ಕಬಡ್ಡಿ ಪೋಷಣೆಗೆ ನಾಗ್ಪುರ ವಿನೂತನ ಹೆಜ್ಜೆ


Team Udayavani, Sep 2, 2017, 3:55 AM IST

6558.jpg

ದೇಶಿ ಕ್ರೀಡೆ ಕಬಡ್ಡಿಯನ್ನು ಉಳಿಸುವ ಹಾಗೂ ಪೋಷಿಸುವ ದಿಸೆಯಲ್ಲಿ ನಾಗ್ಪುರದ ಮಹಾನಗರ ಪಾಲಿಕೆ ದಿಟ್ಟ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಬಡ್ಡಿ ಕ್ರೀಡೆ ಯನ್ನು ಕಡ್ಡಾಯವಾಗಿಸಿದೆ. ನಗರ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಮಹಾನಗರ ಪಾಲಿಕೆಯೇ ನಿರ್ವಹಿಸುತ್ತಿದ್ದು, ಶಾಲೆಗಳ ಅಭಿವೃದ್ಧಿಗಾಗಿ ವ್ಯಾಪಕ ಅನುದಾನ ನೀಡುತ್ತಿದೆ. ಇದರಿಂದಾಗಿ ನಾಗ್ಪುರದಲ್ಲಿ ಮನೆ ಮನದಲ್ಲಿಯೂ ಕಬಡ್ಡಿ ನೆಲೆ ಮಾಡಿದೆ.

ಶಾಲಾ ಹಂತದಿಂದಲೇ ಮಕ್ಕಳಲ್ಲಿ ಕಬಡ್ಡಿ ಕುರಿತು ಆಸಕ್ತಿ ಮೂಡಿಸಲು ಮಹಾನಗರ ಪಾಲಿಕೆ ಹಲವು ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿದೆ. ಪ್ರವೀಣ ಡಟಕೆ ನಾಗ್ಪುರದ ಮಹಾಪೌರರಾಗಿದ್ದ ಸಂದರ್ಭದಲ್ಲಿ ದೇಶಿ ಕ್ರೀಡೆ ಕಬಡ್ಡಿಯನ್ನು ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಕಲಿಸಬೇಕೆಂದು ಠರಾವು ಮಾಡಿದರು. ಇದಕ್ಕೆ ಪಕ್ಷಭೇದವಿಲ್ಲದೆ ಎಲ್ಲ ಪಾಲಿಕೆ ಸದಸ್ಯರೂ ಸರ್ವಾನುಮತದಿಂದ ಬೆಂಬಲ ಸೂಚಿಸಿದರು. ಪಾಲಿಕೆ ಕ್ರಮವನ್ನು ಇಡೀ ನಗರವೇ ಸ್ವಾಗತಿಸಿತು. ಸ್ವತಃ ಕಬಡ್ಡಿ ಪಟುವಾಗಿರುವ ಪಾಲಿಕೆ ಸದಸ್ಯ ಹಾಗೂ ಪಾಲಿಕೆ ಕ್ರೀಡಾ ವಿಭಾಗದ ಚೇರ¾ನ್‌ ನಾಗೇಶ ಸಹಾರೆ ಮುಂದೆ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರು.

ನಾಗೇಶ ಸಹಾರೆ ಎಲ್ಲ ಸರ್ಕಾರಿ ಶಾಲೆಗಳ ಶಿಕ್ಷಕರ ಸಭೆ ಕರೆದು ಮಕ್ಕಳಿಗೆ ಪ್ರತಿದಿನ ಕಬಡ್ಡಿ ಹಾಗೂ ಖೋಖೋ ಆಡಿಸುವಂತೆ ಸೂಚಿಸಿದರು. ಅಲ್ಲದೇ ಕಬಡ್ಡಿ, ಖೋಖೋ ಕ್ರೀಡೆಗಳ ಉತ್ತೇಜನಕ್ಕೆ ಅವಶ್ಯಕವಿರುವ ಪೂರಕ ಸೌಲಭ್ಯಗಳನ್ನು ಕಲ್ಪಿಸಿದರು. ಮಕ್ಕಳಿಗೆ ಸೂಕ್ತ ತರಬೇತಿ ನೀಡುವ ದಿಸೆಯಲ್ಲಿ ನಾಗ್ಪುರ ಅಮೇಚೂರ್‌ ಕಬಡ್ಡಿ ಅಸೋಸಿಯೇಶನ್‌ನೊಂದಿಗೆ ಮಹಾನಗರ ಪಾಲಿಕೆ ಒಪ್ಪಂದ ಮಾಡಿಕೊಂಡಿದೆ. ಅಸೋಸಿಯೇಶನ್‌ಗೆ ಗೌರವ ಧನ ನೀಡಿ ಕೋಚ್‌ಗಳ ಮಾರ್ಗದರ್ಶನದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. 

