ಜಟ್ಟಿಗಳ ನಿಂಬಜಾದೇವಿ


Team Udayavani, Oct 7, 2017, 6:40 AM IST

bh4.jpg

ಶಿವಮೊಗ್ಗ ಜಿಲ್ಲೆ ಕುಂಸಿ ಗ್ರಾಮದಲ್ಲಿರುವ ನಿಂಬಜಾದೇವಿಯ ದೇಗುಲ ಬಹು ಸುಂದರ. ಇದು ಬಹು ದೂರದಿಂದಲೇ ಭಕ್ತರನ್ನು ಆಕರ್ಷಿಸುವಂತಿದೆ. ಶಿವಮೊಗ್ಗ-ಜೋಗ ರಾಷ್ಟ್ರೀಯ ಹೆದ್ದಾರಿ 206 ರ ಸಮೀಪದಲ್ಲಿರುವ ಈ ದೇವಾಲಯ, ಗ್ರಾಮದ ಜಟ್ಟಿ ಜನಾಂಗದವರ ಕುಲದೇವಿಯಾಗಿ ನಿತ್ಯ ಆರಾಧಿಸಲ್ಪಡುತ್ತಿದೆ. ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿ ಹಾಸವಿದೆ. ಇಲ್ಲಿರುವ ಜಟ್ಟಿ ಕುಲದವರು ಗುಜರಾತ್‌ ಮೂಲದವರು.  

4-5 ತಲೆಮಾರುಗಳ ಹಿಂದೆ ವಲಸೆ ಬಂದವರು. ಹಾಗೆ ವಲಸೆ ಬರುವಾಗ ಈ ಜನಾಂಗದ ಹಿರಿಯ ವ್ಯಕ್ತಿಯೋರ್ವ ತಮ್ಮ ಕುಲದೇವರಾದ ನಿಂಬುಜಾ­ದೇವಿಯ ವಿಗ್ರಹವನ್ನು ಇಲ್ಲಿಗೆ ತಂದಿದ್ದರು. ಈಗಿನ ನೂತನ ದೇವಾಲಯದಲ್ಲಿನ ಗರ್ಭಗೃಹದಲ್ಲಿ ದೇವರ ಮೂರ್ತಿಯ ಎದುರು ಕೈಮುಗಿದ ಭಂಗಿಯಲ್ಲಿ  ಆ ಜಟ್ಟಿಯ ಚಿಕ್ಕಮೂರ್ತಿ ಇದೆ. ಇದಕ್ಕೆ ನಿತ್ಯವೂ ಪೂಜೆ ನಡೆಯುತ್ತದೆ. ಮೈಸೂರು ಅರಸರ ಕಾಲದಲ್ಲಿ ಇವರಿಗೆ ರಾಜಾಶ್ರಯ ದೊರೆತಿತ್ತು.

ದಸರಾ ಮಹೋತ್ಸವ, ಅರಮನೆಯ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಲ್ಲಕುಸ್ತಿ, ಮುಷ್ಟಿಕುಸ್ತಿ ಮುಂತಾದ ಕಸರತ್ತು ಪ್ರದರ್ಶಿಸಲು ಇಲ್ಲಿನ ಜಟ್ಟಿಗಳು ಅರಮನೆಯ ಆಮಂತ್ರಣದ ಮೇರೆಗೆ ಹೋಗುತ್ತಿದ್ದರು. ಆ ಸಮಯದಲ್ಲಿ ಮೈಸೂರು ಅರಸರಿಂದ ಇಲ್ಲಿನ ಪ್ರಸಿದ್ಧ ಕುಸ್ತಿ ಪಟುಗಳಿಗೆ ಭೂಮಿ, ಕನಕ ಮತ್ತು ಧಾನ್ಯಗಳ ದೊಡ್ಡ ಉಡುಗೊರೆ ದೊರೆಯುತ್ತಿತ್ತು. ಈ ದೇವಾಲಯ ಇರುವ ಸ್ಥಳ ಆರಂಭದಲ್ಲಿ ಚಿಕ್ಕ ಗುಡಿಯಂತಿದ್ದು, ಗರಡಿಮನೆಯಾಗಿತ್ತು.

