ಮೇಲುಕೋಟೆಯ ಚೆಲುವ ನಾರಾಯಣ
Team Udayavani, Jan 13, 2018, 2:43 PM IST
ಮೇಲುಕೋಟೆಯ ಪ್ರಮುಖ ಆಕರ್ಷಣೆಯೆಂದರೆ ವೈರಮುಡಿ ಉತ್ಸವ. ಆ ಸಂದರ್ಭದಲ್ಲಿ ಚೆಲುವನಾರಾಯಣ ಸ್ವಾಮಿಗೆ ರತ್ನ ಖಚಿತ ಕಿರೀಟ ತೊಡಿಸಿ ಮೇಲುಕೋಟೆಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ಉತ್ಸವವನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ವೈಷ್ಣವರ ಪುಣ್ಯ ಕ್ಷೇತ್ರವೇ ಮೇಲುಕೋಟೆ. ದಕ್ಷಿಣ ಭಾರತದ 108 ದಿವ್ಯ ವೈಷ್ಣವ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿರುವ ಏಕೈಕ ಕ್ಷೇತ್ರವೂ ಆಗಿದೆ. ಇದಲ್ಲದೇ ದಕ್ಷಿಣದ ನಾಲ್ಕು ಪ್ರಸಿದ್ಧ ವೈಷ್ಣವ ಕ್ಷೇತ್ರಗಳಲ್ಲಿ ಮೇಲುಕೋಟೆಯು ಒಂದು. ಉಳಿದವು ಕಂಚಿ, ತಿರುಪತಿ ಹಾಗೂ ಶ್ರೀರಂಗ ಕ್ಷೇತ್ರಗಳು.
ಈ ಹಿಂದೆ ಮೇಲುಕೋಟೆಗೆ ನಾರಾಯಣಾದ್ರಿ, ವೇದಾದ್ರಿ, ಯಾದಾದ್ರಿ, ಯದುಗಿರಿ ಅಂತೆಲ್ಲಾ ಕರೆಯಲಾಗುತ್ತಿತ್ತು. ಇನ್ನು ಶಾಸನಗಳಲ್ಲಿ ದಕ್ಷಿಣ ಬದರಿಕಾಶ್ರಮ, ವೈಕುಂಠವರ್ಧನ ಕ್ಷೇತ್ರ, ತಿರುನಾರಾಯಣಪುರ, ಯದುಗಿರಿ ಎಂದೂ ಕೂಡ ಕರೆಯಲಾಗುತ್ತಿತ್ತು ಎನ್ನುತ್ತದೆ ಇತಿಹಾಸ. ಹಾಗೇ ವೈಷ್ಣವ ಧರ್ಮ ಸ್ಥಾಪಿಸಿದ ಶ್ರೀ ರಾಮಾನುಜಾಚಾರ್ಯರು, ಮೇಲುಕೋಟೆಗೆ ಬಂದು ಸುಮಾರು 15 ವರ್ಷಗಳ ಕಾಲ ಇಲ್ಲಿಯೇ ನೆಲೆಸಿ ವೈಷ್ಣವ ಧರ್ಮವನ್ನು ಪ್ರಚಾರಪಡಿಸಿದರೆಂದು ಅನೇಕ ಗ್ರಂಥಗಳಲ್ಲಿ ಉಲ್ಲೇಖವಿದೆ.
ಶ್ರೀರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿದ್ದಾಗ ಒಂದು ದಿನ ಅವರ ಕನಸಿನಲ್ಲಿ ಶ್ರೀಚೆಲುವನಾರಾಯಣಸ್ವಾಮಿ ವಿಗ್ರಹವು ಭೂಮಿಯಲ್ಲಿ ಅಡಗಿರುವಂತೆ ಗೋಚರಿಸಿತಂತೆ. ನಂತರ ಅವರು ಆ ಸ್ಥಳವನ್ನು ಶೋಧಿಸಿ ವಿಗ್ರಹವನ್ನು ಹೊರತೆಗೆದು ಇಲ್ಲಿಯೇ ಪ್ರತಿಷ್ಠಾಪಿಸಿ, ಅದಕ್ಕೆ ಒಂದು ಗುಡಿಯನ್ನು ಕಟ್ಟಿಸಿ ನಿತ್ಯ ಪೂಜಾಧಿಗಳು ನೆರವೇರಲು ವ್ಯವಸ್ಥೆ ಮಾಡಿದರು ಎನ್ನುತ್ತದೆ ಇಲ್ಲಿನ ಸ್ಥಳ ಪುರಾಣಗಳು.
