ಅಹೋ ರಾತ್ರರ ಬೆಳಕಿನ ಮಾತು


Team Udayavani, Jan 21, 2017, 11:28 AM IST

2000.jpg

  ನಟೇಶ ಪೋಲೆಪಲ್ಲಿ. ಬಲ್ಲವರಿಗೆ ಅಹೋರಾತ್ರಾ. ಈ ಭೂಮಿ ಗಗನದಿಂದ ಹೇಗೆ ಕಾಣಿಸುತ್ತದೆ ಅನ್ನುವುದನ್ನು ಇಟ್ಟುಕೊಂಡು ಗಗನ ಗೋಚರಿ ವಸುಂಧರಾ ಎಂಬ ಪುಸ್ತಕ ಬರೆದವರು. ಪರಕಾಯ ಪ್ರವೇಶದ ಗುಟ್ಟುಗಳನ್ನು ಇಟ್ಟುಕೊಂಡು  ಆಯತನ ಎಂಬ ಕಾದಂಬರಿಯೊಂದನ್ನು ವಿರಚಿಸಿದವರು.  ಮನಸ್ಸಿನ ಗೊಂದಲಗಳಿಗೆ ಉತ್ತರವಾಗುವಂಥ ಮೂರ್ಖನ ಮಾತುಗಳನ್ನು ಬರೆದು ಹೆಸರಾದವರು. ಅದ್ಬುತವಾದ ಸ್ಮರಣ ಶಕ್ತಿ, ಸಾಹಿತ್ಯ ಜಗತ್ತಿನೊಂದಿಗೆ ಒಡನಾಟ, ಮನಸ್ಸಿನೊಂದಿಗೆ ಮಾತಾಡುವ ತಾಳ್ಮೆ, ಎದುರಿಗಿದ್ದವರಿಗೆ ಭರವಸೆ ತುಂಬಬಲ್ಲ ಸಕಾರಾತ್ಮಕ ಗುಣಗಳ ಅಹೋರಾತ್ರ ಅವರೊಡನೆ ಬಹುಮುಖೀ ಇಂದಿನ ಸಮಾಜದ ಮನಸ್ಥಿತಿಯ ಬಗ್ಗೆ ಮಾತಾಡಿದೆ.

