ಮಂದಣ್ಣ ಬೆಂಗಳೂರ್ಗೆ ಬಂದ್ನಣ್ಣ..
Team Udayavani, Oct 7, 2017, 7:15 AM IST
ಪೂರ್ಣ ಚಂದ್ರ ತೇಜಸ್ವಿಯವರು ಸೃಷ್ಟಿಸಿದ ಅದ್ಬುತ ಪಾತ್ರಗಳೆಂದರೆ-ಕರ್ವಾಲೋದ ಮಂದಣ್ಣ, ಬಿರ್ಯಾನಿ ಕರಿಯಪ್ಪ, ಮಾಯಾಲೋಕದಲ್ಲಿ ಬರುವ ಅಣ್ಣಪ್ಪಣ್ಣ, ಕರಾಟೆ ಮಂಜ, ಬಂಡಾರಿ ಬಾಬು… ಮುಂತಾದವು. ಈ ಪೈಕಿ ಒಂದು ದೀರ್ಘ ಪ್ರಯಾಣದಲ್ಲಿ ಮಂದಣ್ಣ ಜೊತೆಯಾಗಿ ಬಿಟ್ಟರೆ, ಆತ ತೆರೆದಿಡುವ ವಿಸ್ಮಯ ಪ್ರಪಂಚದ ವಿವರಣೆ ಹೇಗಿರುತ್ತದೆ ಎಂಬ ಕೌತುಕಕ್ಕೆ ಇಲ್ಲಿ ಉತ್ತರವಿದೆ. ಆಂದಹಾಗೆ, ಇದು ಕಾಲ್ಪನಿಕ ಬರಹ.
ಮೂಡಿಗೆರೆಯಿಂದ ಬೆಂಗಳೂರಿಗೆ ಬರಲು ಬಸ್ಸ್ಟ್ಯಾಂಡಿನಲ್ಲಿ ನಿಂತಿದ್ದವಳಿಗೆ ಪಕ್ಕದಲ್ಲಿದ್ದ ಆಕೃತಿಯನ್ನು ಎಲ್ಲೋ ನೋಡಿದ ಹಾಗಿದೆಯಲ್ಲ ಎನಿಸುತಿತ್ತು. ಅಷ್ಟರಲ್ಲೇ ಆ ವ್ಯಕ್ತಿಯ ಫೋನ್ ರಿಂಗಣಿಸತೊಡಗಿತು. ನಿಧಾನಕ್ಕೆ ಜೇಬಿನಿಂದ ಫೋನ್ ಎತ್ತಿ ಕೆಲಕಾಲ ಮೊಬೈಲಿನ ಸ್ಕ್ರೀನನ್ನೇ ದಿಟ್ಟಿಸಿ, ರಿಸೀವ್ ಮಾಡಿ, “ಹಾ ಹೇಳಿ ಸರ್, ನಾನು ಮಂದಣ್ಣಾನೆ ಮಾತಾಡ್ತಿರೋದು, ಇವತ್ತು ರಾತ್ರಿಯೇ ಬೆಂಗಳೂರಿಗೆ ಬರ್ತಾ ಇದೀನಿ, ಅಲ್ಲಿ ಬಂದು ಮಾತಾಡ್ತಿನಿ’ ಎಂದು ಫೋನ್ ಕಟ್ ಮಾಡಿದರು. ಅರೇ, ಇವರು ನಮ್ ಮಂದಣ್ಣ ಅಲ್ವಾ ಅಂತ ಅಚ್ಚರಿ ಬೆರೆತ ಸಂತೋಷದೊಂದಿಗೆ ಮಾತಿಗಿಳಿದೆ. ಉಭಯ ಕುಶಲೋಪರಿ ಮುಗಿಯುವ ವೇಳೆಗೆ ಬಸ್ಸು ಬಂದಿತು.
