ನಲಿವ ಜಿಂಕೆ ನೋಡಿ ಬದುಕಿನ ಗುಟ್ಟು ತಿಳಿಯಿರಿ!


Team Udayavani, Mar 23, 2019, 12:50 AM IST

96.jpg

ಜಗತ್ತಿನಲ್ಲಿ ಒಂದಲ್ಲ ಒಂದು ವ್ಯಾಮೋಹಕ್ಕೆ ಸಿಲುಕದವನು ಸಿಗುವುದೇ ಕಷ್ಟ. ಹಲವಾರು ಸನ್ನಿವೇಶಗಳಲ್ಲಿ ಇವನ್ನು ನೋಡಿದ್ದೇವೆ. ಈ ಮೋಹದಿಂದ ದೂರವಾಗದ ಹೊರತೂ ನಮಗೆ ಯಾವುದರಲ್ಲಿಯೂ ತೃಪ್ತಿ ದೊರೆಯದು. ಹಸಿದ ಹೊಟ್ಟೆಗೆ ಗಂಜಿಯನ್ನು ತಿಂದರೂ ತೃಪ್ತಿ ದೊರೆಯುತ್ತದೆ; ಮೃಷ್ಟಾನ್ನ ಉಂಡರೂ ತೃಪ್ತಿ ದೊರೆಯುತ್ತದೆ. ಆದರೆ ಮೋಹ, ಮೃಷ್ಟಾನ್ನದÇÉೇ ಸುಖವಿದೆ ಎಂದು ನಮ್ಮನ್ನು ಅದರತ್ತ ಎಳೆಯುತ್ತದೆ. 

ಸೂರ್ಯೋದಯಕ್ಕೆ ಏಳುತ್ತೇವೆ. ಮಧ್ಯಾಹ್ನಕ್ಕೆ ಉಣ್ಣುತ್ತೇವೆ. ಮತ್ತೆ ರಾತ್ರಿ ಉಂಡು ಮಲಗುತ್ತೇವೆ. ಇವೆಲ್ಲವುಗಳ ನಡುವೆ ಬದುಕಿಗಾಗಿ ದುಡಿಯುತ್ತೇವೆ. ಇದು ನಿತ್ಯದ ಕಾಯಕ. ಇದರಲ್ಲಿ ತೃಪ್ತಿ ಉಂಟೇ? ಈ ತೃಪ್ತಿ ಎಂಬುದು ಅಷ್ಟಕ್ಕೇ ಸಾಕು ಅನಿಸಲಿಲ್ಲ. ಮತ್ತೂಂದು ಸುಖದ ಹುಡುಕಾಟ, ಅದಕ್ಕಾಗಿ ಹೋರಾಟ.  ಪ್ರತಿಫ‌ಲವಾಗಿ ದಕ್ಕುವುದು ತೃಪ್ತಿ ಅಥವಾ ಅತೃಪ್ತಿ. ಇನ್ನು ಹೆಚ್ಚಿನ ಸಂದರ್ಭ ಸಂದಿಗ್ಧ. ಸುಖವೂ ಇಲ್ಲ; ದುಃಖವೂ ಇಲ್ಲದ ಸ್ಥಿತಿ. ಯಾಕೆ ಹೀಗೆ? ಕಾರಣ ಪರವಶತನ. ಮೋಹದೊಳಗೆ ಬಂಧಿಸಲ್ಪಡುವುದು.

