ಶಾಲೆ ಅಂದರೆ ಹೀಗಿರಬೇಕು!;ಇದು ಸರ್ಕಾರಿ ಮಾದರಿ ಶಾಲೆ


Team Udayavani, Sep 8, 2018, 4:12 PM IST

80.jpg

ನಾಗತಿಹಳ್ಳಿ ಶಾಲೆಯ ಮುಂದೆ ನಿಂತರ ಹೀಗನಿಸುತ್ತದೆ. ದೂರದಿಂದ ನೋಡಿದರೆ ಇದ್ಯಾವುದೋ ಖಾಸಗಿ ಶಾಲೆಯ ಅನಿಸಿಬಿಟ್ಟರೆ ಆಶ್ಚರ್ಯ ಪಡಬೇಕಿಲ್ಲ. ಹತ್ತಿರ ಹೋದರೆ, ಅರೆ, ಸರ್ಕಾರಿ ಸ್ಕೂಲ್‌ ಹೀಗುಂಟ? ಅಂತ ಚಕಿತ ಗೊಳಿಸುವಷ್ಟು ಚೆನ್ನಾಗಿದೆ ಈ ಶಾಲೆ.

ವಿಶಾಲವಾದ ಕಟ್ಟಡ, ಶಾಲೆಯ ಅಂದಕ್ಕೆ ವಿಶಿಷ್ಟ ಮೆರುಗು ನೀಡಿರುವ ಕೆಂಪು ಇಟ್ಟಿಗೆಗಳು ಇಡೀ ಶಾಲೆಯ ಸೌಂದರ್ಯ ಹೆಚ್ಚಿಸಿದೆ. ಇಡೀ ಕಟ್ಟಡ ಎರಡೇ ಬಣ್ಣದಿಂದ ಕೂಡಿದೆ. ಕೆಂಪು ಮತ್ತು ಸಿಮೆಂಟ್‌. ಕೊಠಡಿಗಳಲ್ಲಿ ಬೋರ್ಡು ಇರುವ ಸ್ಥಳವನ್ನು ಮಾತ್ರ ಪ್ಲಾಸ್ಟಿಂಗ್‌ ಮಾಡಿದೆ. ಉಳಿದ ಕಡೆ ಜಂಬು ಇಟ್ಟಿಗೆಯ ಗೋಡೆಗಳು. ಪೇಯಿಂಟ್‌ ಇಲ್ಲ.ಬೆಳಕು, ಗಾಳಿ ಎಲ್ಲವೂ ವೈಜ್ಞಾನಿಕವಾಗಿಯೇ. 

ಮೊದಲು ಹತ್ತರಲ್ಲಿ ಹನ್ನೊಂದು ಅನ್ನುವಂತೆ ಇತ್ತು ಈ ನಾಗತಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ. ಈಗ ಅದರ ಖದರೇ ಬದಲಾಗಿದೆ. ಬಂದವರೆಲ್ಲಾ, ಸ್ಕೂಲ್‌ ಅಂದರೆ ಹೀಗಿರಬೇಕು ಅನ್ನೋ ರೀತಿ ರೂಪಿತವಾಗಿದೆ.  

  ಒಟ್ಟು 6 ಕೊಠಡಿಗಳಿವೆ. ಕೆಳಗೆ ಮೂರು, ಮೇಲೆ ಎರಡು. ಮೇಲೆ ಕೊಠಡಿಯಂತಿದ್ದರೂ ಅಲ್ಲಿ ಸಣ್ಣ ಸಮಾರಂಭ ಕೂಡ ಮಾಡಬಹುದು. ಆ ರೀತಿ ನಿರ್ಮಿಸಲಾಗಿದೆ. ಖ್ಯಾತ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರ ಹುಟ್ಟೂರು ಇದು. ಹೀಗಾಗಿ, ಊರ ಶಾಲೆಗೆ ಅತ್ಯಾಧುನಿಕ ವಿನ್ಯಾಸದ ಕಟ್ಟಡ ಬರುವಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ ಅತಿಕಾಳಜಿ ವಹಿಸಿದ್ದಾರೆ. ಇವರು ಒಂದು ಬಯಲು ರಂಗಮಂದಿರವನ್ನೂ, ಹೆತ್ತವರ ನೆನಪಿಗೆ ಗ್ರಂಥಾಲಯವನ್ನೂ ನಿರ್ಮಿಸಿಕೊಟ್ಟಿದ್ದಾರೆ. ಅಲ್ಲದೇ, ಒಟ್ಟಾರೆ ಕಟ್ಟಡ ನಿರ್ಮಾಣ ವೆಚ್ಚದಲ್ಲಿ ಅಗತ್ಯವಿದ್ದ ನಾಲ್ಕು  ಲಕ್ಷ ರೂ. ಅನ್ನು ಅವರೇ ಹೊಂದಿಸಿದ್ದಾರೆ. ಉಳಿಕೆ 16 ಲಕ್ಷ ರೂಪಾಯಿಗಳನ್ನು ಸರ್ಕಾರವೇ ನೀಡಿತ್ತು ಎನ್ನುತ್ತಾರೆ ಇಲ್ಲಿ ಈ ಹಿಂದೆ ಹೆಡ್‌ಮಾಸ್ಟರ್‌ ಆಗಿದ್ದ ಕೆ.ಎನ್‌. ಪುಟ್ಟೇಗೌಡ. 