ನಿಮ್ಮ ಮುಂದಿರೋ ಸಮಾಜಾನ ಹೇಗೆ ನೋಡ್ತೀರಿ? 
  ನಮ್ಮ ದೇಶದಲ್ಲಿ ನೂರು ಕೋಟಿ ಜನ ಇದ್ದಾರೆ. ಹಾಗೇ ನಮ್ಮ ದೇಹದಲ್ಲೂ ನೂರಾರು ಕೋಟಿ ಜೀವಕಣಗಳಿವೆ. ಕೆಲಸಕ್ಕೆ ಅನುಗುಣವಾಗಿ ಯೂನಿಯನ್‌ ಮಾಡಿಕೊಂಡಿವೆ. ಕಾಲಲ್ಲಿ ಇರುವ ಕಣಗಳು ಹುಟ್ಟತ್ತೆ, ಕ್ಷಣ ಮಾತ್ರದಲ್ಲಿ ಸಾಯುತ್ತವೆ. ಮಾಂಸದಲ್ಲಿರೋದು ತಿಂಗಳಿಗೆ ಒಂದು ಸಲ ಸಾಯುತ್ತದೆ. ಹೀಗೆ ನಮ್ಮ ದೇಹ ನಿತ್ಯ ಸ್ಮಶಾನದಂತೆ. ನಮ್ಮ ದೇಹದಲ್ಲಿ ಯಾವುದೋ ಒಂದು ಕಣ ಮಾತ್ರ ಪವರ್‌ಫ‌ುಲ್‌.  ಎಲ್ಲ ಕಣಗಳು ಸೇರಿ “ನಮ್ಮ ನಾಯಕನಾಗು. ನಮ್ಮ ಕಷ್ಟ, ಸುಖಗಳನ್ನು ಮುನ್ನಡೆಸು ಅಂತ ಪವರ್‌ಫ‌ುಲ್‌ ಕಣಕ್ಕೆ ಜವಾಬ್ದಾರಿ ಕೊಡುತ್ತವೆ. ನೀವು ಆಗ ಪ್ರಧಾನ ಮಂತ್ರಿ. ನೀವು ಇಡೀ ದೇಹದಲ್ಲಿ ಕೂತು ಆಪರೇಟ್‌ ಮಾಡ್ತೀರಿ. ಇತರೆ ಕಣಗಳಿಗೆ ಇಷ್ಟವಾಗದೇ ಇದ್ದರೆ ನಾಯಕತ್ವದಿಂದ ಕೆಳಗಿಳಿಸಬಹುದು. ಎಲೆಕ್ಷನ್‌ ಮಾಡಿ ಬೇರೆ  ಕಣವನ್ನು ತಂದು ಕೂಡಿಸಬಹುದು. ದೇಹ, ದೇಶ, ದೇವ ಮೂರು ನಡೆಯೋದು ಇದೇ ರೀತಿಯಲ್ಲಿ.   ನಮ್ಮ ಮೂಳೆಗಳಲ್ಲಿರುವ ಕಣಗಳು ಸಡಿಲವಾದಾಗ- ಒಂದು ದಿನ  ನಾನು ಅನ್ನೋದು ಶಾಶ್ವತ ಅಂತ ಗೊತ್ತಾಗುತ್ತದೆ.   ಆಗ ಎಲ್ಲ ಸಾರವನ್ನು ಹೀರಿ ವೀರ್ಯ ಕಣಗಳಾಗಿ ಹೊರ ಹೋಗುತ್ತದೆ. ದೇಹ ಸತ್ತರು ಕೆಲಸ ಸಾಯಬಾರದು ಅಂತ ಹೊಸ ದೇಹ ಉತ್ಪತ್ತಿ ಮಾಡಿ ಅಲ್ಲಿಗೆ ತಲುಪುತ್ತದೆ. 

