ಸಂಗೀತ ಕುಂಭಮೇಳ

ಇಲ್ಲಿ ಕಲಾವಿದರನ್ನು ಆಯ್ಕೆ ಮಾಡೋದು ಹೀಗೆ...

Team Udayavani, Mar 30, 2019, 6:00 AM IST

z-7

ಮುಂದಿನವಾರದಿಂದ ಶ್ರೀರಾಮ ಸೇವಾ ಮಂಡಳಿಯು ಬೆಂಗಳೂರಿನ ಕೋಟೆ ಮೈದಾನದಲ್ಲಿ 30 ದಿನಗಳ ಕಾಲ, 250ಕಲಾವಿದರ ಸೇರಿಸಿ “ಸಂಗೀತ ಸಮಾರಾಧನೆ’ ನಡೆಸುತ್ತಿದೆ. ಆದರೆ ಇಷ್ಟೊಂದು ಕಲಾವಿದರನ್ನು ಹುಡುಕಿ, ಗುಡ್ಡೆ ಹಾಕಿ, ಅವರ ಮನೋಧರ್ಮಕ್ಕೆ ಹೊಂದುವ ಪಕ್ಕವಾದ್ಯಗಾರರ “ಜಾತಕ’ ಹೊಂದಾಣಿಕೆ ಮಾಡುವ ಕೆಲಸ ಹೇಗೆ, ಯಾರು ಮಾಡುತ್ತಾರೆ? ಇಲ್ಲಿದೆ ಮಾಹಿತಿ.

ಒಂದು ಸಂಗೀತ ಕಾರ್ಯಕ್ರಮ ಏರ್ಪಡಿಸಬೇಕಾದರೆ ಹೀಗೆ ಕಲೆ, ಕಲಾವಿದ, ಮನೋಧರ್ಮ, ವ್ಯಕ್ತಿತ್ವ ಎಲ್ಲವನ್ನೂ ತೂಕ ಹಾಕಿ ಆಯ್ಕೆ ಮಾಡಬೇಕಾಗುತ್ತದೆ. “ಬಹಳ ಚೆನ್ನಾಗಿ ಹಾಡ್ತಾರೆ/ ನುಡಿಸುತ್ತಾರೆ’ ಅನ್ನೋದು ಒಂದೇ ಮಾನದಂಡವಾಗಲ್ಲ. ಮುಖ್ಯ ಗಾಯಕರ ಮನೋಧರ್ಮಕ್ಕೆ ತಕ್ಕಂತೆ ಸಹಕಲಾವಿದರು, ಸಹಕಲಾವಿದರ ಮನೋಧರ್ಮಕ್ಕೆ ಮುಖ್ಯ ಕಲಾವಿದರು ಹೊಂದಿ ಕೊಳ್ಳಬೇಕಾಗುತ್ತದೆ.

ಎಷ್ಟೋ ಸ್ಟಾರ್‌ ಕಲಾವಿದರು ತಮಗಿಂತ ಸ್ವಲ್ಪ ಕಡಿಮೆ ಸಂಗೀತ ಜ್ಞಾನ ಇರುವವರನ್ನು ಪಕ್ಕವಾದ್ಯಗಾರರನ್ನಾಗಿ ಆಯ್ಕೆ ಮಾಡಿಕೊಳ್ಳುವುದು ಉಂಟು. ಅವರು ತಮ್ಮನ್ನು ಓವರ್‌ ಟೇಕ್‌ ಮಾಡಿ ಜನರ ಅಭಿಮಾನ ಗಳಿಸಿಬಿಡುತ್ತಾರೆ ಅನ್ನೋ ಅಭದ್ರತೆಯೂ ಇದಕ್ಕೆ ಕಾರಣ ಇರಬಹುದು. ಇನ್ನೊಂದಷ್ಟು ಕಲಾವಿದರು ಹಾಡೋದಷ್ಟೇ ನನ್ನ ಕೆಲಸ. ಮಿಕ್ಕವರು ಏನು ಬೇಕಾದರೂ ಮಾಡಿಕೊಳ್ಳಲಿ ಅನ್ನೋ ಮನೋಭಾವದಲ್ಲಿ ತಾವಾಯ್ತು, ತಮ್ಮ ಮೈಕಾಯ್ತು ಅಂತ ಕೂತು ಬಿಟ್ಟಿರುತ್ತಾರೆ. ಮೃದಂಗದಲ್ಲಿ ಅದ್ಬುತವಾದ ತನಿ ಬಿಟ್ಟರೂ, ತಬಲದಲ್ಲಿ ಕಾಯ್ದೆಗಳನ್ನು ನುಡಿಸಿದರೂ ಇವರು ಪುಳಕಿತರಾಗಲೊಲ್ಲರು. ಇಂಥವರಿಗೆ ಪಕ್ಕವಾದ್ಯಗಾರರನ್ನು ಜೋಡಿಸುವುದು ಬೌಲಿಂಗ್‌ಪಿಚ್‌ನಲ್ಲಿ 6 ಬಾಲ್‌ಗೆ 6 ಸಿಕ್ಸ್‌ ಹೊಡೆದಂತೆ ಸರ್ವಜ್ಞ!

