ಲವ್ ಬ್ರೇಕ್ ಅಪ್ ಪ್ಯಾಚ್ ಅಪ್ ಮದುವೆ!
Team Udayavani, Dec 16, 2017, 12:41 PM IST
ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಾ ಕ್ರಿಕೆಟ್ ಜಗತ್ತಿನಲ್ಲಿ ಹೊಸಮೈಲಿಗಲ್ಲು ಸ್ಥಾಪಿಸುತ್ತಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್‌ನ ಮುದ್ದು ಮುಖದ ಹುಡುಗಿ ಅನುಷ್ಕಾ ಶರ್ಮ ನಡುವಿನ ಪ್ರೇಮ ಹಸೆಮಣೆ ಏರಿಸಿದೆ. ಈ ತಾರಾ ಜೋಡಿಯ ಪ್ರೇಮವು ಹಲವು ಏಳು ಬೀಳು ಕಂಡಿದೆ. ಇನ್ನೇನು ಇಬ್ಬರ ಸಂಬಂಧ ಮುರೀತು, ಮತ್ತೆ ಯಾವತ್ತೂ ಇವರು ಒಂದಾಗಲ್ಲ ಅನ್ನುವ ಮಟ್ಟಕ್ಕೂ ಹೋಗಿದೆ. ಇವರ ಪ್ರೇಮದ ಬಗ್ಗೆ ಒಂದು ಕಿರು ನೋಟ ಇಲ್ಲಿದೆ.
ಜಾಹೀರಾತಿನಲ್ಲಿ ಮೊದಲ ಭೇಟಿ: ಅದು, 2013ರ ಸಮಯ. ಅದಾಗಲೇ ಕೊಹ್ಲಿ ಕ್ರಿಕೆಟ್‌ನಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದ. ಧೋನಿ ನಂತರ ಕೊಹ್ಲಿಯೇ ನಾಯಕ ಅನ್ನುವ ಕೂಗು ಆಗಲೇ ಎದ್ದಿತ್ತು. ಹೀಗಾಗಿ ಜಾಹೀರಾತು ಕಂಪನಿಗಳು ಕೊಹ್ಲಿಯ ಹಿಂದೆ ಬಿದ್ದಿದ್ದವು. ಶಾಂಪೂವೊಂದರ ಜಾಹೀರಾತಿಗೆ ಕೊಹ್ಲಿ ಸಹಿ ನೀಡಿದ್ದ. ಅತ್ತ ಅನುಷ್ಕಾ ಕೂಡ ಅದೇ ಜಾಹೀರಾತಿನಲ್ಲಿದ್ದರು. ಈ ಇಬ್ಬರಿಂದ ಮೊದಲ ಬಾರಿಗೆ ಜಾಹೀರಾತು ಮಾಡಿಸಲಾಯಿತು. ಇದೇ ಪರಿಚಯ ಮುಂದೇ ಸ್ನೇಹವಾಗಿ, ಸ್ನೇಹ ಪ್ರೇಮಕ್ಕೆ ತಿರುಗಿತು.
ನ್ಯೂಜಿಲೆಂಡ್‌ನಲ್ಲಿ ಸಿಕ್ಕಿಬಿದ್ದ ಜೋಡಿ: 2013 ಅಂತ್ಯದಲ್ಲಿ ಆರಂಭವಾದ ಇವರ ಪ್ರೇಮ ತುಂಬಾ ಗಪ್‌ಚುಪ್ ಆಗಿತ್ತು. ಕದ್ದು ಮುಚ್ಚಿ ಓಡಾಡ ಮಾಡ್ತಿತ್ತು. ಒಂದೆರಡು ಬಾರಿ ಮಾಧ್ಯಮದ ಕಣ್ಣಿಗೆ ಬಿದ್ದಾಗ ನಮ್ಮದು ಕೇವಲ ಸ್ನೇಹದ ಭೇಟಿ ಎಂದು ಹೇಳಿ ಇಬ್ಬರೂ ಕಾಗೆ ಹಾರಿಸಲು ಪ್ರಯತ್ನಿಸಿದ್ದರು. ಆದರೆ ಅಧಿಕೃತವಾಗಿ ಈ ಜೋಡಿ ಮೊದಲ ಬಾರಿಗೆ ಸಿಕ್ಕಿಬಿದ್ದಿದ್ದು ನ್ಯೂಜಿಲೆಂಡ್‌ನಲ್ಲಿ.
2014ರಲ್ಲಿ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸಕ್ಕೆ ಹೋಗಿತ್ತು. ಇತ್ತ ಶೂಟಿಂಗ್ ನಡುವೆ ಫ್ರೀ ಮಾಡಿಕೊಂಡು ಅನುಷ್ಕಾ ಕೂಡ ನ್ಯೂಜಿಲೆಂಡ್‌ಗೆ ಹಾರಿದ್ದರು. ಇವರಿಬ್ಬರೂ ಶಾಪಿಂಗ್ ಮಾಲ್, ಪಾರ್ಕ್‌ನಲ್ಲಿ ಕೈಕೈ ಹಿಡಿದುಕೊಂಡು ಅಡ್ಡಾಡಿದ ಫೋಟೋಗಳು ವೈರಲ್ ಆದವು. ಆಗಲೇ ಇವರ ಪ್ರೇಮದ ಕಥೆ ಕ್ರೀಡಾ ಭಿಮಾನಿಗಳಿಗೆ ಅಧಿಕೃತವಾಗಿ ಗೊತ್ತಾಗಿದ್ದು.