 ಸಮಾಜ, ದೇಶದಲ್ಲಿ ಒಳ್ಳೆದೋ ಕೆಟ್ಟೋದು ಇರಬೇಕೋ ಬೇಡವೋ?
 ಆ ವಿಚಾರಕ್ಕೆ ಬರ್ತೀನಿ. ಇಡೀ ವ್ಯವಸ್ಥೆಯಲ್ಲಿ ಎಡ, ಬಲ, ಒಳ್ಳೆಯದು, ಕೆಟ್ಟದ್ದು ಎಲ್ಲವೂ ಇರುತ್ತದೆ. ಇದರಲ್ಲಿ ಯಾವುದು ಇಲ್ಲ ಅಂದರೂ ಕಷ್ಟ. ನಮಗೆ ಎರಡು ಕಿವಿ ಇದೆ. ಒಂದನ್ನು ಕಳೆದು ಕೊಂಡರೂ ದೇಹದ ಬ್ಯಾಲೆನ್ಸ್‌ ತಪ್ಪು
ತ್ತದೆ. ಹಾಗೇ ಸಮಾಜ, ದೇಶ ಕೂಡ. ಒಳ್ಳೆಯದನ್ನು ಆಲೋಚನೆ ಮಾಡುವವರ ಸರಿ ಸಮನಾಗಿ, ಕೆಟ್ಟದ್ದನ್ನು ಆಲೋಚನೆ ಮಾಡುವವರು ಇದ್ದೇ ಇರುತ್ತಾರೆ. ಇವರಿಬ್ಬರಲ್ಲಿ ಒಬ್ಬರು ಇಲ್ಲ ಅಂದರೂ ಚಕ್ರ ಕಳೆದುಕೊಂಡ ರಥದ ರೀತಿ ಆಗಿಬಿಡುತ್ತದೆ ವ್ಯವಸ್ಥೆ.  ಒಳ್ಳೆಯದರಿಂದ ವ್ಯವಸ್ಥೆಗೆ ಎಷ್ಟು ಉಪಕಾರ ಇದೆಯೋ, ಕೆಟ್ಟದರಿಂದಲೂ ಇರುತ್ತದೆ. ಇದನ್ನು ಯಾರೂ ಕ್ರಿಯೇಟ್‌ ಮಾಡೋಕೆ ಆಗೋಲ್ಲ. ದೇಶದಲ್ಲಿ ಕಪ್ಪು ಹಣದ ಪಾಪುಲೇಷನ್‌ ಜಾಸ್ತಿ ಆದಾಗ ಡಿಮಾನಿಟೈಸೇಷನ್‌ ಬೇಕೇಬೇಕು. ಹಾಗೆಯೇ ಬಿಳಿ ಹಣದ ಪಾಪ್ಯುಲೇಷನ್‌ ಜಾಸ್ತಿಯಾದಾಗ ಅದು ವಿಲನ್‌ ಇಲ್ಲದ ಪಿಕ್ಚರ್‌;  ಉಪ್ಪಿನಕಾಯಿ ಇಲ್ಲದ ಊಟ. ಉಪ್ಪಿನಕಾಯಿಂದ ಬಿಪಿ ಬರುತ್ತದೆ ಅಂತ ಗೊತ್ತಿದ್ದರೂ ತಿನ್ನೊಲ್ಲವೇ ? ಹಾಗೇನೇ ಕೆಟ್ಟದ್ದು, ಒಳ್ಳೆಯದು ಅನ್ನೋದೆಲ್ಲಾ.
 
ಸಮಾಜದಲ್ಲಿ ಗೊಂದಲ ಜಾಸ್ತಿ ಅಲ್ಲವಾ?

 ಗೊಂದಲವೇ ಒಂಥರ ಇಂಟರಸ್ಟೆಂಗ್‌ ಸ್ಟೋರಿ. ಗೊಂದಲ ಇರಬೇಕು. ಇದು ಇಲ್ಲದೇ ಇದ್ದರೆ ಬದುಕು ಯಾಂತ್ರಿಕವಾಗುತ್ತದೆ. ಕಳ್ಳತನೇ ನಡೆಯದೇ ಇದ್ದರೆ ಅದೊಂಥರ ಸೋಷಿಯಲ್‌ ಇಂಬ್ಯಾಲೆನ್ಸ್‌.  ಕದಿಯೋದು ಅಂದರೆ ಏನು? ಇರೋದನ್ನು ತಾನೆ ಕದಿಯೋದು. ಇರೋದು ಅಂದರೆ ಸಂಪಾದನೆ ಮಾಡೋದು, ದಾನ ಮಾಡೋದು.
 ಈ ಪ್ರಪಂಚದಲ್ಲಿ ದ್ರೋಹವಿಲ್ಲದ ದಾನ ಇದೆಯಾ? ಇಲ್ಲವೇ ಇಲ್ಲ. ಚಪ್ಪಲಿ ದಾನ ಮಾಡಿದರೆ, ಚರ್ಮ ಸುಲಿದು ಮಾಡಿದ ಹಸುವಿಗೆ ದ್ರೋಹ ಮಾಡಿದಂತೆ.  ಮೊಟ್ಟೆ ದಾನ ಮಾಡಿದರೆ ಕೋಳಿಗೆ ಅನ್ಯಾಯ; ಬಟ್ಟೆ ದಾನ ಮಾಡಿದರೆ ಬೆಲೆ ಸಿಗದ ಕಾಟನ್‌ ರೈತರಿಗೆ ದ್ರೋಹ ಬಗೆದಂತೆ ಹೀಗೆ ದಾನ ದ್ರೋಹವನ್ನು ಮುಚ್ಚಿಡುವ ದಾರಿ ಮತ್ತು ವಿಧಾನ. ದಾನ ಮಾಡಿದಾಗ ಸುಖ ಸಿಗೋದು ತಾನು ಮಾಡಿದ ದ್ರೋಹ ಕಡಿಮೆಯಾಗಿದೆ ಅಂತ.  ಸಂತರು ದಾನ ಮಾಡೋಲ್ಲ. ಏಕೆಂದರೆ ಅವರು ಯಾವತ್ತೂ ದ್ರೋಹ ಮಾಡಿಲ್ಲ. 

