ಆರಂಭಿಕ ಸ್ಥಾನಕ್ಕೆ  ಮ್ಯೂಸಿಕಲ್‌ ಛೇರ್‌!


Team Udayavani, Aug 5, 2017, 3:02 PM IST

3666+.jpg

ಟೆಸ್ಟ್‌ ಕ್ರಿಕೆಟ್‌ನ ಬಹುದೊಡ್ಡ ಯಶಸ್ಸು ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಮೊದಲ ಘಂಟೆಗಳನ್ನು ಕಳೆಯುವುದರಲ್ಲಿದೆ. ಮೊದಲ ವಿಕೆಟ್‌ ಜೊತೆಯಾಟದಲ್ಲಿ ಬರುವ ಪ್ರತಿ ರನ್‌ಗೆ ಮೌಲ್ಯ ಒಂದು ರನ್‌ಗಿಂತ ಎಷ್ಟೋ ಹೆಚ್ಚು! ರನ್‌ ಬಾರದಿದ್ದರೂ ಚೆಂಡಿನ ಹೊಳಪನ್ನು ಆರಂಭಿಕ ಸ್ಥಾನಕ್ಕೆ ಮ್ಯೂಸಿಕಲ್‌ ಛೇರ್‌!

ಒಬ್ಬ ಯಶಸ್ವಿ ಬ್ಯಾಟ್ಸ್‌ಮನ್‌ ತನ್ನ ಶತಕ, ಸಿಕ್ಸರ್‌ಗಳಿಂದ ಸಾಧಕ ಆಗಬಾರದು, ಒಂದು ಸಾಂ ಕ ವ್ಯವಸ್ಥೆಯಲ್ಲಂತೂ ಸುತರಾಂ ಕೂಡದು. ಟೆಸ್ಟ್‌, ಏಕದಿನ… ಮಾದರಿಯ ಯಾವುದೇ ಇರಲಿ, ಒಬ್ಬ ಬ್ಯಾಟ್ಸ್‌ಮನ್‌ ತನ್ನ ವೈಯುಕ್ತಿಕ ಸಾಧನೆ ಜೊತೆಗೆ ಎಷ್ಟು ಪಾರ್ಟನರ್‌ಶಿಪ್‌ ಕಟ್ಟಿದ ಎಂಬುದು ಮುಖ್ಯವಾಗಬೇಕು.

ತೆಗೆಯುವಂತ ರಕ್ಷಣಾತ್ಮಕ ಆಟ ಆಡುವ ಆರಂಭಿಕರು ತಂಡಕ್ಕೆ ಆಸ್ತಿ. ಕಳೆದ ಸೆಪ್ಟೆಂಬರ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದ ಟೆಸ್ಟ್‌ನಿಂದ ಆರಂಭಿಸಿ ಶ್ರೀಲಂಕಾದ ಗಾಲ್ಲೆವರೆಗೆ ಭಾರತ 14 ಪಂದ್ಯಗಳನ್ನಾಡಿದೆ. ಅದರಲ್ಲಿ ಭಾರತ ಬರೋಬ್ಬರಿ ಆರು ಆಟಗಾರರನ್ನು ಪ್ರಯೋಗಿಸಿದೆ. ಈ ಅವಧಿಯಲ್ಲಿ ಆರಂಭಿಕರು ಐದು ಶತಕ ಹಾಗೂ 13 ಅರ್ಧಶತಕಗಳನ್ನು ಕೊಟ್ಟಿದ್ದಾರೆ. ಅದೇ ಜೊತೆಯಾಟದ ವಿಷಯಕ್ಕೆ ಬಂದರೆ ನಾಲ್ಕು ಅರ್ಧ ಶತಕದ ಜೊತೆಯಾಟ, ಒಂದೇ ಒಂದು ಶತಕದ ಪ್ರದರ್ಶನವಷ್ಟೇ! ಅದೂ ಇಂಗ್ಲೆಂಡ್‌ ವಿರುದ್ಧ ಕೆ.ಎಲ್‌.ರಾಹುಲ್‌ ಜೊತೆ ಸೇರಿದ ಮೇಕ್‌ಶಿಫ್ಟ್ ಆರಂಭಿಕ ಪಾರ್ಥಿವ್‌ ಪಟೇಲ್‌ ಕಲೆಹಾಕಿದ 152 ರನ್‌ ಪಾರ್ಟ್‌ನರ್‌ಶಿಪ್‌ ಅತ್ಯುತ್ತಮ ಪ್ರದರ್ಶನ.