ಇಬ್ಬರೂ ಬಸ್ಸು ಹತ್ತಿ ಜೊತೆಯಾಗಿ ಒಂದೇ ಸೀಟಿನಲ್ಲಿಯೇ ಅಕ್ಕಪಕ್ಕ ಕುಳಿತು ಮಾತು ಮುಂದುವರೆಸಿದೆವು. ಅಲ್ಲಾ ಮಂದಣ್ಣ, ತೇಜಸ್ವಿ ಸಾರ್, ನಿಮ್ಮ ಬಗ್ಗೆ ಎಷ್ಟೆಲ್ಲಾ ಬರ್ದಿದಾರೆ ಗೊತ್ತಾ ನಿಮಗೇ ಅಂದಿದ್ದೇ, ಮಂದಣ್ಣ ನಾಚಿಕೆಯಿಂದ ನಗುತ್ತಾ “ಸಾರ್, ಹೇಳಿದಷ್ಟು ಬುದ್ದಿವಂತ ಏನಲ್ಲಾ ನಾನು. ನಾನೊಬ್ಬ ಹಳ್ಳಿ ಗಮಾರ ಎಂದು ಹಲ್ಲು ಕಿರಿದರು. “ಅದು ಸರಿ’ ಈಗ ಬೆಂಗಳೂರಿಗೆ ಹೊರಟಿರೋದು ಯಾಕೆ ‘? ಎಂದು ಪ್ರಶ್ನಿಸಿದ ಕೂಡಲೇ, ಮಂದಣ್ಣನ ಮುಖ ಚಿಂತಾಕ್ರಾಂತವಾಯಿತು.
ಏನ್ ಹೇಳ್ಳಿ ಸ್ವಾಮಿ, ಬಡವ್ರು ನಾವು, ಕರ್ವಾಲೋ ಸಾಹೇಬ್ರು ಹತ್ರ ಪೀವನ್ ಕೆಲಸಕ್ಕೆ ಅರ್ಜಿ ಹಾಕ್ತಿನಿ ಅಂತ ಹೇಳಿ ಬೈಸ್ಕೊಂಡ ಮೇಲೆ, ಪೀವನ್ ಕೆಲಸದ ಆಸೆ ಬಿಟುº, ಹೊಟ್ಟೆಪಾಡಿಗೆ ಅಂತ ಬೀಮ್ಯಾನ್ ಕೆಲಸಕ್ಕೆ ಅಪ್ಲಿಕೇಶನ್ ಕೊಡೋಣ ಅಂದುಕೊಂಡಿದ್ದೆ. ಅದೇ ಸಮಯಕ್ಕೆ ಮಂತ್ರಿಗಳ ಕಾರ್ಯಕ್ರಮದ ದಿನ ಹೆಜ್ಜೆನಿನ ದಾಳಿ ಆಗಿ ಅದಕ್ಕೆಲ್ಲಾ ನಾನೇ ಕಾರಣ ಅಂತ ಪೋಲೀಸರು ಕಾಟ ಕೊಡೋಕೆ ಶುರು ಮಾಡಿದರು. ಹೇಗಿದ್ದರೂ ನಮ್ಮ ಮಾವ ರಾಮಣ್ಣನ ಹತ್ರ ಎರಡು ಎಕರೆ ಜಮೀನಿತ್ತು. ಅವನಿಗೂ ವಯಸ್ಸಾಗಿದ್ದರಿಂದ ಅದನ್ನು ನನ್ನ ಹೆಂಡ್ತಿ ಹೆಸರಿಗೇ ಬರೆದುಕೊಟ್ಟ.
