“ಸ್ವಚ್ಛ’ಮೇವ ಜಯತೇ : ಬೆಟ್ಟಗಳ ಮೇಲೆ ಓಡುವ “ಮಿ. ಕ್ಲೀನ್‌’


Team Udayavani, Aug 25, 2018, 2:55 PM IST

699.jpg

 “ಕಸ ಹೆಕ್ಕುವುದು ಕೀಳು ಕೆಲಸ’ ಎಂಬ ಭಾವ ಚಿಕ್ಕಂದಿನಿಂದಲೇ ಎಲ್ಲರ ಮನಸ್ಸಿನಲ್ಲಿ ನೆಲೆಯೂರಿರುತ್ತದೆ. ಕಣ್ಣ ಮುಂದೆಯೇ ಕಸ ಇದ್ದರೂ, ಅದನ್ನೂ ಎಲ್ಲರೂ ನಿರ್ಲಕ್ಷಿಸಲು ಇದೇ ಕಾರಣ. ಕಸವನ್ನು ಎತ್ತಿ ಹಾಕಿದರೆ, ಎಲ್ಲಿ ತಮ್ಮ ಘನತೆಗೆ ಕುಂದು ಬರುತ್ತೋ ಅಂತ ಸೀದಾ ಮುಂದಕ್ಕೆ ಹೋಗಿಬಿಡುವ ಪರಿಸ್ಥಿತಿ ನಮ್ಮಲ್ಲಿದೆ. ಈ ಅಭಿಪ್ರಾಯವನ್ನು ಹೋಗಿಸಬೇಕೆಂದೇ ಜೇಕಬ್‌ ಒಂದು ಉಪಾಯ ಮಾಡಿದ್ದಾರೆ. 

ಪ್ರಕೃತಿ ಜೊತೆಗಿನ ಮನುಷ್ಯನ ಒಡನಾಟ ಸಹಸ್ರಾರು ವರ್ಷಗಳದ್ದು. ಒಂದು ಮಾತನ್ನಂತೂ ನಾವೆಲ್ಲರೂ ಒಪ್ಪಿಕೊಳ್ಳಬೇಕು. ನಾಗರಿಕತೆಗಳು ಇನ್ನೂ ಅರಳುತ್ತಿದ್ದ ಕಾಲದಲ್ಲಿ ಮನುಷ್ಯ ಪ್ರಕೃತಿ ಜೊತೆಗೆ ಇಟ್ಟುಕೊಂಡಿದ್ದ ಬಾಂಧವ್ಯ ಇಂದಿಲ್ಲ. ನಮ್ಮನ್ನು ನಾವು ಸುಧಾರಿತ ನಾಗರಿಕತೆಯಿಂದ ಬಂದವರೆಂದು ಕರೆದುಕೊಳ್ಳುತ್ತೇವಲ್ಲ, ಬುಡಕಟ್ಟು ಜನಾಂಗ, ಆದಿವಾಸಿಗಳು ಪ್ರಕೃತಿ ಬಗ್ಗೆ ಹೊಂದಿರುವ ಗೌರವ, ಪ್ರೀತಿ, ಭಕ್ತಿಗಳಲ್ಲಿ ಲವಲೇಶದಷ್ಟನ್ನೂ ನಾವು ಹೊಂದಿಲ್ಲ. ವಾಸದ ಪ್ರದೇಶವನ್ನೇ ಕಸದ ಗುಡ್ಡೆಗಳಿಂದ ತುಂಬಿಸಿ ಕಣ್ಮುಚ್ಚಿ ಬದುಕುತ್ತಿರುವ ನಾವು ಪ್ರಕೃತಿಯ ರಮಣೀಯ ಪ್ರವಾಸಿ ತಾಣಗಳನ್ನೂ ಬಿಟ್ಟಿಲ್ಲ. ಅಲ್ಲೂ ಪ್ಲಾಸ್ಟಿಕ್‌ ರಾಶಿ ಹಾಕಿ ಯಾರಾದರೂ ಕ್ಲೀನ್‌ ಮಾಡಲಿ ಎಂದು ಮಗುಮ್ಮಾಗಿ ಬಂದುಬಿಡುತ್ತೇವೆ. ಇದನ್ನೆಲ್ಲಾ ನೋಡಿ ಬೇಸತ್ತವರು ಜೇಕಬ್‌ ಚೆರಿಯನ್‌. ಬೆಂಗಳೂರಿನಲ್ಲಿ ಸ್ವಂತ ಮಾರ್ಕೆಟಿಂಗ್‌ ಕಂಪನಿಯೊಂದನ್ನು ನಡೆಸುತ್ತಾರವರು. ಕಂಪನಿ ನಡೆಸುವುದರ ಜೊತೆಗೆ ವಿಶೇಷ/ವಿಚಿತ್ರವಾದ ಸ್ವಚ್ಚತಾ ಅಭಿಯಾನವನ್ನೂ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. 