ಈಗ ಪ್ರಾಥಮಿಕ ಶಾಲೆಯಲ್ಲಿ ಎಲ್‌.ಕೆ.ಜಿ, ಯೂ.ಕೆ.ಜಿ ಕೂಡ ಪ್ರಾರಂಭವಾಗಿದೆಯಂತೆ.  ಶಾಲೆಯಲ್ಲಿ ಪರಿಸರ ಸ್ನೇಹಿ ಶಾಲೆ ಅನ್ನೋ ಬೋರ್ಡು ಇದೆ. ಅದಕ್ಕೆ ತಕ್ಕಂತೆ ಕಟ್ಟಡವೂ ಇದೆ. ನೋಟಕ್ಕೆ ಮಾತ್ರ ಚೆಂದವಲ್ಲ ಈ ನಾಗತಿ ಹಳ್ಳಿ ಶಾಲೆ. ಒಳಾಂಗಣದ ತಾಂತ್ರಿಕತೆ ನಮ್ಮ ಸಕಲ  ಸರ್ಕಾರಿ ಶಾಲೆಗಳಿಗೆ ಮಾದರಿಯಾಗುವ ರೀತಿಯಲ್ಲಿದೆ. 

ಹೈಟೆಕ್‌ ತಂತ್ರ
 ಶಾಲೆ ಎಂದ ಮೇಲೆ ಶಿಕ್ಷಕರು ಪಾಠ ಮಾಡಬೇಕಾದರೆ ಗುಸು ಗುಸು, ಪಿಸು ಪಿಸು ಇದ್ದೇ ಇರುತ್ತದೆ. ವಿದ್ಯಾರ್ಥಿಗಳು ತೀಟೆ ಮಾಡಿದರೆ ಶಿಕ್ಷಕರು ರಾಂಗ್‌ ಆಗುತ್ತಾರೆ ಆಗಲೇ ಅವರ ಜೊತೆಗೆ ಧ್ವನಿಯೂ ಗಡುಸಾಗಿ ಕೇಳಿಬರುತ್ತದೆ!  ಎಷ್ಟೋ ಸಲ ಅಧ್ಯಾಪಕರಿಗೆ ಕೋಪವೇನೂ ಬಂದಿರುವುದಿಲ್ಲ, ಆದರೆ ಮಕ್ಕಳು “ಮೇಷ್ಟ್ರಿಗೆ ಕೋಪ ಬಂದಿರಬೇಕು, ಮುಖನೋಡಿದರೆ ಹಾಗೇ ಅನ್ನಿಸುತ್ತದೆ!’ ಎಂದು ಯೋಚಿಸುತ್ತಾರೆ. ಇಂಥ ಸಮಸ್ಯೆ ಈ ಶಾಲೆಯಲ್ಲಿಲ್ಲ. 

 ಏಕೆಂದರೆ,  ಪಾಠಮಾಡುವ ಕೋಣೆಗಳಲ್ಲಿ ಶಬ್ದಗ್ರಹಿಕೆ (ಅಕೊಸ್ಟಿಕ್‌) ತಂತ್ರಜ್ಞಾನ ಅಳವಡಿಸಿದೆ. ಹೀಗಾಗಿ ಈ ಶಾಲೆಯಲ್ಲಿ ಮೇಷ್ಟ್ರು ಮೆಲುಧ್ವನಿಯಲ್ಲಿ ಹಸನ್ಮುಖರಾಗಿ ಪಾಠಮಾಡಿದರೂ ಸ್ಪಷ್ಟವಾಗಿ ಕೇಳುತ್ತದೆ.  ಡ್ರಾಮಾ ಥಿಯೇಟರ್‌ಗಳಲ್ಲಿ ಇರುವಂತೆ “ಬೀಸಣಿಗೆ’- ಹ್ಯಾಂಡ್‌ ಫ್ಯಾನ್‌ ಆಕಾರದಲ್ಲಿ ಎದುರು ಬದಿರು ಗೋಡೆಗಳು ಒಂದು ಕೋನದಲ್ಲಿದಲ್ಲಿರುವುದರಿಂದ ಪ್ರತಿಧ್ವನಿ ಕಡಿಮೆಯಾಗಿ ಶಬ್ಧಗ್ರಹಿಕೆ ಉತ್ತಮವಾಗಿದೆ. 