ಈ ದೇವಾಲಯ ಸುಮಾರು 200 ಅಡಿ ಚೌಕಾಕಾರದ ಬೃಹತ್ ಕಟ್ಟಡ ಹೊಂದಿದ್ದು, ಹೊಯ್ಸಳರ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆ. ಮೂಲ ದೇವಾಲಯವನ್ನು ವಿಜಯನಗರ, ಪಾಳೆಗಾರ, ಒಡೆಯರ ಕಾಲದಲ್ಲಿ ಬಹಳಷ್ಟು ವಿಸ್ತರಿಸಲಾಗಿದೆ. ಈ ದೇವಾಲಯದ ಸುತ್ತಲೂ ಸುಂದರವಾದ ಕೈಸಾಲೆ ಇದೆ. ಗರ್ಭಗೃಹ, ಅಂತರಾಳ, ನವರಂಗ, ಬೃಹತ್ ಮುಖಮಂಟಪಗಳನ್ನು ಹೊಂದಿದೆ. ಪೂರ್ವಾಭಿ ಮುಖವಾಗಿರುವ ಗರ್ಭಗುಡಿಯಲ್ಲಿ ಸುಮಾರು 6 ಅಡಿ ಎತ್ತರದ ಚೆಲುವನಾರಾಯಣಸ್ವಾಮಿಯ ವಿಗ್ರಹವಿದೆ. ಚಕ್ರ,ಶಂಖ, ಗದಾ, ಅಭಯಹಸ್ತಧಾರಿಯಾದ ಶ್ರೀ ಚೆಲುವ ನಾರಾಯಣಸ್ವಾಮಿಯನ್ನು ನೋಡುವುದೇ ಒಂದು ಭಾಗ್ಯ. ಇಲ್ಲಿರುವ ಉತ್ಸವಮೂರ್ತಿಗೆ ಶೆಲ್ವಪಿಳ್ಳೆ ಎಂದು ಕರೆಯಲಾಗುತ್ತದೆ. ರಾಮಾನುಜರು ದೆಹಲಿಯ ಸುಲ್ತಾನನ ಮಗಳ ಬಳಿ ಇದ್ದ ವಿಗ್ರಹವನ್ನು ತರಲು ಹೋಗಿದ್ದರಂತೆ. ಆತನ ಮನವೊಲಿಸಿ ಅದನ್ನು ಪಡೆದು ತಮ್ಮ ತೊಡೆಯ ಮೇಲೆ ಕೂಡಿಸಿಕೊಂಡು ಪ್ರೀತಿಯಿಂದ ನನ್ನ ಶೆಲ್ವಪಿಳ್ಳೆ ಎಂದು ಮುದ್ದಾಡಿದರಂತೆ. ಅಂದಿನಿಂದ ಇಲ್ಲಿರುವ ಉತ್ಸವಮೂರ್ತಿಗೆ ಶೆಲ್ವಪಿಳ್ಳೆ ಎಂದು ಕರೆಯಲಾಗುತ್ತದೆ. ಅವರು ವಿಗ್ರಹ ಪಡೆದು ಮರಳಿ ಬಂದಾಗ ಚೆಲುವನಾರಾಯಣನ ವಿಗ್ರಹವನ್ನು ಅತಿಯಾಗಿ ಹಚ್ಚಿಕೊಂಡಿದ್ದ ಸುಲ್ತಾನನ ಮಗಳು ಸಹ ವಿಗ್ರಹವನ್ನು ಹಿಂಬಾಲಿಸಿ ಮೇಲುಕೋಟೆಗೆ ಬಂದು ಚೆಲುವನಾರಾಯಣನ ಪಾದದಲ್ಲಿ ಐಕ್ಯಳಾದಳೆಂದು ಹೇಳುತ್ತದೆ ಇತಿಹಾಸ. ಈಕೆಗೆ ಇಲ್ಲಿ ಒಂದು ಗುಡಿಯನ್ನು ಸಹ ನಿರ್ಮಿಸಲಾಗಿದೆ.
ಇನ್ನು ಮೇಲುಕೋಟೆಯ ಪ್ರಮುಖ ಆಕರ್ಷಣೆಯೆಂದರೆ ವೈರಮುಡಿ ಉತ್ಸವ. ಆ ಸಂದರ್ಭದಲ್ಲಿ ಚೆಲುವನಾರಾಯಣನಿಗೆ ರತ°ಖಚಿತ ಕಿರೀಟ ತೊಡಿಸಲಾಗುತ್ತದೆ. ಈ ಉತ್ಸವವನ್ನು ವೀಕ್ಷಿಸಲು ದೇಶ ವಿದೇಶದಿಂದ ಲಕ್ಷಾಂತರ ಭಕ್ತರು ಆಗಮಿಸಿ ಚೆಲುವನಾರಾಯಣನ ದರ್ಶನ ಪಡೆದು ಪುನೀತರಾಗುತ್ತಾರೆ.
ತಲುಪುವ ಮಾರ್ಗ : ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಿಂದ ಸುಮಾರು 30 ಕಿ.ುà ಅಂತರದಲ್ಲಿರುವ ಮೇಲುಕೋಟೆಗೆ ತಲುಪಲು ಸಾಕಷ್ಟು ಸಾರಿಗೆ ಬಸ್, ಕ್ಯಾಬ್‌ಗಳಿವೆ.
ಆಶಾ ಎಸ್.ಕುಲಕರ್ಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Max movie review: ಮಾಸ್ ಮನಸುಗಳಿಗೆ ʼಮ್ಯಾಕ್ಸ್ʼ ಅಭಿಷೇಕ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.