ಈ ಸ್ವತ್ಛತಾ ಅಭಿಯಾನ ವಿಚಿತ್ರ ಮತ್ತು ವಿಶೇಷ
ಜೇಕಬ್‌ ಅವರ ಸ್ವತ್ಛತಾ ಅಭಿಯಾನವನ್ನು “ಪ್ಲಾಗಿಂಗ್‌’ ಎಂದು ಕರೆಯಲಾಗುತ್ತದೆ. ಈ ಹೆಸರು ಬಂದಿದ್ದು ಕೆಲ ತಿಂಗಳುಗಳ ಹಿಂದಷ್ಟೇ. ಸ್ವೀಡನ್‌ ದೇಶದಲ್ಲಿ ನಾಗರಿಕರು ಕಸ ಹೆಕ್ಕಲು ವಿನೂತನ ಮಾದರಿ ಅನುಸರಿಸುತ್ತಿರುವ ವಿದ್ಯಮಾನವನ್ನು ಬಿಬಿಸಿ ವರದಿ ಮಾಡಿತ್ತು. ಅಲ್ಲಿನ ನಾಗರಿಕರು ಜಾಗಿಂಗ್‌ ಮಾಡುತ್ತಾ ಮಾಡುತ್ತಾ ಕಸ ಸಂಗ್ರಹಿಸುತ್ತಿದ್ದರು. ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ನಂತರ ಪ್ಲಾಗಿಂಗ್‌ ಜಗತ್ತಿನಾದ್ಯಂತ ಪರಿಸರಪ್ರೇಮಿಗಳನ್ನು ಆಕರ್ಷಿಸಿತ್ತು. ಜಗತ್ತಿನೆಲ್ಲೆಡೆ ಪ್ಲಾಗಿಂಗ್‌ ಸಂಘಟನೆಗಳು ಹುಟ್ಟಿಕೊಂಡವು. ಅಚ್ಚರಿಯ ವಿಷಯವೆಂದರೆ, ಬೆಂಗಳೂರು ವಾಸಿ ಜೇಕಬ್‌, “ಪ್ಲಾಗಿಂಗ್‌’ ಹೆಸರು ಹುಟ್ಟುವುದಕ್ಕೆ, ವೈರಲ್‌ ಆಗುವುದಕ್ಕೆ ವರ್ಷಗಳ ಮುಂಚೆಯೇ ಅದನ್ನು ಅಭ್ಯಾಸ ಮಾಡುತ್ತಿದ್ದರು. ಆ ಸಮಯದಲ್ಲಿ ಅವರನ್ನು ಕಂಡು ಜನರು ಪ್ರತಿಕ್ರಿಯಿಸುತ್ತಿದ್ದುದನ್ನು ಪಟ್ಟಿ ಮಾಡುತ್ತಾ ಹೋದರೆ ಅದರದ್ದೇ ಬೇರೆ ಕಥೆಯಾಗುತ್ತದೆ.

