ಧೋನಿ ಬಳಿಕ ಪೃಥ್ವಿ ಶಾ ಭಾರತಕ್ಕೆ ಭರವಸೆ?
Team Udayavani, Sep 1, 2018, 11:27 AM IST
ದೇಶಕ್ಕಾಗಿ ಬಹಳ ವರ್ಷಗಳಿಂದ ಆಡುವ ನಿರ್ದಿಷ್ಟ ಆಟಗಾರನ ಬದಲು ಆ ಜಾಗದಲ್ಲಿ ಹೊಸ ಆಟಗಾರನನ್ನು ಕಾಣುವುದು ಸ್ವಲ್ಪ ಕಷ್ಟ. ಹಾಗೂ ಆತ ಈ ಹಿಂದಿನ ಆಟಗಾರನ ಮಟ್ಟದ ಸಾಧನೆಯನ್ನೇ ತೋರುತ್ತಾನೆ ಎಂದು ನಿರೀಕ್ಷಿಸುವುದು ಇನ್ನೂ ಅಸಾಧ್ಯ.
ಅದರಲ್ಲೂ ಆಟಗಾರನೊಬ್ಬ ಅನಿರೀಕ್ಷಿತವೆಂಬಂತೆ ಆಟದಿಂದ ನಿವೃತ್ತಿ ಘೋಷಿಸಿದರಂತೂ ಮತ್ತೂ ಕಷ್ಟ ಕಷ್ಟ. ಒಬ್ಟಾತ ಫಾರಂ ಕಳೆದುಕೊಂಡು ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದರೆ ಅವನ ನಿವೃತ್ತಿ ಆ ಮಟ್ಟಿನ ಸುದ್ದಿಯೇ ಆಗುವುದಿಲ್ಲ. ಅದೇ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಕಾಏಕಿ 2014ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದಾಗ ಭಾರತದ ಸಫಲ ತಂಡದ ಸಮತೋಲನ ಅಲುಗಾಡಿತ್ತು!. ಇದೀಗ ಅವರು ಏಕದಿನ, ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿದರೆ ಅವರ ಬದಲಿಗೆ ಆಡುವುದು ಯಾರು ಎನ್ನುವ ಪ್ರಶ್ನೆ ಎದುರಾದಾಗ ಪೃಥ್ವಿ ಶಾ ಹೆಸರು ಕೇಳಿ ಬರುತ್ತದೆ. ನಿಜವಾಗಿಯೂ ಪೃಥ್ವಿ ಶಾಗೆ ಅಂತಹ ಸಾಮರ್ಥ್ಯ ಇದೆಯೇ? ಅವರು ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಸೂಕ್ತ ಬ್ಯಾಟಿಂಗ್ ಮಾಡಬಲ್ಲರೇ ಎನ್ನುವ ಕುರಿತ ಚರ್ಚೆ ಶುರುವಾಗಿದೆ.
ಧೋನಿಗಿಂತ ಒಂದು ವರ್ಷ ಮೊದಲೇ ಅಂದರೆ 2004ರಲ್ಲಿ ತಂಡದೊಳಗೆ ಬಂದಿದ್ದ ದಿನೇಶ್ ಕಾರ್ತಿಕ್, ಪಾರ್ಥಿವ್ ಪಟೇಲ್, ಈವರೆಗೆ 32 ಟೆಸ್ಟ್‌ಗಳನ್ನು ಆಡಿರುವ ವೃದ್ಧಿಮಾನ್ ಸಹಾ ಹಾಗೂ ಏಕೈಕ ಟೆಸ್ಟ್ ಸಾಧಕ ನಮಾನ್ ಓಜಾರನ್ನು ಭಾರತ ಪ್ರಯತ್ನಿಸಿದೆ. ವಿಕೆಟ್ ಕೀಪಿಂಗ್ ಎಂಬ ದೋಣಿ ಹೊಯ್ದಾಡುತ್ತಲೇ ಇದೆ! ಈ ಸ್ಥಾನಕ್ಕೀಗ ಕೇವಲ 18 ವರ್ಷದ ವಯೋಮಾನದ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕೇವಲ 14 ಪಂದ್ಯಗಳ “ಮಣ್ಣು’ ಹೊತ್ತಿರುವ ಪೃಥ್ವಿ ಶಾ ಆಗಮಿಸಿದ್ದಾರೆ. ಭಾರತೀಯ ಕ್ರಿಕೆಟ್‌ನ ದಿಗ್ಗಜರಾದ ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡುಲ್ಕರ್ ಅವರ ಶಿಫಾರಸನ್ನು ಹೊಂದುವಲ್ಲಿ ಶಾರ ಹಿಂದಿನ ದಾಖಲೆಗಳು ಆಧಾರವಾಗಿರಬಹುದು. 14 ಪಂದ್ಯಗಳಲ್ಲಿ 7 ಶತಕ. 5 ಅರ್ಧ ಶತಕಗಳು ಮತ್ತು ಶೇ. 56.72ರ ಸರಾಸರಿ. ಕಿರಿಯರ ಕ್ರಿಕೆಟ್ ತಂಡದ ಕೋಚ್ ಆಗಿ ದ್ರಾವಿಡ್ ಶಾರನ್ನು ಹತ್ತಿರದಿಂದ ಗಮನಿಸಿದ್ದಾರೆ, ದೋಣಿ ಏರಬಹುದು ಎಂದು ಹಸಿರು ನಿಶಾನೆ ತೋರಿಸಿದ್ದಾರೆ!
ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಪದಾರ್ಪಣೆಗೈದ ಶಾ ಕೊನೆಪಕ್ಷ ಗೆದ್ದ ತಂಡದ ಭಾಗವಾದರು. ಸತತ ಎರಡು ಸೋಲುಗಳಿಂದ ಸುಣ್ಣವಾಗಿದ್ದ ತಂಡಕ್ಕೆ ಅದೃಷ್ಟವಾದರು. ಬ್ಯಾಟ್‌ನಿಂದ ಹರಿದಿದ್ದು 24 ಹಾಗೂ ಒಂಟಿ ರನ್ ಮಾತ್ರವಾದರೂ ಮೊದಲ ಇನಿಂಗ್ಸ್‌ನಲ್ಲಿ ಹಿಡಿದ 5 ಕ್ಯಾಚ್ ಸೇರಿದಂತೆ ಪಂದ್ಯದಲ್ಲಿ ಏಳು ಕ್ಯಾಚ್ ಹಿಡಿದು ಗಮನ ಸೆಳೆದರು. ವಿಕೆಟ್ ಕೀಪಿಂಗ್‌ನಲ್ಲಿ ಕೊರತೆಯಿದ್ದು ಬ್ಯಾಟಿಂಗ್‌ನಲ್ಲಿ ಮಿಂಚಬಲ್ಲವರು ಟೆಸ್ಟ್ ಕ್ರಿಕೆಟ್‌ಗೆ ಹೇಳಿಮಾಡಿಸಿದವರಲ್ಲ. ಅಂತಹ ಪ್ರಯೋಗಗಳು ಸತತವಾಗಿ ಸೋಲು ಕಂಡಿವೆ. ಪೃಥ್ವಿ ಶಾರಲ್ಲಿನ ಪ್ರತಿಭೆ ಕುತೂಹಲ ಮೂಡಿಸಿದೆ.
ಗಾವಸ್ಕರ್ ಶಿಫಾರಸು!
ಈ ವರ್ಷದ ಆರಂಭದಲ್ಲಿ 19ರೊಳಗಿನ ಕಿರಿಯರ ತಂಡದ ನಾಯಕರಾಗಿದ್ದ ಶಾ ಬಗ್ಗೆ ಸುನಿಲ್ ಗಾವಸ್ಕರ್ ಕೂಡ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಮುಂಬೈ ತಂಡದವ ಎಂಬುದರ ಹೊರತಾಗಿ ಶಾರ ಬ್ಯಾಟ್ ಕೂಡ ಪದೇ ಪದೇ ಮಾತುಗಳನ್ನಾಡಿದೆ. ಇಂಡಿಯಾ ಎಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಶತಕ ಹಾಗೂ ಒಂದು ಅರ್ಧ ಶತಕದ 406 ರನ್, ರಾಷ್ಟ್ರೀಯ ತಂಡಕ್ಕೆ ಕರೆ ಬರುವ ಮುನ್ನ ಭಾರತದಲ್ಲಿ ದಕ್ಷಿಣ ಆಫ್ರಿಕಾ ಎ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇದೇ ಪೃಥ್ವಿ 136 ರನ್ ಬಾರಿಸಿದ್ದರು. ಬೇಸಿಗೆಯಲ್ಲಿ ಇಂಡಿಯಾ ಎ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸಗೈದಿದ್ದ ಶಾ ಇಂಗ್ಲೆಂಡ್ ಎ ವಿರುದ್ಧ ಎರಡು ನಾಲ್ಕು ದಿನಗಳ ಪಂದ್ಯದಲ್ಲಿ ಗಳಿಸಿದ್ದು 188 ಹಾಗೂ 62 ರನ್. ಅಲ್ಲಿನ ಎ ದರ್ಜೆ ಪಂದ್ಯಗಳಲ್ಲಿ ಎರಡು ಶತಕವನ್ನೂ ದಾಖಲಿಸಿದ್ದರು.