ಕೋಚ್‌ಗಳು ಎಲ್ಲ ಮಕ್ಕಳನ್ನು ಕಬಡ್ಡಿಯಲ್ಲಿ ತೊಡಗಿಸಿ, ಅದರಲ್ಲಿ ಆಸಕ್ತ ಮಕ್ಕಳನ್ನು ಗ‌ುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡುತ್ತಾರೆ. ಹಿರಿಯ ಕಬಡ್ಡಿ ಪಟುಗಳು ಕೂಡ ಸರ್ಕಾರಿ ಶಾಲೆಯಲ್ಲಿಯೇ ಕಲಿತು ಬಂದಿರುವುದರಿಂದ ಅವರು ಆಸಕ್ತಿಯಿಂದ ಕಬಡ್ಡಿ ಕಲಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳ ಶಿಕ್ಷಕರು ಕಬಡ್ಡಿ ತರಬೇತಿ ಕುರಿತು 3 ತಿಂಗಳಿಗೊಮ್ಮೆ ವರದಿ ನೀಡಬೇಕು. ಚುರುಕಾದ ಮಕ್ಕಳನ್ನು ಗುರುತಿಸಿ ತಂಡ ಕಟ್ಟುವ ಸ್ವಾತಂತ್ರÂವನ್ನು ಹಿರಿಯ ಕಬಡ್ಡಿ ಆಟಗಾರರಿಗೆ ನೀಡಲಾಗಿದೆ.
ಮಹಾನಗರ ಪಾಲಿಕೆ ಆದೇಶದ ನಂತರ ಪ್ರತಿ ದಿನ ಬೆಳಗ್ಗೆ ಅಥವಾ ಸಂಜೆ ಕಬಡ್ಡಿ, ಖೋಖೋ ಆಡಿಸುವುದು ಕಡ್ಡಾಯ. ಶನಿವಾರ ಬೆಳಗ್ಗೆ 8ಕ್ಕೆ ಶಾಲೆ ಆರಂಭಗೊಳ್ಳುವುದರಿಂದ ಕನಿಷ್ಠ 2 ಗಂಟೆ ಮಕ್ಕಳು ಕಬಡ್ಡಿ ಆಡುತ್ತಾರೆ. ಕೆಲ ಮಕ್ಕಳು ಭಾನುವಾರ ಕೂಡ ಬಂದು ಮೈದಾನಗಳಲ್ಲಿ ತಂಡ ಕಟ್ಟಿಕೊಂಡು ಆಡುತ್ತಾರೆ. 

ಅಲ್ಲದೇ ಪ್ರತಿ ವರ್ಷ 15 ದಿನಗಳ ಶಿಬಿರ ಆಯೋಜಿಸಿ ಪ್ರತಿಭೆಗಳನ್ನು ಹುಡುಕಿ, ಮುಂದೆ ತರಬೇತಿ ನೀಡಲಾಗುತ್ತದೆ. ಅಲ್ಲಿಗೆ ಬರುವ ಸುಮಾರು 200 ವಿದ್ಯಾರ್ಥಿಗಳಲ್ಲಿ ಸಮರ್ಥ ಮಕ್ಕಳನ್ನು ಆಯ್ಕೆಮಾಡಲಾಗುತ್ತದೆ. ದೀಪಾವಳಿ, ಕ್ರಿಸ್ಮಸ್‌ ರಜೆಯಲ್ಲಿ ಶಿಬಿರ ಆಯೋಜಿಸಲಾಗುತ್ತದೆ. ಹಿರಿಯ ಕಬಡ್ಡಿ ಆಟಗಾರರು ಬಂದು ಮಕ್ಕಳಿಗೆ ತರಬೇತಿ ನೀಡುತ್ತಾರೆ. ಮಕ್ಕಳ ತಪ್ಪುಗಳನ್ನು ತಿದ್ದಿ, ಪಟ್ಟುಗಳನ್ನು ಹೇಳಿಕೊಡುತ್ತಾರೆ.

ನಗರದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಬಿಡುವಿನ ವೇಳೆಯಲ್ಲಿ ಶಾಲಾ ಮೈದಾನದಲ್ಲಿ ಕಬಡ್ಡಿ ಆಡುವುದು ಸಾಮಾನ್ಯ ದೃಶ್ಯ. ಗೆದ್ದ ತಂಡಕ್ಕೆ ಚಾಕೊಲೇಟ್‌, ಪೆನ್‌, ಪೆನ್ಸಿಲ್‌ ಬಹುಮಾನ ನೀಡಲಾಗುತ್ತದೆ. ಇದು ಮಕ್ಕಳಲ್ಲಿ ಕಬಡ್ಡಿ ಬಗೆಗಿನ ಆಸಕ್ತಿ ಹೆಚ್ಚಿಸಲು ಪೂರಕವಾಗಿದೆ. ನಾಗ್ಪುರ ದಲ್ಲಿ ಶಾಲಾ ಮಕ್ಕಳಿಗಾಗಿ ಹಲವಾರು ಕಬಡ್ಡಿ ಟೂರ್ನಿಗಳನ್ನು ಆಯೋಜಿಸಲಾಗುತ್ತದೆ. ಟೂರ್ನಿಗಳ ಸಂಖ್ಯೆ ಹೆಚ್ಚಿದಂತೆ ಪಟುಗಳಿಗೆ ಅವಕಾಶಗಳು ಕೂಡ ಹೆಚ್ಚುತ್ತವೆ. 

ಪ್ರೊ ಕಬಡ್ಡಿ ಆರಂಭಗೊಂಡಾಗಿನಿಂದ ಕಬಡ್ಡಿ ವಲಯ ವಿಸ್ತಾರಗೊಳ್ಳುತ್ತಿದೆ. ಅನೇಕ ಕ್ಲಬ್‌ಗಳು ನಗರ ಪ್ರದೇಶದ ಉಚ್ಚ ಮಧ್ಯಮ ವರ್ಗ, ಸಿರಿವಂತರ ಮಕ್ಕಳಿಗೆ ತರಬೇತಿ, ಅವಕಾಶ ನೀಡುತ್ತವೆ. ಆದರೆ ಕೊಳಚೆ ಪ್ರದೇಶದ ಬಡವರ ಮಕ್ಕಳು ಕಬಡ್ಡಿಯಿಂದ ವಿಮುಖರಾಗುವ ಸಾಧ್ಯತೆ ಇರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಬಡ ಮಕ್ಕಳಲ್ಲಿ ಪ್ರತಿಭಾವಂತ ಕಬಡ್ಡಿ ಪಟುಗಳನ್ನು ಗುರುತಿಸುವ, ಬೆಳೆಸುವ ದಿಸೆಯಲ್ಲಿ ಮಹಾನಗರ ಪಾಲಿಕೆ ಸರ್ಕಾರಿ ಶಾಲೆಗಳಲ್ಲಿ ಕಬಡ್ಡಿ ಕಡ್ಡಾಯ ಮಾಡಿದೆ. 

ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಆಸಕ್ತಿ, ಕೌಶಲ್ಯವನ್ನು ಗಮನಿಸಿ ತರಬೇತಿ ನೀಡಲಾಗುತ್ತಿದೆ. ದೈಹಿಕ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಕೂಡ ಕಬಡ್ಡಿ ಆಟಗಾರರಿಗೆ ಆದ್ಯತೆ ನೀಡಲಾಗುತ್ತಿದೆ. ಕಬಡ್ಡಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಶಾಲೆಗಳ ಶಿಕ್ಷಕರನ್ನು ಸತ್ಕರಿಸುವುದರಿಂದ ಶಿಕ್ಷಕರು ಕೂಡ ಆಸಕ್ತಿಯಿಂದ ಮಕ್ಕಳಿಗೆ ಕಬಡ್ಡಿ ಕಲಿಸುತ್ತಾರೆ. ಹಸಿ ಗೋಡೆಯಲ್ಲಿ ಕಲ್ಲೆಸೆದರೆ ಅದು ಗೋಡೆಗೆ ಶಾಶ್ವತವಾಗಿ ಅಂಟಿಕೊಳ್ಳುವಂತೆ ಆಸಕ್ತ ಮಕ್ಕಳು ಬಾಲ್ಯಾವಸ್ಥೆಯಿಂದಲೇ ಕಬಡ್ಡಿಗೆ ಅಂಟಿಕೊಳ್ಳುತ್ತಾರೆ. ಇಲ್ಲಿನ ಮಕ್ಕಳಿಗೂ ಕಬಡ್ಡಿ ಬಗ್ಗೆ ಅದೆಂಥದೋ ಮೋಹ. ಮನೆಯಲ್ಲಿ ಅಪ್ಪ, ಚಿಕ್ಕಪ್ಪ ಅಥವಾ ಅಣ್ಣ ಆಡುತ್ತಾರೆ ಅದಕ್ಕೆ ನಾನು ಕೂಡ ಕಬಡ್ಡಿ ಆಡಬೇಕೆಂಬ ಮಮತೆಯಿದೆ. 