ಕಸ ಹೆಕ್ಕುವುದು ಕೀಳಲ್ಲ
ನಮ್ಮ ಸಮಾಜದಲ್ಲಿ “ಕಸ ಹೆಕ್ಕುವುದು ಕೀಳು ಕೆಲಸ’ ಎಂಬ ಭಾವ ಚಿಕ್ಕಂದಿನಿಂದಲೇ ಎಲ್ಲರ ಮನಸ್ಸಿನಲ್ಲಿ ನೆಲೆಯೂರಿರುತ್ತದೆ. ಕಣ್ಣ ಮುಂದೆಯೇ ಕಸ ಇದ್ದರೂ, ಅದನ್ನು ಎಲ್ಲರೂ ನಿರ್ಲಕ್ಷಿಸಲು ಇದೇ ಕಾರಣ. ಎಲ್ಲಿ ತಮ್ಮ ಘನತೆಗೆ ಕುಂದು ಬರುತ್ತೋ ಅಂತ ಸೀದಾ ಮುಂದಕ್ಕೆ ಹೋಗಿಬಿಡುವ ಪರಿಸ್ಥಿತಿ ನಮ್ಮಲ್ಲಿದೆ. ಈ ಅಭಿಪ್ರಾಯವನ್ನು ಹೋಗಿಸಬೇಕೆಂದೇ ಜೇಕಬ್‌ ಒಂದು ಉಪಾಯ ಮಾಡಿದ್ದಾರೆ. ವಿಬಿನ್ನ ರೀತಿಯಲ್ಲಿ ಪ್ರಚಾರ ಕಾರ್ಯಗಳಲ್ಲಿ ಅವರು ತೊಡಗಿದ್ದಾರೆ. ತಮ್ಮ ಕಸ ಹೆಕ್ಕುವ ಅಭಿಯಾನಕ್ಕೆ “ಪ್ಲಾಗಿಂಗ್‌ ಪಾರ್ಟಿ’ ಎಂದು ಹೆಸರಿಟ್ಟಿದ್ದಾರೆ. ಈಗಾಗಲೇ ಭಾರತದ 6 ನಗರಗಳಲ್ಲಿ ಜೇಕಬ್‌ ಮತ್ತವರ ತಂಡ “ಪ್ಲಾಗಿಂಗ್‌ ಪಾರ್ಟಿ’ಗಳನ್ನು ಯಶಸ್ವಿಯಾಗಿ ನಡೆಸಿದೆ. ಹೋದ ಕಡೆಯಲ್ಲೆಲ್ಲಾ ಜನರು ಚೆನ್ನಾಗಿ ಸ್ಪಂದಿಸುತ್ತಿರುವುದು ಜೇಕಬ್‌ರಿಗೆ ಖುಷಿ ತಂದಿದೆ. ಇದುವರೆಗೂ ಸುಮಾರು  1150 ಮೂಟೆಗಳು ಮತ್ತು 2 ಲೋಡ್‌ ಲಾರಿಗಳಷ್ಟು ಕಸವನ್ನು ಜೇಕಬ್‌ ಅವರ ತಂಡ ಸಂಗ್ರಹಿಸಿದೆ. 

