ಹಳೇ ಬ್ಯಾಟು ಹಳೇ ಚೆಂಡು
Team Udayavani, Jan 18, 2020, 6:00 AM IST
ಅಮ್ಮ ಹೇಳಿದ್ದಕ್ಕೆ ಎಡಗೈ ಬ್ಯಾಟ್ಸ್‌ಮನ್ ಆದ
ಎದುರಾಳಿ ತಂಡಗಳಿಗೆ “ತಲೆನೋವು’ ತರುವಂಥ ಆಟಗಾರರು ಪ್ರತಿಯೊಂದು ಕ್ರಿಕೆಟ್ ತಂಡದಲ್ಲೂ ಇರುತ್ತಾರೆ. ಕೆಲವರು ಪ್ರಚಂಡ ಬೌಲಿಂಗ್ ಕಾರಣಕ್ಕೆ ಮತ್ತೆ ಕೆಲವರು ಭರ್ಜರಿ ಬ್ಯಾಟಿಂಗ್‌ನ ಕಾರಣಕ್ಕೆ ತಲೆನೋವು ಆಗುವುದುಂಟು, ಭಾರತದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್‌ನ ಆ್ಯಂಡ್ರೆ ರಸೆಲ್, ಶ್ರೀಲಂಕಾದ ಲಸಿತ್ ಮಾಲಿಂಗ, ದಕ್ಷಿಣ ಆಫ್ರಿಕಾದ ಸ್ಟೀವ್ ಸ್ಮಿತ್, ಇಂಗ್ಲೆಂಡಿನ ಜೋ ರೂಟ್, ಇವರೆಲ್ಲ, ತಮ್ಮ ಪ್ರಚಂಡ ಆಟದಿಂದಲೇ ಎದುರಾಳಿ ತಂಡದವರಿಗೆ ತಲೆನೋವು ತರುವ ಆಟಗಾರರು. ಆಸ್ಟ್ರೇಲಿಯ ತಂಡದಲ್ಲೂ ಅಂಥ ಒಬ್ಬ ಬ್ಯಾಟ್ಸ್‌ಮನ್ ಇದ್ದಾರೆ. ಅವರೇ ವಾರ್ನರ್. ಅವರು ಎಡಗೈ ಬ್ಯಾಟ್ಸ್‌ಮನ್ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಆದರೆ, ಆತ ಬಲಗೈಲಿ ಕೂಡ ಚೆನ್ನಾಗಿ ಬ್ಯಾಟ್ ಮಾಡಬಲ್ಲ ಎನ್ನುವುದು ಕೂಡ ನಿಜ. ಬಾಲ್ಯದಲ್ಲಿ ಎಡಗೈ ಬ್ಯಾಟ್ಸ್ ಮನ್ ಆಗಿದ್ದ ವಾರ್ನರ್, ಪ್ರತಿ ಚೆಂಡನ್ನು ಆಕಾಶದೆತ್ತರಕ್ಕೆ ಹೊಡೆಯುತ್ತಿದ್ದನಂತೆ, ಪರಿಣಾಮ ಪ್ರತಿ ಚೆಂಡೂ ಕ್ಯಾಚ್ ಆಗುತ್ತಿತ್ತು. ಅದನ್ನು ಗಮನಿಸಿದ ಕೋಚ್, ನಾಳೆಯಿಂದ ಬಲಗೈ ಬ್ಯಾಟ್ಸ್‌ಮನ್ ಆಗು ಅಂದನಂತೆ. ಪರಿಣಾಮ ವಾರ್ನರ್‌ಗೆ ಬಲಗೈ ಬ್ಯಾಟಿಂಗ್ ಕೂಡ ಬಂತು. ಈತನ ಆಟ ಗಮನಿಸಿದ ಅಮ್ಮ “ಬಲಗೈ ಬ್ಯಾಟಿಂಗ್‌ನಲ್ಲಿ ಅಂತಹ ಫೋರ್ಸ್ ಇಲ್ಲ ಮಗನೇ. ನೀನು ಎಡಗೈ ಬ್ಯಾಟ್ಸ್‌ಮನ್ ಆಗಿಯೇ ಮುಂದುವರಿ ಅಂದಳಂತೆ. ಅಂದಿನಿಂದ ವಾರ್ನರ್ ಎಡಗೈ ಬ್ಯಾಟ್ಸ್‌ಮನ್ ಆಗಿಯೇ ಎಲ್ಲರಿಗೂ “ವಾರ್ನ್’ ಮಾಡಲು ಶುರುವಿಟ್ಟರು.
