ವಿರೋಧದ ಅಲೆ ಮಧ್ಯೆ ಮಾರಿಯಾ ಶರಪೋವಾ ದ್ವಿತೀಯ ಇನಿಂಗ್ಸ್!
Team Udayavani, Apr 1, 2017, 3:55 AM IST
ಮೆಲ್ಡೋನಿಯಂ ಬೆನ್ನು ಹತ್ತಿ…..ಉಸಿರಾಟಕ್ಕೆ ಸಹಾಯ ಮಾಡುವ ಮೂಲಕ ಆಟಗಾರರ ಸಾಮರ್ಥ್ಯ ಹೆಚ್ಚಿಸುವಲ್ಲಿ ಪೂರಕವಾಗಿದೆ ಎಂಬ ವ್ಯಾಖ್ಯೆಗೆ ಒಳಗಾಗಿರುವ ಮೆಲ್ಡೋನಿಯಂನ್ನು ವಾಡಾ 2016ರ ಆರಂಭದಲ್ಲಿ ನಿಷೇಧಿಸಿದೆ. ಇದು ಅಮೆರಿಕಾದಲ್ಲಿ ಲಭ್ಯವಿಲ್ಲ. ಇಂದು ಶರಪೋವಾ ವಾಸವಿರುವುದು ಅಮೆರಿಕಾದಲ್ಲಿ. ಆದರೆ ಈಗಲೂ ಅದು ಮಾರಿಯಾ ಜನ್ಮ ಸ್ಥಳ ರಷ್ಯದಲ್ಲಿ ಲಭ್ಯ. ಒಬ್ಬ ಆಟಗಾರ ನಿಷೇಧಿತ ಔಷಧದ ಕುರಿತಾಗಿ ವಾಡಾದಿಂದ ಒಟ್ಟು ಐದು ಬಾರಿ ಎಚ್ಚರಿಕೆಯ ಮಾಹಿತಿ ಪಡೆಯುತ್ತಾರೆ. ಆದರೆ ಶರಪೋವಾ ಒಮ್ಮೆಯೂ ಈ ಸಂದೇಶ ಓದಿಲ್ಲ ಎಂದು ವಾದಿಸಿರುವುದು ಚರ್ಚೆಗೆ ವಸ್ತು. ಗಮನಿಸಬೇಕಾದುದೆಂದರೆ, ಕುಟುಂಬದ ಸಿಹಿಮೂತ್ರ ರೋಗದ ಇತಿಹಾಸದ ಹಿನ್ನೆಲೆಯಲ್ಲಿ 10 ವರ್ಷಗಳಿಂದ ಶರಪೋವಾ ಮೆಲ್ಡೋನಿಯಂ ಔಷಧ ಬಳಸಿದವರು ಮತ್ತು ಅವರಿಗೆ ಔಷಧ ಸಲಹೆ ಮಾಡುವವರು ರಷ್ಯನ್ ವೈದ್ಯರು!
ಟೆನಿಸ್ ರಂಗದಲ್ಲಿ ಹೊಸದೊಂದು ಕೌಂಟ್‌ಡೌನ್ ಶುರುವಾಗಿದೆ. ಸದ್ಯದಲ್ಲೇ ಟೆನಿಸ್ ರಂಗದಲ್ಲಿ ಮತ್ತೂಮ್ಮೆ ಗ್ಲಾಮರ್ ಮಿಂಚು ಹರಿದಾಡಲಿದೆ. ನಿಜ, ಏಪ್ರಿಲ್ 26ರಂದು ಜರ್ಮನಿಯ ಸ್ಟುಟ್‌ಗರ್ಟ್‌ನಲ್ಲಿ ನಡೆಯಲಿರುವ ಪೊರ್ಚೆ ಗ್ರಾಂಡ್‌ಫಿಕ್ಸ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯಲ್ಲಿ ವಿಶ್ವದ ಮಾಜಿ ನಂ.1 ಆಟಗಾರ್ತಿ ರಷ್ಯಾದ ಮಾರಿಯಾ ಶರಪೋವಾ ಮತ್ತೂಮ್ಮೆ ರ್ಯಾಕೆಟ್ ಹಿಡಿದು ಅಂಕಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೌದು, 15 ತಿಂಗಳ ನಂತರ ಇದೇ ಮೊದಲ ಬಾರಿಗೆ ವೃತ್ತಿಪರ ಟೆನಿಸ್‌ನಲ್ಲಿ ಮಾರಿಯಾ ಶರಪೋವಾ ದ್ವಿತೀಯ ಇನಿಂಗ್ಸ್ ಆಡಲಿದ್ದಾರೆ. ನೆನಪಿಲ್ಲದಿದ್ದರೆ ಫ್ಲಾಶ್‌ಬ್ಯಾಕ್ ಸಹಾಯ ಪಡೆಯಬಹುದು.