ಪ್ರಾಯೋಜಕರು ಮುಂದೆ ಬರುತ್ತಿದ್ದಾರೆ
ದೊಡ್ಡ ದೊಡ್ಡ ಮನರಂಜನಾ ಕಾರ್ಯಕ್ರಮ, ಕ್ರೀಡೋತ್ಸವಗಳಿಗೆ ಪ್ರಾಯೋಜಕರು ಸಿಗುವುದು ಕಷ್ಟವೇನಲ್ಲ. ಆದರೆ ಕಸ ಸಂಗ್ರಹಿಸುವ ಕಾರ್ಯಕ್ರಮಗಳಿಗೂ ಪ್ರಾಯೋಜಕರು ತಾವಾಗಿಯೇ ಮುಂದೆ ಬರುತ್ತಿರುವುದು ದೊಡ್ಡ ವಿಷಯ. ಇದು ಒಳ್ಳೆ ಬೆಳವಣಿಗೆಯೂ ಹೌದು. ಪ್ಲಾಗಿಂಗ್‌ ಪಾರ್ಟಿಯಂಥ ಕಾರ್ಯಕ್ರಮ ಲಾಭ ರಹಿತವಾಗಿರುವುದರಿಂದ ಅದನ್ನು ನಿರ್ವಹಿಸಲು ಹಣದ ಅಗತ್ಯ ಇದ್ದೇ ಇರುತ್ತದೆ. ಆಸಕ್ತರನ್ನು ಪ್ಲಾಗಿಂಗ್‌ ಜಾಗಗಳಿಗೆ ಕರೆದೊಯ್ಯಲು ವಾಹನ ವ್ಯವಸ್ಥೆ, ಅವರಿಗೆ ಭೋಜನ, ಪ್ಲಾಗಿಂಗ್‌ ಮಾಡುವ ಸಮಯದಲ್ಲಿ ತೊಡಲು ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲವಸುಗಳು… ಪ್ರಾಯೋಜಕರು ಇಂಥಾ ಅಗತ್ಯಗಳ ಪೂರೈಕೆಗೆ ನೆರವಾಗುತ್ತಾರೆ. ಹಾಗೆ ನೋಡಿದರೆ, ಪರಿಸರ ಸ್ವಚ್ಚಗೊಳ್ಳುವುದರಿಂದ ಅವರಿಗೂ ಪ್ರಯೋಜನವಿದೆ. ಜಾಗಗಳ ರಿಯಲ್‌ ಎಸ್ಟೇಟ್‌ ಮೌಲ್ಯ ಹೆಚ್ಚುತ್ತದೆ, ನಾಗರಿಕರು ದುರ್ವಾಸನಾ ಮುಕ್ತವಾಗಿ ಓಡಾಡುತ್ತಾರೆ. ರಸ್ತೆ ಬದಿ ದುರ್ನಾತ ಬೀರುವ ಕಸವಿದ್ದರೆ ಅದರ ಸಮೀಪವಿರುವ ರೆಸ್ಟೋರೆಂಟುಗಳಿಗೆ, ಅಂಗಡಿ ಮಳಿಗೆಗಳಿಗೆ ಯಾವ ಗ್ರಾಹಕ ತಾನೇ ಹೋಗುತ್ತಾನೆ? ಪರಿಸರ ಸ್ವಚ್ಚವಾಗಿಡುವುದರಿಂದ ಎಲ್ಲರಿಗೂ ಅದರದ್ದೇ ಆದ ಲಾಭವಿದೆ. ಲಾಭದ ದೃಷ್ಟಿಯ ನೆಪದಿಂದಾದರೂ ಪರಿಸರ ಸ್ವಚ್ಚಗೊಳ್ಳಲಿ ಎನ್ನುವ ಆಶಯ ಜೇಕಬ್‌ರದು. “ಆದರೆ ನಾವು ಮಾತ್ರ ಯಾವುದೇ ಕಾರಣಕ್ಕೂ ಕಮರ್ಷಿಯಲ್‌ ಆಗುವುದಿಲ್ಲ, ಯಾವತ್ತಿಗೂ ನಮ್ಮದು ಸಮಾಜ ಸೇವೆ ಎಂಬಂತೇ ಉಚಿತವಾಗಿ ನಮ್ಮ ಕಾರ್ಯ ಮುಂದುವರಿಸಿಕೊಂಡು ಹೋಗುತ್ತೇವೆ’ ಎನ್ನುತ್ತಾರವರು. 

