ನಾನ್‌ಸ್ಟಾಪ್‌ ಶಿವಭಜನೆ; 47 ವರ್ಷದಿಂದ ಕ್ಷಣವೂ ನಿಲ್ಲದ ಸ್ಮರಣೆ


Team Udayavani, May 20, 2017, 3:00 PM IST

16.jpg

ಅದೊಂದು ಕಬ್ಬಿಣದ ಸರಳುಗಳಿರುವ ಕೋಣೆ. ಅದರೊಳಗೆ ನಿಂತವರ ಕೈಯಲ್ಲಿ ತಂಬೂರಿ ಮಿಡಿಯುತ್ತಿದೆ. ಅವರ ಬಾಯಿಯಿಂದ “ಓಂ ನಮಃ ಶಿವಾಯಃ’ ಎಂಬ ಶಿವನಾಮ ಮೊಳಗುತ್ತಿದೆ! ಹೀಗೆ ತಂಬೂರಿ ಹಿಡಿದು ಹೇಳುವುದರಲ್ಲಿ ಏನು ವಿಶೇಷವೆಂದು ನೀವು ಕೇಳಬಹುದು. ಒಂದಲ್ಲ, ಎರಡಲ್ಲ ಕಳೆದ 47 ವರ್ಷಗಳಿಂದಲೂ ಕ್ಷಣವೂ ನಿಲ್ಲದೆ ಇಲ್ಲಿ ನಿರಂತರವಾಗಿ ಈ ಶಿವನಾಮ ಸ್ಮರಣೆ ಮೊಳಗುತ್ತಿದೆ! ಇಲ್ಲಿ ನಾಲ್ಕು ಗಂಟೆಗೊಮ್ಮೆ ಸ್ಮರಣೆ ಮಾಡುವವರು ಬದಲಾಗುತ್ತಾರೆ. ಆದರೆ, 47 ವರ್ಷಗಳಿಂದ ತಂಬೂರಿಯನ್ನು ಕೆಳಗಿಟ್ಟಿಲ್ಲ! ಶಿವನಾಮಸ್ಮರಣೆ ಕ್ಷಣವೂ ಇಲ್ಲಿ ನಿಂತಿಲ್ಲ!

ಬಾಗಲಕೋಟೆ ಜಿಲ್ಲೆಯಲ್ಲಿರುವ ಐತಿಹಾಸಿಕ ನಗರಿ ಬಾದಾಮಿಯಿಂದ 21 ಕಿ.ಮೀ. ದೂರದ ಸೋಮನಕೊಪ್ಪದಲ್ಲಿ ಈ ಭಜನೆ ಕೇಳಿಸುತ್ತದೆ. ಇಲ್ಲಿನ ಶಿವಾನಂದ ಮಠ ಈ ಭಜನೆಯಿಂದಲೇ ಗಮನ ಸೆಳೆದಿದೆ.

ಏನಿದರ ಹಿನ್ನೆಲೆ?

