“ನೆನಪು’ಗಳ ಭಾವಗೀತೆ
Team Udayavani, Apr 8, 2017, 5:03 PM IST
ಮೈಸೂರ್ ಬ್ಯಾಂಕ್ ವೃತ್ತದ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಕಚೇರಿಗೆ ಹೋದರೆ ನಿಮಗೆ ನೆನಪುಗಳ ಕಾಡದೆ ಇರದು. ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಪ್ರತಿ ಹಂತ ಹೇಗಿತ್ತು , ಸರ್‌ಎಂವಿ ಬದುಕಿನ ಚಿತ್ರಗಳು ಇಲ್ಲಿರುವ ನೆನಪು ಸಂಗ್ರಹಾಲಯದಲ್ಲಿದೆ. ನೆನಪಿಟ್ಟುಕೊಂಡು ಹೋಗಬೇಕಾದ ಸ್ಥಳ ಇದು.
ಈ ಕಡೆ ಎಂಟು, ಆ ಕಡೆ ಎಂಟು- ಒಟ್ಟು ಹದಿನಾರು ಕಂಬಗಳ ಹಾಲು. ಒಂದಷ್ಟು ಚೇರುಗಳು. ಬ್ಯಾಂಕಿನ ಗಲಿಬಿಲಿ. ನೇತು ಹಾಕಿದ ಎಲೆಕ್ಟ್ರಾನಿಕ್ ಉಪಕರಣದಲ್ಲಿ ನಂಬರುಗಳು ಓಡುತ್ತಿರುತ್ತವೆ. ಮದುವೆ ರಿಸಪ್ಷನ್‌ಗೆ ಬಂದವರಂತೆ ಒಂದಷ್ಟು ಜನ ಕಾದು ಕುಳಿತಿರುತ್ತಾರೆ. ಎದುರಿಗೆ ವಧುವರರಂತೆ ಎರಡ ಮೂರು ಕ್ಯಾಷಿಯರ್ ಕ್ಯಾಬಿನ್‌ಗಳು. ಎಲ್ಲವನ್ನೂ ನೋಡಿ ಭಾವಚಿತ್ರದಲ್ಲಿ ನಗುತ್ತಿದದ್ದು ಸರ್‌ಎಂವಿ ವಿಶ್ವೇಶ್ವರಯ್ಯ.
ಇದು ಟೌನ್‌ಹಾಲ್ ಇರಬಹುದೇ?
ರೂಪ ಅದೇ, ಲಕ್ಷಣವೂ ಅದೇ. ಆದರೆ ಇದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಹೆರಿಟೇಜ್ ಬಿಲ್ಡಿಂಗ್. ಒಂದು ಕಡೆ ಹೀಗೆ ಬ್ಯಾಂಕಿನ ವ್ಯವಹಾರ. ಅದರ ಬೆನ್ನಿಗೆ ಮದುವೆ ಚೌಟ್ರಿ ನೆನಪಿಸುವ ಅಂಗಳ. ಮಧ್ಯೆ ಲಕ್ಷಿ$¾à ದೇವಿ. 1933ರಲ್ಲಿ ಸ್ಟೇಟ್ ಬ್ಯಾಂಕ್ ಸ್ಥಾಪನೆಯಾದಾಗ ದೇವಿಯನ್ನು ಜಯಚಾಮರಾಜೇಂದ್ರ ಒಡೆಯರ್ ಮಾಡಿಸಿದ್ದು. ರಾಜಸ್ಥಾನದಿಂದ ಅಮೃತ ಶಿಲೆಯ ಎರಡು ವಿಗ್ರಹ ತರಿಸಿದ್ದರು. ಒಂದನ್ನು ಮೈಸೂರು ಅರಮನೆಯಲ್ಲಿ, ಇನ್ನೊಂದನ್ನು ಇಲ್ಲಿ ಸ್ಥಾಪಿಸಿದರಂತೆ. ಪ್ರತಿದಿನ ಹಾಗೂ ಪ್ರತಿ ಶುಕ್ರವಾರ ಇಲ್ಲಿ ವೈಭವದ ಪೂಜೆ ನಡೆಯುತ್ತದೆ. ಬಹುಶ ನಮ್ಮ ಬ್ಯಾಂಕ್‌ಗಳಲ್ಲಿ ಈ ರೀತಿ ದೇವರ ಪೂಜೆ ಮಾಡುವುದು ಇಲ್ಲೇ ಮೊದಲು ಮತ್ತು ಕೊನೆ ಇರಬೇಕು.