ಸಾಲು ಸಾಲು ಆರಂಭಿಕರು!
ಭಾರತ ಟೆಸ್ಟ್‌ ತಂಡವಾಗಿ ಯಶಸ್ಸಿನ ಹಳಿಯ ಮೇಲಿದೆ. ಅಂತಹ ತಂಡ ನಿಯಮಿತ ಆರಂಭಿಕರ ಜೋಡಿಯನ್ನು ಹೊಂದಿರಬೇಕಿತ್ತು. ಸುನಿಲ್‌ ಗವಾಸ್ಕರ್‌, ವೀರೇಂದ್ರ ಸೆಹವಾಗ್‌ರ ನಂತರ ಆರಂಭಿಕರಾಗಿ 50 ಟೆಸ್ಟ್‌ ಪೂರೈಸಿರುವ ಮುರಳಿ ವಿಜಯ್‌ ಶ್ರೀಲಂಕಾ ಪ್ರವಾಸಕ್ಕೆ ತೆರಳಿಲ್ಲ. ಫಿಟ್‌ನೆಸ್‌ ಸಮಸ್ಯೆ. ಚೊಚ್ಚಲ ಆಸ್ಟ್ರೇಲಿಯಾ ಪ್ರವಾಸದಲ್ಲಿಯೇ ಶತಕ ಸಂಪಾದಿಸಿದ ಅಪ್ರತಿಮ ಪ್ರತಿಭೆ ಕೆ.ಎಲ್‌.ರಾಹುಲ್‌  17 ಟೆಸ್ಟ್‌ಗಳಲ್ಲಿ ನಾಲ್ಕು ಶತಕ ಹಾಗೂ 7 ಅರ್ಧಶತಕಗಳ 
ಸಾಧಕ. ಈತನೂ ಗಾಲ್ಲೆ ಟೆಸ್ಟ್‌ ಆಡಲಿಲ್ಲ. ಮತ್ತದೇ ಫಿಟ್‌ನೆಸ್‌ ಸಮಸ್ಯೆ. ಈ ಇಬ್ಬರೂ ಆಟಗಾರರು ಫಿಟ್‌ನೆಸ್‌ನಲ್ಲಿ  ಹಿಂದೆ ಬಿದ್ದಿದ್ದರಿಂದ ಧವನ್‌, ಮುಕುಂದ್‌ಗೆ ಅವಕಾಶ ಸಿಕ್ಕಿತ್ತು. ಈ ಅದೃಷ್ಟವನ್ನು ಅವರು ಬಳಸಿಕೊಂಡರೇ? ಹೇಳುವುದು ಕಷ್ಟ.

2015ರಲ್ಲಿ ಭಾರತ ಶ್ರೀಲಂಕಾ ಪ್ರವಾಸಗೈದಾಗ ಮೊದಲೆರಡು ಟೆಸ್ಟ್‌ಗಳಲ್ಲಿ ಚೇತೇಶ್ವರ್‌ ಪೂಜಾರ ಆಡಿರಲೇ ಇಲ್ಲ. ತಂಡದಲ್ಲಿ ಮೂವರು ಕಾಯಂ ಆರಂಭಿಕರಿದ್ದರೂ ಮೂರನೇ ಟೆಸ್ಟ್‌ ವೇಳೆಗೆ ಕೆ.ಎಲ್‌.ರಾಹುಲ್‌ ಜೊತೆಗಾರರಿಲ್ಲದೆ ಒಬ್ಬಂಟಿಯಾಗಿದ್ದರು. 