 ಹಾಗಾದರೆ ದೇವರ ಹುಂಡಿಗೆ ದುಡ್ಡು ಹಾಕಬಾರದೇ?

 ದೇವರು ಹುಂಡಿಗೆ ಹಣಹಾಕಬಹುದು.  ರಾಜಕೀಯ ವ್ಯಕ್ತಿಗಳು ದೇವರಿಗೆ ಕಿರೀಟ ಕೊಡಬಹುದು. ಇಷ್ಟೆಲ್ಲ ಮಾಡಿದ ನಂತರವೂ ಜೈಲಿಗೆ ಹೋದವರು ಇದ್ದಾರೆ. ಬದುಕಲ್ಲಿ ದಾನ ಮತ್ತು ದ್ರೋಹ ಎರಡೂ ಬ್ಯಾಲೆನ್ಸ್‌ ಆಗಬೇಕು. ದ್ರೋಹಕ್ಕಿಂತ ದಾನ ಕಡಿಮೆಯಾದಾಗ ಆ ರೀತಿ ಆಗುತ್ತದೆ.  ದ್ರೋಹಕ್ಕಿಂತ ದಾನ ಜಾಸ್ತಿಯಾದಾಗ ದಾನಿ ವೀಕ್‌ ಆಗುತ್ತಾನೆ. ಶಿವನ ಮನೆಯನ್ನು ಜಗತ್ತಿನ ಶ್ರೀಮಂತ ಸೋಮ ಕಾಯುತ್ತಾನೆ. ಹಾಗೇನೇ ವೆಂಕಟರಮಣ ಸ್ವಾಮಿಯ ಪಕ್ಕ ಕುಬೇರನಿರುತ್ತಾನೆ. ಇಷ್ಟಾದರೂ ಶಿವನು ಏಕೆ ಬಿಕ್ಷೆ ಬೇಡುತ್ತಾನೆ. ಅವನಿಗೆ ಗೊತ್ತು. ದಾನಕ್ಕೆ ಹಣ ಬೇಕು. ಹಣ ಮಾಡಬೇಕಾದರೆ ದ್ರೋಹ ಮಾಡಬೇಕು ಅಂತ. ಸಂತರು ದಾನಿಗಳು ಆಗಲು ಇಷ್ಟಪಡೋಲ್ಲ. ಏಕೆಂದರೆ ಅವರು ದ್ರೋಹವನ್ನು ಮಾಡಿರುವುದೇ ಇಲ್ಲ.  ಕರ್ಣ ದಾನ ಮಾಡುತ್ತಿದ್ದ ನಿಜ, ಆದರೆ ಒಳ್ಳೆಯವನು ಅಂತ ಹೆಸರು ಬರಲಿಲ್ಲ.ಅರ್ಜುನನಿಗೆ, ಧರ್ಮರಾಯನಿಗೆ ಇರುವ ಗೌರವ ಸಿಗಲಿಲ್ಲ. 

