ಭಾರತವನ್ನೇ ಸೋಲಿಸಿದ ಮುಶ್ಫೀಕರ್ ಹೋರಾಟಕಾರಿ ಬ್ಯಾಟಿಂಗ್
Team Udayavani, Nov 9, 2019, 5:01 AM IST
ಕ್ರಿಕೆಟನ್ನು ಬಹಳ ಆಸಕ್ತಿಯಿಂದ ಗಮನಿಸುವವರಿಗೆ ಮುಶ್ಫೀಕರ್ ರಹೀಂ ಹೆಸರು ಚೆನ್ನಾಗಿ ಗೊತ್ತಿರುತ್ತದೆ. ಬಾಂಗ್ಲಾದೇಶ ತಂಡದ ಈ ಅನುಭವಿ, ಹಿರಿಯ ಬ್ಯಾಟ್ಸ್‌ಮನ್ ಅತ್ಯಂತ ಅಪಾಯಕಾರಿಯೂ ಹೌದು. ಅದರಲ್ಲೂ ಭಾರತದ ವಿರುದ್ಧ ಈತನ ಹೋರಾಟಕಾರಿ ಮನೋಭಾವ ಬಹಳ ತೀವ್ರವಾಗಿರುತ್ತದೆ. ಬಾಂಗ್ಲಾ ತಂಡದಲ್ಲಿ ಭಾರತವೆಂದರೆ ದ್ವೇಷಿಸುವ ಒಂದಷ್ಟು ಆಟಗಾರರಿದ್ದಾರೆ.
ಅವರಲ್ಲಿ ಇವರೂ ಒಬ್ಬರು. ಹಿಂದೆ ಭಾರತದ ವಿರುದ್ಧ ಸೋತಾಗ ಬಾಂಗ್ಲಾದ ಕೆಲ ಆಟಗಾರರ ವರ್ತನೆ ಬಹಳ ಹೀನಾಯವಾಗಿತ್ತು. ಮುಶ್ಫೀಕರ್ ರಹೀಂ ಸದ್ಯ ಭಾರತ ಪ್ರವಾಸದಲ್ಲಿರುವ ಬಾಂಗ್ಲಾದೇಶ ತಂಡದ ಪ್ರಮುಖ ಆಟಗಾರ. ನಾಯಕ ಶಕಿಬ್ ಅಲ್ ಹಸನ್ ದಿಢೀರ್ 2 ವರ್ಷ ನಿಷೇಧಕ್ಕೊಳಗಾದ ನಂತರ, ತಂಡವನ್ನು ಆಧರಿಸುವ ಹೊಣೆಗಾರಿಕೆ ಮುಶ್ಫೀಕರ್ ಮೇಲೆ ಹೆಚ್ಚಿದೆ. ನಾಯಕ ಅಲ್ಲದಿದ್ದರೂ ಅತ್ಯಂತ ಪ್ರಮುಖ ಆಟಗಾರ.
ಅದನ್ನು ದೆಹಲಿಯಲ್ಲಿ ಭಾರತದ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲೇ ಸಾಬೀತು ಮಾಡಿದರು. 43 ಎಸೆತದಲ್ಲಿ ರಹೀಂ ಸ್ಫೋಟಕ 60 ರನ್ ಚಚ್ಚಿದರು. ರನ್ ಬೆನ್ನತ್ತುವ ಸಾಹಸದಲ್ಲಿ ಬಾಂಗ್ಲಾ ಕೈಹಿಡಿದು ಮುನ್ನಡೆಸಿ, ತಂಡದ ಮನೋಸ್ಥೈರ್ಯವನ್ನು ಮೇಲೆತ್ತಿದ್ದಾರೆ. ಬಹುಶಃ ಅನುಭವಿ ಆಟಗಾರರಿಗೆ ಎಷ್ಟು ಕಿಮ್ಮತ್ತಿದೆ ಎನ್ನುವುದನ್ನು ಮುಶ್ಫೀಕರ್ ಸಾಬೀತು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.