ಟುಕ್, ಟುಕ್ ಸದ್ದನು ಕೇಳಿದಿರಾ? ಬೆಟ್ಟದಗುಟುರ ನೋಡಿದಿರಾ?
Team Udayavani, Jun 17, 2017, 12:14 PM IST
ದೊಡ್ಡ ಮರಗಳಿರುವ ಪರ್ವತ ಪ್ರದೇಶದಲ್ಲಿ ಇರುವುದರಿಂದ ಇದರ ಇರುನೆಲೆಯನ್ನು ಆದರಿಸಿ ಇದಕ್ಕೆ ಅನ್ವರ್ಥಕವಾಗಿ ಬೆಟ್ಟದಗುಟುರ ಎಂಬ ಹೆಸರು ಬಂದಿದೆ. ಇದು ಮೈನಾ ಹಕ್ಕಿಗಿಂತ ಸ್ವಲ್ಪದೊಡ್ಡದು. ಈ ಗುಂಪಿಗೆ ಸೇರಿದ ಬಿಳಿ ಗೆರೆಗಳಿರುವ ರೇಖೆ ಕುತ್ತಿಗೆಯ ಗುಟುರ, ಕಂದು ತಲೆಯ ಗುಟುರ, ನೀಲಿ ಕುತ್ತಿಗೆಯ ಗುಟುರ, ಬಿಳಿ ಕೆನ್ನಯ ಗುಟುರ, ದೊಡ್ಡ ಗುಟುರದ ಗುಂಪಿನಲ್ಲಿ ಇದು ಸ್ವಲ್ಪದೊಡ್ಡ ಹಕ್ಕಿ ಎಂದರೆ ತಪ್ಪಾಗಲಾರದು. 32-33 ಸೆಂ.ಮೀ ದೊಡ್ಡದಾಗಿ ಇರುತ್ತದೆ. 200 ರಿಂದ 220 ಗ್ರಾಂ. ಭಾರಇರುತ್ತದೆ. ಬಹು ಎತ್ತರದ ಗುಡ್ಡಗಾಡು, ಹಿಮಾಲಯ ಪರ್ವತ ಇದಕ್ಕೆ ತುಂಬಾ ಪ್ರಿಯ. ಅಲ್ಲಿರುವ ಎತ್ತರವಾದ ಮರ, ಸ್ವಲ್ಪ ಮೆತ್ತನೆಯ ಮರದ ದಿನ್ನೆ ಕೊರೆದು ಅಲ್ಲಿ ತನ್ನ ಗೂಡನ್ನು ನಿರ್ಮಿಸುತ್ತದೆ. ಕೆಲವೊಮ್ಮೆ ಮರ ಕುಟುಕಗಳು ಕೊರೆದ ಮರದ ಹೊಟ್ಟೆಯನ್ನೂ ವಾಸಸ್ಥಾನ ಮಡಿಕೊಂಡು ಸಂಸಾರಮಾಡುತ್ತದೆ.
ಕೂಗಿನ ಮೂಲಕವೇ ತನ್ನ ಇರುನೆಲೆಯ ವ್ಯಾಪ್ತಿಯನ್ನು, ಬೆದರಿಕೆಯನ್ನು ಹಾಕುತ್ತದೆ. ಇಂತಹ ಕೂಗು ತನ್ನ ಸಂಗಾತಿಯನ್ನು ಅರಸಲು, ಕರೆಯಲು ಇಲ್ಲವೇ ಗೂಡು ನಿರ್ಮಿಸಲು…ಹೀಗೆ ಭಿನ್ನದನಿಯನ್ನು ತೆಗೆಯುವ ನೈಪುಣ್ಯ ಈ ಬೆಟ್ಟದಗುಟುರ ಹಕ್ಕಿಗೆ ಇದೆ. ದಟ್ಟ ಕಾಡಿನ ದೊಡ್ಡ ಮರಗಳ ನಡುವೆಯೇ ಇರುವುದರಿಂದ ಇದು ಕಾಣುವುದು ಅಪರೂಪ.
