ಮಹಿಳಾ ಕ್ರಿಕೆಟ್‌ನ ಮಿನುಗು ತಾರೆ ಮಿಥಾಲಿ
Team Udayavani, Oct 6, 2018, 1:05 AM IST
ಮಹಿಳಾ ಕ್ರಿಕೆಟ್‌ನಲ್ಲಿ ಇದುವರೆಗೂ ಅನೇಕ ದಾಖಲೆಗಳನ್ನು ಮಾಡಿ ವಿಶ್ವದ ಗಮನ ಸೆಳೆದವರು ಮಿಥಾಲಿರಾಜ್. ತಂಡ ಆಪತ್ಕಾಲದಲ್ಲಿದ್ದ ಸಂದರ್ಭದಲ್ಲೆಲ್ಲಾ ನೆಲಕಚ್ಚಿ ಆಡಿ ಗೆಲ್ಲಿಸಿರುವ ಮಿಥಾಲಿ ರಾಜ್ ಭಾರತ ಕ್ರಿಕೆಟ್ ತಂಡ ಕಂಡ ಅಪರೂಪದ ಆಟಗಾರ್ತಿ.
35 ವರ್ಷದ ಮಿಥಾಲಿ ರಾಜ್, ಅತೀ ಹೆಚ್ಚು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ ಮಹಿಳಾ ಕ್ರಿಕೆಟರ್. ಟಿ20 ಕ್ರಿಕೆಟಿನಲ್ಲಿ 2 ಸಾವಿರ ರನ್ ಪೇರಿಸುವುದರ ಮೂಲಕ ಹೊಸ ದಾಖಲೆ, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ವುಮೆನ್, ಅತಿ ಹೆಚ್ಚು ಏಕದಿನ ಪಂದ್ಯದಲ್ಲಿ ನಾಯಕತ್ವ ನಿಭಾಹಿಸಿದ ಹೆಗ್ಗಳಿಕೆ ಹೀಗೆ ಸಾಲು ಸಾಲು ದಾಖಲೆಗಳು ಈಕೆಯ ಹೆಸರಿನಲ್ಲಿವೆ. ನಾಯಕತ್ವ ನಿರ್ವಹಣೆಯ ಜತೆ ಭಾರತ ತಂಡದ ಪ್ರದರ್ಶನವನ್ನೂ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋದ ಖ್ಯಾತಿ ಇವರದು. ಬಲಾಡ್ಯ ತಂಡಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹೀಗೆ ಅನೇಕ ತಂಡಗಳ ವಿರುದ್ಧ ಗೆದ್ದದ್ದು ಮಿಥಾಲಿ ಹೆಸರಿನಲ್ಲಿ ಟೀಂನ ಹೆಚ್ಚುಗಾರಿಕೆ.
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್
ಮಿಥಾಲಿ, ಒಟ್ಟು 197 ಏಕದಿನ ಪಂದ್ಯಗಳನ್ನಾಡಿದ್ದು ಶೇ.51ರ ಸರಾಸರಿಯಲ್ಲಿ 6550 ರನ್ ಬಾರಿಸಿ, ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಮೊದಲ ಆಟಗಾರ್ತಿ ಎಂಬ ದಾಖಲೆ ಹೊಂದಿದ್ದಾರೆ. ಇದರಲ್ಲಿ 7 ಶತಕ ಹಾಗೂ 51 ಅರ್ಧ ಶತಕ ಸೇರಿದೆ. 125 ರನ್ ಅವರ ಗರಿಷ್ಠ ಸಾಧನೆಯಾಗಿದೆ. ಇಂಗ್ಲೆಂಡ್‌ನ ಚಾರ್ಲೊಟ್ ಎಡ್ವರ್ಡ್ 191 ಪಂದ್ಯಗಳಿಂದ 5992 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟೇಲಿಯಾದ ಬಿ.ಕ್ಲಾರ್ಕ್ 118 ಪಂದ್ಯಗಳಿಂದ 4884 ರನ್‌ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ. 82 ಟಿ20 ಪಂದ್ಯಗಳನ್ನು ಆಡಿರುವ ಮಿಥಾಲಿ, ಶೇ.51ರ ಸರಾಸರಿಯಲ್ಲಿ 2176 ರನ್ ಸಿಡಿಸಿದ್ದು, ಅದರಲ್ಲಿ 15 ಅರ್ಧ ಶತಕಗಳಿವೆ.
