ಮೇಕಿಂಗ್ ಆಫ್ ದರ್ಶನ್ ಫೋಟೋಗ್ರಫಿ
Team Udayavani, Mar 9, 2019, 12:30 AM IST
ನಾವು ಆ ಸ್ಥಳದಲ್ಲಿಯೇ ಫೋಟೊಗ್ರಫಿ ಮಾಡಬೇಕಿತ್ತು. ಆದರೆ, ಆ ಸ್ಥಳವೋ ಅತ್ಯಂತ ವಾಸನಾಮಯ ಸ್ಥಳ. ಕೂರಲಿಕ್ಕೂ ಆಗದಂಥ ಸ್ಥಳ. ಅಲ್ಲಿ ಕುಳಿತರೆ ಆ ದುರ್ವಾಸನೆಗೇ ಎದ್ದು ಓಡಿಬಿಡಬೇಕು; ಅಂಥ ಸ್ಥಳ. ಆದರೆ, ಪಕ್ಷಿ$ವೀಕ್ಷಣೆ ಹಾಗೂ ಫೋಟೊಗ್ರಫಿಗೆ ಹೇಳಿ ಮಾಡಿಸಿದ ಜಾಗ. ಆ ದುರ್ನಾಥದ ಜಾಗದಲ್ಲೇ ದರ್ಶನ್ ಕ್ಯಾಮೆರಾ ಹಿಡಿದು ಕುಳಿಕು, ತಮ್ಮ ಫೋಟೋಗ್ರಫಿ ಪ್ರೀತಿ ಮೆರೆದಿದ್ದನ್ನು ಕಂಡು ಗ್ರೇಟ್ ಎನಿಸಿತು…
ಹನುಮಂತ ಹರ್ಲಾಪುರ
ಕೆಲ ದಿನಗಳ ಹಿಂದೆ ನಾನು, ಗೆಳೆಯರಾದ ಹಾವೇರಿಯ ವಿನಯ… ಶೆಟ್ಟಿ, ಅನಂತ ಮುದಂಗದೂರು ಅವರ ಜತೆಗೂಡಿ ಫೋಟೊ ಕ್ಲಿಕ್ಕಿಸಲು ಶ್ರೀರಂಗಪಟ್ಟಣದ ಬಳಿಯ ರಂಗನತಿಟ್ಟು ಪಕ್ಷಿಧಾಮಕ್ಕೆ ಹೋಗಿ¨ªೆವು. ಅಲ್ಲಿಂದ ಮುಂದೆ ನಗುವಿನಹಳ್ಳಿ ಎಂಬ ಗ್ರಾಮದ ಬಳಿ ಬಣ್ಣದ ಮಿಂಚುಳ್ಳಿ (common King fisher) ಪಕ್ಷಿಗಳಿವೆ ಎಂಬ ಮಾಹಿತಿಯನ್ನು ಸಿದ್ದಿಕ್ ನಮಗೆ ಕೊಟ್ಟಿದ್ದರು. ನಗುವಿನಹಳ್ಳಿ ಬಳಿ ಇರುವ ಸ್ಥಳಕ್ಕೆ ನಸುಕಿನಲ್ಲಿಯೇ ನಮ್ಮ ಎಲ್ಲ ಸಾಧನ ಸಲಕರಣೆಗಳೊಂದಿಗೆ ಆಟೋದಲ್ಲಿ ಹೋದೆವು. ನಾವು ಹೋಗುವುದಕ್ಕೂ ಮೊದಲೇ ಯಾರೋ ಕುಳಿತಿದ್ದಂತೆ ಕಂಡಿತು. ದೂರದಲ್ಲಿ ಒಂದು ಅತ್ಯಾಧುನಿಕ ಕಾರೂ ಕಂಡಿತು. ಯಾರಿರಬಹುದೆಂದು ಕುತೂಹಲದಿಂದ ಗಮನಿಸಿದಾಗ ಗೊತ್ತಾಯಿತು: ಅವರು ಬೇರಾರೂ ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು.