  ನಿಮ್ಮ ಪ್ರಕಾರ ಸಾಮರಸ್ಯ ಮೂಡಿಸೋದು ಅಂದರೆ ಹೇಗೆ?
 ಜೀವನದಲ್ಲಿ, ಕುಟುಂಬದಲ್ಲಿ  ಪ್ರತಿಯೊಬ್ಬರನ್ನು ಅವರವರ ಜಾಗದಲ್ಲಿ ಇಟ್ಟು, ಅವರು ಇರುವಂತೆ ಇಷ್ಟಪಟ್ಟಾಗ ಸಾಮರಸ್ಯ ಮೂಡುತ್ತದೆ. ಮನೆಯಲ್ಲಿ ಪೊರಕೆಗೂ ಮತ್ತು ಕಬ್ಬಿಣದ ಪೆಟ್ಟಿಗೆಗೂ ಪೂಜೆ ಮಾಡಲೇಬೇಕು. ಪೊರಕೆಯನ್ನು ಮೂಲೆಯಲ್ಲಿ ಇಟ್ಟರೂ ತಲೆಯ ಮೇಲೆ ಇಟ್ಟುಕೊಳ್ಳುವಷ್ಟು ಗೌರವ ಕೊಡಬೇಕಾಗುತ್ತದೆ.  ಮನೆಗೆ ಈ ಇಬ್ಬರೂ ಮುಖ್ಯ. ಪೊರಕೆ ಇಲ್ಲದೆ ಸ್ವತ್ಛವಾಗೋಲ್ಲ.   ಅದೇ ರೀತಿ ಆಗ ತಾನೆ ಹುಟ್ಟಿದ ಮಗುವಿಗೆ ಇರುವ ಪ್ರಾಮುಖ್ಯತೆ 
ವಯಸ್ಸಾದ ಹಣ್ಣು, ಹಣ್ಣು ಹಿರಿಯರಿಗೂ ಇರಬೇಕಾಗುತ್ತದೆ.  ಹಿರಿಯರಿಗೆ ಅನುಭವಕ್ಕೆ ತಕ್ಕುದಾದ ಜಾಗ, ಗೌರವ ಕೊಡಬೇಕಾಗುತ್ತದೆ.  ಹೀಗಿದ್ದರೆ ಸಾಮರಸ್ಯ ಮೂಡುವುದರಲ್ಲಿ ಅನುಮಾನವೇ ಇಲ್ಲ. 

 ಎಡ, ಬಲ, ಮಧ್ಯಮ ಅಂತಾರಲ್ಲ, ಏನಿದು ?
 ನಮ್ಮ ಸಮಾಜ, ನಮ್ಮ ದೇಹ ಎರಡೂ ಒಂದೇ.  ಹಾರ್ಟು, ಲಂಗ್ಸ್‌, ಜಠರ, ಪಿತ್ತಜನಕಾಂಗ, ವೀರ್ಯ ವರ್ಧಕಗಳು ಎಲ್ಲವೂ ದೇಹದ ಮಧ್ಯಮ ವರ್ಗ.  ಮಧ್ಯಮ ವರ್ಗ ಏನು ಹೇಳುತ್ತೆ ಅಂದರೆ-ನನಗೆ ಎಡದ ಬಗ್ಗೆಯೂ, ಬಲದ ಬಗೆಗೂ ಆಸಕ್ತಿ ಇಲ್ಲ. ಆದರೆ ದೇಹಕ್ಕೆ ನಾನೂ ಮುಖ್ಯ.  ಎಲ್ಲರೂ ಮಧ್ಯಮ ವರ್ಗವೇ ಆಗಿಬಿಟ್ಟರೆ ದೇಹ ಅಸಹ್ಯವಾಗುತ್ತದೆ.  ಕೈ, ಕಾಲು ಇಲ್ಲದೇ ಐಬು ಆಗಿಬಿಡುವ ಸಾಧ್ಯತೆ ಹೆಚ್ಚು. ಎಡ ಪಂಥ, ಬಲಪಂಥ ಇದರ ಜೊತೆಗೆ ಮಧ್ಯವರ್ಗ ಇರಬೇಕು. ಸಭ್ಯ, ಅಸಭ್ಯರ ಜೊತೆ ಇದ್ದು ಇಲ್ಲದಾಗೆ ಬಾಳುವುದೇ ಬದುಕು.  

