ಎವರೆಸ್ಟ್‌ನಲ್ಲಿ ಕನ್ನಡದ ವಿಕ್ರಮ


Team Udayavani, Jun 23, 2018, 3:23 PM IST

ಇತ್ತೀಚೆಗೆ ಮೌಂಟ್‌ ಎವರೆಸ್ಟ್‌ ಹತ್ತಿ ಬಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನ ಹೊಸಹಳ್ಳಿ ವನ್ಯಜೀವಿ ವಲಯದ ಅರಣ್ಯರಕ್ಷಕ,ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ವಿಜಯಪುರ ಗ್ರಾಮದ ವಿಕ್ರಮ್‌ ಪರ್ವತಾರೋಹಣದ ಯಶೋಗಾಥೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. 

ಬೆಳಗಿನ ಜಾವ 4.30ಕ್ಕೆ 8848 ಮೀಟರ್‌ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರವನ್ನು ತಲುಪಿದಾಗ ಸೂರ್ಯೋದಯವಾಗುತ್ತಿತ್ತು. ಎತ್ತ ನೋಡಿದರೂ ಪರ್ವತ, ಶಿಖರದ ತುದಿಗಳೇ ಕಾಣುತ್ತಿವೆ. ಸ್ವರ್ಗ ಎಂದರೆ ಇದೇ ಏನೋ ಅನ್ನಿಸಿಬಿಡ್ತು. ಗುರಿ ಮುಟ್ಟುವವರೆಗೂ ಓಂ ನಮ: ಶಿವಾಯ, ಓಂ ನಮಃ ಶಿವಾಯ ಎಂದು ಮನಸ್ಸಿನಲ್ಲೇ ಗುನುಗಿಕೊಳ್ಳುತ್ತಿದ್ದೆ.

ಹಿಮಾಲಯ ಪರ್ವತ ಶ್ರೇಣಿಯಲ್ಲಿ ಬರುವ 8 ಸಾವಿರ ಮೀಟರ್‌ಗಿಂತ ಎತ್ತ ರದ 14 ಶಿಖರಗಳ ಪೈಕಿ ಒಂದು ಶಿಖರವನ್ನು ಯಶಸ್ವಿಯಾಗಿ ಹತ್ತಿ ಬಂದಿದ್ದು, ಇನ್ನುಳಿದ 13 ಶಿಖರಗಳನ್ನೂ ಏರಬೇಕೆಂಬ ಆಸೆ ಇದೆ. ಇಟಲಿಯ ರೆನಾಲ್ಡ್‌ ಮಿಷ ನರ್‌ ಸೇರಿದಂತೆ ಪ್ರಪಂಚದ ಸುಮಾರು 39 ಜನ ಪರ್ವತಾ ರೋಹಿಗಳು ಮಾತ್ರ ಈವರೆಗೆ ಹಿಮಾಲಯದ 14 ಪರ್ವತ ಶಿಖರಗಳನ್ನು ಹತ್ತಿದ್ದಾರೆ. ಇವ ರಲ್ಲಿ ಕರ್ನಾಟಕದವರು ಯಾರೊಬ್ಬರೂ ಇಲ್ಲ, ನಾನು ಈ 14 ಪೀಕ್‌ಗಳನ್ನು ಹತ್ತಿ ಕನ್ನಡ ಬಾವುಟ ಹಾರಿ ಸ ಬೇಕೆಂದಿದ್ದೇನೆ. ಮೌಂಟ್‌ ಎವರೆಸ್ಟ್‌ ಏರಲು ದುಡ್ಡು ಬೇಕಲ್ಲ? ಅದಕ್ಕೆ ಕನ್ಯಾಕುಮಾರಿಯಿಂದ ಮೌಂಟ್‌ ಎವ ರೆಸ್ಟ್‌ವರೆಗೆ ಓಡ ಬೇಕು ಅಂದುಕೊಂಡಿದ್ದೆ. ಆದರೆ, ಪುಣ್ಯಕ್ಕೆ ಅರಣ್ಯ ಇಲಾಖೆ ಸೇರಿ ದಂತೆ ಹಲವರು ಧನ ಸಹಾಯ ಮಾಡಿ ದ್ದ ರಿಂದ ಓಟದ ಸಾಹಸ ಮಾಡಲಿಲ್ಲ. ಕೆ-2, ಕಾಂಚ ನ ಜುಂಗಾ, ಧವಳ ಗಿರಿ, ಗೇಸರ್‌ ಬ್ರಂ 1 ಮತ್ತು 2, ಚೋಯು,ಮನಸ್ಸು,ನಂಗಾ ಪರ್ವತ್‌,ಬ್ರಾಡ್‌ ಪೀಕ್‌, ಶೀಶಾ ಪನ್‌, ಮಕಾಲು, ಲೋಥೆÕ, ಅನ್ನಪೂರ್ಣ ಮ್ಯಾಶಿಪ್‌ ಶಿಖರಗಳನ್ನು ಏರುವ ಗುರಿ ಹೊಂದಿದ್ದು,ಸೆಪ್ಟೆಂಬ ರ್‌-ಅಕ್ಟೋಬರ್‌ ತಿಂಗಳಿನಲ್ಲಿ ಟಿಬೆಟಿನ ಚೋಯು ಶಿಖರವನ್ನು ಏರಲು ಆಯ್ಕೆ ಮಾಡಿ ಕೊಂಡಿದ್ದೇನೆ.

