ಭಾರತ ಹಾಕಿಯಲ್ಲಿ ಹೊಸ ಬೆಳಕು


Team Udayavani, Oct 21, 2017, 12:20 PM IST

6.jpg

ಭಾರತ ಹಾಕಿ ತಂಡದಲ್ಲಿ ಈಗಿರುವ ಹಲವು ಆಟಗಾರರು ಎಲ್ಲಾ ರೀತಿಯಲ್ಲೂ ಫಿಟ್‌ ಆಗಿದ್ದಾರೆ ನಿಜ. ಆದರೆ ಈ ಫಿಟೆ°ಸ್‌ 2020ರಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ ಪಂದ್ಯಾವಳಿವರೆಗೂ ಹೀಗೆ ಇರುತ್ತದೆ ಎನ್ನಲು ಸಾಧ್ಯವಿಲ್ಲ. ಹಾಗಾಗಿ ತಂಡದಲ್ಲಿರುವ ಕೆಲವು ಹಿರಿಯ ಆಟಗಾರರನ್ನು ಕೈಬಿಟ್ಟು ಕಿರಿಯರಿಗೆ ಮಣೆ ಹಾಕಲೇ ಬೇಕಾಗಿದೆ.

ವಿಶ್ವಕಪ್‌, ಒಲಿಂಪಿಕ್ಸ್‌ನಂತಹ ಕ್ರೀಡಾ ಕೂಟವನ್ನು ಉದ್ದೇಶ ವಾಗಿಟ್ಟುಕೊಂಡು ದೇಶದಲ್ಲಿನ ಕ್ರೀಡಾಪಟುಗಳನ್ನು ಸಿದ್ಧಪಡಿಸ ಬೇಕಾದರೆ ಹಲವು ಬದಲಾವಣೆಗಳನ್ನು ಕೈಗೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಮರ್ಥ ಆಟಗಾರನಾಗಿದ್ದರೂ ವಯಸ್ಸಿನ ಹಿನ್ನೆಲೆಯಲ್ಲಿ ತಂಡದಿಂದ ಕೈಬಿಡಬೇಕಾಗುತ್ತದೆ. ಯಾಕೆಂದರೆ ಇಂದು ಸಮರ್ಥವಾಗಿರುವ ವ್ಯಕ್ತಿ 2020ರ ಟೋಕಿಯೋ ಒಲಿಂಪಿಕ್ಸ್‌ನ ಸಂದರ್ಭದಲ್ಲೂ ಸಮರ್ಥನಾಗಿರುವುದು ಕಷ್ಟ ಸಾಧ್ಯ. ಬದಲಾವಣೆಯ ಸಂದರ್ಭದಲ್ಲಿ ಯಶಸ್ಸು ಸಿಗದಿದ್ದರೂ ನಂತರದ ಹಂತದಲ್ಲಿ ಕ್ರಮೇಣವಾಗಿ ಯಶಸ್ಸಿನ ಬೆಳಕು ಬರುತ್ತದೆ. ಅದೇ ರೀತಿ ಭಾರತೀಯ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಕಂಡುಬಂದ ಬದಲಾವಣೆ ಈಗಷ್ಟೇ ದೀಪಾವಳಿ ಆರಂಭಿಸಿದೆ.