ಮನದಲ್ಲಿ ರೋಮಾಂಚನವಾದರೂ ಇವರಿಲ್ಲಿ ಏನು ಮಾಡುತ್ತಿ¨ªಾರೆಂದು ಗಮನಿಸಿದಾಗ, ದರ್ಶನ್ ಸಹ ಪಕ್ಷಿಗಳ ಫೋಟೊಗ್ರಫಿಗೆ ಬಂದಿದ್ದು ತಿಳಿಯಿತು. ನನಗೆ ಮೊದಲಿನಿಂದಲೂ ಚಿತ್ರನಟರೆಂದರೆ ಅಷ್ಟಕ್ಕಷ್ಟೇ. ಆದರೂ ಹೋಗಿ ಮಾತನಾಡಿಸಿಸೋಣ ಎಂದುಕೊಂಡೆ. “ನಾವೂ ಅಲ್ಲಿಯೇ ಫೋಟೋಗ್ರಫಿ ಮಾಡೋಣ’ ಎಂದು ವಿನಯ್ ಶೆಟ್ಟಿ ಹೇಳಿದರು. ಅಲ್ಲಿ ಕುಳಿತರೆ ಪಕ್ಷಿಗಳ ವೀಕ್ಷಣೆ ಸುಲಭ. ಅಂಥ ಸ್ಥಳವದು. ನಾವಿಬ್ಬರೂ ದರ್ಶನ್ ಹಾಗೂ ಅವರ ಸಂಗಡಿಗರ ಬಳಿ ಹೋಗಿ ಪರಿಚಯ ಮಾಡಿಕೊಂಡೆವು. ಅವರೂ ಅಷ್ಟಕ್ಕಷ್ಟೆ ಮಾತನಾಡಿ “ಹೌದಾ?’ ಎಂದರು ಅಷ್ಟೆ.
ನಾವು ಆ ಸ್ಥಳದಲ್ಲಿಯೇ ಫೋಟೊಗ್ರಫಿ ಮಾಡಬೇಕಿತ್ತು. ಆದರೆ, ಆ ಸ್ಥಳವೋ ಅತ್ಯಂತ ವಾಸನಾಮಯ ಸ್ಥಳ. ಕೂರಲಿಕ್ಕೂ ಆಗದಂಥ ಸ್ಥಳ. ಅಲ್ಲಿ ಕುಳಿತರೆ ಆ ದುರ್ವಾಸನೆಗೇ ಎದ್ದು ಓಡಿಬಿಡಬೇಕು; ಅಂಥ ಸ್ಥಳ. ಆದರೆ, ಪಕ್ಷಿ$ವೀಕ್ಷಣೆ ಹಾಗೂ ಫೋಟೊಗ್ರಫಿಗೆ ಹೇಳಿ ಮಾಡಿಸಿದ ಜಾಗ. ಅದೇ ಸ್ಥಳಕ್ಕೇ ದರ್ಶನ್ ಬಂದಿರಬೇಕೆ!? ನಾವು ನೋಡನೋಡುತ್ತಿರುವಂತೆ ದರ್ಶನ್ ಆ ವಾಸನೆ, ಜಾಗ ಯಾವುದನ್ನೂ ಗಮನಿಸದೆ ಆ ಸ್ಥಳದಲ್ಲಿ ಕುಳಿತೇಬಿಟ್ಟರು. ತಮ್ಮ ಅತ್ಯಾಧುನಿಕ ಕ್ಯಾಮೆರಾ (ಬಹುಶಃ ಕ್ಯಾಮೆರಾ ಲೆ®Õ… ದರವೇ ಲಕ್ಷಾಂತರ ರೂ. ಗಳಿರಬಹುದು)ದೊಂದಿಗೆ ಪಕ್ಷಿಗಳನ್ನು ಗಮನಿಸತೊಡಗಿದರು. ಅವರ ಜೊತೆಗಿದ್ದ ಸ್ನೇಹಿತರು ಅವರಿಗೆ ಪಕ್ಷಿಗಳ ಬಗ್ಗೆ ಹೇಳತೊಡಗಿದ್ದರು. ದರ್ಶನ್‌ಗೆ ನಮ್ಮ ಬಗ್ಗೆ ಪರಿವೆಯೇ ಇದ್ದಂತಿರಲಿಲ್ಲ. ಅವರ ಜೊತೆಗಿದ್ದವರು- “ಆಯ್ತು. ನಾವು ಪಕ್ಷಿಗಳ ಫೋಟೊಗ್ರಫಿ ಮಾಡಬೇಕು. ನೀವಿನ್ನು ಇಲ್ಲಿಂದ ಹೊರಡಿ’ ಎಂದರು.
