ಬಾಕು ಕೊಕ್ಕಿನ ಬಾತು
Team Udayavani, Mar 16, 2019, 12:30 AM IST
ನೀರಿರುವ ಕಡೆಯಲ್ಲಿ ಮಾತ್ರ ಈ ಹಕ್ಕಿ ಗೂಡು ಕಟ್ಟುತ್ತದೆ. ಕಿತ್ತಳೆ ಬಣ್ಣದ ಕೊಕ್ಕು ಮತ್ತು ಕಾಲು ಹೊಂದಿರುವ ಇದು ವಲಸೆ ಹಕ್ಕಿ. ತಮಿಳುನಾಡು, ಕೇರಳದಲ್ಲೂ ಇದನ್ನು ಹೆಚ್ಚಾಗಿ ಕಾಣಬಹುದು. Northern Shoveller (Anus clypecta ) M Duck +
ಬಾಕು, ಕೋಖರಿ ಅಂದರೆ ರಾಜರು ಅಪಾಯದ ಸಮಯದಲ್ಲಿ ಜೀವರಕ್ಷಣೆ ಗಾಗಿ ಬಳಸುವ ಚಿಕ್ಕ ಚಾಕು. ಬಾತು ಕೋಳಿಗಳಲ್ಲೇ ವಿಶೇಷವಾದ ಚಾಕುವಿನಂಥ ಕೊಕ್ಕನ್ನು ಹೊಂದಿದ ಬಾತುಕೋಳಿ ಇದು. ರೆಕ್ಕೆಯಲ್ಲಿರುವ ನೀಲಿ, ಹಸಿರು, ಕಂದು, ಬಿಳಿ ಮಿಶ್ರಿತ ಕಂದು, ಬಣ್ಣದ ಚೆಲುವಿನಿಂದ ಬಾತುಗಳಲ್ಲೇ ಚಂದದ ಹಕ್ಕಿ ಎಂಬ ಅರ್ಥದಲ್ಲೂ ಈ ಹೆಸರು ಬಳಸಲಾಗಿದೆ. ಬಾಕುವಿನ ಆಕಾರದಲ್ಲಿರುವ ದೊಡ್ಡ ಕೊಕ್ಕಿನಿಂದ
ಈ ಹಕ್ಕಿಯನ್ನು ಗುರುತಿಸುವುದು ಸುಲಭ. ಇತರ ಯಾವ ಬಾತಿಗೂ ಈ ಆಕಾರದ ಕೊಕ್ಕಿಲ್ಲ. ಇದರ ಕೊಕ್ಕು ಮತ್ತು ಕಾಲು, ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ಕೊಳ, ಕೆರೆ, ಸರೋವರ, ಮಳೆಗಾಲದಲ್ಲಿ ನೀರು ನಿಂತು ಆಗಿರುವ ಕೆರೆ, ಅಣೆಕಟ್ಟಿನ ಹಿನ್ನೀರಿನ ಕಡೆ ಇದು ಇರುತ್ತದೆ. ಇದು ವಲಸೆ ಹಕ್ಕಿ. ತಮಿಳುನಾಡು, ಕೇರಳ, ಕರ್ನಾಟಕದಲ್ಲೂ ಇದನ್ನು ಕಾಣಬಹುದು. ಮುಖ್ಯವಾದ ಇರು ನೆಲೆ ಯೂರೋಪ್, ಏಷಿಯಾದ ಉತ್ತರ ಭಾಗ.
