ವನ ರಕ್ಷಣೆಗೆ ನೆರವಾಗುವ ಹಸಿರು ಮರಕುಟುಕ
Team Udayavani, Nov 3, 2018, 3:25 AM IST
ಗಾತ್ರದಲ್ಲಿ ಮೈನಾ ಹಕ್ಕಿಯನ್ನು ಹೋಲುವ ಹಸಿರು ಮರಕುಟುಕ, ತೋಟಗಳ ಸರಹದ್ದಿನಲ್ಲಿ, ಕಾಡುಗಳಲ್ಲಿ ಕಾಣಸಿಗುತ್ತದೆ.Little scaly belled green woodpecker (Picusxanthopygacus ) R
ಕಾಂಡ ಕೊರಕ ಹುಳುಗಳನ್ನು ತಿಂದು ಹಾಕುವ ಮೂಲಕ ಇದು ಕಾಡಿನ ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಇದರ ಹೊಟ್ಟೆ ಮತ್ತು ಎದೆಯ ಭಾಗದಲ್ಲಿ ಚೌಕಾಕಾರದ ಕಪ್ಪು ಬಣ್ಣದ ಚಿತ್ತಾರ ಇದೆ. ರೆಕ್ಕೆಯ ಮೇಲ್ಭಾಗವು ತಿಳಿ ಪಾಚಿ ಹಸಿರಿನ ಬಣ್ಣ ಇರುತ್ತದೆ. ಇದರಿಂದ ಇದಕ್ಕೆ ಹಸಿರು ಮರಕುಟುಕ ಎಂಬ ಹೆಸರು ಬಂದಿದೆ. ರೆಕ್ಕೆಯ ಅಂಚಲ್ಲಿ ಬಿಳಿ ಮತ್ತು ಕಪು ³ಚಿತ್ತಾರ ಇದೆ. ಹಾರುವಾಗ ಈ ಬಣ್ಣ ಎದ್ದುಕಾಣುತ್ತದೆ. ಕುತ್ತಿಗೆ ಪಕ್ಕದಲಿ, Éಕಪ್ಪು, ಬಿಳಿ ಬಣ್ಣದ ಚಿತ್ತಾರ ಇರುತ್ತದೆ. ಶಿಖೆ ಮತ್ತು ಜುಟ್ಟುಇದೆ. ಕೆಂಪು ಜುಟ್ಟಿನ ಬುಡದಲ್ಲಿ ಕಪ್ಪು ರೇಖೆ ಕಾಣುತ್ತದೆ. ಬಾಲದ ಬುಡದಲ್ಲಿ ಮೇಲ್ಭಾಗದಲ್ಲಿ ತಿಳಿ ಹಳದಿ ಬಣ್ಣ, ಬಾಲದ ಪುಕ್ಕದಲ್ಲಿರುವ ಕಪ್ಪು ಬಿಳಿ ಬಣ್ಣದ ಚೌಕಟಿ ಚಿತ್ತಾರ ಇದರ ಅಂದ ಹೆಚ್ಚಿಸಿದೆ. ಸುಮಾರು 29 ಸೆಂ.ಮೀ ದೊಡ್ಡದಿದ್ದು, ಇದು, ಮೈನಾ ಹಕ್ಕಿಯಷ್ಟು ಗಾತ್ರದ ಪ್ರಾದೇಶಿಕ ಹಕ್ಕಿ. ಚುಂಚು ಬುಡದಲ್ಲಿ ತಿಳಿ ಹಳದಿ, ತುದಿಯಲ್ಲಿ ಅಚ್ಚ ಬೂದು ಮಿಶ್ರಿತ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಹಕ್ಕಿಯ ಜುಟ್ಟು ಕಪ್ಪಗಿರುತ್ತದೆ. ಮರಗಳ ಮೇಲೆ ಕುಪ್ಪಳಿಸುತ್ತದೆ. ಇಲ್ಲವೇ ಮರದ ಸುತ್ತಗಿರಕಿ ಹೊಡೆಯುತ್ತಾ , ಕಾಂಡ ಕೊರೆಯುವ ಹುಳುಗಳು ಹೊರ ಬರಲು ಅನವರತ ಮರಕುಟ್ಟುತ್ತಾ, ಹಾರುವಾಗ ಟ್ರೀರ್..ಟ್ರಿರ್ ಎಂದು ಕೂಗುತ್ತಾ ಇರುತ್ತದೆ. ಒಂಟಿಯಾಗಿ ಇಲ್ಲವೇ ನಾಲ್ಕಾರರ ಗುಂಪಿನಲ್ಲಿ ವಿಫುಲವಾದ ದೊಡ್ಡ ಮರಗಳಿರುವ ಕಾಡಿನಲ್ಲಿ, ತೋಟದ ಸರಹದ್ದಿನಲ್ಲಿ ಕಾಣಸಿಗುತ್ತದೆ. ಮರಕುಟ್ಟುವ ಸಪ್ಪಳ ಇಲ್ಲವೇ ಇದು ಹುಳ ಹಿಡಿದಾಗ ಕೂಗುವ ದನಿಯಿಂದ ಇದರ ಇರುವನ್ನು ಸುಲಭವಾಗಿ ತಿಳಿಯಬಹುದು.