ಇದು, ದಪ್ಪತಲೆ, ಕಂದು ಕಪ್ಪಿನ ಕುಳ್ಳ ಕುತ್ತಿಗೆಯಿಂದ ಕೂಡಿದೆ. ಈ ಹಕ್ಕಿಗೆ, ದೊಡ್ಡ ತಿಳಿ ಹಳದಿ ಚುಂಚಿದೆ. ಅದರ ಮೇಲಾºಗದಲ್ಲಿ ಕಪ್ಪು ಬಣ್ಣದ ಗೆರೆ ಇದೆ. ಹಕ್ಕಿಗೆ ಹೆಚ್ಚು
ವಯಸ್ಸಾದಂತೆ ಈಗೆರೆಯೂ ದೊಡ್ಡದಾಗುವುದೋ ಹೇಗೆ ಎಂಬುದನ್ನು ಅಧ್ಯಯನದಿಂದ ತಿಳಿಯಬೇಕಾಗಿದೆ. ಇತರ ಬಾರ್ಬೆಟ್ ಅಥವಾ ಗುಟುರಗಳಿಗೆ ಹೋಲಿಸಿದರೆ ಇದರ ಕೂಗೂ ಭಿನ್ನವಾಗಿದೆ. ಕಂದುಕಪ್ಪು ಬಣ್ಣದ ತಲೆ ಇದರ ಕೆಳಗೆ ಸ್ವಲ್ಪ ಹಳದಿ ಕುತ್ತಿಗೆ ಪಟ್ಟಿ, ಬಾಲದ ಬುಡದಲ್ಲಿ ಅಂದರೆ ರೆಂಪ್‌ನಲ್ಲಿ ಇರುವ ಕೆಂಪುಬಣ್ಣ ಇದನ್ನು ಗುರುತಿಸಲು ಸಹಕಾರಿ. ಬೆಟ್ಟದ ಗುಟುರವನ್ನು ಭಾರತದ ಪರ್ವತದ ಹಕ್ಕಿ ಅಂತಲೂ ಕರೆಯುತ್ತಾರೆ.
ಸಾಮಾನ್ಯವಾಗಿ ವಲಸೆ ಹೋಗುವುದು ಕಡಿಮೆ. ಇರುವ ಜಾಗದಲ್ಲೇ ಇರುತ್ತದೆ. ಕೆಲವೊಮ್ಮೆ ಆಹಾರದ ಅಭಾವ, ಇಲ್ಲವೇ ಇರುನೆಲೆಯಲ್ಲಿ ತೊಂದರೆಯಾದರೆ ಮಾತ್ರ ಬೇರೆಡೆ ಹೋಗುವುದು. ಇತರ ಹಕ್ಕಿಗಳಂತೆ ಇದು ಪ್ರತಿ ವರ್ಷ ಅದೇ ಸಮಯದಲ್ಲಿ ವಲಸೆ ಹೋಗುವುದು ಕಡಿಮೆ. ಹಾಗಾಗಿ ಇದು ವಲಸೆ ಹಕ್ಕಿಯಲ್ಲ. ಹೊಟ್ಟೆಯ ಕೆಳಭಾಗದಲ್ಲಿ ಕಂದು ಬಣ್ಣದಗೆರೆ ಸೂಕ್ಷ್ಮವಾಗಿ ಗಮನಿಸಿದರೆ ಕಾಣುತ್ತದೆ. ನಮ್ಮ ರಾಜ್ಯದಲ್ಲಿ ಆಲ, ಬಸರಿ,
ಅತ್ತಿ ಹಣ್ಣು ಬಿಟ್ಟಾಗ ಅಲ್ಲೆ ಮರದಲ್ಲಿ ಕುಳಿತು ಟುಕ್, ಟುಕ್‌ಎಂದು ಕೂಗುತ್ತದೆ ಕೆಂಪು ಎದೆಗುಟರ. ಊರ ಮಧ್ಯೆ ಇಲ್ಲವೇ ಕಾಡಿನ ಮರಗಳಲ್ಲಿ ಕಾಣುವುದೂ ಕೂಡ ಈ ಗುಟುರದ ಪ್ರಬೇಧ.