ಕಲಾವಿದರು ಪಕ್ಕಾ ದಾಖಲೆ ಸೈಟು !
ಹೀಗಿರುವಾಗ, ಬೆಂಗಳೂರಿನ ಚಾಮರಾಜಪೇಟೆಯ ಶ್ರೀರಾಮ ಸೇವಾ ಮಂಡಳಿ ತಿಂಗಳ ಪೂರ್ತಿ, 250ಜನ ಕಲಾವಿದರನ್ನು ಗುಡ್ಡೆ ಹಾಕಿಕೊಂಡು ಶ್ರೀರಾಮನವಮಿ ಸಂಗೀತೋತ್ಸವ ಏರ್ಪಡಿಸುತ್ತಾರೆ. ಈ ಸಂಗೀತದ ಕುಂಭಮೇಳಕ್ಕೆ ಪ್ರತಿ ಕಲಾವಿದರನ್ನು ಪ್ರತ್ಯೇಕವಾಗಿ ನಿಗದಿ ಮಾಡಿ, ಅವರ ಮನೋಧರ್ಮಕ್ಕೆ ಹೊಂದುವ ಪಕ್ಕವಾದ್ಯಗಾರರನ್ನು ಹುಡುಕುವುದಿದೆಯಲ್ಲ; ಆ ಕೆಲಸ, ಬೆಂಗಳೂರಲ್ಲಿ ದಾಖಲೆ ಪಕ್ಕಾ ಇರೋ ಸೈಟು ಹುಡುಕಿದಂತೆ.

“ಕಳೆದ ನವೆಂಬರ್‌ ತಿಂಗಳಿಂದಲೇ ಈ ಕಲಾವಿದರ ಸೆಲೆಕ್ಷನ್‌ ಮಾಡೋಕೆ ಶುರು ಮಾಡಿದ್ದು. ಪ್ರತಿ ವರ್ಷ ಹೀಗೆ 6 ತಿಂಗಳ ಮೊದಲೇ ಪ್ರೋಸೆಸ್‌ ಶುರುವಾಗುತ್ತೆ. ಮೊದಲು ನಮ್ಮ ಪ್ರಾಯೋಜಕರು, ಬದ್ಧ ಕೇಳುಗರನ್ನು ಒಂದೆಡೆ ಸೇರಿಸಿ ಈ ಸಲದ ರಾಮೋತ್ಸವದ ಸಾಧಕ ಬಾಧಕ ಚರ್ಚೆ ಮಾಡ್ತೇವೆ. ಯಶಸ್ವಿ ಕಾರ್ಯಕ್ರಮಗಳನ್ನು ಗುರುತು ಮಾಡಿಕೊಂಡು, ಇದರ ಆಧಾರದ ಮೇಲೆ ಮುಂದಿನ ವರ್ಷದ ಯೋಜನೆ ಶುರು ಮಾಡುತ್ತೇವೆ. ಮೊದಲು ಕಲಾವಿದರ ಶಾರ್ಟ್‌ ಲಿಸ್ಟ್‌ ಮಾಡ್ತೀವಿ. ಆಮೇಲೆ ಸಂಪರ್ಕಿಸ್ತೇವೆ. ಯಾರ್ಯಾರು ಆ ದಿನಾಂಕಕ್ಕೆ ಫ್ರೀ ಇದ್ದಾರೆ ಅನ್ನೋದನ್ನು ಪಟ್ಟಿ ಮಾಡಿ, ಅವರ ಬೇಡಿಕೆಗಳು ( ವಾಸ್ತವ್ಯ ಎಲ್ಲಿ, ಸಂಭಾವನೆ ಎಷ್ಟು? ಫ್ಲೈಟ್‌ ಟಿಕೆಟ್‌ ಕೊಡಬೇಕಾ ಇತ್ಯಾದಿ) ಕೇಳಿಕೊಳ್ಳುತ್ತೇವೆ. ನಮ್ಮ ಬಜೆಟ್‌ ನೋಡುತ್ತೇವೆ. ಕೊನೆಗೆ ಫೈನಲ್‌ ಲಿಸ್ಟ್‌ ಮಾಡ್ತೇವೆ’ ಎನ್ನುತ್ತಾರೆ ಶ್ರೀರಾಮಸೇವಾ ಮಂಡಳಿಯ ವರದರಾಜ್‌.