ಸ್ಪೂರ್ತಿ ಇಲ್ಲಿಂದ

2011ರಲ್ಲಿ ಪಿಯುಸಿಯಲ್ಲಿದ್ದಾಗ ನಮಗೆ ಕನ್ನಡ ಉಪನ್ಯಾಸಕರಾಗಿದ್ದ ಷಡ ಕ್ಷರಿ ಮೇಷ್ಟ್ರು ಪಠ್ಯಕ್ರಮಕ್ಕಿಂತ ಹೊರಗಿನ ವಿಷಯಗಳನ್ನು ಹೆಚ್ಚಾಗಿ ಬೋಧನೆ ಮಾಡು ತ್ತಿ ದ್ದರು. ಆಗಲೇ ಅವರ ಬಳಿ ಮೌಂಟ್‌ ಎವರೆಸ್ಟ್‌ ಏರುವ ಇಚ್ಚೆ ವ್ಯಕ್ತ ಪಡಿಸಿದೆ. ಮೌಂಟ್‌ ಎವರೆಸ್ಟ್‌ ಹತ್ತುತ್ತಾನಂತೆ ಹೋಗೋ ಬೇರೆ ಕೆಲಸ ಇದ್ದರೆ ನೋಡು ಎಂದು ಹೇಳಿದ್ದರು. ಕಾಲೇಜಿನಲ್ಲಿ ಆರು ಜನರ ಬ್ಯಾಡ್ಮಿಂಟನ್‌ ತಂಡವಿತ್ತು. ತಂಡದವರು ರಾಜ್ಯ ಮಟ್ಟದ ಚಾಂಪಿಯನ್ಸ್‌ ಆಗಿದ್ದರು. ತಂಡದಲ್ಲಿದ್ದ ಗಿರೀಶ, ಚನ್ನೇಶ ನನ್ನ ಸ್ನೇಹಿತರೇ ಆದರೂ ನನ್ನನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಇದು ನನ್ನಲ್ಲಿ ಏನಾದರೂ ಸಾಧನೆ ಮಾಡ ಬೇಕೆಂಬ ಛಲ ಹುಟ್ಟಿಸಿತು.

ಓದು ಮುಗಿದ ಮೇಲೆ ಧರ್ಮಸ್ಥಳದ ಕೆಎಸ್ಸಾರ್ಟಿಸಿ ಬಸ್‌ ಡಿಪೋ ದಲ್ಲಿ 2ವರ್ಷಗಳ ಕಾಲ ಭದ್ರತಾ ರಕ್ಷಕನಾಗಿ ಕೆಲಸ ಮಾಡಿದೆ, ನಂತರ 2015ರಲ್ಲಿ ಅರಣ್ಯ ಇಲಾಖೆ ಸೇರಿದೆ, 2016ರಲ್ಲಿ ಕುಂದಾ ಪುರ ವಿಭಾ ಗದ ಡಿಸಿ ಎಫ್ ಪ್ರಭಾಕರನ್‌ ಸರ್‌ ಅವರು ಮೌಂಟ್‌ ಎವ ರೆಸ್ಟ್‌ ಏರಿ ಬಂದ ನಂತರ ನನ್ನಲ್ಲಿಯೂ ಮೌಂಟ್‌ ಎವ ರೆಸ್ಟ್‌ ಏರುವ ಆಸೆ ಪ್ರಬಲವಾಯಿತು. ಅದಕ್ಕಾಗಿ ಅಗತ್ಯವಾದ ಬೇಸಿಕ್‌ ಕೋರ್ಸ್‌, ಅಡ್ವಾನ್ಸ್‌ ಕೋರ್ಸ್‌ ಎರಡರಲ್ಲೂ ಎ ಗ್ರೇಡ್‌ ನೊಂದಿಗೆ ಆಯ್ಕೆಯಾದೆ…