ಮನುಷ್ಯ ಯಾವತ್ತು ವಿಷಯಲಂಪಟನಾಗುವನೋ ಆವತ್ತಿನಿಂದ ಆತ ಸುಖವೆಂಬ ಮಾಯೆಯಲ್ಲಿ ಬಿದ್ದು ನೋವನ್ನೇ ಉಣ್ಣುವಂಥವನಾಗುತ್ತಾನೆ. ನಾವೆಲ್ಲ ಒಂದಲ್ಲ ಒಂದು ಅರಿಷಡ್ವರ್ಗಗಳಿಂದ ವಶವಾಗಿರುವವರೇ. ಒಬ್ಬನಲ್ಲಿ ಮೋಹ, ಇನ್ನೊಬ್ಬನಲ್ಲಿ ಲೋಭ, ಮತ್ತೂಬ್ಬನಲ್ಲಿ ಕಾಮ, ಮದ ಹೀಗೆ ಒಂದೊಂದಾದರೂ ನಮ್ಮನ್ನು ಆವರಿಸಿ ಬದುಕಿನಲ್ಲಿ ಸೋಲಿನ ಹಾದಿಯನ್ನ ತುಳಿಯುವಂತೆ ಮಾಡುತ್ತಿರುತ್ತವೆ. ಈ ಅರಿಷಡ್ವರ್ಗಗಳು ನಮ್ಮನ್ನು ಸುತ್ತಿಕೊಂಡರೆ ಸ್ವತಃ ನಮಗೂ, ನಮ್ಮಿಂದ ಇತರರಿಗೂ ಅಪಾಯಕಾರಿಯೇ. ಶ್ರೀಮದ್ಭಾಗವತವು ಇಂತಹ ಸ್ಥಿತಿಯಿಂದ ಪಾರಾಗಲು ಜಿಂಕೆಯ ದೃಷ್ಟಾಂತವನ್ನು ಹೇಳುತ್ತದೆ. ವ್ಯಾಧನ ಹಾಡಿನಿಂದ ಜಿಂಕೆ ಮೋಹಿತವಾಗುತ್ತದಂತೆ. ವ್ಯಾಧ ಎಂದರೆ ಬೇಟೆಗಾರ. ಈತನ ಹಾಡಿಗೆ ಮರುಳಾಗಿ ಅವನ  ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಬಂಧನಕ್ಕೊಳಪಡುತ್ತದೆ. ಅಂತೆಯೇ,  ಮನುಷ್ಯನೂ ಕೂಡ.  ಆತನನ್ನು ಅರಿಷಡ್ವರ್ಗಗಳ ಕಡೆಗೆ ಸೆಳೆದುಕೊಳ್ಳುವಂಥ ಗ್ರಾಮ್ಯಗೀತೆಗಳನ್ನು ಆಲಿಸಬಾರದು. ಅಂದರೆ, ನಮ್ಮೊಳಗಿನ ಏಕಾಗ್ರತೆಯನ್ನು ಕೆಡಿಸಿ ವಿಷಯಗಳೆಡೆಗೆ ಆಸಕ್ತಿ ಮೂಡುವಂತೆ ಮಾಡುವ ಗೀತೆಗಳನ್ನು ಕೇಳಬಾರದು ಎನ್ನಲಾಗಿದೆ. ಇದಕ್ಕೆ ಇನ್ನೊಂದು ಉದಾಹರಣೆಯಾಗಿ ಜಿಂಕೆಯ ಗರ್ಭದಲ್ಲಿ ಜನಿಸಿದ ಋಷಶೃಂಗ ಮುನಿಯು ಸ್ತ್ರೀಯರ ಹಾಡು ಕುಣಿತಗಳನ್ನು ನೋಡಿ, ಕೇಳಿ ಅವರಿಗೆ ವಶನಾಗಿ, ಕೊನೆಗೆ ಅವರ ಕೈಗೊಂಬೆಯಾದುದನ್ನೂ ಹೇಳಲಾಗಿದೆ.