ಮಹಾರಾಷ್ಟ್ರದ 62 ಜಿಲ್ಲೆಗಳಲ್ಲಿ ನಾಗ್ಪುರ ಕಬಡ್ಡಿಯಲ್ಲಿ ಸದಾ ಅಗ್ರಸ್ಥಾನದಲ್ಲಿರಬೇಕು ಹಾಗೂ ರಾಷ್ಟ್ರಮಟ್ಟದಲ್ಲಿಯೂ ಇಲ್ಲಿನ ಕಬಡ್ಡಿ ಪ್ರತಿಭೆಗಳು ಸಾಧನೆ ಮಾಡಬೇಕೆಂಬ ಮಹದುದ್ದೇಶದಿಂದ ಮಹಾನಗರ ಪಾಲಿಕೆ ಭರವಸೆಯ ಕ್ರಮ ಕೈಗೊಂಡಿದೆ. ಕ್ರೀಡೆಯಿರಲಿ, ಕಲೆಯಿರಲಿ ಸಂಪ್ರದಾಯವನ್ನು ಉಳಿಸಬೇಕೆಂಬ ತುಡಿತ ಜನಪ್ರತಿನಿಧಿಗಳಿಗಿರಬೇಕು. ಕ್ರಿಕೆಟ್‌ ಅಬ್ಬರದಲ್ಲಿ ದೇಶಿ ಕ್ರೀಡೆಗಳು ಕಣ್ಮರೆಯಾಗದಿರಲಿ ಎಂಬ ಉದ್ದೇಶದಿಂದ ನಾಗ್ಪುರ ಮಹಾನಗರ ಪಾಲಿಕೆ ಕೈಗೊಂಡ ಕ್ರಮ ಅನುಕರಣೀಯವಾಗಿದೆ. 

ಪ್ರೋ ಕಬಡ್ಡಿಯಿಂದಾಗಿ ನಗರದ ಮಕ್ಕಳಲ್ಲಿ ಕಬಡ್ಡಿ ಕ್ರೇಜ್‌ ಹೆಚ್ಚುತ್ತಿದೆ. ಉಳ್ಳವರ ಮಕ್ಕಳು ಕ್ಲಬ್‌ಗಳಲ್ಲಿ, ಅನುಭವಿ ಕೋಚ್‌ಗಳ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಾರೆ. ಸರ್ಕಾರಿ ಶಾಲೆಯ ಬಡ ಮಕ್ಕಳು ಅವಕಾಶ ವಂಚಿತರಾಗಬಾರದು ಎಂಬ ಕಾರಣದಿಂದ ಸರ್ಕಾರಿ ಶಾಲೆಗಳಲ್ಲಿ ಕಬಡ್ಡಿ ಕಡ್ಡಾಯ ಮಾಡಲಾಗಿದೆ. 
ನಾಗೇಶ ಸಹಾರೆ, ಮಹಾನಗರ ಪಾಲಿಕೆ ಕ್ರೀಡಾ ವಿಭಾಗದ ಚೇರಮನ್‌

ನಾಗ್ಪುರದ ಅನೇಕ ಕಬಡ್ಡಿ ಪಟುಗಳು ಮಹಾರಾಷ್ಟ್ರಕ್ಕೆ ಹಾಗೂ ದೇಶಕ್ಕೆ ಹಿರಿಮೆ ತಂದಿದ್ದಾರೆ. ಈ ಪರಂಪರೆ ಮುಂದುವರೆಯಲು ಪೂರಕ ವಾತಾವರಣ ಕಲ್ಪಿಸುವುದು ಎಲ್ಲ ಜನಪ್ರತಿನಿಧಿಗಳ ಜವಾಬ್ದಾರಿ. ಕಬಡ್ಡಿ ಅಭ್ಯುದಯಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು. ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳಿಗೆ ಕಬಡ್ಡಿ ತರಬೇತಿ ನೀಡಿ ಪೋಷಿಸಲಾಗುತ್ತಿದೆ. 
ಗಿರೀಶ ವ್ಯಾಸ, ನಾಗ್ಪುರ ಶಾಸಕ

ವಿಶ್ವನಾಥ ಕೋಟಿ 

ಟಾಪ್ ನ್ಯೂಸ್

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

1-crick

T20; ಸ್ಯಾಮ್ಸನ್‌ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-rb

ATP Finals Doubles; ಬೋಪಣ್ಣ ಜೋಡಿಗೆ 6ನೇ ಶ್ರೇಯಾಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.