ನಿಜ ಏನೆಂದರೆ, ಈ ಕೆಲಸ ಅವರು ಹೇಳಿದಷ್ಟು ಸಲೀಸು ಇಲ್ಲ. ಮುಖ್ಯ ಕಲಾವಿದರು ಸಿಕ್ಕಾಗ ಅದೇ ದಿನಕ್ಕೆ ಪಕ್ಕವಾದ್ಯಗಾರರು ಸಿಗುತ್ತಾರೆ ಅಂತ ಹೇಳಲು ಬರುವುದಿಲ್ಲ. ಪಕ್ಕವಾದ್ಯಗಾರರು ಪಕ್ಕಾ ಆದ ಮೇಲೆ, ಮುಖ್ಯಗಾಯಕರು ಆ ಸಮಯಕ್ಕೆ ಖಾಲಿ ಇರುವುದಿಲ್ಲ… ಇದೊಂಥರಾ ಹೆಣ್ಣು ಗಂಡಿನ ಜಾತಕ ಹೊಂದಾಣಿಕೆ ಮಾಡಿದಂತೆ.

” ಹೌದು, ಇದು ಕಷ್ಟದ ಕೆಲಸ. ಹಾಗಾಗಿ, ಮುಖ್ಯ ಕಲಾವಿದರನ್ನು ಬುಕ್‌ ಮಾಡುವಾಗ, ನಿಮಗೆ ಎಂಥ ಪಕ್ಕವಾದ್ಯಗಾರರು ಬೇಕು ಅಂತ ಲಿಸ್ಟ್‌ ತಗೊಂಡು ಇತೇವೆ. ಉದಾಹರಣೆಗೆ- ರಾಮಕೃಷ್ಣ ಮೂರ್ತಿ ಅವರಿಗೆ ಚಾರುಮತಿ ರಘುರಾಮ್‌ ಪಿಟೀಲು ನುಡಿಸುತ್ತಿದ್ದರು. ಈ ಸಲ ಇವರು ಅಮೆರಿಕಕ್ಕೆ ಹೋಗಬೇಕು ಅಂದರು. ಹೀಗಾಗಬಹುದು ಅಂತಲೇ ರಾಮಕೃಷ್ಣರು ಹಾಡೋ ಶೈಲಿಗೆ ಹೊಂದುವಂತೆ ವಿಠ್ಠಲ್‌ ರಂಗನಾಥ್‌ ಅವರನ್ನು ಹಾಕಿದ್ದೇವೆ. ಇದು ರಂಗನಾಥರಿಗೂ ಇಷ್ಟವಾಯಿತು’ ಅಂತಾರೆ ವರದರಾಜ್‌.

ವರದರಾಜ್‌ ಅವರ ಮಗ ಅಭಿಜತ್‌ ಇನ್ನೊಂದು ತಂತ್ರ ಹುಡುಕಿಕೊಂಡಿದ್ದಾರೆ. ಅದೇನೆಂದರೆ, ಈ ವರ್ಷ 250 ಕಲಾವಿದರು ಭಾಗವಹಿಸುತ್ತಾರೆ ಅಂದರೆ, ಪರ್ಯಾಯವಾಗಿ 50 ಜನರ ಇನ್ನೊಂದು ಪಟ್ಟಿ ಸಿದ್ಧ ಮಾಡಿಕೊಳ್ಳುತ್ತಾರಂತೆ. ಮೊದಲ ಪಟ್ಟಿಯ ಕಲಾವಿದರು ಕಾರಣಾಂತರದಿಂದ ಬರಲು ಆಗಲಿಲ್ಲ ಅಂದಾಗ, ಎರಡನೆ ಪಟ್ಟಿಯ ಕಲಾವಿದರನ್ನು ಬಳಸಿಕೊಳ್ಳುತ್ತಾರೆ.