ಇಬ್ಬರೂ ಸೇರಿ ಕೃಷಿ ಮಾಡಿ ಬದುಕು ಕಟ್ಕೊಳ್ಳೋಣ ಅಂತ ತೀರ್ಮಾನ ಮಾಡಿ, ವ್ಯವಸಾಯ ಶುರು ಮಾಡಿದ್ವಿ. ನಾನು ನನ್ನ ಹೆಂಡ್ತಿ ರಾಮಿ, ಹಗಲು ರಾತ್ರಿ ಎನ್ನದೆ ದುಡಿದು, ಜಮೀನನ್ನು ನೀರಾವರಿ ಯೋಗ್ಯವನ್ನಾಗಿ ಮಾಡಿ ಭತ್ತ ಬೆಳೆಯೋಕೆ ಅಂತ ತಯಾರು ಮಾಡಿದ್ವಿ. ಗದ್ದೆ ಉಳ್ಳೋಕೆ ನಮØತ್ರ ಎತ್ತುಗಳು ಇರಲಿಲ್ಲ. ಅದಿಕ್ಕೆ ಉಳುಮೆ ಕೆಲ್ಸಕ್ಕೆ ಅಂತ ಒಂದು ಪವರ್ ಟಿಲ್ಲರ್ ತಗೋಳಣ ಅಂತ ನಿರ್ಧಾರ ಮಾಡಿ, ಮೂಡಿಗೆರೆಲಿದ್ದ ಬ್ಯಾಂಕೊಂದಕ್ಕೆ ಹೋದ್ವಿ. ಆ ಬ್ಯಾಂಕಿನ ಡೈರೆಕ್ಟರು ಅವತ್ತು ಮೂಡಿಗೆರೆಲಿ ಭಾಷಣ ಮಾಡ್ತಾ, ರೈತ್ರು ಪ್ರಗತಿ ಸಾಧಿಸ್ಬೇಕು, ಎಲ್ಲಾದೂ ಮುಂದೆ ಬಬೇìಕು.
ರೈತರಿಗೇ ಅಂತಾನೇ ಸರ್ಕಾರ ಎಂತೆಂಥ ಯೋಜನೆ ಹಾಕಿದೆ, ರೈತರಿಗೆ ಎಲ್ಲಾ ಥರದ ಸವಲತ್ತೂ ಕೊಡ್ತಿದೆ. ಬೆಳೆಗೆ ಅಂತಾನೇ ಸಾಲ, ಸಬ್ಸಿಡಿ, ಗೊಬ್ಬರಕ್ಕೆ ಅಂತ ಅನೇಕ ಯೋಜನೆಗಳಿದೆ. ಇಂಥದ್ದನ್ನೆಲ್ಲಾ ಬಳಸಿಕೊಂಡು ರೈತರು ಜೀವನದಲ್ಲಿ ಮುಂದೆ ಬರಬೇಕು. ಆತ್ಮಹತ್ಯೆ ಮಾಡ್ಕೊಳದನ್ನ ನಿಲ್ಲಿಸ್ಬೇಕು ಅಂತಿದ್ರು. ಆ ಅಧಿಕಾರಿಗಳನ್ನ ಭೇಟಿ ಮಾಡಿ, ಅದ್ಯಾವುದೋ ಫಾರಂಗಳನ್ನ ತುಂಬಿಸಿಕೊಟ್ಟು, ರೇಷನ್ ಕಾರ್ಡು, ಆಧಾರ್ ಕಾರ್ಡು ಮತ್ತೆ ಎರಡು ಪಾಸ್ ಪೋರ್ಟು ಸೈಜ… ಫೋಟೋನೂ ಕೊಟ್ಟು ನಂತರ ಒಂದು ವಾರ ಆದ್ಮೇಲೆ ಬನ್ನಿ, ಲೋನ್ ಕೊಡೋಕೆ ಪೊ›ಸೀಜರ್ ಇದೆ, ನಿಮಗ ಎಲಿಜಬಿಲಿಟಿ ಇದೆಯಾ ನೋಡಿ ಹೇಳ್ತಿವಿ.