2016ರ ಆಸ್ಟ್ರೇಲಿಯನ್ ಓಪನ್ ನಂತರ ಒಂದು ದಿನ ಇದ್ದಕ್ಕಿದ್ದಂತೆ ಶರಪೋವಾ ಸುದ್ದಿಗೋಷ್ಠಿ ಕರೆಯುತ್ತಾರೆ. ಮಾಚ್ 8 ಲಾಸ್ ಏಂಜಲೀಸ್ ಹೋಟೆಲ್. ನನಗೆ ಗೊತ್ತಿರಲಿಲ್ಲ. ಕಾರ್ಡಿಯಾಕ್ ಡ್ರಗ್ ಮೆಲ್ಡೋನಿಯಂನ್ನು ಆ್ಯಂಟಿ ಡೋಪಿಂಗ್ 2016ರ ಆರಂಭದಿಂದ ನಿಷೇಧಿಸಿದೆಯಂತೆ. ನಾನು ಅದನ್ನು ಅಂದರೆ ನಿಷೇಧಿತ ಔಷಧವನ್ನು ಸ್ವೀಕರಿಸಿ ತಪ್ಪು$ಮಾಡಿದ್ದೇನೆ ಎಂದು ಬಹಿರಂಗಪಡಿಸುತ್ತಾರೆ.
ಆಕೆಗೆ ಎರಡು ವರ್ಷಗಳ ವೃತ್ತಿಪರ ಟೆನಿಸ್ ಸರ್ಕ್ನೂಟ್‌ನಿಂದ ನಿಷೇಧದ ಶಿಕ್ಷೆ ಎದುರಾಗುತ್ತದೆ. ಅರ್ಬಿಟರ್ ಎದುರು ಮೇಲ್ಮನವಿ ಮಾಡಿಕೊಳ್ಳುವ ಶರಪೋವಾ, ನಾನು ಇ ಮೇಲ್‌ಗಳನ್ನು ವೀಕ್ಷಿಸಿರಲಿಲ್ಲವಾದ್ದರಿಂದ ಈ ವ್ಯತ್ಯಯ ನಡೆದಿದೆ ಎಂದು ಪ್ರತಿಪಾದಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಶಿಕ್ಷೆ ಎರಡು ವರ್ಷದಿಂದ 15 ತಿಂಗಳಿಗೆ ಇಳಿಕೆಯಾಗುತ್ತದೆ.
ಇಲ್ಲೂ ಹಿಂಬಾಗಿಲ ಪ್ರವೇಶ!