ಇದರ ದೊಡ್ಡ ರೆಕ್ಕೆಯ ಅಗಲ 76 ಸೆಂ.ಮೀ. 600ಗ್ರಾಂ. ಭಾರ ಇರುತ್ತದೆ. ದಪ್ಪ, ಅಗಲದ ಚುಂಚು, ದಟ್ಟ ಹಸಿರು ಬಣ್ಣದ ತಲೆ, ಬಿಳಿಯ ಎದೆ, ಹೊಟ್ಟೆ ಭಾಗದಲ್ಲಿ ಕಂದುಗೆಂಪು ಬಣ್ಣದಿಂದ ಕೂಡಿರುವುದರಿಂದ ನೋಡಲು ಆಕರ್ಷಕ. ನೀಲಿ ಬಿಳಿ, ಬೂದು ಬಣ್ಣದ ಗರಿಯ ಅಂಚಿನಲ್ಲಿ -ಬಿಳಿ ಬಣ್ಣದ ಗೆರೆ ಇರುತ್ತದೆ. ಚಿಕ್ಕ ಕಣ್ಣು ಅದರ ಸುತ್ತ ತಿಳೀ ಬಿಳಿಬಣ್ಣದ ವರ್ತುಲವನ್ನು ಕಾಣಬಹುದು. ಬಾಲದ ಪುಕ್ಕದ ತುದಿ ಚೂಪಾಗಿರುತ್ತದೆ. ಬಾಲದ ಬುಡದ ಬಣ್ಣ ಕಪ್ಪು. ಇದು ಹಾರುವಾಗ ಬೆನ್ನಿನಲ್ಲಿರುವ ನೀಲಿ ಛಾಯೆಯ ಬೂದುಬಣ್ಣ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಕಾಣುತ್ತದೆ.
ಮರಿಮಾಡುವ ಸಮಯದಲ್ಲಿ ಗಂಡುಹಕ್ಕಿಯ ಮೈ ಬಣ್ಣ ಅಚ್ಚ ವರ್ಣಕ್ಕೆ ತಿರುಗುತ್ತದೆ. ಹೆಣ್ಣು ಹಕ್ಕಿಯಲ್ಲಿ ಪ್ರಧಾನವಾಗಿ ತಿಳಿಕಂದು ಬಣ್ಣದ ಗರಿ, ಅದರ ಸುತ್ತ ಬಿಳಿ ರೇಖೆ ಇರುತ್ತದೆ.
ಕೆರೆ, ಕಟ್ಟೆ, ಹಿನ್ನೀರು, ನದೀ ತೀರದ ಕೆಸರಿನ ಜಾಗ, ಜಲಸಸ್ಯಗಳು ತುಂಬಿದ ಹೊಂಡಗಳಲ್ಲಿ ಹೆಚ್ಚೆಚ್ಚು ಕಾಣುತ್ತದೆ. ನೀರಿನಲ್ಲಿ ತೇಲುತ್ತಾ, ಕೆಲವೊಮ್ಮೆ ನೀರಿನ ಮೇಲ್ಮೆ„ಯಲ್ಲಿ ನೀರಿಗೆ ಅಂಟಿದಂತೆ ರೆಕ್ಕೆ ಗರಿ ಬಿಡಿಸಿ ಹಾರುತ್ತಾ , ಕೆಲವೊಮ್ಮೆ ನೀರಿನಲ್ಲಿ ಬಾಕುವಿನಂತಿರುವ ಚುಂಚನ್ನು ಸ್ವಲ್ಪ ಅಗಲಿಸಿ ಹುಳಗಳನ್ನು ಬೇಟೆಯಾಡುತ್ತದೆ.
ಬೇಟೆಯ ವಿಚಾರದಲ್ಲಿ ಈ ಹಕ್ಕಿ ತನ್ನದೇ ಆದ ತಂತ್ರಗಾರಿಕೆ ಮಾಡುತ್ತದೆ. ಅದೇನೆಂದರೆ, ನೀರಿನ ಮೇಲ್ಮೆ„ಯಲ್ಲಿ ತನ್ನ ದೇಹದ ಮುಕ್ಕಾಲು ಭಾಗ ಮೇಲೆ ಇರಿಸುವುದರಲ್ಲಿ ಪರಿಣತಿ ಗಳಿಸಿದೆ. ಈ ಹಕ್ಕಿ ಏಪ್ರಿಲ್-ಜೂನ್ ಅವಧಿಯಲ್ಲಿ ಮರಿಮಾಡುತ್ತವೆ. ನೀರು ಇರುವ ಕಡೆ ಮಾತ್ರ ಇದು ಗೂಡು ಕಟ್ಟುವುದು. ಒಂದು ಸಲಕ್ಕೆ 7ರಿಂದ 16 ಮೊಟ್ಟೆ ಇಡುತ್ತದೆ.
ಪಿ. ವಿ. ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.