ಹದಿನೈದು ದಿನ ಬಿಟ್ಟು ಬನ್ನಿ ಅಂದರು. ಸರಿ ಅಂತ ಆ ಅಧಿಕಾರಿಗೆ ಕೈ ಮುಗುª ಬಂದ್ವಿ. ಹದಿನೈದು ದಿನ ಆದ್ಮೇಲೆ, ಆ ಬ್ಯಾಂಕ್ ಗುಮಾಸ್ತ ರಂಗಯ್ಯ ಸಿಕ್ಕು ನಮ್ ಮ್ಯಾನೇಜರ್ ಸಾಹೇಬ್ರು ಹೇಳ್ತಿದ್ರು ಕಣೋ ಮಂದಣ್ಣ, ನಿಮ್ಮ ಜಮೀನು ಪತ್ರದಲ್ಲಿ ಅದನ್ನ ಕಾಡು ಅಂತ ಬರ್ದಿರೋದ್ರಿಂದ ಲೋನ್ ಕೋಡೋಕೆ ಆಗಲ್ಲ ಅಂತಿದ್ರು ಅಂದ. ಮರುದಿನ ಬೆಳಗ್ಗೆನೇ ಅಧಿಕಾರಿಗಳ ಹತ್ರ ಹೋಗಿ ವಿಚಾರಿಸಿದ್ರೆ “ಆ ಜಾಗ ಕಾಡು ಅಂತ ದಾಖಲಾಗಿರೋದ್ರಿಂದ, ಲೋನು ಮಂಜೂರಾಗಲ್ಲ. ಬೇಕಿದ್ರೆ ಕಾಫಿಬೋರ್ಡಿನಲ್ಲಿ ಸಾಲ ತೆಗಿ ‘ ಅಂದ್ರು. ಕಾಫಿಬೋರ್ಡಿಗೆ ಹೋಗಿ ಅರ್ಜಿ ವಿಚಾರಣೆ ಮಾಡುದ್ರೆ ಭತ್ತ ಬೆಳಿಯೋಕೆ ಕಾಫಿಬೋರ್ಡಿಂದ ಸಾಲ ಕೊಡಕ್ಕಾಗಲ್ಲ ಅಂದ್ರು.
ಹಂಗೂ ಸಾಲ ಪಡಿಬೇಕು ಅಂದ್ರೆ ರೆವೆನ್ಯೂ ಇಲಾಖೆಗೆ ಹೋಗಿ ಕಾಡು ಅಂತ ದಾಖಲಾಗಿರೋದನ್ನ ಬೇರೆ ಸರ್ವೆ ನಂಬರ್ ಮಾಡಿ, ಹೊಸ ದಾಖಲೆ, ಪುರಾವೆ ಮಾಡಿಸ್ಕೊಂಡು ಬಾ ಅಂದ್ರು. ಅದಕ್ಕೂ ಸುಮಾರು ಲಂಚ ಕೊಡ್ಬೇಕು ಅಂತ ತಿಳಿದ ಮೇಲೆ, ಸದ್ಯಕ್ಕೆ ಇದು ಆಗದ ಕೆಲಸ ಅಂತ ತಿಳಿದು ಆ ಬ್ಯಾಂಕಿಗೆ ಒಂದು ದೊಡ್ಡ ನಮಸ್ಕಾರ ಹೊಡೆದುಬಿಟ್ಟೆ. ನಮ್ಮ ಊರಳ್ಳಿಯ ಅಣ್ಣಪ್ಪಣ್ಣನೂ ಹೋದ್ವರ್ಷ ಬೆಳೆ ಸಾಲ ತಗೊಂಡಿದ್ನಂತೆ. ಹೋದ್ಸಾರಿ ಮಳೆ ಕೈಕೊಟ್ಟು ಅವನ ಜಮೀನಿನಲ್ಲಿ ಸರಿಯಾಗಿ ಬೆಳೆ ಬರದೆ, ಸುಮಾರು ನಷ್ಟ ಅನುಭವಿಸಿದ.ಸಾಲ ಕೊಟ್ಟೋರು ಸುಮ್ನೆ ಇರ್ತಾರ? ಮನೆ ಹತ್ರ ಅಧಿಕಾರಿಗಳು ಬಂದು ಸಾಲದ ಜೊತೆ ಬಡ್ಡಿನೂ ಕಟ್ಟು ಅಂದ್ರಂತೆ.