ಹಾಕಿಯಲ್ಲಿ ಆಗಿದ್ದು ಏನು?
2019ರಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಹಿನ್ನೆಲೆಯಲ್ಲಿ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸ್ಫೋಟಕ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ಅಂತಹವರನ್ನೇ ಹೊರಗಿಟ್ಟು, ಮನೀಷ್‌ ಪಾಂಡೆ, ಕೆ.ಎಲ್‌.ರಾಹುಲ್‌ ಅವರಂತಹ ಯುವಕರಿಗೆ ವೇದಿಕೆ ನೀಡಲಾಗುತ್ತಿದೆ. ಅದೇ ರೀತಿ 2020ರ ಟೋಕಿಯೋ ಒಲಿಂಪಿಕ್ಸ್‌, 2018ರಲ್ಲಿ ಭಾರತ ಆತಿಥ್ಯದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್‌…ಇವುಗಳನ್ನು ಗುರಿಯಾಗಿ ಇಟ್ಟುಕೊಂಡು ಭಾರತ ಹಾಕಿ ತಂಡದಲ್ಲಿ ಯುವ ಆಟಗಾರರಿಗೆ ಮಣೆ ಹಾಕಲಾಗುತ್ತಿದೆ. ಸಮರ್ಥ ಆಟಗಾರರಿದ್ದರೂ ವಯಸ್ಸಿನ ಹಿನ್ನೆಲೆಯಲ್ಲಿ ಅವರನ್ನು ತಂಡದಿಂದ ನಿಧಾನಕ್ಕೆ ಕೈಬಿಡಲಾಗುತ್ತದೆ. ಅಂಥವರಲ್ಲಿ ಪಿ.ಆರ್‌.ಶ್ರೀಜೇಶ್‌(31 ವರ್ಷ), ದಾನಿಶ್‌ ಮಜತಬಾ (28 ವರ್ಷ), ಕರ್ನಾಟಕದ ವಿ.ಆರ್‌. ರಘುನಾಥ್‌(28 ವರ್ಷ)…. ಸೇರಿದ್ದಾರೆ. ಸದ್ಯಕ್ಕೆ ಇವರು ಸಮರ್ಥ ಆಟಗಾರರೇ ಆಗಿದ್ದಾರೆ. ಇವರಿಗೆ ಒಂದು ಟೂರ್ನಿಯಲ್ಲಿ ಅವಕಾಶ ನೀಡಿದರೆ ಮತ್ತೂಂದು ಟೂರ್ನಿಗೆ ಅವಕಾಶ ನೀಡುವುದಿಲ್ಲ. ನಿಧಾನಕ್ಕೆ ತಂಡದಿಂದ ಒಬ್ಬೊಬ್ಬ ಹಿರಿಯ ಆಟಗಾರರನ್ನು ಕೈಬಿಡಲಾಗುತ್ತಿದೆ. ಇದಕ್ಕೆಲ್ಲ ಕಾರಣ ಟಾರ್ಗೆಟ್‌ ಒಲಿಂಪಿಕ್ಸ್‌.

ಯುವಕರಿಗೆ ಮಣೆ
ಸದ್ಯ ಏಷ್ಯಾ ಕಪ್‌ನಲ್ಲಿ ಪಾಲ್ಗೊಂಡ ತಂಡದಲ್ಲಿ ಯುವಕರಿಗೆ ಹೆಚ್ಚಿನ ಆವಕಾಶ ನೀಡಲಾಗಿದೆ. ತಂಡದಲ್ಲಿ ಒಂದಿಬ್ಬರು ಹಿರಿಯ ಆಟಗಾರರನ್ನು ಬಿಟ್ಟು ಉಳಿದ ಎಲ್ಲಾ ಆಟಗಾರರು 25 ವರ್ಷದೊಳಗಿನವರಾಗಿದ್ದಾರೆ. ಅದರಲ್ಲಿಯೂ ಪ್ರಸಕ್ತ ವರ್ಷದ ಆರಂಭದಲ್ಲಿ ಭಾರತದಲ್ಲಿ ನಡೆದ ಜೂನಿಯರ್‌ ವಿಶ್ವಕಪ್‌ನಲ್ಲಿ ಪಾಲ್ಗೊಂಡ ಆಟಗಾರರು ತಂಡದಲ್ಲಿದ್ದಾರೆ. ಜೂನಿಯರ್‌ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್‌ ಆಗಿತ್ತು. ಯುವಕರು ಭರ್ಜರಿ ಪ್ರದರ್ಶನ ನೀಡಿದ್ದರು. ಹೀಗಾಗಿ ಮುಂದಿನ ಒಲಿಂಪಿಕ್ಸ್‌ಗಳನ್ನು ಗುರಿಯಾಗಿ ಇಟ್ಟುಕೊಂಡು ಇದೇ ಯುವಕರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ತಂಡದ ನಾಯಕತ್ವವನ್ನು 25 ವರ್ಷದ ಯುವಕ ಮನ್‌ಪ್ರೀತ್‌ ಸಿಂಗ್‌ಗೆ ನೀಡಲಾಗಿದೆ.