ಅವರು ಹಾಗೆ ಹೇಳಿದ ಮೇಲೆ, ಅಲ್ಲಿರುವುದು ಬೇಡ, ಬೇರೆ ಸ್ಥಳಕ್ಕೆ ಹೋಗೋಣ ಎಂದು ನಿರ್ಧರಿಸಿ ಅಲ್ಲಿಂದ ಹೊರಟೆವು. ಬೇರೆ ಜಾಗದಲ್ಲಿ ಕುಳಿತು ಪಕ್ಷಿ ವೀಕ್ಷಣೆಯಲ್ಲಿ ತೊಡಗಿದೆವು. ಆ ಸ್ಥಳ ದೂರವಿದ್ದರೂ ದರ್ಶನ್ ಹಾಗೂ ಅವರ ಸಂಗಡಿಗರು ನಮಗೆ ಕಾಣುತ್ತಿದ್ದರು. ಕೆಲ ಹೊತ್ತಿನ ನಂತರ ನಮ್ಮೆಡೆ ನೋಡಿದ ದರ್ಶನ್‌ರವರು “ಬನ್ನಿ’ ಎಂದು ಕೈಬೀಸಿ ಕರೆದರು. ನಾವು ಮತ್ತೆ ದರ್ಶನ್ ಅವರ ಬಳಿ ಹೋದೆವು. ಅದುವರೆಗೂ ಪಕ್ಷಿ ವೀಕ್ಷಣೆಯಲ್ಲಿಯೇ ಮಗ್ನರಾಗಿದ್ದ ದರ್ಶನ್, ಆತ್ಮೀಯತೆಯಿಂದ ನಮ್ಮನ್ನು ಪರಿಚಯಿಸಿಕೊಂಡರು. ವಿವಿಧ ಪಕ್ಷಿಗಳ ಬಗ್ಗೆ ಮಾಹಿತಿಯನ್ನೂ ಕೇಳಿದರು. ಅವರಿಗೆ ಪಕ್ಷಿಗಳ ಬಗ್ಗೆ ಇರುವ ಕುತೂಹಲ, ಫೋಟೊಗ್ರಫಿಯ ಬಗ್ಗೆ ಇರುವ ಆಸಕ್ತಿ ಕಂಡು ಬೆರಗೆನಿಸಿತು. ಇಂಥ ದೊಡ್ಡ ನಟ ಹೀಗೂ ಇರಬಹುದಾ? ಎನಿಸಿತು. ಆತ್ಮೀಯತೆಯಿಂದ “ಬನ್ನಿ’ ಎಂದು ತಮ್ಮ ಕಾರಿನ ಬಳಿ ಕರೆದೊಯ್ದು ನಮ್ಮೊಂದಿಗೆ ಫೋಟೊ ತೆಗೆಸಿಕೊಂಡರು. ನಮಗೂ ಖುಷಿಯಾಯ್ತು. “ಏನ್ ಸರ್? ನೀವಿಷ್ಟು ದೊಡ್ಡ ನಟರಾದರೂ ಇಷ್ಟೊಂದು ಸರಳವಾಗಿದೀರಲ್ಲ?’ ಎಂದೆ. ಅವರು ನನ್ನ ಮಾತಿಗೆ ಮುಗುಳ್ನಕ್ಕರು. ಮತ್ತೂಮ್ಮೆ ಭೇಟಿಯಾಗೋಣ ಎಂದು ಪ್ರೀತಿಯಿಂದ ಬೀಳ್ಕೊಟ್ಟರು.
ಅಷ್ಟು ದೊಡ್ಡ ನಟರಾದರೂ ಅವರಲ್ಲಿ ಯಾವುದೇ ರೀತಿಯ ಪ್ರತಿಷ್ಠೆ ಎಂಬುದು ಕಾಣಲಿಲ್ಲ. ಹಾಗೆ ನೋಡಿದರೆ ನಮ್ಮನ್ನು ಮಾತನಾಡಿಸದಿದ್ದರೆ ಅವರಿಗೇನೂ ಆಗುತ್ತಿರಲಿಲ್ಲ. ಆದರೆ, ಆತ್ಮೀಯತೆಯಿಂದ ಕರೆದು ಮಾತನಾಡಿ, ವಿವಿಧ ವಿಷಯಗಳನ್ನು ಕೇಳಿ ತಿಳಿದುಕೊಂಡ ಅವರ ಸರಳತೆ ನಮಗೆ ಅಚ್ಚರಿ ಮೂಡಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.