ಎವರೆಸ್ಟ್‌ ಏರುವ ಮುಂಚೆ ಹೈಕಿಂಗ್‌ ಮಾಡಿ ಸು ತ್ತಾರೆ. ನಾವು ಚೀನಾದ ನಾರ್ತ್‌ ರಿಟ್ಜ್ ಕಡೆ ಯಿಂದ ಕಠ್ಮಂಡು, ಲಾಸಾ, ಗ್ಯಾಂಗ್‌ ಸೇ ಮೂಲ ಕ ಎವ ರೆಸ್ಟ್‌ ಏರಲು ಮುಂದಾದೆವು. ಲಾಸಾ, ಭೂಮಟ್ಟದಿಂದ 3450 ಮೀಟರ್‌ ಎತ್ತ ರ ವಿದೆ, ನಂತರ 4 ಸಾವಿರ ಮೀಟರ್‌ ಎತ್ತ ರದ ಕ್ಸಿಗಾಜೆ, 4100 ಮೀಟರ್‌ ಎತ್ತರದ ಸಿಗಸ್ತೆ, 5500 ಮೀಟರ್‌ ಎತ್ತ ರದ ಟಿಂಗ್ರಿ ಮೂಲಕ ಎವರೆಸ್ಟ್‌ ಶಿಖ ರ ದತ್ತ ಹೊರ ಟೆವು. 5150 ಮೀಟರ್‌ ನಲ್ಲಿ ಬೇಸ್‌ ಕ್ಯಾಂಪ್‌ ಆರಂಭವಾಗುತ್ತದೆ. ಟಿಬೆ ಟಿನ ಕೊಮೋ ಲುಂಗ್ಮಾ ರಾಷ್ಟ್ರೀಯ ಉದ್ಯಾ ನ ವ ನದ ಕಡೆ ಯಿಂದಲೇ ಮೌಂಟ್‌ ಎವರೆಸ್ಟ್‌ ಕಾಣು ತ್ತದೆ. ಬೇಸ್‌ ಕ್ಯಾಂಪ್‌ ನಿಂದ ಶೆರ್ಫಾಗಳು ಗ್ಯಾಸ್‌ ಸಿಲಿಂಡರ್‌ಗಳನ್ನೆಲ್ಲಾ ಹೊತ್ತು ತರುತ್ತಾರೆ.

ನಾರ್ತ್‌ ಕೋಲಲ್ಲಿ ಕ್ಯಾಂಪ್‌-1ನಿಂದ ದಾಹ ವಾದಾಗ ಮಂಜುಗಡ್ಡೆ ಕರಗಿಸಿ ನೀರು ಕುಡಿಯುತ್ತಿದ್ದೆವು, ಬಿಸಿ ನೀರು, ಸೂಪ್‌, ಬಿಸ್ಕೆಟ್‌, ಚಾಕೊ ಲೇಟ್‌ ಇವೇ ನಮ್ಮ ಆಹಾರ. ನನಗೆ ಬೇಸ್‌ ಕ್ಯಾಂಪ್‌ನಲ್ಲೇ ರಕ್ತದ ಒತ್ತಡ ಏರಿ ಬಿಡುತ್ತಿತ್ತು. ಕ್ಯಾಂಪ್‌-1ನಿಂದ ಸಮ್ಮಿತ್‌ವ ರೆಗೆ ಮೈನಸ್‌ 35 ರಿಂದ 40 ಡಿಗ್ರಿ ಸೆಲ್ಸಿಯಸ್‌ ಇರುತ್ತೆ ಉಷ್ಣಾಂಶ, ಜೊತೆಗೆ ಕ್ಷಣ ಕ್ಷಣಕ್ಕೂ ವಾತಾವರಣ ಬದಲಾಗುತ್ತಿರುತ್ತೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿ ಸೇರಿ ದಂತೆ ಭಾರತದ 25 ಮಂದಿ ಮೌಂಟ್‌ ಎವರೆಸ್ಟ್‌ ಏರಲು ಹೊರಟಿದ್ದೆವು. ಬೇಸ್‌ ಕ್ಯಾಂಪ್‌ವರೆಗೆ ವಾಹನ ಸೌಲ ಭ್ಯ ವಿದೆ. ಅಲ್ಲಿಂದ ಮುಂದೆ ಹಿಮ, ಕಲ್ಲುಬಂಡೆಗಳಿಂದ ಆವೃತ್ತವಾಗಿರುವ ಪ್ರದೇಶದಲ್ಲಿ ಮುನ್ನಡೆಯಬೇಕು.

