ಹಸಿರು ಶಾಲೆ


Team Udayavani, May 6, 2017, 2:47 PM IST

01.jpg

ಬಿಸಿಲು ತಾಂಡವವಾಡುತ್ತಿದ್ದರೂ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಬೆಟ್ಟಹಳ್ಳಿ ಕಾಲೋನಿ ಶಾಲೆ ನಿಗಿನಿಗಿ ಹಸಿರಾಗಿದೆ. ನೀರಿಗೆ ತೊಂದರೆ ಇದ್ದರೂ ಶಾಲೆಯ ಪರಿಸರದ ಮೂಲೆ ಕೂಡ ಒಣಗಲ್ಲ. ಈ ಪರಿಸರ ಯಾವ ನಗರದ ಉದ್ಯಾನವನಗಳಿಗೂ ಕಮ್ಮಿ ಇಲ್ಲ. ಇದಕ್ಕೆಲ್ಲಾ ಕಾರಣ ಇಲ್ಲಿನ ಶಿಕ್ಷಕ, ವಿದ್ಯಾರ್ಥಿಗಳು.

ಬೇಸಿಗೆ ಬಿರುಬಿಸಿಲಿನಲ್ಲಿಯೂ ಇಲ್ಲಿನ ಶಿಕ್ಷಕ ರಘುಪತಿ, ಮಕ್ಕಳು ಹಾಗೂ ಪೋಷಕರ ಶ್ರಮದಿಂದ ಸುಮಾರು 1 ಎಕರೆ ಪ್ರದೇಶದಲ್ಲಿರುವ ಶಾಲಾವರಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಗ್ರಾಮೀಣ ಸೊಗಡಿನ ಕಲಾಕೃತಿ, ಕಾರಂಜಿಗಳ ನರ್ತನದ ನಡುವೆ ಕಣ್ಮನ ಸೆಳೆಯುತ್ತಿದೆ.

ಗ್ರಾಮದ ಕೊಳವೆ ಬಾವಿ ಅನೇಕ ಬಾರಿ ಕೈಕೊಟ್ಟು ನೀರು ಬರಿದಾದಗಲೆಲ್ಲಾ ಶಾಲಾ ಪರಿಸರವನ್ನು ಕಾಪಾಡಲು ಬಹಳ ವ್ಯಥೆ ಪಡಬೇಕಾದ ಸ್ಥಿತಿ ನಿರ್ಮಾಣವಾಗುತ್ತಿತ್ತು. ದೂರದಿಂದ ಮಕ್ಕಳೊಡನೆ ನೀರು ಹೊರಬೇಕಾಗಿತ್ತು.  ಶಾಲಾವಧಿ ಹಾಗೂ ರಜಾವಧಿಯೆನ್ನದೆ ಮಕ್ಕಳೂ ಶಾಲಾ ಪರಿಸರವನ್ನು ಕಾಪಾಡುತ್ತಾ ಬಂದಿರುವುದು ಬಹಳ ವಿಶೇಷವೇ.

ರಜಾದಿನಗಳಲ್ಲೂ ಕಾರ್ಯನಿರ್ವಹಣೆ
ಬೆಟ್ಟಹಳ್ಳಿ ಕಾಲೋನಿ ಶಾಲೆಯ ಸುಂದರ ಪರಿಸರ ಒಂದೆರಡು ತಿಂಗಳುಗಳ ಶ್ರಮವಲ್ಲ. ಶಿಕ್ಷಕ ರಘುಪತಿ ಅವರ 10 ವರ್ಷಗಳ ತಪಸ್ಸು.  ರಜಾದಿನಗಳಲ್ಲಿಯೂ ಶಿಕ್ಷಕರು ಹೇಳಿದ ಕಾರ್ಯಗಳನ್ನು ಚಾಚುತಪ್ಪದೇ ಪಾಲಿಸುತ್ತಾ ಪರಿಸರ ಅಭಿವೃದ್ದಿಗೆ ತಮ್ಮದೇ ಆದ ಕಾಣಿಕೆಯನ್ನು ನೀಡುತ್ತಿದ್ದಾರೆ. ಮಕ್ಕಳ ಶ್ರಮದ ಕಾರ್ಯನಿರ್ವಹಣೆಗೆ ಪೋಷಕರ ಬೆಂಬಲವೂ ಹೆಚ್ಚಿನದು.