ಟೆನÒನ್‌ ಇಲ್ಲದೆ ಬದುಕೋದು ಹೇಗೆ?
  ರಬ್ಬರ್‌ ಎಳೆದಾಗ ಎಡಭಾಗಕ್ಕೆ, ಬಲಭಾಗಕ್ಕೆ ಉದ್ದವಾಗುತ್ತಾ ಹೋಗುತ್ತದೆ. ಅಂದರೆ ಒಂದು ಕೊನೆ  ಪಾಸ್ಟ್‌, ಇನ್ನೊಂದು ಕೊನೆ ಫ್ಯೂಚರ್‌. ಎರಡರ ನಡುವೆ ಅಂತರ ಇಟ್ಟುಕೊಂಡರೆ ಒತ್ತಡ ಇರೋಲ್ಲ. ಮುಖ್ಯವಾಗಿ ಕನಸುಗಳನ್ನು ಕಟ್ಟಿಕೊಳ್ಳಬಾರದು. ಕನಸಿಲ್ಲದ ನಿದ್ರೆ ಆರೋಗ್ಯದ ನಿದ್ದೆ ಅಂತಾರೆ.  24 ಗಂಟೆಯಲ್ಲಿ ಮೂರನೇ ಒಂದು ಭಾಗ ನಿದ್ದೆ ಬೇಕು. ಅಂದರೆ 8 ಗಂಟೆ ಕಾಲ. ಈ ಸಂದರ್ಭದಲ್ಲಿ ಬಿಟಿಎಸ್‌ ಬಸ್‌ಗಳನ್ನು ಗ್ಯಾರೇಜ್‌ನಲ್ಲಿ ರಿಪೇರಿ ಮಾಡುವಂತೆ ನಿದ್ದೆಯಲ್ಲಿ ದೇಹ ರಿಪೇರಿಯಾಗುತ್ತದೆ.  ಕನಸು ಬಿದ್ದರೆ ರಿಪೇರಿ ಕೆಲಸಕ್ಕೆ ಅಡ್ಡ ಆಗುತ್ತದೆ. ನಿದ್ದೆಯಲ್ಲಾಗುವ ರಿಪೇರಿ ಇಲ್ಲದ ದೇಹ ರೋಗಗಳ ಗೂಡಾಗುತ್ತದೆ. 

 ನಿಜ ಹೇಳಿ, ಕನಸಿಲ್ಲದ ಬದುಕು ಸಾಧ್ಯನಾ?
 ಕನಸು ನಮ್ಮ ಡ್ರೈವ್‌ ಮಾಡುತ್ತದೆ ಅನ್ನೋದೇ ತಪ್ಪು. ಆಫೀಸನ್ನು ಉದಾಹರಣೆ ತಗೊಳ್ಳಿ. ದಿನಕ್ಕೆ 20 ಫೈಲ್‌ ಕ್ಲಿಯರ್‌ ಮಾಡ್ತೀನಿ ಅಂತ ಟಾರ್ಗೆಟ್‌ ಇಟ್ಟುಕೊಂಡಿದ್ದೇವೆ ಅಂತಾದರೆ- ಒಂದು ದಿನ 10 ಫೈಲ್‌ ಕ್ಲಿಯರ್‌ ಆಗಲಿಲ್ಲ. ಮಾರನೆ ದಿನಕ್ಕೆ ಅದು 30 ಫೈಲ್‌ ಆಯ್ತು. ಆವತ್ತು 10 ಕ್ಲಿಯರ್‌ ಆದರೆ ಮತ್ತೂ ಮಾರನೆ ದಿನಕ್ಕೆ 40 ಫೈಲ್‌ ಕ್ಲಿಯರ್‌ ಆಯ್ತು. ಹೀಗೆ ಟೆನÒನ್‌ ಜಾಸ್ತಿ ಆಗ್ತಾ ಹೋಗುತ್ತದೆ. ನೀವು ದಕ್ಷತೆ ಇಂದ ಟಾರ್ಗೆಟ್‌ ಇಲ್ಲದೆ ಕೆಲಸ ಮಾಡಿ ನೋಡಿ. ಲೀಲಾಜಾಲವಾಗಿ ಎಲ್ಲ ಕೆಲಸ ಮುಗಿಸಿರುತ್ತೀರಿ. 