ಅಲ್ಲೇ ಇಬ್ಬರು ಆಮ್ಲಜನಕ ಸಮಸ್ಯೆ, ಹೈಜಿನ್‌ ಸಮಸ್ಯೆಯಿಂದ ವಾಪಸ್ಸಾದರು.ನಾವು ಬೇಸ್‌ ಕ್ಯಾಂಪ್‌ನಲ್ಲಿ ಒಂದು ದಿನ ವಿಶ್ರಾಂತಿ ಪಡೆದು, ಒಂದು ದಿನ ಹೈಕಿಂಗ್‌, ಒಂದು ದಿನ ಗ್ಲೆಶೇ ರಿಂಗ್‌ ಮಾಡಿ ದೆವು, ನಂತರ ನಾಲ್ಕು ದಿನ ಹೈಕಿಂಗ್‌ ಮಾಡಿದೆವು, ರಂಗೂ ಗ್ಲೆಶೇರ್‌ ಪಾಯಿಂಟ್‌, 5700 ಮೀಟರ್‌ ಎತ್ತ ರದ ಪ್ರದೇಶದ ಇಂಟೆ ರಿಮ್‌ ನಲ್ಲಿ ಒಂದು ದಿನ ವಾಸ್ತವ್ಯ ಮಾಡಿ ದೆವು. 6350 ಮೀಟರ್‌ ಎತ್ತ ರದ ಪ್ರದೇಶದಲ್ಲಿ ಅಡ್ವಾನ್ಸ್‌ ಬೇಸ್‌ ಕ್ಯಾಂಪ್‌ ಇದೆ, ಅಲ್ಲಿ ವ ರೆಗೆ ಸ್ನೋ ಬೂಟ್ಸ್‌, ಟ್ರಕ್ಕಿಂಗ್‌ ಶೂ ನಲ್ಲೇ ಹೋಗಬಹುದು.