ಅವರಿಗೆ ಜೋಡಣೆಯಾದ ಪೂಜಾರ 145  ರನ್‌ಗಳ ಇನಿಂಗ್ಸ್‌ನ್ನು ಅಕ್ಷರಶಃ ಕಟ್ಟಿದ್ದರು. ಭಾರತದ ಪರ ಇನಿಂಗ್ಸ್‌ ಉದ್ದಕ್ಕೂ ಬ್ಯಾಟಿಂಗ್‌ ಮಾಡಿದ ಕೇವಲ ಮೂರನೇ ದೃಷ್ಟಾಂತಕ್ಕೆ ಕಾರಣರಾದರು. ಅಷ್ಟೇ ಏಕೆ, ಮೊನ್ನೆ ಗಾಲ್ಲೆಯಲ್ಲಿ 17ಕ್ಕೆ ಒಂದು ವಿಕೆಟ್‌ ಎಂಬ ಕೇವಲ ಐದು ಓವರ್‌ ಮುಕ್ತಾಯದ ಹಂತದಲ್ಲಿ ಆಡಲಿಳಿದು 153 ರನ್‌ ಕೂಡಿಸಿದರು. ಇಂತಹ ಆಟಗಾರನನ್ನು ಕೂಡ ಕಾಯಂ ಆಗಿ ಆರಂಭಿಕರನ್ನಾಗಿ ಬಳಸಿಕೊಳ್ಳುವುದು ಸಮ್ಮತವಲ್ಲ.

ಆರಂಭಿಕರ ಕುರಿತಾಗಿ ಭಾರತದ ಥಿಂಕ್‌ಟ್ಯಾಂಕ್‌ ತುಂಬಾ ಲಘುವಾಗಿಯೇ ಪರಿಗಣಿಸಿದೆ. ವೀರೇಂದ್ರ ಸೆಹವಾಗ್‌ ಕೂಡ ಆರಂಭಿಕರಾಗಿ ತಂಡದೊಳಗೆ ಪ್ರವೇಶ ಪಡೆದವರಲ್ಲ. ನಂತರದ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವರು ಆರಂಭಿಕರಾಗಬೇಕಾಯಿತು. ಒಬ್ಬ ಯಶಸ್ವಿ ಬ್ಯಾಟ್ಸ್‌ಮನ್‌ ತನ್ನ ಶತಕ, ಸಿಕ್ಸರ್‌ಗಳಿಂದ ಸಾಧಕ ಆಗಬಾರದು, ಒಂದು ಸಾಂ ಕ ವ್ಯವಸ್ಥೆಯಲ್ಲಂತೂ ಸುತರಾಂ ಕೂಡದು. ಟೆಸ್ಟ್‌, ಏಕದಿನ… ಮಾದರಿಯ ಯಾವುದೇ ಇರಲಿ, ಒಬ್ಬ ಬ್ಯಾಟ್ಸ್‌ಮನ್‌ ತನ್ನ ವೈಯುಕ್ತಿಕ ಸಾಧನೆ ಜೊತೆಗೆ ಎಷ್ಟು ಪಾರ್ಟನರ್‌ಶಿಪ್‌ ಕಟ್ಟಿದ ಎಂಬುದು ಮುಖ್ಯವಾಗಬೇಕು. ರಾಹುಲ್‌ ದ್ರಾವಿಡ್‌, ವಿವಿಎಸ್‌ ಲಕ್ಷ್ಮಣ್‌, ಗೌತಮ್‌ ಗಂಭೀರ್‌ ಮುಖ್ಯವಾಗುವುದು ಈ ಕಾರಣಕ್ಕೆ. ವಿಕೆಟ್‌ ಕೀಪರ್‌ ವೃದ್ಧಿಮಾನ್‌ ಸಹಾ ಗಾಯಗೊಂಡ ಕಾಲದಲ್ಲಿ ಪಾರ್ಥಿವ್‌ ಪಟೇಲ್‌ ತಂಡದೊಳಗೆ ಬರುತ್ತಾರೆ. ಅವರು ಆರಂಭಿಕರ ವೇಷವನ್ನೂ ತೊಡುತ್ತಾರೆ. ಇಂಗ್ಲೆಂಡ್‌ ವಿರುದ್ಧ ಮೂರು ಇನಿಂಗ್ಸ್‌ನಲ್ಲಿ ಎರಡು ಅರ್ಧ ಶತಕವನ್ನೂ ಬಾರಿಸುತ್ತಾರೆ. ಫ‌ಲಿತಾಂಶ, ಮುಂದಿನ ಸರಣಿಯಲ್ಲಿ ಆಡುವ ಹನ್ನೊಂದರಿಂದ ಔಟ್‌, ವೃದ್ಧಿಮಾನ್‌ ಮರಳಿ ಬಂದಿದ್ದಾರಲ್ಲ?!