ಜಗತ್ತಿನಲ್ಲಿ ಒಂದಲ್ಲ ಒಂದು ವ್ಯಾಮೋಹಕ್ಕೆ ಸಿಲುಕದವನು ಸಿಗುವುದೇ ಕಷ್ಟ. ಹಲವಾರು ಸನ್ನಿವೇಶಗಳಲ್ಲಿ ಇವನ್ನು ನೋಡಿದ್ದೇವೆ. ಈ ಮೋಹದಿಂದ ದೂರವಾಗದ ಹೊರತೂ ನಮಗೆ ಯಾವುದರಲ್ಲಿಯೂ ತೃಪ್ತಿ ದೊರೆಯದು. ಹಸಿದ ಹೊಟ್ಟೆಗೆ ಗಂಜಿಯನ್ನು ತಿಂದರೂ ತೃಪ್ತಿ ದೊರೆಯುತ್ತದೆ; ಮೃಷ್ಟಾನ್ನ ಉಂಡರೂ ತೃಪ್ತಿ ದೊರೆಯುತ್ತದೆ. ಆದರೆ ಮೋಹ, ಮೃಷ್ಟಾನ್ನದÇÉೇ ಸುಖವಿದೆ ಎಂದು ನಮ್ಮನ್ನು ಅದರತ್ತ ಎಳೆಯುತ್ತದೆ. ಆ ಮೃಷ್ಟಾನ್ನವನ್ನು ಹೊಂದುವುದಕ್ಕಾಗಿ ಹೋರಾಟಕ್ಕಿಳಿಯುತ್ತೇವೆ. ಅಡ್ಡ ದಾರಿಯನ್ನೂ ತುಳಿಯುತ್ತೇವೆ. ಅಷ್ಟಾಗಿ ಮೃಷ್ಟಾನ್ನ ಆ ಹೊತ್ತಿಗೆ ತಣ್ಣಗಿನ ಗಂಜಿಗಿಂತಲೂ ಕಡೆಯಾಗಿರುತ್ತದೆ. ಜಿಂಕೆ ಎಂಬುದು ಚಂಚಲ ಚಿತ್ತದ ಸೂಚಕವೂ ಹೌದು. ಅದು ನಿಂತಲ್ಲಿ ನಿಲ್ಲವುದಿಲ್ಲ. ನಮ್ಮ ಮನಸ್ಸೂ ಕೂಡ ಅದರಂತೆಯೇ ಚಂಚಲವಾದರೆ ಅಂಗೈಯಲ್ಲಿರುವ ಆನಂದವನ್ನು ಅನುಭವಿಸದೆ ಯಾವುದೋ ಮರೀಚಿಕೆಯ ಬೆನ್ನು ಹತ್ತಿ ಅತೃಪ್ತಿಯ ಮುಖ ಹೊತ್ತುಕೊಂಡು ಓಡುತ್ತಿರಬೇಕಷ್ಟೆ.

ಜೇನು ತೆಗೆಯುವವನಿಂದ ಸಿಗುವ ಲೋಕಜ್ಞಾನ 
ಜಗತ್ತು ದುಂಡಗಿರುವ ಕಾರಣಕ್ಕೋ ಏನೋ ಎಷ್ಟೋ ಸನ್ನಿವೇಶಗಳು ನಮ್ಮ ಬದುಕಿನಲ್ಲಿ ಪದೇಪದೇ ಘಟಿಸುತ್ತಲೇ ಇರುತ್ತವೆ. ಅರ್ಥ ಇಷ್ಟೆ, ಎಲ್ಲಿಂದ ಹೊರಡುತ್ತೇವೆಯೋ ಕೊನೆಗೆ ಅಲ್ಲಿಗೇ ಬಂದು ನಿಲ್ಲುತ್ತೇವೆ. ಬದುಕು ಎಂಬುದು ವೃತ್ತದೊಳಗೆ ಸುತ್ತು ಬಂದಂತೆ. ಹಾಗಾಗಿಯೇ ನೋವು-ನಲಿವು, ಸುಖ-ದುಃಖ, ಗೆಲುವು-ಸೋಲು ಒಂದರ ಹಿಂದೆ ಒಂದರಂತೆ ಇದಿರಾಗುತ್ತಲೇ ಇರುತ್ತವೆ. 

