಲ್ಲಿ ಕ್ರೀಡೆಯ ಬಗೆಗಿನ ಒಲವು ಟಿ.ವಿಯಿಂದ ಕಡಿಮೆಯಾಗ್ತಿದೆ ಎಂದು ವಿಷಾದ ವ್ಯಕ್ತ ಪಡಿಸುತ್ತಾರೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿದೆ ಈ ಕ್ರೀಡೆ. ಮುಂದಿನ ಪೀಳಿಗೆಯವರೂ ಈ ಆಟ ಆಡಲಿ ಎನ್ನುವ ಉದ್ದೇಶದಿಂದ ಇಲ್ಲಿನ ತ್ರ್ಯಂಭಕೇಶ್ವರ ದೇವಸ್ಥಾನ ಮಂಡಳಿ ಪ್ರತಿ ವರ್ಷ ಪಗಡೆ ಪಂದ್ಯಾವಳಿ ಏರ್ಪಡಿಸುತ್ತಾರೆ. ನೀವೂ ಆಡಬೇಕೆ ? ಹಾಗಾದರೆ ಬನ್ನಿಕಟ್ಟೆಗೆ ಬಂದು ಬಿಡಿ…
* ಪ್ರವೀಣರಾಜು ಸೊನ್ನದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.