ಶತಕದ ಜೊತೆಯಾಟ ಎಲ್ಲಿ?
ಇತ್ತೀಚಿನ ದಿನಗಳಲ್ಲಿ ಮುರಳಿ ವಿಜಯ್‌ ಹಾಗೂ ಕೆ.ಎಲ್‌.ರಾಹುಲ್‌ ಆರಂಭಿಕರ ಜೋಡಿಯಾಗಿ ಪರಿಗಣಿಸಲ್ಪಟ್ಟಿದೆ. ಈ ಇಬ್ಬರೂ ಆಟಗಾರರು ಗಾಯಗಳಿಗೆ  ಆಪ್ತರು. ಅನ್‌ಫಿಟ್‌ ಆಗುವುದರಲ್ಲಿರುವ ಕನ್ಸಿಸ್ಟೆನ್ಸಿ ನಿಜಕ್ಕೂ ಜೊತೆಯಾಟದಲ್ಲಿಲ್ಲ. ಇಬ್ಬರ ನಡುವೆ ಅಪರೂಪದ ಹೊಂದಾಣಿಕೆಯಿದ್ದರೂ ಒಂದೇ ಒಂದು ಶತಕದ ಮೊದಲ ವಿಕೆಟ್‌ ಜೊತೆಯಾಟ ಒದಗಿಬಂದಿಲ್ಲ. ಇವರಿಬ್ಬರು ಇಲ್ಲ  ಎಂಬ ಹಿನ್ನೆಲೆಯಲ್ಲಿಯೇ ಶ್ರೀಲಂಕಾಗೆ ಬಂದಿಳಿದ ಶಿಖರ್‌ ಧವನ್‌ ವಾಸ್ತವಿಕವಾಗಿ ಆಡುವ 16ರಲ್ಲಿಯೇ ಇರಲಿಲ್ಲ. ಆಸ್ಟ್ರೇಲಿಯಾದ ಮೆಲ್ಬೋನ್‌ನಲ್ಲಿದ್ದ  ತಮ್ಮ ಕುಟುಂಬವನ್ನು ಸೇರಲು ವಿಮಾನ ಹತ್ತಲು ಹೊರಟವರಿಗೆ ವಿಶೇಷ  ಬುಲಾವ್‌ ನೀಡಲಾಗಿತ್ತು. 190 ರನ್‌ ಇನಿಂಗ್ಸ್‌ನಿಂದ ಅವರ ಸ್ಥಾನ ಭದ್ರವಾಯಿತೇ? ಕಷ್ಟ, ರಾಹುಲ್‌ ಜೊತೆ ಆಡಲು ಮುರುಳಿ ವಿಜಯ್‌ ಫಿಟ್‌ ಆದರೆ ಶಿಖರ್‌ ಜಾಗ  ಖಾಲಿ ಮಾಡಬೇಕಾಗಬಹುದು. ಅತ್ತ ಅಭಿನವ್‌ಗೆ ಕೂಡ ಆಡುವ ಹನ್ನೊಂದು ಕಾಯಂ ಅಲ್ಲ ಎಂಬ ಸಂದೇಶವೇ ಹೋಗುತ್ತಿದ್ದರೆ ಅನಗತ್ಯ ಒತ್ತಡ ಆಟಗಾರನ ಮೇಲೆ, ಆ ಮೂಲಕ ತಂಡದ ಮೇಲೆ ಬೀಳುತ್ತದೆ. ಇದನ್ನು ಬಿಸಿಸಿಐ ತಡೆಯಬೇಕಿತ್ತಲ್ಲವೇ?

