ಒಲಿಂಪಿಕ್‌: ಆದಾಯಕ್ಕಿಂತ ನಷ್ಟವೇ ಹೆಚ್ಚು


Team Udayavani, Mar 14, 2020, 6:06 AM IST

tokyo

ಒಂದು ಒಲಿಂಪಿಕ್‌ ಕ್ರೀಡಾಕೂಟ ನಡೆಸುವುದೆಂದರೆ ಸುಲಭದ ಮಾತಲ್ಲ. ಅಲ್ಲಾಗುವ ಹಣ ಖರ್ಚು, ಅದಕ್ಕೆ ಬೇಕಾಗುವ ಮಾನವಶಕ್ತಿ, ಬೇಕಾಗುವ ತಯಾರಿ, ಮುಂಜಾಗ್ರತೆ…ಒಲಿಂಪಿಕ್‌ ಸಂಘಟನೆ ಮಾಡುವ ದೇಶ ಕೂಟ ಮುಗಿಯುವ ಹೊತ್ತಿಗೆ ಹೈರಾಣಾಗಿರುತ್ತದೆ. ಮಾಮೂಲಿ ದೇಶಗಳಿಗೆ ಈ ಕೂಟವನ್ನು ನಡೆಸಲು ಸಾಧ್ಯವೇ ಇಲ್ಲ. ಕೂಟವನ್ನು ನಡೆಸುವ ದೇಶಕ್ಕೆ ಅಗಾಧ ಸಾಮರ್ಥ್ಯವಿರಬೇಕು. ಸ್ವಲ್ಪ ವ್ಯತ್ಯಾಸವಾದರೂ ಮರ್ಯಾದೆ ಬೀದಿಗೆ ಬರುವುದು ಖಚಿತ. ಅಂತಹ ಹೊತ್ತಿನಲ್ಲಿ ಕೊರೊನಾದಂತಹ ಸಮಸ್ಯೆ ಬಂದು ಅಪ್ಪಳಿಸಿದರೆ? ಇಲ್ಲಿದೆ ಲಾಭ, ನಷ್ಟ, ಹಲವು ಮಗ್ಗಲುಗಳ ವಿಶ್ಲೇಷಣೆ.

ಜಪಾನಿನ ಟೋಕ್ಯೋದಲ್ಲಿ 32ನೇ ಒಲಿಂಪಿಕ್‌ ನಡೆಯಲಿದೆ. ಜು.24ರಿಂದ ಆ.9ರವರೆಗೆ ಕೂಟದ ದಿನಾಂಕ. ಈ ಕೂಟ ನಡೆಸಲು ಜಪಾನ್‌ ಮಾನ್ಯತೆ ಪಡೆದುಕೊಂಡಿದ್ದು 2013ರಲ್ಲಿ. ವಿಶ್ವದ ಬೃಹತ್‌ ಬಹುರಾಷ್ಟ್ರಗಳ ಕ್ರೀಡಾಕೂಟದ ಆತಿಥ್ಯ ಪಡೆದು 7 ವರ್ಷಗಳ ನಂತರ ಆಯೋಜನೆಯಾಗುತ್ತಿದೆ. ಜಪಾನ್‌ನಂತಹ ಶ್ರೀಮಂತ, ಶಿಸ್ತುಬದ್ಧ ರಾಷ್ಟ್ರಕ್ಕೇ ಇಷ್ಟು ಸಮಯ ಬೇಕೆಂದರೆ ಒಲಿಂಪಿಕ್‌ನ ಅಗಾಧತೆಯ ಅರಿವಾಗಬಹುದು. ಹೆಚ್ಚುಕಡಿಮೆ ಟೋಕ್ಯೋ ನಗರದ ಬಹುತೇಕ ಸ್ವರೂಪವೇ ಬದಲಾಗಿದೆ. ಹಲವು ರೀತಿಯಲ್ಲಿ ನಗರವನ್ನು ಅನುಕೂಲಕರವಾಗಿ ಪರಿವರ್ತಿಸಲಾಗಿದೆ. ಆರಂಭದಲ್ಲಿ ಕೂಟದ ಖರ್ಚನ್ನು ಕಡಿಮೆ ಅಂದಾಜಿಸಲಾಗಿತ್ತು. ಈಗ ಅದರ ಖರ್ಚು 93 ಸಾವಿರ ಕೋಟಿ ರೂ.ಗಳಿಗೇರಿದೆ. ಇದರಲ್ಲಿ ಕೂಟವನ್ನು ಹೊರತುಪಡಿಸಿದ ಮೂಲಭೂತ ಸೌಕರ್ಯ ಅಭಿವೃದ್ಧಿ ಖರ್ಚುಗಳೂ ಸೇರಿವೆ.

