ಟಾಂಗಾಗೆ ಟಾಟಾ

Team Udayavani, Nov 4, 2017, 1:28 PM IST

5-a.jpg

ಟಾಂ ಟಾಂ ಅಂದ್ರೇ ಏನು ಅಂತೀರಾ, ಅದೇ ರಿಕ್ಷಾ; ಮೂರು ಗಾಲಿಗಳ ಆಟೋ ರಿಕ್ಷಾ.. ಬಸ್‌ ನಿಲ್ದಾಣ, ರೈಲು ನಿಲ್ದಾಣ ಹೀಗೇ ಅನೇಕ ಪ್ರಮುಖ ರಸ್ತೆಗಳಲ್ಲಿ ನೂರಾರು ಕುದುರೆಗಾಡಿಗಳು ಇರುತ್ತಿದ್ದ ಅಂದಿನ ದಿನಗಳಲ್ಲಿ  ಟಾಂಗಾವಾಲಗಳ ಸದ್ದು ಬಲು ಜೋರಾಗಿತ್ತು.

ಚಲೋ ಬೇಟಾ..ಚಲೋ.., ಏಯ್‌ ಬಾಯ್‌..ಜರಾ ಸರಕೋ..ದಾರೀ ಬಿಡ್ರೀ, ಎಂದು ಜೋರ್‌ಸೆ ಕೂಗುತ್ತಿದ್ದ ಧ್ವನಿ ಇದೀಗ ಮಂಕಾಗಿದೆ. ಆಟೋ ರಿಕ್ಷಾ (ಟಂ ಟಂ)ಗಳ ಭರಾಟೆಯ ನಡುವೆ. ಟಾಂಗಾಗಳನ್ನು, ಟಾಂಗಾವಾಲಗಳನ್ನು ಕೇಳ್ಳೋರಿಲ್ಲ ಎಂಬಂತಾಗಿದೆ.

ಲಗಾಮು ಹಿಡಿದು, ಟಾಂಗಾವಾಲ ಹೇಳಿದ್ದೇ ತಡ, ಕುದುರೆ ಹೆಜ್ಜೆ ಹಾಕುತ್ತಿತ್ತು. ಕುದುರೆಯ ಟುಕು ಟುಕು ಹೆಜ್ಜೆಯ ಸದ್ದಿನ ಲಯದೊಂದಿಗೆ ಗಾಡಿಯ ಕುಲುಕಾಟದ ಪಯಣ ವಿಶಿಷ್ಟ ಅನುಭವ ನೀಡುತ್ತಿತ್ತು. 

ಬಾಗಲಕೋಟೆಯಲ್ಲಿ ಇಂಥ ಪ್ರಯಾಣದ ಅನುಭವ ಇಂದಿಗೂ ಸಿಗುತ್ತಿದೆ. ಮೈಸೂರು,  ಬೆಂಗಳೂರಿನಲ್ಲಿ ಆಗಿರುವಂತೆ ಜಟಕಾಗಳು ಪೂರ್ತಿ ಮನೆಯಾಗಿಲ್ಲ. ಒಂದೇ ಬದಲಾವಣೆಯೆಂದರೆ ಈ ಮೊದಲು ನೂರಾರು ಇದ್ದ ಟಾಂಗಾಗಳು ಇದೀಗ ಬೆರಳಣಿಕೆಯಷ್ಟಾಗಿದೆ. 

ಜಿಲ್ಲೆಯಲ್ಲಿ ಟಾಂಗಾಗಳನ್ನು ಓಡಿಸುವವರಲ್ಲಿ ಮುಸ್ಲಿಂರೇ ಹೆಚ್ಚು. ಅವರೆಲ್ಲ ‘ಘೋಡೆಕಾ ಮಕಾನ್‌’ ಎಂಬ ಸಂಘ ಕಟ್ಟಿಕೊಂಡಿದ್ದಾರೆ. ಈ ಸಂಘದ ಮೂಲಕ ಜಾತಿಯ ಕಟ್ಟಳೆಗಳನ್ನು ಮೀರಿ ಅನೇಕ ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. 