1960 ರ ಸುಮಾರಿನಲ್ಲಿ ಗರಡಿ ಮನೆಯಲ್ಲಿ ತಮ್ಮ ಕುಲದೇವರಾದ ನಿಂಬಜಾದೇವಿ ಫೋಟೋ ಇಟ್ಟು ನಿತ್ಯ ಪೂಜಿಸಿ ಕುಸ್ತಿ ತರಬೇತಿ ನಡೆಸುತ್ತಿದ್ದರು. ಗುಡಿಯನ್ನಾಗಿ ಮಾಡಿಕೊಂಡಾಗಲೇ ಅದರ ಎದುರು ಬೇವಿನ ಸಸಿ ನೆಟ್ಟಿದ್ದರು. ಈಗ ಅದು ದೊಡ್ಡ ಮರವಾಗಿ, ಜಟ್ಟಿಗಳ ಪೂಜಿನೀಯ ಸ್ಥಳವೂ ಆಗಿದೆ. ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಈ ಗುಡಿಗೆ ನಿತ್ಯ ಪೂಜಿಸಲು ಶಿಲಾ ವಿಗ್ರಹ ಕೊಟ್ಟರು.

ಆ ವಿಗ್ರಹವನ್ನು ಪ್ರತಿಷ್ಠಾಪಿಸಿ ಈ ಗರಡಿಮನೆಯನ್ನು ದೇವರ ಗುಡಿಯನ್ನಾಗಿ ಇಲ್ಲಿನ ಭಕ್ತರು ಬದಲಾಯಿಸಿಕೊಂಡರು. 1966 ಸುಮಾರಿಗೆ ರಾಜರ ಆಳ್ವಿಕೆ ಅಂತ್ಯಗೊಂಡ ಕಾರಣ ಇಲ್ಲಿನ ದೇವರ ಗುಡಿಗೆ ಮತ್ತು ಕುಸ್ತಿ ಪಟುಗಳಿಗೆ ಮೈಸೂರು ಅರಸರಿಂದ ಸಿಗುತ್ತಿದ್ದ ಧನ ಸಹಾಯ ನಿಂತುಹೋಯಿತು. ನಂತರದ ದಿನಗಳಲ್ಲಿ ಇಲ್ಲಿನ ಜಟ್ಟಿ ಕುಟುಂಬದ ಹೊಸ ತಲೆಮಾರಿನವರು ಶಿಕ್ಷಣ ಪಡೆದು ವಿದ್ಯಾವಂತರಾಗಿ ಇತರೆ ವೃತ್ತಿಗಳಿಗೆ ಸೇರಿದರು.  