 ಟಾರ್ಗೆಟ್‌ ಇಲ್ಲದೇ ಏನಾದರು ಮಾಡೋಕೆ ಸಾಧ್ಯನಾ?
 ಯಾಕಾಗಲ್ಲ. ನೀವು ನಿಮ್ಮ ಸ್ನೇಹಿತರು ಬೆಟ್ಟ ಹತ್ತುತ್ತಾ ಇದ್ದೀರಿ. ಸ್ನೇಹಿತ- ಇನ್ನು ಎಷ್ಟು ದೂರ ಅಂತ ಕೇಳ್ತಾನೆ. ನೀವು ಇನ್ನೂ ಒಂದು ಗಂಟೆ ಆಗುತ್ತೆ. ಗಿಡಮರಗಳು ಜಾಸ್ತಿ. ಕಡಿದಾಗಿದೆ ಬೆಟ್ಟ ಅಂತೆಲ್ಲಾ ಹೇಳುತ್ತಾ ಹೋದರೆ ಅವನು ನಿಮ್ಮ ಜೊತೆ ಬೆಟ್ಟ ಹತ್ತುವುದೇ ಇಲ್ಲ. ಇದರ ಬದಲು ಮೊದಲು ನಿನ್ನ ಮುಂದಿನ ಮೆಟ್ಟಿಲೋ/ ಹೆಜ್ಜೆ ಮಾತ್ರ ನೋಡು ಅಂತ ಹೇಳಿ. ಬೇಗ, ಬೇಗ ಹತ್ತದೇ ಇದ್ದರೆ ಕೇಳಿ. ಹಾಗೇನೇ ಟಾರ್ಗೆಟ್ಟು ಕೂಡ. ನಮ್ಮ ಫ್ಯೂಚರ್‌ ಥಿಂಕಿಂಗ್‌ ಎಷ್ಟಿರಬೇಕು ಅಂದರೆ- ನಮ್ಮ ಕಾಲು ಎಷ್ಟು ಚಾಚಲು ಆಗುತ್ತದೋ ಅಷ್ಟು. 
 ಇಲ್ಲಿ 3 ಸತ್ಯ ತಿಳಿದು ಕೊಳ್ಳಬೇಕು. 
1) ಟಾರ್ಗೆಟ್‌ ಇಟ್ಟುಕೊಳ್ಳೋದರಿಂದ ಅವನ ಲೈಫ್ ಹಾಳಾಗುತ್ತೆ. ಸಮಾಜಕ್ಕೆ ಒಳ್ಳೆಯದಾಗುತ್ತದೆ. 
2) ಟಾರ್ಗೆಟ್‌ ಇಲ್ಲದೇ ಮುನ್ನುಗ್ಗುವುದರಿಂದ ಅವನ ಲೈಫ‌ು, ಲೋಕ ಎರಡೂ ಚೆನ್ನಾಗಿರುತ್ತದೆ.
3) ಸೋಂಬೇರಿಗಳಿಂದ ಅವರ ಜೊತೆ ಲೋಕಾನು ಹಾಳಾಗುತ್ತದೆ.

ಕಟ್ಟೆ ಗುರುರಾಜ್‌ 

ಟಾಪ್ ನ್ಯೂಸ್

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.