ವಿಶ್ವಕಪ್‌, ಒಲಿಂಪಿಕ್ಸ್‌ಗಳೇ ಟಾರ್ಗೆಟ್‌
ಒಲಿಂಪಿಕ್ಸ್‌ನಲ್ಲಿ ಭಾರತ ಇತಿಹಾಸವನ್ನು ಸೃಷ್ಟಿಸಿದೆ. 8 ಚಿನ್ನ, 1 ಬೆಳ್ಳಿ, 2 ಕಂಚು ಸೇರಿದಂತೆ ಒಟ್ಟು 11 ಪದಕವನ್ನು ಪಡೆದಿದೆ. ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ನಾಕೌಟ್‌ ಹಂತಕ್ಕೇರಿ ಗಮನ ಸೆಳೆದಿತ್ತು. ಈಗ ಮುಂದಿನ ಟೋಕಿಯೋ ಒಲಿಂಪಿಕ್ಸ್‌ ಅನ್ನು ಟಾರ್ಗೆಟ್‌ ಮಾಡಿಕೊಳ್ಳಲಾಗಿದೆ. ವಿಶ್ವಕಪ್‌ನಲ್ಲಿ ಗೆಲುವು ಪಡೆಯುವುದು ಹಾಕಿಯಲ್ಲಿನ ಗತವೈಭವ ವನ್ನು ಮರಳಿ ಪಡೆಯುವುದು ಎಲ್ಲರ ಕನಸಾಗಿದೆ.

ದೀಪಾವಳಿ ಕಾಣಿಸ್ತಿದೆ
ತಂಡದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಮಾಡಿದ ನಂತರ ನಡೆದ ನ್ಯೂಜಿಲೆಂಡ್‌ ವಿರುದ್ಧದ ಹಾಕಿ ಟೆಸ್ಟ್‌ ಸರಣಿ, ಮೂರು ರಾಷ್ಟ್ರಗಳ ಆಹ್ವಾನಿತ ಟೂರ್ನಿ, ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ ಕೂಟದಲ್ಲಿ ಭಾರತ ಭಾರೀ ಕಳಪೆ ಪ್ರದರ್ಶನ ನೀಡಿತ್ತು. ಇದರಿಂದಾಗಿ ಹಾಕಿಯನ್ನು ಮತ್ತೆ ಅಧಃಪತನಕ್ಕೆ ಇಳಿಸಲಾಗುತ್ತಿದೆ ಎಂದು ಕೂಗು, ಟೀಕೆ ಎದ್ದಿತ್ತು. ಆದರೆ ಆಗಸ್ಟ್‌ನಲ್ಲಿ ನಡೆದ ಯೂರೋಪ್‌ ಟೂರ್ನಿ, ಸೆಪ್ಟೆಂಬರ್‌ನಲ್ಲಿ ನಡೆದ ಆಸ್ಟ್ರೇಲಿಯನ್‌ ಹಾಕಿ ಲೀಗ್‌ನಲ್ಲಿ ಭಾರತ ಗಮನಾರ್ಹ ಪ್ರದರ್ಶನ ನೀಡಿದೆ. ಈ ಹಂತದಲ್ಲಿಯೇ ಭಾರತ ತಂಡದಲ್ಲಿ ಬದಲಾವಣೆಗಳು ಕಂಡುಬರಲು ಆರಂಭಿಸಿವೆ. ಸದ್ಯ ಭಾರತ ತಂಡ ಬಾಂಗ್ಲಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ಆಡುತ್ತಿದೆ. ಲೀಗ್‌ ಹಂತದಲ್ಲಿಯೇ ಜಪಾನ್‌, ಬಾಂಗ್ಲಾ, ಪಾಕಿಸ್ತಾನ ತಂಡವನ್ನು ಭಾರೀ ಅಂತರದಲ್ಲಿ ಸೋಲಿಸಿದೆ. ಯುವಕರಿಂದ ಕೂಡಿರುವ ತಂಡ ಹಂತ ಹಂತವಾಗಿ ಲಯ ಕಂಡುಕೊಳ್ಳುತ್ತಿದೆ. ಈ ಗೆಲುವಿನ ಹುಮ್ಮಸ್ಸು ನಿರಂತರವಾಗಿದ್ದು, ತಂಡದ ಯಶಸ್ಸಿಗೆ ಕಾರಣವಾಗಲಿ.

 ಮಂಜು ಮಳಗುಳಿ

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.