ಈ ಅಂಗಳ ಒಂಥರ ಮಂಡ್ಯದ ತೊಟ್ಟಿ ಮನೆಯನ್ನು ನೆನಪಿಸಿದರೆ ಆಶ್ಚರ್ಯ ಪಡಬೇಕಿಲ್ಲ. ಅಂಗಳದ ಸುತ್ತ ಹತ್ತಾರು ರೂಮುಗಳಿವೆ. ಇದರಲ್ಲಿ ಬರೋಬ್ಬರಿ 8 ರೂಮುಗಳು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಹುಟ್ಟಿದ್ದು, ಬೆಳೆದದ್ದರ ನೆನಪುಗಳನ್ನು ಸಾಕ್ಷಿ ಸಮೇತ ಎತ್ತಿಟ್ಟುಕೊಂಡಿದೆ. ಅದಕ್ಕೆ “ನೆನಪು’ ಅಂತಲೇ ಹೆಸರಿಟ್ಟಿದ್ದಾರೆ. ಇಲ್ಲಿ ನಿಂತರೆ ಸರ್‌ಎಂವಿ ಅವರ ಬದುಕು ಅರ್ಥವಾಗುತ್ತದೆ, ಎಸ್‌ಬಿಎಂ ನ ಸಾಮಾಜಿಕ ಕಾಳಜಿ ಕಾಣುತ್ತದೆ, ಆಗ ಬಳಸುತ್ತಿದ್ದ ವಸ್ತುಗಳು ಅನೇಕ ಕಥೆಗಳನ್ನು ಹೇಳುತ್ತವೆ.
ಅಂಗಳದ ಎಡ ಭಾಗದಲ್ಲಿ ಎರಡು ರೂಮುಗಳಿವೆ. ಒಂದರಲ್ಲಿ ಸದ್ದು, ಮಾತುಗಳು ತುಳುಕುತ್ತಿದ್ದವು. ಏನದು ಅಂದರೆ- ಇಬ್ಬರು ಅಧಿಕಾರಿಗಳು ದೊಡ್ಡದಾದ ಲಾಕರ್‌ಗಳನ್ನು ಪರೀಕ್ಷೆ ಮಾಡುತ್ತಿದ್ದರು.
” ನೋಡಿ, ಇದು ಇಂಗ್ಲೆàಂಡ್‌ನಿಂದ ತಂದದ್ದು. 1933ರಲ್ಲಿ ಬ್ಯಾಂಕ್ ಶುರುವಾಯ್ತಲ್ಲ. ಆ ಕಾಲದ್ದು. ಇದನ್ನು ಮನುಷ್ಯರು ಕದಲಿಸೋಕೆ ಆಗೋಲ್ಲ. ಅಷ್ಟು ತೂಕವಿದೆ’ ವಿವರಿಸಿದರು ಮ್ಯೂಸಿಯಂನ ನಿರ್ವಹಣೆ ಮಾಡುತ್ತಿದ್ದ ಶಶಿಧರ್. ಇಂಥದೇ ಇನ್ನೊಂದು ಲಾಕರ್ ಇತ್ತು. ಈ ಲಾಕರ್‌ನ ವಯಸ್ಸು ಕೂಡು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿಗೆ ಆದಷ್ಟೇ. ಅಂದರೆ 104. ಎರಡು ಡೋರಿನ ಲಾಕರ್. ನಮ್ಮ ಗೋಡೆಗಿಂತಲೂ ಭದ್ರ. ಎರಡು ಕಂಪಾರ್ಟಮೆಂಟು. ಮಧ್ಯ ಆಭರಣ ಇಡಲು ಮೂರು ಡ್ರಾಗಳು. ತುಕ್ಕು ಹಿಡಿದೇ ಇಲ್ಲ. ಅದರ ಹಣೆಯ ಮೇಲೆ ಲಂಡನ್‌ನ ವಿಕ್ಟೋರಿಯಾ ಬೀದಿಯಲ್ಲಿರುವ ಛಬ್ ಅಂಡ್ ಸನ್ಸ್ ಲಾಕ್ ಅಂಡ್ ಸೇಫ್ ಕಂಪೆನಿಯ ಲೋಗೋ ಇದೆ. ಈ ಭದ್ರ ಕಪಾಟುಗಳನ್ನು ನೋಡುತ್ತಲೇ ಅನಿಸೋದು, ಇದನ್ನು ಅಲ್ಲಿಂದ ಹೇಗೆ ತಂದರು ಅನ್ನೋದು?