ಅದು 1970ರ ಆಗಸ್ಟ್‌ ತಿಂಗಳ ಕೊನೆಯ ವಾರದ ಮಾತು. ಗದುಗಿನ ಶಿವಾನಂದ ಮಠದ ಪೂರ್ಣಾನಂದ ಶ್ರೀಗಳು ಸೋಮನಕೊಪ್ಪ, ಜಾಲಿಕಟ್ಟಿ ಮುಂತಾದ ಈ ಭಾಗದ ಗ್ರಾಮಗಳಲ್ಲಿ ಸಂಚರಿಸುತ್ತಾ ಗ್ರಾಮಸ್ಥರ ಭಕ್ತಿಗೆ ಪಾತ್ರರಾಗಿದ್ದರು. ಅದೊಂದು ದಿನ ಸೋಮನಕೊಪ್ಪದಲ್ಲಿದ್ದ ಸ್ವಾಮಿಗಳ ಬಳಿ ಬಂದ ಜಾಲಿಕಟ್ಟಿಯ ಜನತೆ, ತಮ್ಮೂರಿಗೆ ಬಂದು ನೆಲೆ ನಿಲ್ಲಲು ಶ್ರೀಗಳನ್ನು ಕೋರುತ್ತಾರೆ. ಆಗ ಸೋಮನಕೊಪ್ಪದವರು ಮಹಾಸ್ವಾಮಿಗಳಿಗೆ ತಮ್ಮೂರಲ್ಲಿಯೇ ಇರುವಂತೆ ದುಂಬಾಲು ಬೀಳುತ್ತಾರೆ. ಎರಡೂ ಊರುಗಳಲ್ಲಿ ತಾವು ಎಲ್ಲಿ ನೆಲೆ ನಿಲ್ಲಬೇಕು ಎಂಬುದಕ್ಕೆ ಶ್ರೀಗಳು ಹಾಕಿದ ಷರತ್ತು ಹೀಗಿತ್ತು: “ಯಾವ ಊರಿನವರು ಇಂದಿನಿಂದ ನಿರಂತರವಾಗಿ 39 ವರುಷ ಶಿವನಾಮಸ್ಮರಣೆ ಮಾಡಲು ಒಪ್ಪುವರೋ ಆ ಊರಿನಲ್ಲಿ ನೆಲೆ ನಿಲ್ಲುತ್ತೇನೆ’ ಎಂದರು! 

ಶ್ರೀಗಳ ಷರತ್ತನ್ನು ಸೋಮನಕೊಪ್ಪದ ಜನತೆ ಒಪ್ಪಿಕೊಂಡರು. ಕೇವಲ ಬಾಯಿ ಮಾತಿಗೆ ಒಪ್ಪದ ಶ್ರೀಗಳು, ಹಾಗೊಂದು ಕರಾರು ಪತ್ರವನ್ನು ಗ್ರಾಮಸ್ಥರ ಕೈಯಲ್ಲಿ ಬರೆಸುತ್ತಾರೆ. ಅದಕ್ಕೆ ಸಮ್ಮತಿ ಸೂಚಿಸಿದ್ದಕ್ಕೆ ಹಿರಿಯರಿಂದ ಸಹಿಯನ್ನೂ ಹಾಕಿಸುತ್ತಾರೆ!

ಏನಿದೆ ಒಪ್ಪಿಗೆ ಪತ್ರದಲ್ಲಿ?

“..ಎಲ್ಲರೂ ಆತ್ಮ ಸಂತೋಷದಿಂದ ಸತ್ಯದಲ್ಲಿ ಹರಿಶ್ಚಂದ್ರನಂತೆ ಮತ್ತು ಭಕ್ತಿಯಲ್ಲಿ ಬಸವಣ್ಣನವರಂತೆ ಸದರಿ ಸಪ್ತಾಹವನ್ನು ನಡೆಸಲು ಒಪ್ಪಿಕೊಂಡಿರುತ್ತೇವೆ…’ ಎಂಬ ವಿವರಗಳಿರುವ ಒಪ್ಪಿಗೆ ಪತ್ರಕ್ಕೆ ಗ್ರಾಮದ ಹಿರಿಯರಾದ ಸೋಮನಿಂಗಪ್ಪ, ಸೋಮಪ್ಪ ಮುಷ್ಠಿಗೇರಿ, ಪಾಟೀಲ ವೈ.ಆರ್‌, ಪಕೀರಪ್ಪ, ಭೀಮಪ್ಪ ದಂಡಿನ ಸೇರಿದಂತೆ ಅನೇಕರು ಸಹಿ ಹಾಕಿದ್ದಾರೆ. ಹೀಗೆ ಆಗಸ್ಟ್‌ 23, 1970ರಿಂದ ಅಖಂಡ ಭಜನೆ ಆರಂಭವಾಗುತ್ತದೆ. ಕೊಟ್ಟ ಮಾತಿನಂತೆ ಶ್ರದ್ಧಾಭಕ್ತಿಯಿಂದ ಸಾಗುತ್ತದೆ.