ಅತಿ ಹೆಚ್ಚು ಪಂದ್ಯದ ನಾಯಕತ್ವ ವಹಿಸಿದ ಮಿಥಾಲಿ
ಮಹಿಳಾ ಕ್ರಿಕೆಟ್‌ನ ಸಚಿನ್ ಮಿಥಾಲಿ ರಾಜ್, ಭಾರತ ತಂಡದ ಪರ ಒಟ್ಟು 118 ಪಂದ್ಯಗಳಿಗೆ ಸಾರಥ್ಯ ವಹಿಸಿದ್ದಾರೆ. ಆ ಮೂಲಕ ಮಿಥಾಲಿ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ದಂತಕಥೆ ಚಾರ್ಲೋಟ್ ಎಡ್ವರ್ಡ್ಸ್ ಅವರನ್ನು ಹಿಂದಿಕ್ಕಿ¨ªಾರೆ. ಚಾರ್ಲೋಟ್ ಎಡ್ವರ್ಡ್ಸ್ ಒಟ್ಟು 117 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ಸಾರಥ್ಯ ವಹಿಸಿದ್ದು, ಈ ವರೆಗಿನ ದಾಖಲೆಯಾಗಿತ್ತು. ಉಳಿದಂತೆ ಆಸಿಸ್ ಏಕದಿನ ನಾಯಕ ಬೆಲಿಂಡಾ ಕ್ಲಾರ್ಕ್ 101 ಪಂದ್ಯಗಳಲ್ಲಿ ತಮ್ಮ ತಂಡ ಮುನ್ನಡೆಸಿ 3ನೇ ಸ್ಥಾನದಲ್ಲಿದ್ದು, 76 ಪಂದ್ಯಗಳಿಗೆ ಸಾರಥ್ಯವಹಿಸುವ ಮೂಲಕ ನ್ಯೂಜಿಲೆಂಡ್‌ನ ಸೂಜಿ ಬೇಟ್ಸ್ 4ನೇ ಸ್ಥಾನದಲ್ಲಿ¨ªಾರೆ.
ಪಾದಾರ್ಪಣೆ ಪಂದ್ಯದಲ್ಲಿಯೇ ಶತಕ
ಮಿಥಾಲಿ ರಾಜ್ ಅಂತಾರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದು, 1999ರಲ್ಲಿ ಐರ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ವಿಕೆಟ್‌ಗೆ ಆರ್.ಗಾಂಧಿ ಮತ್ತು ಮಿಥಾಲಿ 50 ಓವರ್ ಪೂರ್ತಿ ಕ್ರಿಸ್‌ನಲ್ಲಿ ನಿಂತು 258 ರನ್ ಜತೆಯಾಟವಾಡಿದರು. ಇದರಲ್ಲಿ ಮಿಥಾಲಿ ಕೊಡುಗೆ 114 ರನ್. ಹೀಗೆ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಮಿಥಾಲಿ ನಂತರ ತಿರುಗಿ ನೋಡಲಿಲ್ಲ.
ಸತತ 7 ಅರ್ಧ ಶತಕದ ಸಾಧನೆ
ಮಹಿಳೆಯರ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸತತ 7 ಅರ್ಧಶತಕ ದಾಖಲಿಸಿ ಮಿಥಾಲಿ ವಿಶ್ವ ದಾಖಲೆ ನಿರ್ಮಿಸಿ¨ªಾರೆ. ಅದೇ ರೀತಿ ಒಟ್ಟು 51 ಅರ್ಧಶತಕ ದಾಖಲಿಸುವ ಮೂಲಕ ಏಕದಿನದಲ್ಲಿ ಅತೀ ಹೆಚ್ಚು ಅರ್ಧಶತಕ ದಾಖಲಿಸಿದ ಆಟಗಾರ್ತಿ ಎಂಬ ದಾಖಲೆಯೂ ಮಿಥಾಲಿ ಹೆಸರಲ್ಲಿದೆ. ಇದಕ್ಕೂ ಮುನ್ನ ಇಂಗ್ಲೆಂಡ್‌ನ ಚಾರ್ಲೋಟ್ ಎಡ್ವರ್ಡ್ 46 ಅರ್ಧಶತಕ ದಾಖಲಿಸಿರುವುದೇ ಗರಿಷ್ಠವಾಗಿತ್ತು.
ಫೋರ್ಬ್ಸ್ ಪಟ್ಟಿಯಲ್ಲಿ 12ನೇ ಸ್ಥಾನ
ಮಿಥಾಲಿ ರಾಜ್ ಕ್ರಿಕೆಟ್ ನಲ್ಲಿ ಮಾಡಿರುವ ಸಾಧನೆ ಗುರುತಿಸಿರುವ ಫೋಬ್ಸ್ì ಸಂಸ್ಥೆ ವಿಶ್ವದ ಅಗ್ರ 25 ಕ್ರೀಡಾ ಕ್ಷೇತ್ರದ ಮಹಿಳೆಯರ ಪಟ್ಟಿಯಲ್ಲಿ 12ನೇ ಸ್ಥಾನ ನೀಡಿದೆ. ಮಿಥಾಲಿ, ಕಳೆದ ವಿಶ್ವಕಪ್‌ನಲ್ಲಿ ತಂಡವನ್ನು ಫೈನಲ್‌ವರೆಗೆ ಕೊಂಡೊಯ್ದಿದ್ದರು. ಅಲ್ಲದೇ ದಕ್ಷಿಣ ಆಫ್ರಿಕಾದಲ್ಲಿ ಐತಿಹಾಸಿಕ ಸರಣಿ ಗೆದ್ದು ಸಾಧನೆ ಮಾಡಿದ್ದರು.
ಧನಂಜಯ ಆರ್.ಮಧು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.