ಇದರ ಪಕ್ಕದ ರೂಮಿನಿಂದ ಶುರುವಾಗುವುದು ನೆರಳಂತೆ ಕಾಡುವ ನೆನಪಿನ ಮ್ಯೂಸಿಯಂ. ಪ್ರಧಾನ ಕಚೇರಿ ಮೊದಲು ಹೇಗಿತ್ತು, ಎಸ್‌ಬಿಐ ಶುರುವಾದಗಿನ ಕಟ್ಟದ ನೋಟ, ಆಮಲೇ ಹೇಗೆ ಬದಲಾಯಿತು? ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜತನವಾಗಿ ಎತ್ತಿಟ್ಟಿದ್ದಾರೆ.
ಬ್ಯಾಂಕ್ ಸ್ಥಾಪನೆಗೆ 1912ರಲ್ಲಿ ಅಂದಿನ ಮೈಸೂರು ಮಹಾರಾಜರ ನೀಡಿದ ಅನುಮತಿ ಪತ್ರ, ದಿವಾನ್ ಪದವಿಗೆ ಸರ್‌ಎಂವಿ ಅವರಿಗೆ ನೀಡಿದ ನೇಮಕಾತಿ ಆದೇಶ ಪತ್ರಗಳು ಹೀಗೆ ಅನೇಕ ಸಂಗ್ರಹಗಳಿವೆ. ಮೊದಲ ರೂಮಿನಲ್ಲಿ ಎಸ್‌ಬಿಎಂ ಹುಟ್ಟಿದ್ದು, ಬೆಳೆದ ನಾನಾಹಂತಗಳು ಕಾಣಸಿಗುತ್ತವೆ. ಇಲ್ಲಿ ವಿಶೇಷವಾಗಿ ಕಾಡುವುದು 1913ರಿಂದ 2016ರ ವರೆಗಿನ ಬ್ಯಾಲೆನ್ಸ್ ಷೀಟುಗಳು, ಮೊದಲ ಬ್ರಾಂಚಿನ ಸಿಬ್ಬಂದಿಯ ಭಾವಚಿತ್ರಗಳು. ತುಮಕೂರು, ಚಿಂತಾಮಣಿ, ಕೋಲಾರ ಹೀಗೆ ನಾನಾ ಕಡೆಯ ಬ್ರಾಂಚಿನ ಸಿಬ್ಬಂದಿಗಳ ಫೋಟೋಗಳು ಇವೆ.
ಆಕಾಲದಲ್ಲಿ ಉಪಯೋಗಿಸುತ್ತಿದ್ದ ಟೈಪರೇಟರ್‌ಗಳು, ಡಿ.ವಿ. ಗುಂಡಪ್ಪನವರಿಗೆ ಇಂಪೀರಿಯಲ್ ಬ್ಯಾಂಕ್ ಆಫೀ ಇಂಡಿಯಾದಿಂದ ಬಂದ ಚೆಕ್ ಕೂಡ ಪ್ರದರ್ಶನಕ್ಕೆ ಇದೆ. ವಿಶೇಷವಾಗಿ ಸರ್‌ಎಂವಿ ಅವರ ಬದುಕಿನ ನಾನಾ ಹಂತಗಳನ್ನು ಹೇಳುವುದಕ್ಕಾಗಿಯೇ ಪ್ರತ್ಯೇಕ ಒಂದು ರೂಮು ಇದೆ. ಇದರಲ್ಲಿ ಅವರ ಅತ್ಯಪರೂಪವಾದ ಭಾವಚಿತ್ರಗಳಿವೆ. ಅವರು ದಿವಾನರಾಗಿದ್ದಾಗ, ವಿದ್ಯಾರ್ಥಿಯಾಗಿದ್ದಾಗ, ಎಂಜಿನಿಯರಾಗಿದ್ದಾಗ ಬದುಕಿನ ಮುಸ್ಸಂಜೆಯ ಫೋಟೋಗಳು ಕಾಣಸಿಗುತ್ತವೆ. ಸರ್‌ಎಂವಿ ಅಂದಾಕ್ಷಣ ನೆನಪಿಗೆ ಬರುವುದು ಕೋಟು, ಪೇಟ ಧರಿಸಿದ ಚಿತ್ರ. ಆದರೆ ಇಲ್ಲಿ ತಲೆಗೆ ಪೇಟ ಇಲ್ಲದ “ಅರೇ… ಸರ್ ಎಂ.ವಿ. ಹೀಗೂ ಇದ್ರಾ’ ಅನ್ನೋ ರೀತಿಯ ಭಾವಚಿತ್ರ ನೆನಪಾಗಿ ಕಾಡುತ್ತದೆ. ಇದರ ಜೊತೆಗೆ ಅವರು ಎಸ್‌ಬಿಎಂ ಬ್ಯಾಂಕಿನಲ್ಲಿ ಪಾಸ್‌ಬುಕ್ ಕೂಡ ಇದೆ.