ಇದೇ ಕಟ್ಟುವಿಕೆಯ ತಂತ್ರ ಪ್ರಪಂಚದ ಅತ್ಯುತ್ತಮ ನಾಟಕಗಳ ಮಂದಿರಗಳಲ್ಲಿದೆ.  ಅಲ್ಲಿ ಪ್ರತಿಧ್ವನಿಸುವುದಿಲ್ಲ ಹಾಗೂ ಧ್ವನಿ  ಸ್ಪಷ್ಟವಾಗಿ ಕೇಳುತ್ತದೆ. ಇದರಿಂದಾಗಿ ಉಚ್ಛಾರಣೆಯೂ ಉತ್ತಮವಾಗಲು ಸಹಕಾರಿ.

ಈ ಶಾಲೆಯ ಎಲ್ಲ ಕೋಣೆಗಳೂ ಅಕಾಸ್ಟಿಕ್‌ ಡಿಸೈನ್‌ ಹೊಂದಿವೆ. ಗೋಡೆಗಳು ಎದರುರುಬದಿರು ಇರದೆ ಒಂದು ಕೋನದಲ್ಲಿವೆ. ಜೊತೆಗೆ ಮಾಮೂಲಿ ನಾಲ್ಕು ಮೂಲೆಗಳ ಕೋಣೆಗಳ ಬದಲಿಗೆ ಈ ಶಾಲೆಯ ಪ್ರತಿ ಕೋಣೆಗಳಲ್ಲಿ ಆರು ಮುಲೆಗಳಿದ್ದು, ಮೂರು ಗೋಡೆಗಳು ಧ್ವನಿ ಪ್ರತಿಫ‌ಲಿಸದಂತೆ ತಡೆಯಲು ಉಬ್ಬಿದಂತೆ “ಕಾನ್‌ವೆಕ್ಸ್‌’ ಆಗಿ ಇವೆ. ಈ ಮಾದರಿಯ ಗೋಡೆಗಳು ಧ್ವನಿಯನ್ನು ಎಲ್ಲಿಬೇಕೋ ಅಲ್ಲಿ ಪ್ರಸರಿಸಿ, “ಬ್ಯಾಕ್‌ಗ್ರೌಂಡ್‌ ನಾಯ್ಸ’ -ಅನಗತ್ಯ ಶಬ್ದವನ್ನು ನಿಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುತ್ತಾರೆ ಶಾಲೆಯ ಕಟ್ಟಡ ವಿನ್ಯಾಸ ಮಾಡಿದ ಕೆ. ಜಯರಾಮ್‌. 

 ಕಣ್ಣೇ ಸಿಸಿ ಟೀವಿ
ಮಾಮೂಲಿ ಶಾಲೆಗಳಲ್ಲಿ ಕೋಣೆಯ ಒಳಪ್ರವೇಶ ಕಾರಿಡಾರ್‌ ಮೂಲಕ ಆಗುವುದರಿಂದ, ಮೇಷ್ಟ್ರು ಬಾಗಿಲಿನ ಬಳಿಗೆ ಬಂದು ಇಣುಕಿನೋಡುವವರೆಗೂ ಒಳಗೆ ಏನು ಆಗುತ್ತಿರುತ್ತದೆ ಎಂಬುದು ತಿಳಿಯುವುದಿಲ್ಲ! ಸಾಮಾನ್ಯವಾಗಿ ಯಾವ ಸಾರ್ವಜನಿಕ ಸ್ಥಳ ಹೊರಗಿನಿಂದ ನೋಡಲು ಹಾಗೂ ಒಳಗಿನಿಂದ ಹೊರಗೆ ನೋಡಿಕೊಳ್ಳಲೂ ಸುಲಭಸಾಧ್ಯ ಆಗಿರುತ್ತದೋ ಅಂಥ ಸ್ಥಳಗಳು ಹೆಚ್ಚು ಸುರಕ್ಷಿತ ಎನ್ನಬಹುದು. ನಾಗತಿಹಳ್ಳಿ ಶಾಲೆಯಲ್ಲಿ ಕಾಲಿಡುತ್ತಿದ್ದಂತೆ ಬಹುತೇಕ ಎಲ್ಲ ಕೋಣೆಗಳು ಗೋಚರವಾಗುತ್ತವೆ. ಹೀಗಾಗಿ ಮಕ್ಕಳ ಮೇಲೆ  ಕಣ್ಣಿಡಲು ಮುಖ್ಯೋಪಾಧ್ಯಾಯರಿಗೂ ಸುಲಭ ಸಾಧ್ಯ. 