ದೇಗುಲದ ಸುತ್ತಮುತ್ತಲಿನ ಪ್ರದೇಶಕ್ಕೆ ಜಟ್ಟಿಗನ ಬೀದಿ ಎಂಬ ಹೆಸರಿದ್ದು, ಸುಮಾರು 50 ಜಟ್ಟಿ ಕುಟುಂಬಗಳು ವಾಸವಾಗಿವೆ. ಜಟ್ಟಿ ಜನಾಂಗದ ಪ್ರಮುಖರಾದ ಸತ್ಯನಾರಾಯಣ ಜಟ್ಟಿ, ಪಿ.ಆರ್‌.ವೆಂಕಟೇಶ ಜಟ್ಟಿ, ಶ್ರೀನಿವಾಸ ಜಟ್ಟಿ ಇನ್ನಿತರರ ನೇತೃತ್ವದಲ್ಲಿ ಅಭಿವೃದ್ಧಿ ಸಮಿತಿ ನಿರ್ಮಿಸಿಕೊಂಡು ಈಗ ಅತ್ಯಾಧುನಿಕ ದೇವಾಲಯವಾಗಿ ಮಾರ್ಪಟ್ಟಿದೆ. 2015 ರ ಏಪ್ರಿಲ್‌ ಕೊನೆ ವಾರದಲ್ಲಿ ಕೂಡಲಿಯ ಶಂಕರಾಚಾರ್ಯ ಪೀಠದ ಶ್ರೀವಿದ್ಯಾಭಿನವ ವಿದ್ಯಾರಣ್ಯ ಮಹಾಸ್ವಾಮಿಗಳಿಂದ ದೇವರ ವಿಗ್ರಹದ ಪುನರ್‌ ಪ್ರತಿಷ್ಠಾಪನೆ ಮತ್ತು ನೂತನ ದೇಗುಲದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಈ ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ಕಾರ್ತಿಕ ಮಾಸದಲ್ಲಿ ನಿತ್ಯ ಸಂಜೆ ದೀಪೋತ್ಸವ, ಯುಗಾದಿಯಂದು ಪರ್ವ ಉತ್ಸವ ಹಾಗೂ ಎಲ್ಲಾ ಹಬ್ಬಗಳಂದು ವಿಶೇಷ ಅಲಂಕಾರ ನಡೆಯುತ್ತದೆ. ಪ್ರತಿ ಮಂಗಳವಾರ, ಶುಕ್ರವಾರ,ಹುಣ್ಣಿಮೆ, ಅಮಾವಾಸ್ಯೆಗಳಂದು ಸರ್ವಾಲಂಕಾರ ಪೂಜೆ ನಡೆಯು­ತ್ತದೆ. ವಿದ್ಯೆ, ವಾಹನ,ಸಂತಾನ ಭಾಗ್ಯ, ಉದ್ಯೋಗ ಪ್ರಾಪ್ತಿ, ಮಾನಸಿಕ ಶಾಂತಿ ಇತ್ಯಾದಿ ನಿಮಿತ್ತ ಭಕ್ತರು ಇಲ್ಲಿಗೆ ಬಂದು ಹರಕೆ ಹೊತ್ತು ಪೂಜೆ ಸಲ್ಲಿಸುತ್ತಾರೆ.

* ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

1-reee

T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ

TMK-somanna2

ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್‌ ಆಗಲಿ: ವಿ.ಸೋಮಣ್ಣ

1-ayodhya

Ayodhya; ರಾಮಮಂದಿರ ಪ್ರಾಣ ಪ್ರತಿಷ್ಠಾ ಮೊದಲ ವಾರ್ಷಿಕೋತ್ಸವ ಸಂಭ್ರಮ

kejriwal 3

Ramesh Bidhuri ಬಿಜೆಪಿಯ ಸಿಎಂ ಫೇಸ್ ಎಂದು ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್!

rape

Kerala; 5 ವರ್ಷಗಳಲ್ಲಿ 64 ಜನರಿಂದ ಲೈಂಗಿ*ಕ ದೌರ್ಜನ್ಯ: ಯುವತಿ ಹೇಳಿಕೆ !!

Vijayendra did not go to Kalaburagi due to Priyank Kharge’s threat: MLA Yatnal

BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್‌ ವಶ

NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್‌ ವಶ

Beejadi: ಗೋ ಕಳವಿಗೆ ಯತ್ನಿಸಿದ ಆರೋಪಿಯ ಸೆರೆ

Beejadi: ಗೋ ಕಳವಿಗೆ ಯತ್ನಿಸಿದ ಆರೋಪಿಯ ಸೆರೆ

1-reee

T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ

1-chirag

Malaysia Open; ಸೆಮಿಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಸೋಲು

Kumbale: ರೈಲಿನಿಂದ ಬಿದ್ದು ಯುವಕನ ಸಾವು

Kumbale: ರೈಲಿನಿಂದ ಬಿದ್ದು ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.