ಬೆಟ್ಟಹಳ್ಳಿ ಕಾಲೋನಿ ಶಾಲೆ ಕೇವಲ ಹದಿಮೂರು ಮಕ್ಕಳಿರುವ ಪುಟ್ಟ ಸರಕಾರಿ ಶಾಲೆ. ಇಲ್ಲಿ ಪರಿಸರ ಸಂರಕ್ಷಣಾ ವಿಚಾರದಲ್ಲಿ ಸದಾ ಮುಂದು.  ನೀರಿನ ಮಿತಬಳಕೆ ಹಾಗೂ ಕಾರಂಜಿಗಳಲ್ಲಿ ಹೆಚ್ಚಾದ ನೀರನ್ನು ಗಿಡಗಳಿಗೆ ಹಾಯಿಸಿ ಇಂಗು ಗುಂಡಿಗಳ ಮೂಲಕ ಇಂಗಿಸುವುದು, ಮಳೆ ನೀರನ್ನು ಇಂಗಿಸುವುದು, ಕಸ ನಿರ್ವಹಣೆ, ಪ್ಲಾಸ್ಟಿಕ್‌ ನಿಯಂತ್ರಣಕ್ಕಾಗಿ ಗ್ರಾಮದ ಅಂಗಡಿಗಳಿಗೆ ಉಚಿತ ಕಾಗದ ಚೀಲಗಳನ್ನು ತಯಾರಿಸಿ ನೀಡುವುದು, ಪ್ರತೀ ಶನಿವಾರ ಗ್ರಾಮ ನೈರ್ಮಲ್ಯಕ್ಕಾಗಿ ಜಾಥಾ, ಕಿರುನಾಟಕಗಳನ್ನು ನಡೆಸುವುದರ ಜತೆಗೆ ಶ್ರಮದಾನ ಮಾಡಿ ಗ್ರಾಮಸ್ಥರಲ್ಲಿ ಸ್ವತ್ಛತೆ ಕುರಿತು ಅರಿವು ಮೂಡಿಸುವುದು- ಹೀಗೆ ಹತ್ತು ಹಲವು ಪರಿಸರ ಕಾಳಜಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. 

ಈ ಶಾಲೆ ಇತರೆ ಶಾಲೆಗಳಿಗೂ ಸ್ಪೂರ್ತಿಯಾಗಿದೆ.  ವೀರಸಾಗರ, ಲಕ್ಕೇನಹಳ್ಳಿ, ಹುಲಿಕಲ್‌, ಹೊಸಹಳ್ಳಿ, ಗೊಲ್ಲರಹಟ್ಟಿ, ಬೆಟ್ಟಹಳ್ಳಿ, ವೆಂಕಟಯ್ಯನಪಾಳ್ಯ, ಹೂಜೇನಹಳ್ಳಿ ಶಾಲೆಗಳಲ್ಲಿ ಉತ್ತಮ ಪರಿಸರ ಕಾಳಜಿ ಇದ್ದು ಚೆನ್ನಾಗಿ ನಿರ್ವಹಣೆ ಮಾಡಲಾಗಿದೆ. 

 ಗ್ರಾಮದಲ್ಲಿ ನೀರು ಇಲ್ಲದ ವೇಳೆ ಮಕ್ಕಳು ಒಂದೆರಡು ಕಿ ುà ಗಳಿಂದ ನೀರನ್ನು ಹೊತ್ತು ತಂದು ಸಸಿಗಳನ್ನು ಕಾಪಾಡಿದ್ದಾರೆ. ಶನಿವಾರ, ಭಾನುವಾರವೆನ್ನದೆ ಕಾರ್ಯನಿರ್ವಸಿದ್ದಾರೆ. ಅವರ ಶ್ರಮದ ಕುರುಹಾಗಿ ಇಂದು ಶಾಲೆಯನ್ನು ಕಾಣಬಹುದು ಎನ್ನುತ್ತಾರೆ  ಎಸ್‌ಡಿಎಂಸಿ ಅಧ್ಯಕ್ಷ ಪಾತರಾಜು.

ಸಂಧ್ಯಾ ಕೆ 

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.