ಪರಿಸರ ಪ್ರೇಮಿ ಕಟ್ಟಡ 
ಈ ಶಾಲೆಯ ಕಟ್ಟಡವನ್ನು ನೈಸರ್ಗಿಕವಾಗಿಯೇ “ಏರ್‌ ಕಂಡಿಷನ್‌’ ಇರುವಂತೆ ವಿನ್ಯಾಸ ಮಾಡಲಾಗಿದೆ. ಇಲ್ಲಿ ಗಾಳಿ ಬೆಳಕು ಧಾರಾಳವಾಗಿದೆ. ಹೀಗಾಗಿ ಬೇಸಿಗೆಯಲ್ಲಿ ತರಗತಿಗಳೆಲ್ಲವೂ ತಂಪಾಗಿರುವ ಹಾಗೆಯೇ ಚಳಿಗಾಲದಲ್ಲಿ ಬೆಚ್ಚಗಿರುತ್ತದೆ. ಇದಕ್ಕಾಗಿ ಕಿಟಕಿಗಳ ಸ್ಥಳ ವಿನ್ಯಾಸವನ್ನು ವಿಶೇಷವಾಗಿ ರೂಪಿಸಿ ಕ್ರಾಸ್‌ ವೆಂಟಿಲೇಷನ್‌ – (ಗಾಳಿ ಅಡ್ಡ ಹಾಯುವಂತೆ) ಮಾಡಲಾಗಿದೆ. ಮಾಮೂಲಿ ಇಟ್ಟಿಗೆ ಬದಲಿಗೆ ಪರಿಸರ ಸ್ನೇಹಿ ಜೇಡಿಮಣ್ಣಿನ ಠೊಳ್ಳು ಇಟ್ಟಿಗೆಗಳನ್ನು ಬಳಸಿರುವುದರಿಂದ ಶಾಲೆಯ ಹೊರನೋಟ ಬದಲಾಗಿದೆ.   

ಒಂದು ಕಾಲದಲ್ಲಿ ಶಾಲಾ ಕಟ್ಟಡಗಳು ಆಯಾ ಪ್ರದೇಶದ ಅತಿ ಉತ್ತಮ ಹಾಗೂ ಸುಂದರವಾದ ನಿರ್ಮಿತಿಗಳಾಗಿರುತ್ತಿದ್ದವು. ಇಂದಿಗೂ ಅನೇಕ ಕಲ್ಲಿನಲ್ಲಿ ಕಟ್ಟಿದ, ಗಡಿಯಾರಗೋಪುರ ಹೊಂದಿದ ಕಟ್ಟಡಗಳು ಎಪ್ಪತ್ತು, ಎಂಭತ್ತು ವರ್ಷಗಳ ಹಿಂದಿನಿಂದ ಗಟ್ಟಿ ಮುಟ್ಟಾಗಿರುವುದನ್ನು ನೋಡಬಹುದು. ನಾಗತಿಹಳ್ಳಿಯ ಶಾಲೆಯ ವಿನ್ಯಾಸ ಕೂಡ ಇಂಥದೇ ತಂತ್ರಗಳನ್ನು ಬಳಸಿ ನಿರ್ಮಿತವಾಗಿದೆ. 

ಸರ್ಕಾರಿಶಾಲೆಯನ್ನು, ಸರ್ಕಾರಿ ದುಡ್ಡಲ್ಲೇ ಹೀಗೂ ಕಟ್ಟಬಹುದು ಅನ್ನೋದಕ್ಕೆ ಇದು ಮಾದರಿ.  

ಕೆ.ಜಿ

ಟಾಪ್ ನ್ಯೂಸ್

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Puttur: ಅತ್ಯಾ*ಚಾರ ಪ್ರಕರಣ: ಆರೋಪಿಗೆ ಜಾಮೀನು

Puttur: ಅತ್ಯಾ*ಚಾರ ಪ್ರಕರಣ: ಆರೋಪಿಗೆ ಜಾಮೀನು

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.