ಏನೇ ಆದರೂ ನಾವು ಬಯಸುವುದು ಅತ್ಯುತ್ತಮ ಬದುಕನ್ನು, ಸುಂದರವಾದ ಬದುಕನ್ನು. ಇದರ ಅನ್ವೇಷಣೆಯಲ್ಲಿ ತೊಡಗಿದಾಗ ಸುಂದರವಾದ ಬದುಕಿಗೆ ದಾರಿಯಾವುದು? ಎಂಬುದಕ್ಕೆ ನಮ್ಮೆದುರಿಗೆ ಇರುವ ಜಗತ್ತಿನÇÉೇ ಉತ್ತರವಿದೆ ಎನ್ನುತ್ತದೆ ಶ್ರೀಮದ್ಭಾಗವತ. ಇದು ಬದುಕಿನ ತಂತ್ರವನ್ನು, ಸುತ್ತಮುತ್ತ ಇರುವ ದೃಷ್ಟಾಂತಗಳನ್ನು ನಮ್ಮ ಇದಿರಿಗೆ ಇಟ್ಟು ಕಲಿಸಿ ಕೊಡುತ್ತದೆ. ಜೇನು ತೆಗೆಯುವಾತ ಜೇನನ್ನು ಸಂಗ್ರಹಿಸುತ್ತ ಹೋಗುತ್ತಾನೆ. ಇವನ ಬಳಿ ಜೇನಿದೆ ಎಂಬುದನ್ನು ತಿಳಿದುಕೊಂಡ ಜನರು ಉಪಾಯವಾಗಿ ಇವನಿಂದ ತೆಗೆದುಕೊಳ್ಳುತ್ತಾರೆ. ಕೊನೆಯಲ್ಲಿ ಈ ಜೇನುತೆಗೆಯುವಾತ ಜೇನಿನ ಉಪಭೋಗದಿಂದ ವಂಚಿತನಾಗುತ್ತಾನೆ. ಇದೇ ರೀತಿ, ಲೋಭಿಯಾದ ಮನುಷ್ಯನು ತನ್ನ ಲೋಭಬುದ್ಧಿಯಿಂದ ಕೂಡಿಟ್ಟ ಧನವನ್ನು ಯಾರಿಗೂ ದಾನವನ್ನೂ ಮಾಡುವುದಿಲ್ಲ. ತಾನೂ ಅದನ್ನು ಉಪಭೋಗಿಸುವುದಿಲ್ಲ. ಅವನು ಸಂಗ್ರಹಿಸಿಟ್ಟ ಸಂಪತ್ತನ್ನು ಆಮೇಲೆ ಬೇರೇ ಯಾರೋ 

ಭೋಗಿಸುತ್ತಾರೆ. ಇದರಿಂದಾಗಿಯೇ “ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ’ ಎಂಬ ಮಾತು ರೂಢಿಗೆ ಬಂತು.  ಇನ್ನೂ ಒಂದು ಒಳಾರ್ಥ ಇದರಲ್ಲಿದೆ. ಜೇನು ಎಂಬುದು ತುಂಬಾ ರುಚಿಯುಳ್ಳದ್ದು. ಅದರೆ ಅದನ್ನು ಹೊಟ್ಟೆ ತುಂಬುವಷ್ಟು ತಿನ್ನಲಾಗದು. ಹಾಗೇನಾದರೂ ತಿಂದದ್ದೇ ಆದರೆ ರುಚಿಯೂ ಕೆಡುತ್ತದೆ; ಆರೋಗ್ಯವೂ ಕೆಡುತ್ತದೆ. ಹೀಗೆ ಹಣವೂ.  ಧನ ಸಂಗ್ರಹ ಅಗತ್ಯಕ್ಕಿಂತ ಹೆಚ್ಚಿ¨ªಾಗ- ಒಂದೋ ನಮ್ಮ ಬಳಕೆಗೆ ಸಿಗದೆ, ಪರರ ಪಾಲಾಗುತ್ತದೆ ಅಥವಾ ನಾವು  ಬಳಸಿದರೂ ಸದ್ಭಳಕೆಯಂತೂ ಆಗದು. ಏಕೆಂದರೆ, ಲೊಭದ ಬುದ್ಧಿಯಿಂದ ಹಣ ದಾನಕ್ಕೆ ವಿನಿಯೋಗವಾಗದೆ ಕೇವಲ ಐಷಾರಾಮಕ್ಕಷ್ಟೆ ಬಳಕೆಯಾಗಿ, ಸ್ವಪ್ರತಿಷ್ಠೆಗೆ ಬಳಕೆಯಾಗಿ ಅದರಿಂದ ಸಮಾಜಕ್ಕೆ ತೊಂದರೆಯೇ ಉಂಟಾಗುತ್ತದೆ.