ಸ್ಥಳೀಯರು, ಹುಚ್ಚ ಎಂದುಕೊಂಡಿದ್ದರು!
ಪರಿಸರಪ್ರೇಮಿ ಜೇಕಬ್‌ಗ ಬೆಟ್ಟಗುಡ್ಡಗಳೆಂದರೆ ಇಷ್ಟ. ಅದಕ್ಕಾಗಿಯೇ ಕೊಡೈಕನಾಲ್‌ನಲ್ಲಿ ಒಂದು ಪುಟ್ಟ ಮನೆ ಮಾಡಿದ್ದಾರೆ. ಬೆಂಗಳೂರು ಮತ್ತು ಕೊಡೈಕನಾಲ್‌ನ ನಡುವೆ ಅವರ ವಾಸ. ಅಲ್ಲಿಯೂ ಪ್ಲಾಗಿಂಗ್‌ ಮಾಡುವುದನ್ನು ಮುಂದುವರಿಸಿದ್ದರು. ಪ್ಲಾಗಿಂಗ್‌ ಮಾಡುವಾಗ ಕಾಸೊ¾ಪಾಲಿಟನ್‌ ಸಂಸ್ಕೃತಿಯಿರುವ ಬೆಂಗಳೂರಿನಲ್ಲೇ ಜನರು ಜೇಕಬ್‌ರನ್ನು ವಿಚಿತ್ರವಾಗಿ ನೋಡುತ್ತಿದ್ದರು, ಇನ್ನು ಕೊಡೈಕನಾಲ್‌ನಲ್ಲಿ ಸ್ಥಳೀಯರು ಜೇಕಬ್‌ನನ್ನು ಹುಚ್ಚ ಎಂದುಕೊಂಡಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಅವರಿಗೆ ತಮ್ಮ ಸ್ವತ್ಛತಾ ಅಭಿಯಾನವನ್ನು ಅರ್ಥ ಮಾಡಿಸಲು ಪ್ರಯತ್ನ ಪಟ್ಟರೂ ಆಗಿರಲಿಲ್ಲ. ಜೇಕಬ್‌ ಜೊತೆಗೆ, ತಿಳಿವಳಿಕಸ್ಥರಂತೆ ಕಾಣುತ್ತಿದ್ದ ಭಾರತೀಯರೂ, ವಿದೇಶಿಯರೂ ಕೈಜೋಡಿಸುವುದನ್ನು ಕಂಡಾಗ ಇವರಿಗೆಲ್ಲೋ ಹುಚ್ಚು ಹಿಡಿದಿರಬೇಕೆಂಬಂತೆ ನೋಡುತ್ತಿದ್ದರಂತೆ. ಆದರೆ ಕೊಡಕೈನಲ್‌ನಲ್ಲಿ ಪ್ಲಾಗಿಂಗ್‌ ಮಾಡಿದ ವರದಿ ಪತ್ರಿಕೆ, ಟಿ.ವಿ. ಚಾನೆಲ್ಲುಗಳಲ್ಲಿ ಪ್ರಕಟವಾದಾಗ ಸ್ಥಳೀಯರು ತಮ್ಮ ಊರಿನ ಹೆಸರು ಮಾಧ್ಯಮಗಳಲ್ಲಿ ಬಂದಿದ್ದಕ್ಕೆ ತುಂಬಾ ಖುಷಿ ಪಟ್ಟಿದ್ದರು. ಹುಚ್ಚ ಎಂದುಕೊಂಡವರೇ ಬೆನ್ನು ತಟ್ಟಿದ್ದರು. ಇವೆಲ್ಲದರ ಫ‌ಲಶ್ರುತಿ ಎಂದರೆ ಮುಂದೆ ಅವರೂ ಜೇಕಬ್‌ಗ ಪ್ಲಾಗಿಂಗ್‌ನಲ್ಲಿ ನೆರವಾಗಿದ್ದು. ಈ ಘಟನೆಯಿಂದ ಜೇಕಬ್‌ಗ ತಿಳಿದು ಬಂದಿದ್ದೇನೆಂದರೆ - ಒಳ್ಳೆಯ ವಿಚಾರವನ್ನು ಅನುಷ್ಠಾನಕ್ಕೆ ತರಲು ವಿದ್ಯಾವಂತರು, ಅವಿದ್ಯಾವಂತರು ಅನ್ನೋ ಭೇದ ಇರೋದಿಲ್ಲ, ಹೇಳಬೇಕಾದ ರೀತಿಯಲ್ಲಿ ತಿಳಿವಳಿಕೆ ಹೇಳಿದರೆ ಎಂಥವರಲ್ಲೂ ಪರಿಸರ ಕಾಳಜಿಯನ್ನು ಮೂಡಿಸಬಹುದು ಎನ್ನುವುದು. 