ಹತ್ತು ಟೀಂ
ಒಂದು ತಿಂಗಳ ಈ ಸಂಗೀತ ಕಾರ್ಯಕ್ರಮ ತೂಗಿಸಲು ಹತ್ತು ತಂಡಗಳು ಕೆಲಸ ಮಾಡುತ್ತವೆ. ಕಲಾವಿದರ ಕೋಆರ್ಡಿನೇಷನ್‌, ಧ್ವನಿವರ್ಧಕ, ಜನರೇಟರ್‌, ಐಟಿ ಸೆಲ್‌, ಊಟ-ತಿಂಡಿ ಮೇಲ್ವಿಚಾರಣೆ- ಹೀಗೆ ಎಲ್ಲದಕ್ಕೂ ಪ್ರತ್ಯೇಕ ತಂಡಗಳಿವೆ. ಇನ್ನೊಂದು ವಿಶೇಷ ಎಂದರೆ, ಸೇವಾಮಂಡಳಿ ಕಾರ್ಯಕ್ರಮಕ್ಕೆ ಚೇರು ಕುರ್ಚಿಗಳನ್ನು ಹಾಕುವುದು ಸಾಲಿ ಅಹ್ಮದ್‌, ಸೌಂಡ್‌ ಸಿಸ್ಟ್‌ಂ ಪ್ರಭಾತ್‌ ಕಲಾವಿದರ ತಂಡ. ಇಬ್ಬರೂ ಸುಮಾರು 60 ವರ್ಷಗಳಿಂದ ಮಂಡಳಿ ಜೊತೆಗಿದ್ದಾರಂತೆ.

ಮಂಡಳಿಯಲ್ಲಿ ಕಛೇರಿ ಎರಡು ಸ್ಲಾಟ್‌ಗಳಲ್ಲಿ ನಡೆಯುತ್ತದೆ. 5.15ರಿಂದ 6.15, ರಾತ್ರಿ 6.30ರಿಂದ 9.30 ಹೀಗೆ. ಸಂಜೆ ಕಾರ್ಯಕ್ರಮಗಳು ಈಗತಾನೇ ಅರಳುತ್ತಿರುವ ಯುವ ಕಲಾವಿದರಿಗಾಗಿ. ಇಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದರೆ. ಮುಖ್ಯ ವೇದಿಕೆಯಲ್ಲಿ ಅವಕಾಶ ಕೊಡುತ್ತಾರೆ. ಕದ್ರಿಗೋಪಾಲ್‌ನಾಥ್‌, ಬಾಂಬೆ ಜಯಶ್ರಿ ಮುಂತಾದವರು ಇದೇ ಮೆಟ್ಟಿಲು ಹತ್ತಿಕೊಂಡು ಬಂದೇ ಹೆಸರಾಗಿದ್ದಂತೆ.

ಶ್ರೀರಾಮ ಸೇವಾಮಂಡಳಿ ಅನ್ನೋದು ಹಿಂದೂಸ್ತಾನಿ, ಕರ್ನಾಟಕಿ, ಜಾಸ್‌ ಹೀಗೆ ಎಲ್ಲ ರೀತಿ ಸಂಗೀತಕ್ಕೂ ಒಂದೇ ವೇದಿಕೆ. ಹಾಗಾದರೆ, ಕೇಳುಗರ ಕ್ಯಾಟಗರಿ ಯಾವುದು? ಇದಕ್ಕೆ ಅಭಿಜಿತ್‌ ಹೇಳ್ಳೋದು ಹೀಗೆ- “ಮಂಡಳಿ ಸಂಗೀತಕ್ಕೇ ಪ್ರತ್ಯೇಕ ಕೇಳುಗರಿದ್ದಾರೆ. ಅವರು ಸಂಗೀತದ ಎಲ್ಲ ಪ್ರಕಾರಗಳನ್ನು ಕೇಳುತ್ತಾರೆ. ಹೀಗಾಗಿ, ಹಿಂದೂಸ್ತಾನಿ ಕೇಳುಗರು, ಕರ್ನಾಟಕಿಯನ್ನು, ಕರ್ನಾಟಕಿ ಸಂಗೀತವನ್ನು ಹಿಂದೂಸ್ತಾನಿ ಪ್ರಿಯರು ಕೇಳುವುದಿಲ್ಲ ಅಂತ ಹೇಳಲು ಆಗೋದಿಲ್ಲ’.
ಏನೇ ಹೇಳಿ, ಒಂದು ತಿಂಗಳ ಕಾಲ ಈ ಸಂಗೀತ ಸಮಾರಾಧನೆ ನಡೆಸುವುದು ಕಡಿಮೆ ಕೆಲಸವಲ್ಲ.