ಐಪಿಎಲ್‌ನಲ್ಲಿ ಕೊಹ್ಲಿಗೆ ಚಿಯರ್: 2014ರಿಂದಲೇ ಐಪಿಎಲ್ ಸಂದರ್ಭದಲ್ಲಿ ಅನುಷ್ಕಾ ಕ್ರೀಡಾಂಗಣಕ್ಕೆ ಬಂದು ಕೊಹ್ಲಿ ಬೆಂಬಲಿಸುತ್ತಿದ್ದರು. ಕೊಹ್ಲಿ ಸಿಕ್ಸರ್, ಬೌಂಡರಿ ಬಾರಿಸಿದಾಗ ಅನುಷ್ಕಾ ಮುಖದಲ್ಲಿ ಹರ್ಷ ಎದ್ದು ಕಾಣುತ್ತಿತ್ತು. ಪಂದ್ಯದ ನಂತರ ಮತ್ತು ಮುನ್ನ ಈ ಜೋಡಿ ಭೇಟಿಯಾದ ಫೋಟೋಗಳು ಕೂಡ ವೈರಲ್ ಆಗುತ್ತಿದ್ದವು. ಏಕದಿನ ಪಂದ್ಯದ ಸಂದರ್ಭದಲ್ಲಿ ಶತಕ ದಾಖಲಿಸಿದಾಗ ಕ್ರೀಡಾಂಗಣದಿಂದಲೇ ಅನುಷ್ಕಾಗೆ ಫ್ಲೇಯಿಂಗ್ ಕಿಸ್ ನೀಡಿದ್ದು ಭಾರೀ ಸದ್ದು ಮಾಡಿತ್ತು.
ಬ್ರೇಕ್‌ಅಪ್ ಗಾಸಿಪ್: ಚೆನ್ನಾಗಿಯೇ ಇದ್ದ ಈ ಜೋಡಿಯ ನಡುವಿನ ಬ್ರೇಕ್‌ಅಪ್ ಸುದ್ದಿ ಹಬ್ಬಿದ್ದು 2016ರಲ್ಲಿ. ಇದಕ್ಕೆಲ್ಲ ಕಾರಣವಾಗಿದ್ದು ಬಾಲಿವುಡ್. ಹೌದು, ಅನುಷ್ಕಾಗೆ ಬಾಲವುಡ್ ಬಿಡಲು ಇಷ್ಟಿಯಿಲ್ಲ. ಆದರೆ ಕೊಹ್ಲಿಗೆ ಅನುಷ್ಕಾ ಇನ್ನು ಮುಂದೆ ಚಿತ್ರಗಳಲ್ಲಿ ಅಭಿನಯಿಸುವುದುಬೇಡ ಅನ್ನುವ ಭಾವನೆಯಿದೆ. ಈ ಬಿಕ್ಕಟ್ಟಿನಿಂದ ಈ ಜೋಡಿ ಬ್ರೇಕ್‌ಅಪ್ ಆಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಸುಮಾರು 6 ತಿಂಗಳ ಕಾಲ ಈ ಜೋಡಿ ಜತೆಯಾಗಿ ಓಡಾಡಿರಲಿಲ್ಲ. ಪಾರ್ಟಿಗಳಲ್ಲಿ ಭೇಟಿ ಮಾಡಿದರೂ ದೂರವೇ ಉಳಿದಿದ್ದರು. ಇದು ಬ್ರೇಕ್‌ಅಪ್ ಗಾಸಿಪ್ ಸೃಷ್ಟಿಸಿತ್ತು.
ಪ್ಯಾಚ್‌ಅಪ್ ಮಾಡಿದ ಸಲ್ಮಾನ್ ಖಾನ್: ದೂರವಾಗಿದ್ದ ಅನುಷ್ಕಾ ಮತ್ತು ಕೊಹ್ಲಿ ಜೋಡಿಯನ್ನು ಮತ್ತೆ ಒಂದಾಗಿಸಿದ್ದು ಬಾಲಿವುಡ್ ಬಾಕ್ಸ್ ಆಫೀಸ್ ಕಿಂಗ್ ಸಲ್ಮಾನ್ ಖಾನ್ ಅನ್ನುವ ಮಾತಿದೆ. ಕೊಹ್ಲಿ ಮತ್ತು ಅನುಷ್ಕಾ ಇಬ್ಬರಿಗೂ ಆತ್ಮೀಯ ಸ್ನೇಹಿತನಾಗಿದ್ದ ಸಲ್ಮಾನ್ ಈ ಜೋಡಿಯನ್ನು ಪುನಃ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಅವರನ್ನು ಪಾರ್ಟಿಯೊಂದರಲ್ಲಿ ಭೇಟಿ ಮಾಡಿಸಿದ ಸಲ್ಮಾನ್ ಪ್ಯಾಚ್‌ಅಪ್ ಮಾಡಿಸಿದ್ದಾರೆ.
ಜತೆಜತೆಯಲ್ಲಿಯೇ ಸುತ್ತಾಟ: ಪ್ಯಾಚ್‌ಅಪ್ ನಂತರ ಅಧಿಕೃತವಾಗಿ ಈ ಜೋಡಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಜತೆಗಿರುವ ಫೋಟೋಗಳನ್ನು ಕೊಹ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಹೆಚ್ಚಿನದಾಗಿ ಇವರ ಓಡಾಟ ಭಾರತ ಕ್ರಿಕೆಟ್ ತಂಡ ವಿದೇಶಿ ಪ್ರವಾಸ ಕೈಗೊಂಡಾಗ ಆಗಿರುತ್ತಿತ್ತು. ಹಣವಿದ್ದು, ತಾರಾಪಟ್ಟವಿದ್ದು, ಹಲವು ಏಳು ಬೀಳುಗಳನ್ನು ಕಂಡು ಅಂತೂ ಮದುವೆಯಾಗಿದ್ದಾರೆ. ಈ ಜೋಡಿಗೊಂದು ಶುಭಹಾರೈಸೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.