ಇವ್ನು ಕೈ ಮುಗುª, ಮಳೆ ಇಲ್ದೆ ಬೆಳೆ ನೆಲ ಕಚ್ತು ಸ್ವಾಮಿ. ಜೀವ° ನಡೊಕೆ ಕಷ್ಟ ಆಗಿದೆ, ಇನ್ನಾ ಸಾಲ ಹೇಗೆ ತೀಸೋìದು ಅಂದಿದ್ದಕ್ಕೆ, ಬಂದಿದ್ದ ಅಧಿಕಾರಿಗಳು ಅದ್ಯಾವುದನ್ನು ತಲೆಗೇ ಹಾಕ್ಕೊಳ್ಳಿಲ್ಲವಂತೆ. ಹಳ್ಳಿಯ ಕೃಷಿ ಜೀವನದ ಬಗ್ಗೆ ಗಾಳಿ ಗಂಧ ಗೊತ್ತಿಲ್ಲದ ಪೇಟೇಲಿ ಓದಿರೋರ್ನ ಕರ್ಕೊಂಡು ಬಂದು ಮ್ಯಾನೇಜರುಗಳಾಗಿ ಮಾಡಿದ್ರೆ ಏನು ಪ್ರಯೋಜನ ಸ್ವಾಮಿ? ಅವರಿಗೆ ಚೆನ್ನಾಗಿ ಲೆಕ್ಕ ನೋಡೋಕೆ ಬರ್ತದೆ ಹೊರ್ತು, ರೈತ್ರು ಕಷ್ಟ ಅರ್ಥ ಆಗಲ್ಲ. ಮುಂಗಾರಿ ಬೆಳೆ, ಹಿಂಗಾರಿ ಬೆಳೆ ಅಂದ್ರೇನು ಅನ್ನೋ ಸಣ್ಣ ತಿಳುವಳಿಕೆ ಕೂಡಾ ಇರೋಲ್ಲ. ಸುಮ್ನೆ ಪಾಪದ ರೈತರ ಮೇಲೆ ಜಬರ್ದಸ್ತು ಮಾಡ್ತಾರಷ್ಟೇ.
ನಮ್ಗೆನು ಅವರಂಗೆ ತಿಂಗ್ಳು ತಿಂಗ್ಳು ಸಂಬಳ ಬರುತ್ತ? ರೈತ್ರುಗೆ ಎಷ್ಟು ವರಮಾನ ಇದೆ ಅಂತಾ ತಿಳಿದೂ ಕೂಡ ಪ್ರತಿ ಮೂರು ತಿಂಗಳಿಗೆ ಒಂದ್ಸಾರಿ ಬಡ್ಡಿ ಕಟ್ಲೆಬೇಕು ಅಂತ ಬಲವಂತ ಮಾಡುದ್ರೆ, ರೈತ್ರು ಏನ್ ಮಾಡೋಕಾಗುತ್ತೆ ನೀವೆ ಹೇಳಿ, ಇವರ ಕಾಟ ತಡೆಯೋಕೆ ಆಗೆª ಅಣ್ಣಪ್ಪಣ್ಣ ಊರು ಬಿಟ್ಟು ಹೋಗಿದಾನೆ. ಪಾಪ ಅವನ ಹೆಂಡ್ತಿ ಮಕ್ಳು ಗೋಳು ನೋಡಾಕಾಗ್ತಿಲ್ಲ ಸ್ವಾಮಿ… ಮಳೆ ಬರೋಕು ಮುಂಚೆ ಹೇಗಾದರೂ ಮಾಡಿ, ಕೃಷಿ ಕೆಲಸ ಶುರು ಮಾಡ್ಬೇಕು ಅಂತ, ಸುಮಾರು ಕಡೆ ಸಾಲ ಕೇಳಿದೆ.
ಆದ್ರೆ ಎಲ್ಲೂ ಸಿಗ್ಲಿಲ್ಲ. ಕೊನೆಗೆ ನನ್ನ ಹೆಂಡ್ತಿ ರಾಮಿನೇ ಅವಳ ತವರಿನಿಂದ ಕೊಟ್ಟಿದ್ದ ಒಂದಷ್ಟು ಒಡವೆನ ನನ್ನ ಕೈಗೆ ತಂದುಕೊಟ್ಟು ಯಾವುದಾದರೂ ಮಾರ್ವಾಡಿಗಳ ಹತ್ತಿರ ಅಡ ಇಟ್ಟು ಸಾಲ ತರೋಕೆ ಹೇಳಿದು. ಒಡವೆ ಈಸ್ಕೊಂಡು ಕೈಚೀಲದೊಳಗೆ ಭದ್ರವಾಗಿಟ್ಕೊಂಡು, ಮೂಡಿಗೆರೆಯ ಪೇಟೆ ಬೀದಿಗೆ ನಡೆದೆ. ಮಾರ್ವಾಡಿ ಅಂಗಡಿ ಸಮೀಪಿಸುತ್ತಿದ್ದಂತೆ ಬೇರಿ ಅಂಗಡಿ ಬಳಿ ಟೀ ಕುಡಿಯುತ್ತಾ ನಿಂತಿದ್ದ ಕರಾಟೆ ಮಂಜ ಸಿಕ್ಕಿದ. ಇದೇನಯ್ನಾ ನೀನಿಲ್ಲಿ ಅಂದ್ರೆ, ಆ ಬಂಡಾರಿ ಬಾಬು ಬ್ಯಾಂಕಲ್ಲಿ ಸಾಲ ತಗೋಳ್ಳೋಕೆ ಹೋಗ್ಬೇಕು, ಅಜರ್ ತುಂಬೊಡು ಬಾ ಅಂತ ಜೊತೇಲಿ ಕರಕೊಂಡು ಬಂದ.
