ಹಾಕಿ: ಭಾರತ ಗತ ವೈಭವ ಕಳೆದುಕೊಳ್ಳುತ್ತಿದೆಯೆ?
Team Udayavani, Jul 1, 2017, 12:42 PM IST
ಒಂದು ಕಾಲದಲ್ಲಿ ವಿಶ್ವ ಹಾಕಿಯಲ್ಲಿ ಸಾಮ್ರಾಟನಾಗಿ ಮೆರೆದಾಡಿದ ಭಾರತೀಯ ಹಾಕಿ ತಂಡ ಇಂದು ಗತವೈಭವವನ್ನು ಕಳೆದುಕೊಂಡಿದೆಯೇ? ಇಂತಹದೊಂದು ಅನುಮಾನ ಮೂಡತೊಡಗಿದೆ. ಇದಕ್ಕೆ ಕಾರಣ ವಿಶ್ವ ಹಾಕಿ ಲೀಗ್ ಸೆಮಿಫೈನಲ್‌ನಲ್ಲಿ ಭಾರತ ತನಗಿಂತ ಕೆಳ ಶ್ರೇಯಾಂಕದ ತಂಡಗಳ ಎದುರು ಸೋಲು ಕಂಡಿರುವುದು.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹಾಕಿ ತಂಡವನ್ನು ಬಗ್ಗು ಬಡಿದ ವಿಶ್ವದ 6ನೇ ಶ್ರೇಯಾಂಕಿತ ಭಾರತೀಯ ತಂಡ ನಂತರ ನಡೆದ 14ನೇ ಸ್ಥಾನದಲ್ಲಿರುವ ಮಲೇಷ್ಯಾ, 11ನೇ ಶ್ರೇಯಾಂಕದ ಕೆನಡಾ ಹಾಗೂ ನೆದರ್‌ಲ್ಯಾಂಡ್ ವಿರುದ್ಧ ತನ್ನ ನೈಜ ಆಟ ಪ್ರದರ್ಶನ ಮಾಡುವಲ್ಲಿ ವಿಫಲವಾಗಿದೆ. ಇಂತಹ ಪರಿಸ್ಥಿತಿ ಇದೊಂದೆ ಟೂರ್ನಿಗೆ ಸೀಮಿತವಾಗಿಲ್ಲ. ಕಳೆದ ಹಲವು ಮಹತ್ವದ ಟೂರ್ನಿಗಳಲ್ಲಿ ಹೇಳಿಕೊಳ್ಳುವಂ ತ ಸ್ಥಾನಕ್ಕೆ ನೂ ಏರಿಲ್ಲ. ಇದು ಇತ್ತೀಚಿನ ವರ್ಷಗಳಲ್ಲಿ ಸಾಬೀತಾಗಿದೆ. ಪ್ರಯೋಗಾತ್ಮಕ ಆಟಕ್ಕೆ ಮುಂದಾಗುತ್ತಿದೆಯೇ ಹೊರತು ತಂತ್ರಗಾರಿಕೆಯ ಗೋಲು ಹೂಡೆವಲ್ಲಿ ವಿಫಲವಾಗುತ್ತಿದೆ.
ಕಾಡೀತೆ ಸ್ಟಾರ್ ಆಟಗಾರರ ಅನುಪಸ್ಥಿತಿ?
ಹಾಕಿಯೇ ಉಸಿರು ಎನಿಸಿಕೊಂಡಿರುವ ಭಾರತೀಯ ಹಾಕಿ ತಂಡದಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಲೀಗ್ ಟೂರ್ನಿಗೆ ಭಾರತೀಯ ಸ್ಟಾರ್ ಆಟಗಾರರ ಅನುಪಸ್ಥಿತಿ ಕಾಡೀತೆ? ಹೌದು, ಇದೇ ಸಾಲಿನಲ್ಲಿ ನಡೆದಿದ್ದ ಸುಲ್ತಾನ್ ಆಜಾÉನ್ ಷಾ ಕಪ್‌ನಲ್ಲಿ ಭಾರತ ತಂಡ ಸೆಮಿ ಫೈನಲ್‌ವರೆಗೂ ತಲುಪಿ ಕಂಚಿ ನ ಪದಕ ಪಡೆದುಕೊಂಡಿತ್ತು. ಅದೇ ತಂಡವನ್ನು ವಿಶ್ವ ಲೀಗ್‌ಗೂ ಉಳಿಸಿಕೊಂಡಿದ್ದರೆ ಟೂರ್ನಿಯಲ್ಲಿ ಇನ್ನೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಮುಂದಿನ ವರ್ಷ ನಡೆಯುವ ವಿಶ್ವ ಕಪ್ ಹಾಕಿಗೆ ನೇರ ಪ್ರವೇಶ ಪಡೆಯಬಹುದಿತ್ತೆಂಬುವುದು ಕ್ರೀಡಾ ಪಂಡಿತರ ಮಾತು.
ವಿಫಲವಾಯಿತೆ ಓಲ್ಟಮನ್ಸ್ ತರಬೇತಿ?
ಯಾ ವಾ ಗಲೂ ಪ್ರಯೋಗಗಳಿಗೆ ಒತ್ತು ನೀಡುವ ಭಾರತೀಯ ಹಾಕಿ ತಂಡದ ತರಬೇತುದಾರ ಡ ಚ್ ಮೂಲದ ರೊಲಂಟ್ ಓಲ್ಟಮನ್ಸ್ ತಂತ್ರಗಾರಿಕೆ ಹೆಣೆಯುವಲ್ಲಿ ವಿಫಲವಾಗುತ್ತಿದ್ದಾರೆ ಎಂಬ ಮಾತುಗಳು ಸೋಲಿನ ಬಳಿಕ ಕೇಳಿ ಬರುತ್ತಿದೆ.