ಪ್ರಾಣಿಗಳನ್ನು ಓಡಿಸುತ್ತಿದೆಯೇ ಪ್ಲಾಸ್ಟಿಕ್‌?
ಅಫ್ರೋಝ್ ಖಾನ್‌ ಎಂಬುವವರು, ಸಮಾನ ಮನಸ್ಕರನ್ನು ಒಗ್ಗೂಡಿಸಿ ಮುಂಬೈನ ವಸೋìವಾ ಬೀಚ್‌ನಲ್ಲಿ ಪ್ಲಾಗಿಂಗ್‌ ಕೈಗೊಂಡಿದ್ದರು. ಇದಾದ ಕೆಲ ದಿನಗಳ ನಂತರ ಆಮೆಗಳು ಸಮುದ್ರ ದಡದಲ್ಲಿ ಕಾಣಿಸಿಕೊಂಡಿದ್ದು ಪರಿಸರ  ಪ್ರೇಮಿಗಳನ್ನು ಸಂತಸದಲ್ಲಿ ತೇಲಿಸಿತ್ತು. ವಸೋìವಾ ಬೀಚು ಆಮೆಗಳನ್ನು ಕಾಣದೆ ಅದೆಷ್ಟೋ ಕಾಲವಾಗಿತ್ತು. ದಿನದ ಹೊತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನೆರೆಯುವುದರಿಂದ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಹರಡಿಕೊಂಡಿರುವ ಪ್ರದೇಶ ವಸೋìವಾ. ಆ ಜಾಗವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಿದ್ದೇ ಆಮೆಗಳ ವಾಪಸ್ಸಾತಿಗೆ ಕಾರಣ ಎನ್ನುವುದು ಅನೇಕರ ಅಭಿಪ್ರಾಯ. ಇಂಥದ್ದೇ ಒಂದು ಅನುಭವ ಜೇಕಬ್‌ರಿಗೂ ಆಗಿದೆ. ಪ್ರವಾಸಿಗರು ಕಾಡಿಗೆ ಹೋದ ಸಂದರ್ಭದಲ್ಲಿ ಪ್ರಾಣಿಗಳು ಓಡಾಡದ ಜಾಗವನ್ನು ಆರಿಸಿ ಅಲ್ಲಿ ಠಿಕಾಣಿ ಹೂಡುವುದು ಸಹಜ. ಅಲ್ಲಿಯೇ ತಿಂದುಂಡು ಬರುವಷ್ಟರಲ್ಲಿ ಕಸವನ್ನು ಬಿಟ್ಟು ಬರುತ್ತಾರೆ. ಈ ಕಸವನ್ನು ಸಂಗ್ರಹಿಸಲು, ಅಂಥದ್ದೊಂದು ಜಾಗದಲ್ಲಿ ಜೇಕಬ್‌ ಪ್ಲಾಗಿಂಗ್‌ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸ್ವತ್ಛ ಮಾಡಿದ ಮಾರನೇ ದಿನ ಆ ಜಾಗಕ್ಕೆ ಭೇಟಿ ಕೊಟ್ಟಾಗ ಅವರಿಗೆ ಆಶ್ಚರ್ಯ ಕಾದಿತ್ತು. ಕಾಡು ಕೋಣಗಳ ದೊಡ್ಡ ಗುಂಪೇ ಅಲ್ಲಿ ಓಡಾಡುತ್ತಿದ್ದವು. ಇದರಿಂದ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಪ್ಲಾಸ್ಟಿಕ್‌ಅನ್ನು ಪ್ರಾಣಿಗಳು “ಮನುಷ್ಯನ ಇರುವಿಕೆ’ ಎಂದೇ ಪರಿಗಣಿಸುತ್ತಿವೆ ಎನ್ನುವುದು. ಮೊದಲೇ ಮನುಷ್ಯನೆಂದರೆ ಅವುಗಳಿಗೆ ಸಂಕೋಚ, ಭಯ! ಹೀಗಾಗಿ ಎಲ್ಲೆಲ್ಲಾ ಪ್ಲಾಸ್ಟಿಕ್‌ ಬಿದ್ದಿರುತ್ತದೋ ಅಲ್ಲೆಲ್ಲಾ ಮನುಷ್ಯ ಇದ್ದಾನೆ ಎಂದು ತಿಳಿದು ಪ್ರಾಣಿಗಳು ಆ ಪ್ರದೇಶದಿಂದ ದೂರ ಉಳಿಯುತ್ತಿರಬಹುದು. 

ಸೆಲಬ್ರಿಟಿ ಟ್ರಿಕ್‌
ಮಕ್ಕಳಿಗೆ ಔಷಧ ಕುಡಿಸುವಾಗ ನಾವೇನು ಮಾಡುತ್ತೇವೆ? ಚಾಕಲೇಟಿನ ಆಮಿಷ ಒಡ್ಡುತ್ತೇವೆ. ಅದೇ ರೀತಿ ಜೇಕಬ್‌, ಜನಸಾಮಾನ್ಯರನ್ನು ಪ್ಲಾಗಿಂಗ್‌ನತ್ತ ಸೆಳೆಯಲು ಒಂದುಪಾಯ ಮಾಡಿದ್ದಾರೆ. ಸೆಲಬ್ರಿಟಿಗಳ ಆಮಿಷ. ಪ್ಲಾಗಿಂಗ್‌ ಕಾರ್ಯಕ್ರಮದಲ್ಲಿ ಸೆಲಬ್ರಿಟಿಗಳು ಮಾಸ್ಕ್ ತೊಟ್ಟು ತಮ್ಮ ಗುರುತು ಮರೆಮಾಚಿಕೊಂಡು ಕಸ ಹೆಕ್ಕಲಿದ್ದಾರೆ. ಕೊನೆಯಲ್ಲಿ ಅವರು ತಮ್ಮ ಗುರುತು ಬಯಲು ಮಾಡಿ ಪ್ಲಾಗಿಂಗ್‌ನಲ್ಲಿ ಭಾಗವಹಿಸಿದವರನ್ನು ಹುರಿದುಂಬಿಸಲಿದ್ದಾರೆ. ಇದರಿಂದ ಹೆಚ್ಚಿನ ಜನರಲ್ಲಿ ಕಸ ನಿರ್ವಹಣೆಯ ಬಗ್ಗೆ ಅರಿವು ಮೂಡುತ್ತದೆ ಎನ್ನುವುದು ಜೇಕಬ್‌ರ ಅಭಿಪ್ರಾಯ.