ಇಲ್ಲಿ ಬಂದು ನೋಡಿದ್ರೆ ಆ ಬ್ಯಾಂಕಿನ ಅಧಿಕಾರಿಗಳು ಸಾಲಕ್ಕಾಗಿ ಬಂದ ರೈತರನ್ನ ಮಾರ್‌ವಾಡಿಗಳ ಹತ್ರ ಸಾಲಕ್ಕೆ ಹೋಗಕ್ಕೆ ಹುರಿದುಂಬಿಸ್ತಾ ಇದ್ರು. ಅವರೇ ನೇರವಾಗಿ ರೈತರಿಗೆ ಸಾಲ ಕೊಡೋಕೆ, ರೈತರ ಬಳಿ ಆಸ್ತಿಪಾಸ್ತಿ ಇತ್ಯಾದಿಗೆ ತಕ್ಕ ದಾಖಲು ಪತ್ರಗಳು, ಕಾಗದಗಳು ಇದ್ದೇ ಅಡ್ಡಿಯಾಗಿ. ಮಾರ್ವಾಡಿಗಳ ಹತ್ರ ಶೇಕಡ 20-25 ಪಟ್ಟು ಬಡ್ಡಿ ಕೊಟ್ಟು ರೈತ್ರು ಸಾಲ ತಗೋತಾ ಇದಾರೆ. ಅದೇ ಮಾರ್ವಾಡಿಗಳು ಎಲ್ಲಾ ದಾಖಲೆ ಪತ್ರಗಳನ್ನ ಸರಿಯಾಗಿ ಮಾಡಿಸಿಕೊಂಡಿದ್ದಾರೆ. ಅದಕ್ಕೇ ಬ್ಯಾಂಕ್ ಅವರಿಗೆ ಶೇಕಡ 10 ರಂತೆ ಸಾಲ ಕೊಡುತ್ತಿದೆ. ಇದ್ರಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದಾರೋ ಏನೋ ನಂಗೊತ್ತಿಲ್ಲ.
ಇದೆಲ್ಲಾ ಅರ್ಥ ಆಗ್ದೇ ಇರೋ ನಮ್ ರೈತ್ರು, ಆ ಬ್ಯಾಂಕ್ ಅಧಿಕಾರಿಗಳನ್ನೇ ಹೊಗಳ್ತಾ ಇದಾರೆ, ಇವರ ಕೈಯಲ್ಲಿ ಆಗಿªದ್ರೂ ಮಾರ್ವಾಡಿಗಳ ಹತ್ರ ಆದ್ರು ಕೊಡಿಸ್ತಾ ಇದಾರೆ ಅಂತ. ಇವರಿಗೆಲ್ಲಾ ಅದ್ಯಾವಾಗ ಅರ್ಥ ಆಗುತ್ತೋ, ನಾಲ್ಕಕ್ಷರ ಅಂತೇನಾದ್ರು ಕಲ್ತಿದ್ರೆ ನಮಗಾಗ್ತಿರೋ ಅನ್ಯಾಯ ಅರ್ಥ ಮಾಡ್ಕೊಳಷ್ಟು ಬುದ್ಧಿನಾದ್ರು ಇರ್ತಿತ್ತು. ಅನಕ್ಷರತೆಯ ದೆಸೆಯಿಂದಾಗಿ ರೈತ ಎಂತಹ ದುಸ್ಥಿತಿಗೆ ಬಂದ ಎಂದು ಹೇಳಿ, ಬರ್ತೀನಿ, ಬಾಬೂನ ಹಾಗೆ ಒಬ್ಬನ್ನೇ ಬಿಟ್ರೆ, ಕೈಯ್ಯಲ್ಲಿರೋ ದುಟ್ನೂ ಕುಡ್ದು ಹಾಳ್ಮಾಡ್ತಾನೆ, ಅವನನ್ನ ಮನೆವರೆಗೂ ಬಿಟ್ಟು ದುಡ್ಡನ್ನ ಅವನ ಹೆಂಡ್ತಿ ಕೈಗೆ ಕೊಡಿಸಿ ಹೋಗ್ತಿನಿ ಎಂದು ಹೇಳಿ ಕರಾಟೆ ಮಂಜ ಹೊರಟುಹೋದ.