ನಿಮಗೆ ನೆನಪುಗಳ ಸಂಗ್ರಹ ಚೆನ್ನಾಗಿದೆ ಅಂತ ಅನಿಸಿದರೆ ಇದಕ್ಕೆ ಮೂಲ ಕಾರಣ-ಬ್ಯಾಂಕಿನ ಸಿಬ್ಬಂದಿ ಈ ಶಶಿಧರ್, ಮನೋಹರ ಗೋಖಲೆ. ಶಶಿಧರ್ ಒಳ್ಳೆಯ ಕಲಾಕಾರರು ಕೂಡ. ಹಗಲು ರಾತ್ರಿ ಎನ್ನದೇ ನಾನಾ ಕಡೆ ಹರಡಿಕೊಂಡಿದ್ದ ಪಾರಂಪರಿಕ ವಸ್ತುಗಳನ್ನು ಒಟ್ಟು ಗೂಡಿಸಿ. ಸಂಗ್ರಹದ ಇಂಟೀರಿಯರ್ ಹೀಗೇ ಇದ್ದರೆ ಚೆನ್ನ ಅಂತ ಚೌಕಟ್ಟನ್ನು ಹಾಕಿಕೊಂಡು ಕಾರ್ಯನಿರ್ವಹಿಸಿದರ ಫಲವೇ ಈ ನೆನಪುಗಳು ಮಧುರವಾಗಿರುವುದು.
ಇದನ್ನೆಲ್ಲಾ ಹುಡುಕಿದ್ದು ಹೇಗೆ?
104 ವರ್ಷ ಪದೇ ಪದೇ ನೆನಪಾಗಬೇಕು. ಅದಕ್ಕೆ ಸಂಗ್ರಹಾಲಯ ಮಾಡಬೇಕು ಅಂತ ಒಂದು ವರ್ಷದ ಹಿಂದೆ ಪ್ಲಾನ್ ಮಾಡಿದ್ದೆವು. ಎಲ್ಲಾ ಬ್ರಾಂಚಿಗೆ ಇ.ಮೇಲ್ ಹಾಕಿದ್ದೆವು. ನಿವೃತ್ತ ಅಧಿಕಾರಿಗಳನ್ನು ಕೇಳಿಕೊಂಡಿದ್ದೆವು. ಯೂನಿಯನ್‌ಗಳಿಗೆಲ್ಲಾ ಹೇಳಿದ್ದೆವು. ಇದರಿಂದ ಪಾರಂಪರಿಕ ವಸ್ತುಗಳು ದೊರೆತವು. ಎಲ್ಲವನ್ನೂ ಶಿಶಿಧರ್ ಚೌಕಟ್ಟಾಗಿ ಜೋಡಿಸಿದ್ದಾರೆ ಎನ್ನುತ್ತಾರೆ ಬ್ಯಾಂಕ್‌ನ ಎಜಿಎಂ ನರಸಿಂಹ್ ಭಟ್.