ಆಹಾರಕ್ಕಾಗಿ ಮರ ಕೊರೆವ ಹುಳು ಹಿಡಿಯುವುದರಿಂದ ಮರದರಕ್ಷಣೆ ಇಲ್ಲವೇ ಹುಳು ನಿಯಂತ್ರಣದಲ್ಲಿ ಇದರ ಪಾತ್ರದೊಡ್ಡದು. ಹರಿಯಾಣ, ಗುಜರಾತ್, ಪಶ್ಚಿಮ ಬಂಗಾಲ, ಕರ್ನಾಟಕದ ಬೆಟ್ಟ ಪ್ರದೇಶ ಮತ್ತು ಬೆಂಗಳೂರಲ್ಲೂ ಕಂಡದ್ದುದಾಖಲಾಗಿದೆ. ಕೇರಳದ ದಕ್ಷಿಣ ಭಾಗ, ಕರ್ನಾಟಕ ದಗಡಿ ಪ್ರದೇಶವಾದ ಕುಂಬಳ ಕಾಸರಗೋಡಿನಲ್ಲೂಕಾಣಸಿಗುತ್ತದೆ. ಕೆಲವೊಮ್ಮೆ ನೆಲದಮೇಲೆ ಓಡಾಡುತ್ತಾ ಅಥವಾ ಕುಪ್ಪಳಿಸುತ್ತ, ಗೆದ್ದಲು ಹುಳು, ಬತ್ತಾದ ಮರಗಳ ಕಾಂಡ ಇಲ್ಲವೇ ಒಣಗಿದ ತೆಂಗಿನ ಮರಗಳ ಮೇಲೂ ಕುಪ್ಪಳಿಸುತ್ತಾ ಹುಳ ಹಿಡಿಯುವುದನ್ನು ಕಾಣಬಹುದು.
ಒರಲೆ ಹುತ್ತವನ್ನು ಚುಂಚಿನಿಂದ ಕುಟ್ಟಿ ಅಲ್ಲಿಂದ ಹಾರುವ ಹಾತೆ ಮತ್ತುಗೆದ್ದಲು ಹುಳಗಳ ಮೊಟ್ಟೆಯನ್ನುತಿನ್ನುತ್ತದೆ.
ಮಧ್ಯಮ ವರ್ಗದ ಕಾಡು, ಅಡಿಕೆ, ತೆಂಗು, ಕಾಫಿ ತೋಟಗಳ ಹತ್ತಿರದ ಕಿರುಕಾಡು ಇವುಗಳಿಗೆ ಪ್ರಿಯ. ಇಲ್ಲಿ ಹಸಿರು ಮರ ಕುಟಕಕ್ಕೆ ವಿಫುಲವಾದ ಆಹಾರ, ಸುರಕ್ಷಿತ ನೆಲೆಗಳು ಸಿಗುತ್ತವೆ. ವಂಶಾಭಿವೃದ್ಧಿಗೆ, ಗೂಡು ಮಾಡಲು ಒಳ್ಳೆಯ ಮರದಕಾಂಡ ಹುಡುಕುತ್ತದೆ. ಜುಲೈ ನಿಂದ ಜನವರಿ ತಿಂಗಳ ಅವಧಿಯಲ್ಲಿ ಮರಿ ಹಾಕುತ್ತವೆ.
ಬಾರ್ಬೆಟ್, ಮರಕುಟುಕ ಕೊರೆದಗೂಡನ್ನೂ ಸಹ ಕೆಲವೊಮ್ಮೆ ಮೊಟ್ಟೆಇಡಲು ಉಪಯೋಗಿಸುವುದು. 4 ರಿಂದ 8 ಮೀಟರ್ ಎತ್ತರದಲ್ಲಿ ಗೂಡು ಕಟ್ಟುತ್ತವೆ. ಇದರಲ್ಲಿ 3-5 ಬಿಳಿಬಣ್ಣದ ಮೊಟ್ಟೆಇಡುವುದು, ಗಂಡು, ಹೆಣ್ಣು ಸೇರಿ ಮರಿಗಳಿಗೆ ಗುಟುಕು ನೀಡುತ್ತದೆ. ಕಾಡಿನ ನಾಶದಿಂದಇಂತಹ ಸುಂದರ ಪಕ್ಷಿಗಳಿಗೆ ಇರುವ ನೆಲೆಕಡಿಮೆಯಾಗಿದೆ. ಅದೇ ಕಾರಣಕ್ಕೆ ಹಸಿರು ಮರಕುಟಕಗಳ ಸಂತಾನವೂ ಕಡಿಮೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.