ನಗರದ (ಹಳೆಯ ಬಾಗಲಕೋಟೆ) ಫ‌ಂಕಾ ಮಸೀದಿ ಬಳಿ ಇರುವ “ಪಾಗಾ’ ಎಂಬಲ್ಲಿ ಟಾಂಗಾವಾಲಾಗಳು ಕುದುರೆಗಳನ್ನು ಕಟ್ಟುತ್ತಾರೆ. ಇದರ ಬಳಿಯೇ ಕುದುರೆಗಳಿಗೆ ಮೇವನ್ನು ಮಾರುವ “ಕರಕಿ ಬಜಾರ್‌’ ಇದೆ. ಸುತ್ತ-ಮುತ್ತಲಿನ ಹಳ್ಳಿಗಳಿಂದ  ಹುಲ್ಲನ್ನು  ಹೊತ್ತು ತರುವ ಮಹಿಳೆಯರು 50-60 ರೂಪಾಯಿಗೆ ಹುಲ್ಲಿನ ಗಂಟುಗಳನ್ನು ಟಾಂಗಾವಾಲಾಗಳಿಗೆ ಮಾರುತ್ತಾರೆ.  ಈ ಮೂಲಕ ಅವರು ತಮ್ಮ ಬದುಕಿಗೆ ಒಂದು ದಾರಿ ಕಂಡು ಕೊಂಡಿದ್ದಾರೆ. 

ಈ ಮೊದ್ಲು  ನೂರಾರು ಕುದುರೆ ಗಾಡಿಗಳಿದ್ದವು. ಇದೀಗ ನಲವತ್ತು-ಐವತ್ತಕ್ಕ ಬಂದಿಳಿದ… ಈಗಿನ ಜನಕ್ಕ ಭಾಳ ಅವಸರ, ಹೀಂಗಾಗಿ ಟಾಂಗಾ ಬಿಟ್ಟು ಅಟೋ ರಿûಾಗಳಿಗೆ ಜನ ಹೋಗ್ತಾರ. ಹಿಂಗಾಗಿ ದಿನಾ ನಮಗ ನೂರರಿಂದ ನೂರಾ ಐವತ್ತು ರೂಪಾಯಿ ಗಳಿಕಿ ಆಗ್ತದ, ಅದ್ರಾಗ ಅರ್ಧ ರೊಕ್ಕ ಕುದುರಿ ಮೇದಿಗಾದ್ರ ಮಿಕ್ಕಿದ್ದು ನಮ್ಮ ಮನೀಗಿ ಆಗ್ತದ ಎನ್ನುತ್ತಾರೆ.  ಐದು ದಶಕಗಳಿಂದ ಟಾಂಗಾ ವೃತ್ತಿಯಲ್ಲಿಯೇ ಬದುಕುತ್ತಿರುವ ಮೆಹಬೂಬ್‌ ಸಾಬ್‌ಹಳ್ಳಿ. 

ಈ ಹಿಂದೆ 200ಕ್ಕೂ ಹೆಚ್ಚು ಕುಟುಂಬಗಳು ಟಾಂಗಾ ನಂಬಿಯೇ ಬದುಕುತ್ತಿದ್ದವು. ಇದೀಗ ಅದು ಮೂವತ್ತಕ್ಕೆ ಬಂದಿಳಿದಿದೆ.   ನಮಗ ಈ ವೃತ್ತಿ ಬಿಟ್ರ ಬೇರೆ ಕೆಲ್ಸ ಗೊತ್ತಿಲ್ಲ.. ಹೀಂಗಾಗಿ ನಾವು ಇನ್ನೂ ಇದರ ಮೇಲೆಯೇ ಅವಲಂಬನೆಗೊಂಡಿದ್ದೇವೆ ಎನ್ನುತ್ತಾರೆ.  ಮುಳುಗಡೆ ನಗರಿ ಎಂಬ ಹಣೆ ಪಟ್ಟಿ ಕಟ್ಟಿಕೊಂಡಿರುವ ಬಾಗಲಕೋಟೆಯಲ್ಲ ಈಗಾಗಲೇ ಅನೇಕ ಪರಂಪರೆಗಳು “ಮುಳುಗಡೆ’ಯಾಗಿವೆ. ಮುಂದಿನ ಕೆಲವೇ ದಿನಗಳಲ್ಲಿ ಬಾಗಲಕೋಟೆಯ ನಕ್ಷೆಯಿಂದ ಟಾಂಗಾಗಳ ಚಿತ್ರವೇ ಕಣ್ಮರೆಯಾದರೆ ಅಚ್ಚರಿ ಪಡಬೇಕಿಲ್ಲ. 

ಪ್ರವೀಣ ರಾಜು ಸೊನ್ನದ

ಟಾಪ್ ನ್ಯೂಸ್

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.