ಇದ್ರ ಜೊತೆಗೇ ಮೊನ್ನೆ ಪ್ರಕಾಶವಾಣಿ ಪತ್ರಿಕೇಲಿ ಮಕ್ಕೀಗದ್ದೆ ರೈತ ಒಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಸುದ್ಧಿ ಬೇರೆ ಬಂತು. ಸರ್ಕಾರಿ ಗೊಬ್ಬರ ಮತ್ತು ಕೀಟನಾಶಕ ತಂದು ಜಮೀನಿಗೆ ಹಾಕಿ ಸರಿಯಾಗಿ ಬೆಳೆ ಬರದೆ, ಸಾಲಕ್ಕೆ ಹೆದರಿ ಅದೇ ಕೀಟನಾಶಕ ಕುಡಿದು ಪ್ರಾಣ ಕಳ್ಕೊಂಡ. ಮೇಲ್ನೋಟಕ್ಕೆ, ಇದು ಆತ್ಮಹತ್ಯೆ ಅನ್ಸಿದ್ರು ಸಹ, ಅದರ ಹಿಂದಿನ ಕಾರಣ ಹುಡುಕ್ತಾ ಹೋದ್ರೆ ಸರ್ಕಾರದ ಬಂಡವಾಳಶಾಹಿತನಾನೇ ಇದಕ್ಕೆಲ್ಲಾ ಮೂಲ ಕಾರಣ ಅನ್ಸುತ್ತೆ. ನಮ್ಮ ಭಾರತೀಯ ಕೃಷಿರಂಗದಲ್ಲಿ ನೂರಕ್ಕೆ ತೊಂಬತ್ತರಷ್ಟು ಜನ, ಅನಕ್ಷರಸ್ತರಿದ್ದಾರೆ. ಬ್ಯಾಂಕಿನ ಒಂದು ಸಣ್ಣ ಕೆಲಸಕ್ಕೂ ನೂರೆಂಟು ದಾಖಲೆ ಕೊಡಿ ಅಂತ ಕೇಳ್ತಾರೆ.
ಒಂದು ಬೇಳೆ ಸಾಲಕ್ಕೆ ಹಿಂದಿನ ಐದು ವರ್ಷದ ಆದಾಯ -ಖರ್ಚು ಎಲ್ಲಾ ಪಟ್ಟಿ ಮಾಡಿ ಕೊಡ್ಬೇಕು, ಜೊತೆಗೆ ಅಭಿವೃದ್ಧಿ ಪಡಿಸಬೇಕು ಅನ್ಕೊಂಡಿರೋ ಜಮೀನಿಂದ, ಅನಂತರ ಬರುವ ಅಧಿಕ ಆದಾಯ ಮತ್ತು ಖರ್ಚಿನ ವಿವರಗಳನ್ನ ಕೊಡ್ಬೇಕು, ಅಷ್ಟೆಲ್ಲಾ ಅರ್ಜಿ ಕಾಲಮ್ಮುಗಳನ್ನ ತುಂಬುವಷ್ಟರಲ್ಲೇ ಜೀವ ಅರ್ಧವಾಗಿರುತ್ತೆ. ಇದ್ರು ಜೊತೆಗೆ ಬೆಳಗೆದ್ರೆ ತಾಲ್ಲೂಕು ಆಫೀಸಿಂದ ಆ ರಶೀದಿ, ಈ ಸರ್ಟಿಫಿಕೇಟು ತನ್ನಿ ಅಂತಾರೆ.