ಎಸ್‌ಬಿಐ ಜನರಲ್ ಮ್ಯಾನೇಜರ್ ನೇಮಿರಾಜ್- “ಎಸ್‌ಬಿಐ ಜನರಲ್ ಮ್ಯಾನೇಜರ್ ಇದಕ್ಕೆ ಬಹಳ ಸಪೋರ್ಟು ಮಾಡಿದರು. ಅವರೇ ಮುತುವರ್ಜಿ ತೋರಿಸಿ, ಇಲ್ಲಿ, ಹೀಗೀಗೆ ಬರಬೇಕು ಅಂತ ಹೇಳಿ ಮಾಡಿಸಿದ್ದು. ನಮ್ಮ ಗುರಿ, ಅವರ ಕಲ್ಪನೆ ಸೇರಿ ನೆನಪು ಸಂಗ್ರಹವಾಗಿರುವುದು’ ಎನ್ನುತ್ತಾರೆ.
ನಿಮಗೂ ಈ ಅನುಭವ ಆಗಬೇಕಾದರೆ ಸ್ಟೇಟ್‌ಬ್ಯಾಂಕ್ ಆಫ್ ಮೈಸೂರು ವೃತ್ತದಲ್ಲಿರುವ ಆಗಿನ ಎಸ್‌ಬಿಐ ಈಗಿನ ಎಸ್‌ಬಿಎಂ ಕೇಂದ್ರ ಕಚೇರಿಗೆ ಹೋಗಿ ನೋಡಿ. ನೆನಪುಗಳ ಭಾವಗೀತೆ ಶುರುವಾಗುತ್ತದೆ.
ಸರ್‌ಎಂವಿ ಬದುಕು, ನಾಣ್ಯ ನೋಟುಗಳು…
ಎಂಟು ಕೋಣೆ ಕೋಣೆಗಳಲ್ಲಿ 500ಕ್ಕೂ ಹೆಚ್ಚು ಅಮೂಲ್ಯ ಇತಿಹಾಸ ಹೇಳುವ ವಸ್ತುಗಳಿವೆ. ಇದರ ಒಂದು ಕೋಣೆಯನ್ನು ಮೈಸೂರ ಸಂಸ್ಥಾನದ ಒಡೆಯರ್ ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಅವರ ಬದುಕನ್ನು ಅನಾವರಣ ಗೊಳಿಸುವ ಛಾಯಚಿತ್ರಗಳು, ಪಾಸ್‌ಬುಕ್ ದಾಖಲೆಗಳು ಇವೆ. ಇದರ ಜೊತೆಗೆ 400ಕ್ಕೂ ಹೆಚ್ಚು ನಾಣ್ಯಗಳಿವೆ. ವಿಜಯನಗರ ಅರಸರು, ಟಿಪ್ಪುಸುಲ್ತಾನ್, ಮೈಸೂರ್ ಒಡೆಯರ್ ಬಳಸುತ್ತಿದ್ದ ನಾಣ್ಯಗಳಿವೆ. ಇಡೀ ನೋಟುಗಳ ಇತಿಹಾಸ ತಿಳಿಯಬೇಕೆಂದರೆ ನೆನಪು ಸಂಗ್ರಹಾಲಯವನ್ನು ನೆನಪಿಸಿಕೊಳ್ಳಬೇಕು. ಸ್ವಾತಂತ್ರಪೂರ್ವ ಹಾಗೂ ನಂತರ ಅಂದರೆ ಹೈದರಾಬಾದ್ ನಿಜಾಮರು, ಈಸ್ಟ್ ಇಂಡಿಯಾ ಕಂಪೆನಿಯವರು ಬಳಸುತ್ತಿದ್ದ ನೋಟುಗಳು, ಇಂಡೋ ಅಮೇರಿಕಾದ ನೋಟುಗಳು ಇಲ್ಲಿ ನೂರಾರು ಕಥೆಗಳನ್ನು ಹೇಳುತ್ತಿವೆ. ಹೀಗೆ ಎಂಟೂ ರೂಮನ್ನು ನೋಡಿ ಬಂದರೆ- ಬ್ಯಾಂಕುಗಳ ಪರಂಪರೆ, ಕಣ್ಣ ಮುಂದೆ ಹಾದು ಹೋದಂತಾಗುತ್ತದೆ.
ಕಟ್ಟೆ ಗುರುರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.