ಇಲ್ಲಿಂದ ಮುಂದೆ ಕ್ರಾಂಪನ್‌ ಹಾಕಲೇಬೇಕು. ಅಲ್ಲಿಂದ ಒಂದೂವರೆ ಕಿ.ಮೀ ನಡಿಗೆ ಆದ ಮೇಲೆ ನಮ್ಮ ರಕ್ಷಣೆಗಾಗಿ ತುದಿಯವರೆಗೆ ಫಿಕ್ಸ್‌ ರೋಪ್‌ ಹಾಕಲಾಗಿರುತ್ತೆ. ಅಲ್ಲಿಂದ ನಾರ್ತ್‌ ಕೋಲ್‌ ಕ್ಯಾಂಪ್‌-1ನಲ್ಲಿ ಟೆಂಟ್‌ ಹಾಕಿ ಒಂದು ರಾತ್ರಿ ತಂಗಿದ್ದೆವು, ಮತ್ತೆ ವಾಪಸ್‌ ಬೇಸ್‌ ಕ್ಯಾಂಪ್‌ಗೆ ಬಂದೆವು, ಇಳಿಯೋದಿಕ್ಕೆ ಮೂರು ದಿವಸ ತೆಗೆ ದು ಕೊಳ್ತು. ಈ ಅವಧಿಯಲ್ಲಿ ದೈಹಿಕವಾಗಿ ಬಳಲಿ ಶಕ್ತಿ ಕುಂದುವುದರಿಂದ 2-3 ದಿನ ವಿಶ್ರಾಂತಿ ಪಡೆದು ನಂತರ ಇಂಟ ರಿಮ್‌, ಕ್ಯಾಂಪ್‌-2 ಮೂಲಕ 7600ಮೀಟರ್‌ ಎತ್ತರಕ್ಕೆ ಬಂದೆವು,ಆಮ್ಲಜನಕ ಸಮ ಸ್ಯೆಯಿಂದ ಇಲ್ಲಿಂದ ಕೆಲವರು ವಾಪಸ್ಸಾದರು, ಕಡೆಗೆ 25 ಜನರ ತಂಡದಲ್ಲಿ 8ಜನರು ಉಳಿದುಕೊಂಡೆವು,ಅದುವರೆಗೆ ನನಗೆ ಆಮ್ಲಜನಕ ಬೇಕೆನಿಸಿರಲಿಲ್ಲ. 8 ಸಾವಿರ ಮೀಟರ್‌ ಎತ್ತರವನ್ನು ಡೆತ್‌ ಝೋನ್‌ ಅನ್ನು ತ್ತಾರೆ. ಅಲ್ಲಿಂದ ಕ್ಯಾಂಪ್‌-3 8300 ಮೀಟರ್‌ ಎತ್ತರವಿದೆ. ಇಲ್ಲಿ ಆಮ್ಲಜನಕ ಸಿಲಿಂಡರ್‌ ಬಳಕೆ ಕಡ್ಡಾಯ. ಇಲ್ಲಿಗೆ ಹೋದಾಗ ನನಗೂ ಆಮ್ಲಜನಕ ಸಿಲಿಂಡರ್‌ ಬೇಕೆನಿಸಿತು.

ಪ್ರಪಾತಗಳು ಹೆಚ್ಚಾಗಿರುವ ಕಾರಣ ಭಯ ಬರಬಾರದು ಎನ್ನುವ ಕಾರಣಕ್ಕೆ ಶೆರ್ಫಾಗಳು ಪರ್ವತಾರೋಹಿಗಳನ್ನು ರಾತ್ರಿ ವೇಳೆಯೇ ಕರೆದೊಯ್ಯುತ್ತಾರೆ. 8500 ಮೀಟರ್‌ ಎತ್ತರದಲ್ಲಿ ನನ್ನ ಆಕ್ಸಿ ಜನ್‌ ಸಿಲಿಂಡರ್‌ ತೆರೆದು ಕೊಂಡು ತೊಂದರೆ ಆಯ್ತು, ಶೆರ್ಫಾ ಗಳು ಬಂದು ಬದಲಿ ಸಿಲಿಂಡರ್‌ ಜೋಡಿಸಿದರು. ಒಂದೊಂದು ಕ್ಯಾಂಪ್‌ಗೆ ಒಂದೊಂದು ಲಗ್ಗೇಜ್‌ ಹೊತ್ತೂ ಯ್ಯ ಬೇ ಕಿತ್ತು. ಕ್ಯಾಂಪ್‌ನಿಂದ ಕ್ಯಾಂಪ್‌ಗೆ ಡೌನ್‌ ಸೂಟ್‌, ಥರ್ಮಲ್‌, ಪ್ಲೀಝ್, ಲೈನರ್‌ ಅಪ್ಪರ್‌, ಗ್ಲೌಸ್‌, ಸ್ನೋ ಬೂಟ್‌, ಸಾಕ್ಸ್‌ ಸೇರಿ ದಂತೆ ನಮ್ಮ ಬಟ್ಟೆ ಗಳು ಕೂಡ ಬದ ಲಾ ಗು ತ್ತಿದ್ದವು. ಎವರೆಸ್ಟ್‌ ಮೇಲೆ ನಿಂತು ಎತ್ತ ನೋಡಿ ದರೂ ಪರ್ವತ, ಶಿಖ ರದ ತುದಿಗಳೇ ಕಾಣುತ್ತಿವೆ.ಸ್ವರ್ಗ ಎಂದರೆ ಇದೆ ಏನೋ ಅನ್ನಿಸಿ ಬಿಡ್ತು .

ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.