ಜೆರ್ಸಿ ನಂಬರಿನ ಹಿಂದೆಯೂ ರಹಸ್ಯಗಳಿವೆ!
ಒಂದು ದಿನದ ಕ್ರಿಕೆಟ್ ಪಂದ್ಯ ಆಡುವ ಆಟಗಾರರು ಹಾಕುವ ಜೆರ್ಸಿಗಳಿಗೆ ಒಂದೊಂದು ನಂಬರ್ ಇರುತ್ತದೆ. ಯುವರಾಜ್ ಸಿಂಗ್ (12), ಧೋನಿ (7), ಕೊಹ್ಲಿ (18), ಕ್ರಿಸ್ ಗೇಲ್ (333), ಸಚಿನ್ ತೆಂಡುಲ್ಕರ್ (10), ರೋಹಿತ್ ಶರ್ಮ (45), ದ್ರಾವಿಡ್ (19)…ಹೀಗೆ ಈ ನಂಬರ್‌ಗಳ ಹಿಂದಿರುವ ಸ್ವಾರಸ್ಯವೇನು ಎಂದು ಹೇಳಲು ಹೊರಟರೆ ವಿಶೇಷ ಅನಿಸುವಂತಹ ಸಂಗತಿಗಳು ಜತೆಯಾಗುತ್ತವೆ. ಯುವರಾಜ್ ಸಿಂಗ್, ಧೋನಿ, ಕೊಹ್ಲಿಯ ಜೆರ್ಸಿಯ ಮೇಲಿರುವ ನಂಬರ್‌ಗಳು ಅವರವರ ಹುಟ್ಟಿದ ದಿನಾಂಕವನ್ನು ಸಂಕೇತಿಸುತ್ತವೆೆ. ಗೇಲ್ ಟೆಸ್ಟ್‌ನಲ್ಲಿ ದಾಖಲಿಸಿದ ಅತೀ ಹೆಚ್ಚು ಸ್ಕೋರ್ 333, ಅದನ್ನೇ ಅವರ ಜೆರ್ಸಿ ನಂಬರ್ ಮಾಡಿಕೊಂಡಿದ್ದಾರೆ. ತೆಂಡುಲ್ಕರ್ ಆರಂಭದಲ್ಲಿ 99 ನಂಬರಿನ ಜೆರ್ಸಿ ತೊಡುತ್ತಿದ್ದರು.
ಒಂದು ಸಂದರ್ಭದಲ್ಲಿ ಅವರು ಕುಟುಂಬದ ಜ್ಯೋತಿಷಿಯನ್ನು ಭೇಟಿಯಾದಾಗ 99 ಜೆರ್ಸಿಯ ಬದಲು 10ನೇ ಸಂಖ್ಯೆಯ ಜೆರ್ಸಿ ತೊಡಲು ಆರಂಭಿಸಿದರು. 19 ವಯೋಮಿತಿ ತಂಡದಲ್ಲಿ ವಿಶ್ವಕಪ್ ಆಡಲು ಹೊರಟಾಗ ರೋಹಿತ್ ಶರ್ಮ ಅವರಿಗೆ 45ನೇ ನಂಬರಿನ ಜೆರ್ಸಿ ಯನ್ನು ತೆಗೆದುಕೊಟ್ಟರಂತೆ. ಅಮ್ಮನ ಆಯ್ಕೆಯ ಜೆರ್ಸಿ ಎಂಬ ಕಾರಣಕ್ಕೆ ರೋಹಿತ್ ಈಗಲೂ ಅದೇ ನಂಬರಿನ ಜೆರ್ಸಿ ತೊಡುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ರಾಹುಲ್ ದ್ರಾವಿಡ್ 19 ನಂಬರಿನ ಜೆರ್ಸಿ ತೊಡುತ್ತಿದ್ದರು. ಅದರ ಹಿಂದಿರುವ ಗುಟ್ಟೇನು ಗೊತ್ತೆ?. ದ್ರಾವಿಡ್ ಅವರ ಪತ್ನಿಯ ಹುಟ್ಟುಹಬ್ಬದ ದಿನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.