ಈ ಎಲ್ಲಾ ದಾಖಲೆಗಳನ್ನ ಒದಗಿಸಿ ಆಫೀಸಿಂದ ಆಫೀಸಿಗೆ ಕಾಫಿ ಕೊಡಿಸುತ್ತಾ, ದೋಸೆ ಕೊಡಿಸುತ್ತಾ ಮೇಜಿನಡಿಯೇ ವ್ಯವಹಾರ ಮಾಡಿ, ರೈತನ ಕೈಗೆ ಸಾಲ ಸಿಗಬೇಕಾದರೆ ಅವನ ಆಯಸ್ಸೇ ಮುಗಿದುಹೋಗಿರುತ್ತದೆ. ನಮ್ಮದೇ ಜಮೀನಿನಲ್ಲಿ ಯಾವಾªದ್ರು ಒಂದು ಮರ ಕಡಿದ್ರು ಅರಣ್ಯನಾಶ ಮಾಡ್ತಾ ಇದಾರೆ ಅಂತ ಕಂಪ್ಲೇಂಟು ಹಾಕಿ ನಮ್ಮನ್ನ ಒಳಗೆ ಹಾಕುತ್ತಾರೆ. ಹೀಗೆ ಹೇಳುತ್ತಾ ಹೋದರೆ ನೂರಾರಿವೆ ಎಂದು ಹೇಳುತ್ತಿದ್ದ ಮಂದಣ್ಣನ ಕಣ್ಣಂಚಿನಲ್ಲಿ ನೀರಾಡಿದ್ದವು. ಇಷ್ಟೆಲ್ಲಾ ಮಾತನಾಡುವ ಹೊತ್ತಿಗೆ, ಬಸ್ಸು ರಾಜಧಾನಿಯನ್ನ ತಲುಪಿತ್ತು.
ನಾನಂತೂ ಮಂದಣ್ಣನ ಮಾತು ಕೇಳಿ ರೈತರು ಎಂತಹ ಅಧೋಗತಿಯಲ್ಲಿ ಸಿಲುಕಿದ್ದಾರೆ ಎಂದು ಚಿಂತಿಸುತ್ತಿದ್ದೆ. ನಾನು ಹಳ್ಳಿ ಗಮಾರ ಎಂದು ಹೇಳುತ್ತಲೇ, ಇಡೀ ಭಾರತದ ರೈತರ ಸಮಸ್ಯೆಯನ್ನ ಅರ್ಥಮಾಡಿಕೊಂಡು, ವ್ಯವಸ್ಥೆಯ ಕರಾಳ ಮುಖಕ್ಕೆ ಮಂದಣ್ಣ ಕನ್ನಡಿ ಹಿಡಿದಿದ್ದ. ಬಸ್ಸು ನಿಲ್ದಾಣ ತಲುಪಿ ನಿಲ್ಲುತ್ತಿದ್ದಂತೆಯೇ, ಬರ್ತೀನಿ ತಾಯೀ…ರೈತ್ರು ಗೋಳು ಎಷ್ಟು ಹೇಳಿದ್ರು ಮುಗ್ಯಲ್ಲ ಇನ್ನು ಆ ರಾಜಕೀಯ ಪುಢಾರಿಗಳ ಹತ್ರ ಏನೇನೆಲ್ಲಾ ಕೇಳ್ಬೇಕೋ ಎಂದು ಬಸ್ಸಿಳಿದು, ಥೇಟು ಹಾರುವ ಓತಿಯಂತೆಯೇ ಮರೆಯಾದ.
* ಸ್ವಾತಿ ಕೆ. ಎಚ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
Kannada: ಮಾತೃಭಾಷಾ ಹೊಳಪು
Kannada: ಕನ್ನಡ ಎನೆ ಕುಣಿದಾಡುವುದೆನ್ನೆದೆ… ಕನ್ನಡ ಎನೆ ಕಿವಿ ನಿಮಿರುವುದು…
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.