ಪ್ರವಾಸಿ ತಾಣಗಳಿಗೆ ಹೋದಾಗ ನಮ್ಮಲ್ಲನೇಕರು ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಎಸೆದು ಗಲೀಜು ಮಾಡಿಬರುತ್ತಾರೆ. ಬೇರೆ ಊರಾದ್ದರಿಂದ ಅಲ್ಲಿನವರೇ ಕ್ಲೀನ್‌ ಮಾಡಿಕೊಳ್ಳಲಿ ಎಂಬ ಅಸಡ್ಡೆ. ಇದರಿಂದಾಗಿ ಇಂದು ಎಲ್ಲಾ ಹಿಲ್‌ಸ್ಟೇಷನ್ನುಗಳಲ್ಲಿ ಚಿಪ್ಸ್‌ ಪ್ಯಾಕೆಟ್‌, ನೀರಿನ ಬಾಟಲಿಗಳ ರಾಶಿ ಕಾಣುತ್ತೆ. ನಾನಂತೂ ಎಲ್ಲೇ ಹೋದರೂ ನೀರಿನ ಬಾಟಲಿ ಜೊತೆಯಲ್ಲೇ ಕೊಂಡೊಯ್ಯುತ್ತೇನೆ. 10 ರೂ. ಅಷ್ಟೇ ಎಂದು ಅಂಗಡಿಗಳಲ್ಲಿ ಕೊಳ್ಳುವುದಿಲ್ಲ. 5 ನಿಮಿಷಗಳಲ್ಲಿ ಕುಡಿದು ಮುಗಿಸುವ ನೀರಿಗಾಗಿ ಭೂಮಿ ಮೇಲೆ 500- 1000 ವರ್ಷಗಳಷ್ಟು ಕಾಲ ಉಳಿಯುವ ಪ್ಲಾಸ್ಟಿಕ್‌ ಬಾಟಲಿಯನ್ನು ಪದೇ ಪದೆ ಕೊಂಡು ಬಳಸುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಕರ್ನಾಟಕದ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ಲಾಗಿಂಗ್‌ ಮಾಡುವ ಇರಾದೆ ಇದೆ. ಅರಣ್ಯಾಧಿಕಾರಿಯೊಬ್ಬರು ಮಲೆಮಹದೇಶ್ವರ ಬೆಟ್ಟಕ್ಕೆ ಬರುವಂತೆ ನಮ್ಮ ತಂಡವನ್ನು ಆಹ್ವಾನಿಸಿದ್ದರು. ಅಲ್ಲಿಗೆ ಹೋಗುವ ಯೋಚನೆಯೂ ಇದೆ.

 ಜೇಕಬ್‌ ಚೆರಿಯನ್‌

ಟಾಪ್ ನ್ಯೂಸ್

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Jammu-Srinagar highway closed due to heavy snowfall; Vehicles stranded

Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

Ullala; Heap of waste in Nema’s field; Daiva got angry

Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ

4-ptr

Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್‌ ಪಂತ್‌ ವಿರುದ್ದ ಕಿಡಿಕಾರಿದ ಗಾವಸ್ಕರ್‌

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!

Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Hollywood: Billy the kid- ಹಾಲಿವುಡ್‌ ಹಿರಿಯ ನಟ ಜೆಫ್ರಿ ಡ್ಯುಯೆಲ್‌ ಇನ್ನಿಲ್ಲ

Jammu-Srinagar highway closed due to heavy snowfall; Vehicles stranded

Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು

7-

Cooking Oil: ಅಡುಗೆ ಎಣ್ಣೆ ಆಮದು ಸವಾಲು

6-national-emblem

National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ

Ullala; Heap of waste in Nema’s field; Daiva got angry

Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.