ಬರಿಗೈಯಲ್ಲಿ ಹುಟ್ಟಿ ಬರುವ ನಾವು ಅಗತ್ಯವಿರುವಷ್ಟೇ ಧನವನ್ನು ಸಂಗ್ರಹಿಸಬೇಕು ಮತ್ತು ಮಿಕ್ಕಿದ್ದನ್ನು ದಾನ ರೂಪದಲ್ಲಿ ಹಂಚಬೇಕು. ಸಂಪತ್ತಿನ ಸಂಗ್ರಹದಿಂದ ಕಾಣುವ ಶ್ರೀಮಂತಿಕೆ ಎಂಬುದು ಹೆಸರಿಗಷ್ಟೆ. ನಿಜವಾದ ಶ್ರೀಮಂತಿಕೆ ಇರುವುದು ಕೂಡಿಡುವುದರಲ್ಲಲ್ಲ; ಕೊಡುವುದರಲ್ಲಿ. ಹಾಗಾಗಿ ಯಾವುದೂ ಅಗತ್ಯಕ್ಕಿಂತ ಹೆಚ್ಚು ಸಂಗ್ರಹವಾಗದೆ, ಸಮಾಜದಲ್ಲಿ ಸಮನಾಗಿ ಹಂಚಲ್ಪಡಬೇಕೆಂದರೆ ಈ ತಿಳುವಳಿಕೆ ಎಲ್ಲರಲ್ಲಿಯೂ ಮೂಡಬೇಕು.

..ಮುಂದುವರಿಯುವುದು.

ವಿಷ್ಣುಭಟ್‌ ಹೊಸ್ಮನೆ

ಟಾಪ್ ನ್ಯೂಸ್

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Guns and Roses Review

Guns and Roses Review: ನೆತ್ತರ ಹಾದಿ ಪ್ರೇಮ್‌ ಕಹಾನಿ

2-vitla

Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ

Sydney Test: Team India got small lead in first innings

Sydney Test: ವೇಗಿಗಳ ಉರಿದಾಳಿಗೆ ನಲುಗಿದ ಆಸೀಸ್;‌ ಭಾರತಕ್ಕೆ ಅಲ್ಪ ಮುನ್ನಡೆ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

INDvAUS; ಕೊನೆಗೂ ನಿವೃತ್ತಿ ಸುದ್ದಿಯ ಬಗ್ಗೆ ಮೌನ ಮುರಿದ ರೋಹಿತ್‌ ಶರ್ಮಾ; ವಿಡಿಯೋ ನೋಡಿ

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

JDS leader hits at Chikkaballapura

Chikkaballapura: ಮಾರಕಾಯುಧಗಳಿಂದ ಜೆಡಿಎಸ್ ಮುಖಂಡನ ಭೀಕರ ಕೊಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4-ed

Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್‌

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

3-editorial

Groundwater Quality: ಅಂತರ್ಜಲ ಗುಣಮಟ್ಟ ವೃದ್ಧಿಗೆ ವೈಜ್ಞಾನಿಕ ಮಾರ್ಗೋಪಾಯ ಅಗತ್ಯ

Guns and Roses Review

Guns and Roses Review: ನೆತ್ತರ ಹಾದಿ ಪ್ರೇಮ್‌ ಕಹಾನಿ

2-vitla

Vitla: ಇಡಿ ಅಧಿಕಾರಿಗಳಂತೆ ನಟಿಸಿ ದರೋಡೆ: ದೋಚಿದ್ದು ಸುಮಾರು 30 ಲಕ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.