ನಿರಂತರ ಶಿವಸ್ಮರಣೆಯಿಂದ ಈ ಭಾಗ, ಪುಣ್ಯಭೂಮಿ ಆಗುತ್ತದೆ. ಎಲ್ಲರ ಬದುಕಿನಲ್ಲೂ ಸುಖ- ಸಂತೋಷ ನೆಲೆಯಾಗುತ್ತದೆ ಎಂದು ಅಂದು ಪೂರ್ಣಾನಂದರು ಹೇಳಿದ್ದರಂತೆ. “ಅಂದು ಶ್ರೀಗಳು ಹೇಳಿದ ಮಾತು, ಇಂದು ನಿಜವಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.

ಅಂದಾಜು 2 ಸಾವಿರದಷ್ಟು ಜನಸಂಖ್ಯೆ ಇರುವ ಈ ಗ್ರಾಮದ ಪ್ರತಿ ಮನೆಗೆ ಒಂದೂವರೆ ತಿಂಗಳಿಗೊಮ್ಮೆ ಭಜನೆಯ ಸರದಿ ಬರುತ್ತದೆ. ಸರದಿ ಬಂದಾಗ ಆ ಮನೆಯಲ್ಲಿನ ಮಕ್ಕಳು, ಮಹಿಳೆಯರು, ಹಿರಿಯರು ಯಾರಾದರೊಬ್ಬರು ಶಿವಾನಂದ ಮಠಕ್ಕೆ ಬಂದು ಸ್ಮರಣೆಯಲ್ಲಿ ತೊಡಗಬೇಕು. ಇಲ್ಲಿಯತನಕ ಒಮ್ಮೆಯೂ ಸ್ಮರಣೆ ನಿಂತಿಲ್ಲ. ಸರದಿ ಬಂದವರ ಮನೆಯಲ್ಲಿ ಅಡಚಣೆ ಇದ್ದರೆ ಬೇರೆಯವರನ್ನು ಇಲ್ಲಿಗೆ ಕಳುಹಿಸುತ್ತಾರೆ.

ಮುಂದುವರಿದ ಸ್ಮರಣೆ!
ಪೂರ್ಣಾನಂದ ಶ್ರೀಗಳು ಹೇಳಿದ ಪ್ರಕಾರವಾಗಿ 2009ಕ್ಕೆ ಸ್ಮರಣೆ ಮುಗಿಯಬೇಕಿತ್ತು. ಏಕೆಂದರೆ, ಹಾಕಿದ ಕರಾರಿನಂತೆ ಅಂದಿಗೆ 39 ವರುಷ ಮುಗಿಯುತ್ತದೆ. ಆದರೆ, ಮಠದ ಇಂದಿನ ಶ್ರೀ ಶ್ರದ್ಧಾನಂದ ಸ್ವಾಮೀಜಿ, “ಇನ್ನೂ ಛಲೋ ಆಗತದಾ, ಸ್ಮರಣೆ ನಿಲ್ಲಿಸಬೇಡಿ’ ಎಂದು ಊರವರಿಗೆ ಹೇಳಿದ್ದರಿಂದ ಅದನ್ನು ಮುಂದುವರಿಸಲಾಗಿದೆ.

ಪ್ರವೀಣರಾಜು ಸೊನ್ನದ 

ಟಾಪ್ ನ್ಯೂಸ್

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Gold Rates:ಡಾಲರ್‌ ಬೆಲೆ ಏರಿಕೆ-‌18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ

14-bng

Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ

2(1)

Karkala: ಸೆಲ್ಫಿ ಕಾರ್ನರ್‌ ಮಾಡಿದರೂ ತ್ಯಾಜ್ಯ ಎಸೆತ ನಿಂತಿಲ್ಲ!

13-bng

Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.