 1990ರಿಂದ ಇತ್ತೀಚಿನ 27 ವರ್ಷಗಳನ್ನು ತೆಗೆದುಕೊಂಡರೆ ಭಾರತ 35 ವಿಭಿನ್ನ ಆರಂಭಿಕ ಆಟಗಾರರನ್ನು ಪ್ರಯೋಗಿಸಿದೆ. ಈ ಸ್ಥಾನದ ವೈಯಕ್ತಿಕ ಯಶಸ್ಸಿನ ಆಧಾರದ ಮೇಲೆ ಸುನಿಲ್‌ ಗವಾಸ್ಕರ್‌ರ ಹಿಂದೆ ಸೆಹವಾಗ್‌, ಗೌತಮ್‌ ಗಂಭೀರ್‌, ಮುರಳಿ ವಿಜಯ್‌, ನವಜೋತ್‌ ಸಿಂಗ್‌ ಸಿಧು, ರವಿಶಾಸ್ತ್ರಿ ಹಾಗೂ ಮನೋಜ್‌ ಪ್ರಭಾಕರ್‌ರನ್ನು ಕ್ರಿಕೆಟ್‌ ವಿಶ್ಲೇಷಕರು ಹೆಸರಿಸುತ್ತಾರೆ. ಶಿವ ಸುಂದರ್‌ ದಾಸ್‌, ಸದಗೋಪನ್‌ ರಮೇಶ್‌, ದೀಪ್‌ ದಾಸ್‌ಗುಪ್ತ, ಆಕಾಶ್‌ ಚೋಪ್ರಾ, ವಾಸಿಂ ಜಾಫ‌ರ್‌ ತರಹದ ಓಪನರ್‌ಗೆ ಈಗಿನ ಮಾದರಿಯ ಯಶಸ್ಸಿಗೆ ಹೆಚ್ಚು ಅವಕಾಶ ಎಂಬ ಸೂತ್ರ ಇಲ್ಲದಿದ್ದುದು ಮುಳುವಾಯಿತು ಎನ್ನುವವರಿದ್ದಾರೆ. ಇಂತಿಪ್ಪ ಭಾರತ ಇರ್ಫಾನ್‌ ಪಠಾಣ್‌, ಸಂಜಯ್‌ ಬಂಗಾರ್‌, ರಾಹುಲ್‌ ದ್ರಾವಿಡ್‌, ವಿವಿಎಸ್‌ ಲಕ್ಷ್ಮಣ್‌, ಸಂಜಯ್‌ ಮಾಂಜ್ರೆಕರ್‌, ಯುವರಾಜ್‌ ಸಿಂಗ್‌, ಸಮೀರ್‌ ಡಿ, ಹೇಮಾಂಗ್‌ ಬದಾನಿ, ಎಂಎಸ್‌ಕೆ ಪ್ರಸಾದ್‌ ತರದವರನ್ನು ಕೂಡ ಆರಂಭಿಕರ ಪೋಷಾಕು ತೊಡಿಸಿದೆ. ಯಶಸ್ಸಿನ ದೃಷ್ಟಿಯಿಂದ ನೋಡಿದರೆ ನಿರಾಶೆಯೇ ಆಗುತ್ತದೆ. ಮೊನ್ನಿನ ಗಾಲ್ಲೆ ಟೆಸ್ಟ್‌ಗೆ ಮುನ್ನ ಧರ್ಮಶಾಲಾದಲ್ಲಿ ನಡೆದ ಟೆಸ್ಟ್‌ನಲ್ಲಿ ಭಾರತದ ಪರ ಇನಿಂಗ್ಸ್‌ ಆರಂಭಿಸಿದ್ದು ಚೇತೇಶ್ವರ ಪೂಜಾರ!  

ಭಾರತ ಶ್ರೀಲಂಕಾ ವಿರುದ್ಧದ ಗಾಲ್ಲೆ ಮೊದಲ ಟೆಸ್ಟ್‌ನ್ನು ನಿರಾಯಾಸವಾಗಿ ಗೆದ್ದಿತು. ಇದರಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ ಮನ್‌ಗಳ ಪಾತ್ರವೂ ಇದೆ. ಮೊದಲ ಇನ್ನಿಂಗ್ಸ್‌ನಲ್ಲಿ ಶಿಖರ್‌ ಧವನ್‌ 190 ರನ್‌ಗಳ ಬೃಹತ್‌ ಇನಿಂಗ್ಸ್‌ ಕಟ್ಟಿದರು. ಅವರೇ ಪಂದ್ಯ ಪುರುಷೋತ್ತಮವೂ ಹೌದು. ದ್ವಿತೀಯ ಸರದಿಯಲ್ಲಿ ಅಭಿನವ್‌ ಮುಕುಂದ್‌ 81 ರನ್‌ಗಳ ಸುಂದರ ಬ್ಯಾಟಿಂಗ್‌ ನಡೆಸಿದರು. ದ್ವಿಶತಕ, ಶತಕ ಸಮೀಪದ ಸಾಧನೆಗಳ ಹೊರತಾಗಿ ಭಾರತದ ಆರಂಭಿಕ ಜೊತೆಯಾಟ ಮಾತ್ರ ಕೇವಲ 27, 19 ರನ್‌ ಸಂಪಾದಿಸಿತ್ತು!

ಮಾ.ವೆಂ.ಸ.ಪ್ರಸಾದ್‌

ಟಾಪ್ ನ್ಯೂಸ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.