ಸಕ್ಸಸ್‌ ಅಂದರೆ ಹೇಗೆ?
ವರದರಾಜ್‌ ಅಂಡ್‌ ಟೀಂ ಸುಮ್ಮನೆ ಅಲ್ಲ, ಸೋಶಿಯಲ್‌ ಮೀಡಿಯಾವನ್ನೂ ಸೂಕ್ಷ್ಮವಾಗಿ ಗಮನಿಸುತ್ತದೆ. ಚೆನ್ನೈ, ಮುಂಬಯಿ, ದೆಹಲಿ ಎಲ್ಲೇ ಸಂಗೀತ ಕಾರ್ಯಕ್ರಮ ಆದರೂ, ಅಲ್ಲೆಲ್ಲಾ ಹೋಗಿ ಕೂತು ಸಂಗೀತ ಕೇಳಿ, ಚೆನ್ನಾಗಿ ಹಾಡುವವರನ್ನು ಇಲ್ಲಿನ ರಾಮೋತ್ಸವಕ್ಕೆ ಕರೆಸುತ್ತಾರೆ. “ಸಂಗೀತದಲ್ಲಿ ವಿದ್ವತ್‌ ಇರಬೇಕು, ಕಾರ್ಯಕ್ರಮಕ್ಕೆ ಜನರು ಕೂಡ ಬರಬೇಕು. ನಾವು ಕೂತು ಇವನ್ನೆಲ್ಲ ಗಮನಿಸುತ್ತೇವೆ. ಪ್ರೇಕ್ಷಕರಿಂದ ಒಳ್ಳೇ ಪ್ರತಿಕ್ರಿಯೆ ಬಂದರೆ, ಮುಂದಿನ ವರ್ಷ ಕೂಡ ಅವರನ್ನೇ ಕರೆಸುತ್ತೇವೆ’ ಎನ್ನುತಾರೆ ವರದರಾಜ್‌.

-ಮೊದಲು ಶುರುವಾದದ್ದು 7 ದಿನ, 25 ಕಲಾವಿದರಿಂದ
– ಇವತ್ತು 31 ದಿನ, 250 ಕಲಾವಿದರು ಬಾಗಿ.
– ಈ ತನಕ ಭಾಗವಹಿಸಿರುವ ಕಲಾವಿದರ ಸಂಖ್ಯೆ 15ಸಾವಿರ
– 300 ಜನರ ತಂಡ ಎರಡು ತಿಂಗಳು ಅವಿರತ ಕೆಲಸ
– ವರ್ಷಪೂರ್ತಿ ಮಂಡಳಿ ಜೊತೆ 30 ಜನ ಕೆಲಸ ಮಾಡುತ್ತಾರೆ.

“ಆಯೋಜನೆ ಕ್ಷೇತ್ರಕ್ಕೆ ಇಳಿದ ಮೇಲೆ, ಕಲಾವಿದರಾಗುವುದು ಕಷ್ಟ. ಎಷ್ಟೋ ಸಲ, ಕಲಾವಿದರ ಅನುಭವಕ್ಕಿಂತ ನಮ್ಮ ಅನುಭವವೇ ಅಗಾಧವಾಗಿರುತ್ತದೆ. ಹೀಗಾಗಿ, ಅವರ ಮನೋಧರ್ಮಕ್ಕೆ ತಕ್ಕ ಸಹಕಲಾವಿದರನ್ನು ಹುಡುಕುತ್ತೇವೆ’

“ಕಲಾವಿದರ ಆಯ್ಕೆ ನಮಗೆ ಮಾತ್ರವಲ್ಲ, ಮುಖ್ಯ ಕಲಾವಿದರಿಗೂ ಸಮಾಧಾನ ತರಬೇಕು. ಹಾಗಾದಲ್ಲಿ ಮಾತ್ರ ಸಂಗೀತ ರಸಗವಳ ಉಣಬಡಿಸಲು ಸಾಧ್ಯ’

ಕಟ್ಟೆ ಗುರುರಾಜ್‌

ಟಾಪ್ ನ್ಯೂಸ್

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

tennis

Australian Open ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಡ್ರಾ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

1-raj

Vijay Hazare Trophy; ರಾಜಸ್ಥಾನ, ಹರಿಯಾಣ ಕ್ವಾರ್ಟರ್‌ ಫೈನಲ್‌ಗೆ

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-saaai

Malaysia Super 1000; ಸಾತ್ವಿಕ್‌-ಚಿರಾಗ್‌ ಕ್ವಾರ್ಟರ್‌ಫೈನಲಿಗೆ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

tennis

Australian Open ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಡ್ರಾ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.