ಕತೆ ಇಲ್ಲಿಯೇ ಟ್ವಿಸ್ಟ್ ತೆಗೆದುಕೊಂಡಿದೆ. ಶರಪೋವಾರ ವಾದವನ್ನು ನ್ಯಾಯ ವ್ಯವಸ್ಥೆ ಒಪ್ಪಿಕೊಂಡಿದೆ. ಆದರೆ ಸಹ ಆಟಗಾರರು ಅದನ್ನು ಸಮ್ಮತಿಸಿಲ್ಲ. ಅವರೆಲ್ಲರಿಗೆ ಮಾರಿಯಾ ಡ್ರಗ್ಸ್ ಸೇವಿಸಿದ ಪ್ರಕರಣವನ್ನು ಸರಿಯಾಗಿ ನಿರ್ವಹಿಸಲಾಗಿಲ್ಲ. ಇಷ್ಟರ ಮೇಲೆ ನೇರವಾಗಿ ಸ್ಟುಟ್‌ಗರ್ಟ್‌ನಂತ ಪ್ರತಿಷ್ಠಿತ ಟೂರ್ನಿಗೆ ವೈಲ್ಡ್ ಕಾರ್ಡ್ ಮೂಲಕ ನೇರ ಪ್ರವೇಶ ಕೊಟ್ಟಿರುವುದಂತೂ ಕಣ್ಣು ಕುಕ್ಕಿದೆ. ರೋಜರ್ ಫೆಡರರ್, ಸೆರೆನಾ ವಿಲಿಯಮ್ಸ್, ಜೆನ್ನಿಫರ್ ಕೆಪ್ರಿಯಾಟಿ, ಕರೋಲಿನಾ ವ್ಯೋಜಿಯಾಕಿ, ಬ್ರಿಟನ್‌ನ ಆ್ಯಂಡಿ ಮರ್ರೆ, ಡೊಮಿನಿಕಾ ಸಿಬುರೋವಾ, ಇಂಗ್ಲೆಂಡ್‌ನ ನಂ. 2 ಆಟಗಾರ್ತಿ ಹೀಥರ್ ವಾಟ್ಸನ್, ಅನೆjಲಿಕ್ಯೂ ಕೆರ್ಬರ್ ಮೊದಲಾದವರು ಇದಕ್ಕೆ ತಕರಾರು ವ್ಯಕ್ತಪಡಿಸಿದ್ದಾರೆ. ಶರಪೋವಾರ ಎಲ್ಲ 35 ಪ್ರಶಸ್ತಿಯನ್ನು ವಾಪಾಸು ಪಡೆಯಬೇಕು ಎಂದು ಜೆನ್ನಿಫರ್ ಕೆಪ್ರಿಯಾಟಿ ವಾದಿಸಿದ್ದಾರೆ!
ಇದಕ್ಕೆ ಎರಡು ಕಾರಣಗಳಿವೆ.
ಅಪರಾಧಿಯಾಗಿ ನಿಷೇಧ ಶಿಕ್ಷೆಗೆ ಒಳಗಾದವರಿಗೆ ವಾಪಾಸಾತಿಯ ಸಂದರ್ಭದಲ್ಲಿ ರೆಡ್ ಕಾಪೆìಟ್ ಹಾಕುವುದು ತಪ್ಪು$ ಸಂದೇಶಗಳನ್ನು ಕೊಡುತ್ತದೆ. ಹಾಗಾಗಿ ಶರಪೋವಾ ರಾಜರೋಷವಾಗಿ ಟೆನಿಸ್ ಮುಖ್ಯವಾಹಿನಿಗೆ ಪ್ರವೇಶಿಸದೆ ತಮ್ಮ ರ್‍ಯಾಂಕಿಂಗ್‌ನ್ನು ಪ್ರದರ್ಶನದ ಮೂಲಕ ವೃದ್ಧಿಸಿಕೊಂಡು ಮುಖ್ಯ ದ್ವಾರದಲ್ಲಿ ಟೆನಿಸ್ ಟೂರ್ನಿಗಳ ಪ್ರವೇಶ ಪಡೆಯಬೇಕಿತ್ತು. ಈ ತರಹದ ಪ್ರವೇಶ ಈ ಕಾಲದ ಪ್ರತಿಭೆಗಳಿಗೆ ಮಾಡುವ ಅನ್ಯಾಯ ಎಂಬ ಧ್ವನಿಯನ್ನು ಮರ್ರೆ, ವಾಟ್ಸನ್ ತರದವರು ಎತ್ತಿದ್ದಾರೆ.