ಶಾ ಅವರ ಕ್ಯಾರಿಯರ್ ಪುಟಗಳಲ್ಲಿ ಇನ್ನಷ್ಟು ಬಹುಪರಾಕ್‌ಗಳಿವೆ. 2016ರಲ್ಲಿ ಯುವ ವಿಶ್ವ ಕಪ್ ಗೆದ್ದ 19ರೊಳಗಿನ ಭಾರತ ತಂಡದ ಭಾಗವಾಗಿದ್ದ ಶಾ ಮುಂದಿನ ಎರಡು ತಿಂಗಳಲ್ಲಿ 2016-17ರ ರಣಜಿ ಪಂದ್ಯದಲ್ಲಿದ್ದರು. ಸೆಮಿಫೈನಲ್, ಶಾ ಗಳಿಸಿದ್ದು 120! ಗುಜರಾತ್ ವಿರುದ್ಧ ಫೈನಲ್‌ನಲ್ಲಿ 71 ಮತ್ತು 44. ಇಂಡಿಯಾ ರೆಡ್ ಪರವಾಗಿ ದುಲೀಪ್ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ 154 ರನ್. 16 ವರ್ಷದ ಈ ಬಾಲ ಪ್ರತಿಭೆ ತನ್ನ ಪ್ರಥಮ ರಣಜಿ ಋತುವಿನಲ್ಲಿ 537 ರನ್ ಕೂಡಿಹಾಕಿದ್ದು, 19ರೊಳಗಿನ ಇಂಗ್ಲೆಂಡ್ ವಿರುದ್ಧದ 5-0 ಏಕದಿನ ಏಕಸ್ವಾಮ್ಯದಲ್ಲಿ ಶಾರೇ ಗರಿಷ್ಠ ರನ್ ಸಂಪಾದಿಸಿದ್ದು, ನ್ಯೂಜಿಲೆಂಡ್‌ನಲ್ಲಿ 19ರೊಳಗಿನ ವಿಶ್ವಕಪ್ ತಂಡದ ನಾಯಕರಾಗಿದ್ದು….. ಬಹುಪರಾಕ್ ಮುಂದುವರೆಯಲಿ!
ಸಚಿನ್ ಕೋಚಿಂಗ್!
8 ವರ್ಷದ ಪೃಥ್ವಿ ಶಾರ ಪ್ರತಿಭೆಯನ್ನು ನೋಡಿದ ಸಚಿನ್ ತೆಂಡುಲ್ಕರ್ ಹೇಳಿದ್ದು ಒಂದೇ ಮಾತು, ಯಾವುದೇ ಕೋಚ್ ಹೇಳಿದರೂ ನಿನ್ನ ಸ್ವಾಭಾವಿಕವಾದ ಬ್ಯಾಟ್ ಗ್ರಿಪ್, ಬ್ಯಾಟ್ ಹಿಡಿದು ನಿಲ್ಲುವ ನಿಲುವುಗಳನ್ನು ಬದಲಿಸಬೇಡ. ಯಾರಾದರೂ ಒತ್ತಡ ಹೇರಿದರೆ ಅವರಿಗೆ ನನ್ನೊಂದಿಗೆ ಮಾತನಾಡಲು ಹೇಳು ಎಂದಿದ್ದರು.
ಏನಿದು ಜೆರ್ಸಿ ಗುಟ್ಟು?
ಪೃಥ್ವಿ ಶಾ ಸದಾ 100 ನಂಬರ್ ಇರುವ ಜರ್ಸಿ ಹಾಕಲು ಇಷ್ಟಪಡುತ್ತಾರೆ. ಇದರಲ್ಲಿ ಯಾವುದೇ ಮಳ್ಳು ನಂಬಿಕೆಗಳಿಲ್ಲ ಎಂದು ಅವರೇ ಹೇಳುತ್ತಾರೆ. ಭವಿಷ್ಯದ ಸಚಿನ್ ಎಂದು ಕರೆಸಿಕೊಂಡಿದ್ದ ಶಾ ಸಚಿನ್ ತೊಡುತ್ತಿದ್ದ 10ನೇ ನಂಬರ್ ಜರ್ಸಿಗೆ ಇನ್ನೊಂದು ಶೂನ್ಯ ಸೇರಿಸಿದ್ದು, ಈಗಾಗಲೇ ಅವರು ಆಡಿದ ಮೊದಲ ರಣಜಿ, ದುಲೀಪ್‌ಗ್ಳಲ್ಲಿಯೇ ಸಚಿನ್‌ರಂತೆ ಶತಕ ಬಾರಿಸಿರುವುದು ಕುತೂಹಲ ಮೂಡಿಸಿದೆ.
ಮಾ.ವೆಂ.ಸ.ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್?
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.