ಬೆಟ್ಟದ ಬಾರ್ಬೆಟ್ ಒಂದು ನಿಮಿಷದಲ್ಲಿ ಸುಮಾರು 30 ಸಲ ಟುಕ್, ಟುಕ್ ಎಂದು ಕೂಗುವುದು. ಇದು ಒಂದೇ ರಾಗದಲ್ಲಿ ಮತ್ತು ಶೈಲಿಯಲ್ಲಿರುತ್ತದೆ. ಹೀಗೆ ಕೂಗುವಾಗ ಕೊಕ್ಕು ಮುಚ್ಚಿರುವುದು ವಿಶೇಷ. ಚುಂಚು ಮುಚ್ಚಿ, ಕುತ್ತಿಗೆಯನ್ನು ಉಬ್ಬಿಸಿ ಸ್ವರ ಹೊರಡಿಸುತ್ತದೆ. ಇದು ಹೇಗೆ ಎನ್ನುವುದರ ಬಗ್ಗೆ ಮಾಹಿತಿ ಕಲೆ ಹಾಕ ಬೇಕಾಗಿದೆ. ಡಿಸೆಂಬರ್-ಜನವರಿ ಇದು ಮರಿಮಾಡುವ ಸಮಯ. ಈ ಸಂದರ್ಭದಲ್ಲಿ ಇದು ಕೂಗುತ್ತಲೇ ಇರುತ್ತದೆ. ಜನವರಿ-ಏಪ್ರಿಲ್ ಅವಧಿಯಲ್ಲಿ ಮರಗಳ ಟೊಂಗೆ, ಡೊಂಗರಗಳಲ್ಲಿ ಗೂಡು ಮಾಡಿಕೊಂಡು ಅದರಲ್ಲಿ 3-4 ಬಿಳಿ
ತತ್ತಿ ಇಟ್ಟು ಕಾವು ಕೊಟ್ಟು ಮರಿಮಾಡುತ್ತದೆ. ಗಂಡು -ಹೆಣ್ಣು ಸೇರಿ ಮರಿಗಳ ರಕ್ಷಣೆ ಮಾಡುತ್ತದೆ. ಗುಟುಕು ನೀಡುತ್ತವೆ. ಹಾರಲು ಕಲಿಸುತ್ತದೆ. ಮರಿ ಬಲಿತು ದೊಡ್ಡದಾಗಿ ಸ್ವತಂತ್ರವಾಗಿ ಬದುಕಲು ಬೇಕಾದ ತರಬೇತಿಯನ್ನು ತಂದೆತಾಯಿಯ ಜೊತೆಯಲ್ಲೆ ಕಲಿಯುತ್ತದೆ.
ಕಾಡಿನ ಅಳಿವು ,ದೊಡ್ಡ ಮರಗಳು ಕಡಿಮೆಯಾಗುತ್ತಿರುವುದರಿಂದ ಇದರ ಇರುನೆಲೆಗಳಿಗೆ ಸಂಚಕಾರ ಬಂದು, ಸಂಖ್ಯೆ ಕಡಿಮೆಯಾಗುತ್ತಿದೆ. ಈ ಸುಂದರ ಪಕ್ಷಿಯ ಉಳಿವಿಗಾಗಿ, ಕಾಡು ಬೆಳೆಸಿ, ಅಲ್ಲಿ ದೊಡ್ಡ ಮರಗಳನ್ನು ರಕ್ಷಿಸಬೇಕಾಗಿದೆ.
ಪಿ. ವಿ. ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.