ಇನ್ನೊಂದು, ಹೆಚ್ಚು ತಾಂತ್ರಿಕವಾದುದು. ಸ್ಟುಟ್‌ಗರ್ಟ್‌ನ ಟೂರ್ನಿಯ ಪ್ರಾಯೋಜಕರು ಪೊರ್ಚೆ ಕಂಪನಿ. ಇದು ಮಾರಿಯಾ ಶರಪೋವಾಳನ್ನು ಜಾಹೀರಾತುಗಳಲ್ಲಿ ಬಳಸಿಕೊಳ್ಳುತ್ತಿರುವ ಮುಖ್ಯ ಕಂಪನಿ. ಈ ಒಳಸಂಬಂಧ ಕೂಡ ವೈಲ್ಡ್ ಕಾರ್ಡ್ ಲಭಿಸಲು ಕಾರಣವಾಗಿದೆ ಎಂಬ ಆರೋಪ ಹರಿದಾಡುತ್ತಿದೆ. ಈ ಹಿಂದೆ ಡೂಪಿಂಗ್ ಆರೋಪಕ್ಕೊಳಗಾದ ಮಾರಿಯಾಳನ್ನು ಬೆಂಬಲಿಸಿರುವ ರಫೆಲ್ ನಡಾಲ್ ಕೂಡ ಮಾರಿಯಾ ಶಾಸ್ತ್ರಬದ್ಧ “ಕಂಬ್ಯಾಕ್ ಮಾರ್ಗವನ್ನೇ ಅನುಸರಿಸಬೇಕಿತ್ತು ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಗ್ರ್ಯಾನ್‌ಸ್ಲಾಮ್‌ಗೂ
ವೈಲ್ಡ್‌ಕಾರ್ಡ್?
ಇಷ್ಟೇ ಅಲ್ಲ, ಈಗಾಗಲೇ ಮ್ಯಾಡ್ರಿಡ್ ಹಾಗೂ ರೋಮ್‌ಗಳ ಟೂರ್ನಿಗಳಿಗೆ ಕೂಡ ಮಾರಿಯಾಗೆ ವೈಲ್ಡ್ ಕಾರ್ಡ್ ಸಿಕ್ಕಿದೆ. ಬರಲಿರುವ ಫ್ರೆಂಚ್ ಓಪನ್‌ನಲ್ಲಿ ಪಾಲ್ಗೊಳ್ಳುವಂತೆ ಮಾಡಲು ಫ್ರೆಂಚ್ ಟೆನಿಸ್ ಫೆಡರೇಶನ್ ವೈಲ್ಡ್ ಕಾರ್ಡ್ ಕೊಡಲು ಅರೆ ಕ್ಷಣದ ಚಿಂತನೆ ಮಾಡುವಂತಾಗಿದೆ. ಪ್ರಶ್ನೆ ಅದಲ್ಲ, 29 ವರ್ಷಗಳ ಮಾರಿಯಾ ಶರಪೋವಾ ಈವರೆಗೆ ಮಾಡಿದ ಟೆನಿಸ್ ಸಾಧನೆಯನ್ನು ಉಳಿದವರು ಗಮನಿಸಿಲ್ಲವೇ? ಕೇವಲ ಸೌಂದರ್ಯದಿಂದಷ್ಟೇ ಟೆನಿಸ್ ಸರ್ಕ್ನೂಟ್‌ನಲ್ಲಿ ಮಿಂಚಿದ ಅನ್ನಾ ಕುರ್ನಿಕೋವಾ ತಮ್ಮ ಕ್ಯಾರಿಯರ್‌ನಲ್ಲಿ ಒಂದೇ ಒಂದು ಡಬ್ಲ್ಯುಟಿಎ ಸಿಂಗಲ್ಸ್ ಪ್ರಶಸ್ತಿ ಪಡೆದಿರಲಿಲ್ಲ. ಅದೇ ಮಾರಿಯಾ ಗಳಿಸಿರುವ ಗ್ರ್ಯಾನ್‌ಸ್ಲಾಮ್‌ಗಳ ಸಂಖ್ಯೆಯೇ ಐದು! ಗಳಿಸಿರುವ ಸಿಂಗಲ್ಸ್ ಪ್ರಶಸ್ತಿ ಒಂದೆರಡಲ್ಲ, 35 ಆಗಿದೆ. 2003ರಿಂದ 15ರವರೆಗೆ ಪ್ರತಿ ವರ್ಷ ಒಂದಲ್ಲ ಒಂದು ಟೂರ್ನಿ ಗೆದ್ದಿದ್ದಾರೆ. ಈ ಸಾಧನೆಯಲ್ಲಿ ಸ್ಟೆಫಿಗ್ರಾಫ್ ಹೊರತು ಉಳಿದವರು ಶರಪೋವಾ ಹತ್ತಿರ ಬಂದಿಲ್ಲ. ಫ್ರೆಂಚ್ ಹಾಗೂ ವಿಂಬಲ್ಡನ್‌ನ ಮಾಜಿ ಚಾಂಪಿಯನ್ ಆಗಿರುವ ಆಟಗಾರ್ತಿ ವೈಲ್ಡ್‌ಕಾರ್ಡ್ ಕೇಳಿದರೆ ಕೊಡುವುದು ಸಮ್ಮತವೇ. ಏಕೋ ಗೊತ್ತಿಲ್ಲ, ಸಹ ಆಟಗಾರರಿಗೆ ಶರಪೋವಾ ಭಯ ಕಾಡುತ್ತಿದೆ!