ಇವರ ತರಬೇತಿಯಲ್ಲಿ ಭಾರತ ಹೇಳಿಕೊಳ್ಳು ವಂತೆ ಸಾಧನೆ ಮಾಡದಿದ್ದರೂ ಕಳೆದ ಸಾಲಿನಲ್ಲಿ ನಡೆದ ರಿಯೋ ಒಲಿಂಪಿಕ್ಸ್ ನಲ್ಲಿ 36 ವರ್ಷಗಳ ಬಳಿಕ ಕ್ವಾಟರ್ ಫೈನಲ್‌ಗೇರಿದ ತಂಡ ಎಂಬ ಹೆಗ್ಗಳಿಕೆ ಪಡೆಯಿತು. ಅಲ್ಲದೆ, ಸುಲ್ತಾನ್ ಅಜ್ಲಾನ್ ಷಾ ಕಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಡಿದೆ. ಉಳಿದಂತೆ ಸಾಮಾನ್ಯ ಆಟ ಪ್ರದರ್ಶನಗೊಂಡಿದೆ. ಆದರೆ, ಈ ಹಿಂದೆ 2013-14ರವರೆಗೆ ಭಾರತೀಯ ತಂಡಕ್ಕೆ ಕೋಚ್ ಆಗಿದ್ದ ಜಪಾನ್‌ನ ಟೆರ್ರಿ ವಾಲ್Ò ಅವಧಿಯಲ್ಲಿ ಭಾರತ ಹಾಕಿ ಉತ್ತಮ ಸ್ಥಿತಿಯಲ್ಲಿತ್ತು ಎಂದು ಅನೇಕರು ವಿಶ್ಲೇಷಣೆ ಮಾಡಿದ್ದಾರೆ.
ಅವರ ಬಳಿಕ ಬಂದ ಕೋಚ್ ಅವಧಿಯಲ್ಲೂ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ ಹಾಕಿ ತಂಡ. ಆದರೆ, ಇತ್ತೀಚಿನ ದಿನಗಳಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿರುವುದು ಬೇಸರದ ಸಂಗತಿ.
2014ರಿಂದ 2017ರವೆರೆಗಿನ ತಂಡದ ಸಾಧನೆ
ವರ್ಷ ಟೂರ್ನಿ ಸ್ಥಾನ
2014 ಕಾಮನ್‌ವೆಲ್ತ್ 2
2014 ಏಷ್ಯನ್ ಗೇಮ್ಸ್ ಚಿನ್ನ
2014 ವಿಶ್ವಕಪ್ 9
2014-15 ವಿಶ್ವಕಪ್ ಲೀಗ್ 3
2014 ಚಾಂಪಿಯನ್ ಟ್ರೋಫಿ 4
2016 ರಿಯೋ ಒಲಿಂಪಿಕ್ಸ್ 8
2016 ಏಷ್ಯನ್ ಚಾಂಪಿಯನ್ ಟ್ರೋಫಿ ಚಿನ್ನ
2017 ಆಜ್ಲಾನ್ ಷಾ ಕಪ್ ಕಂಚು
2017 ವಿಶ್ವಕಪ್ ಲೀಗ್ 6
250 ಟೂರ್ನಿಯಲ್ಲಿ ಬಳಸಲಾಗುವ ಬಾಲ್ ಬಾಯ್ಸ , ಗರ್ಲ್ಸ್ ಸಂಖ್ಯೆ
14,979 ವಿಂಬಲ್ಡನ್ ಸೆಂಟರ್‌ಕೋರ್ಟ್‌ನಲ್ಲಿರುವ ಸೀಟ್‌ಗಳು
39,000 ಆಲ್‌ಇಂಗ್ಲೆಂಡ್ ಕ್ಲಬ್‌ನ ಒಟ್ಟಾರೆ ಸೀಟಿಂಗ್ ಸಾಮರ್ಥ್ಯ
54,250 2016ರ ಚಾಂಪಿಯನ್‌ಶಿಪ್‌ನಲ್ಲಿ ಬಳಸಿದ ಒಟ್ಟು ಟೆನಿಸ್ ಚೆಂಡುಗಳ ಲೆಕ್ಕ
1,40,000 ಕಳೆದ ಬಾರಿ ಮಾರಾಟ ಮಾಡಲಾದ ಸ್ಟ್ರಾಬೆರಿಗಳ ಸಂಖ್ಯೆ
3,20,000 ವಿಂಬಲ್ಡನ್‌ನಲ್ಲಿ ಹಿಂದಿನ ವರ್ಷ ಮಾರಾಟವಾದ ಪಿಮ್ ಡ್ರಿಂಕ್ ಗ್ಲಾಸ್‌ಗಳ ಸಂಖ್ಯೆ. ಪಿಮ್ ಎಂಬುದು ಹಣ್ಣು ಹಾಗೂ ಐಸ್ ಬೆರೆತ ಒಂದು ಆಲ್ಕೋಹಾಲಿಕ್ ಪೇಯ!
3,16,00,000 2017ರ ವಿಂಬಲ್ಡನ್ ಬಹುಮಾನದ ಮೊತ್ತ, ಪೌಂಡ್‌ನಲ್ಲಿ
ದೇವಲಾಪುರ ಮಹದೇವಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್ 2ನೇ ಪಂದ್ಯ
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.