ಶರಪೋವಾ ಮರಳುವಿಕೆ ಪ್ರಶಸ್ತಿಗಳು, ಪ್ರಶಸ್ತಿ ಬಹುಮಾನದ ಮೊತ್ತಕ್ಕಿಂತ ಜಾಹೀರಾತು, ಪ್ರಾಯೋಜನೆಗಳ ವಿಭಾಗದಲ್ಲಿ ಸಹ ಆಟಗಾರರಿಗೆ ದೊಡ್ಡ ಸಮಸ್ಯೆಯಾಗಿ ಕಾಡುವಂತದು. ಒಬ್ಬ ಸರ್ಕಾರಿ ಅಧಿಕಾರಿಗೆ ಎರಡು ತಿಂಗಳ ಅಮಾನತ್‌ನ ನಂತರ ಮತ್ತೆ ಕೆಲಸಕ್ಕೆ ಮರಳಿದರೆ ವೇತನ ಸಿಗಬಹುದು. ಆದರೆ ಕೈತಪ್ಪಿದ ಮಾಮೂಲು, ಲಂಚಗಳ ನಷ್ಟ ಭರಿಸಲಾಗುವುದಿಲ್ಲ. ಕಳೆದ ಒಂದೂಕಾಲು ವರ್ಷಗಳ ಅಜಾnತವಾಸದಿಂದ ಶರಪೋವಾ ಕಳೆದುಕೊಂಡಿದ್ದು ದೊಡ್ಡ ಮೊತ್ತದ ಪ್ರಾಯೋಜನೆ, ಆ್ಯಡ್ ಎಂಡಾರ್ಸ್‌ಮೆಂಟ್‌ಗಳು. ಸತತ 11 ವರ್ಷ ಶರಪೋವಾ ಅತಿ ಹೆಚ್ಚಿನ ಜಾಹೀರಾತು ಹಣ ಪಡೆಯುತ್ತಿದ್ದ ಮಹಿಳಾ ಅಥ್ಲೀಟ್ ಎನ್ನಿಸಿಕೊಂಡಿದ್ದರು. ಒಂದೇಟಿಗೆ, ಅಂಕಣಕ್ಕೆ ಮರಳಿದ ಶರಪೋವಾಳನ್ನು ಯಾರೂ ತಮ್ಮ ಜಾಹೀರಾತು, ಪ್ರಾಯೋಜನೆಗೆ ಬಳಸಿಕೊಳ್ಳಲಿಕ್ಕಿಲ್ಲ. ಅದಕ್ಕಾದರೂ ಶರಪೋವಾ ಕೆಲವು ಟೆನಿಸ್ ಟೂರ್ನಿ ಗೆಲ್ಲಬೇಕಾಗುತ್ತದೆ. 29 ವರ್ಷದ ಶರಪೋವಾ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಇದು. ಆಕೆ ಅಂಕಣದೊಳಗಿನ ಅತ್ಯುತ್ತಮ ಅಥ್ಲೀಟ್ ಏನಲ್ಲ. ಮುಂದೆ ಏನಾದೀತೋ? ಕೌಂಟ್‌ಡೌನ್ ಆರಂಭಿಸೋಣ…
ಮಾ.ವೆಂ.ಸ.ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.