ಕೂಟ ರದ್ದಾದರೆ ಏನು ಗತಿ?: ಕೊರೊನಾ ವೈರಸ್‌ ಜಪಾನ್‌ನಲ್ಲೂ ಕಾಣಿಸಿಕೊಂಡಿದೆ. ಮೇಲಾಗಿ ಒಲಿಂಪಿಕ್‌ನ ಅತಿ ಬಲಿಷ್ಠ ರಾಷ್ಟ್ರ ಚೀನಾದಲ್ಲಿ ವಿಪರೀತವಾಗಿದೆ. ಒಟ್ಟು 201 ರಾಷ್ಟ್ರಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಾರತವೂ ಸೇರಿದಂತೆ ಬಹುತೇಕ ದೇಶಗಳಲ್ಲಿ ಕೊರೊನಾ ಇದೆ. ಇದಕ್ಕೆ ಔಷಧವೂ ಸಿಕ್ಕಿಲ್ಲ. ಹೀಗಿರುವಾಗ ಒಲಿಂಪಿಕ್‌ ಅನ್ನು ನಡೆಸಲು ಸಾಧ್ಯವೇ? ಈಗಿನ ಸ್ಥಿತಿಯಲ್ಲಿ ಮುಂದೂಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಜಪಾನಿನ ಒಲಿಂಪಿಕ್‌ ಸಂಘಟನಾ ಸಮಿತಿ, ಅಂತಾರಾಷ್ಟ್ರೀಯ ಒಲಿಂಪಿಕ್‌ ಸಂಸ್ಥೆ ಮಾತ್ರ, ಏನು ಬೇಕಾದರೂ ಆಗಲಿ ನಡೆಸಿಯೇ ಬಿಡುವ ಎಂಬ ತೀರ್ಮಾನದಲ್ಲಿವೆ. ಒಂದುವೇಳೆ ಕೂಟ ರದ್ದಾದರೆ, ಜಪಾನ್‌ಗೆ ಆಗುವ ಹೊಡೆತವನ್ನು ತಡೆದುಕೊಳ್ಳಲು ದೀರ್ಘ‌ಕಾಲ ಬೇಕಾಗುತ್ತದೆ.

ಒಲಿಂಪಿಕ್‌ನಿಂದ ಹೇಗೆಲ್ಲ ಖರ್ಚಾಗುತ್ತದೆ?: ಒಲಿಂಪಿಕ್‌ ಎಂದ ಕೂಡಲೇ ಮೊದಲು 11,000ಕ್ಕೂ ಅಧಿಕ ಕ್ರೀಡಾಪಟುಗಳು ಉಳಿದುಕೊಳ್ಳಲು ವ್ಯವಸ್ಥಿತ, ಬೃಹತ್‌ ಕ್ರೀಡಾಗ್ರಾಮ ನಿರ್ಮಿಸಬೇಕಾಗುತ್ತದೆ. ಸಾವಿರಾರು ಕೋಟ ರೂ. ಇಲ್ಲೇ ವ್ಯಯವಾಗುತ್ತದೆ. ಒಂದು ದೊಡ್ಡ ಮೈದಾನ ನಿರ್ಮಾಣ ಮಾಡಬೇಕಾಗುತ್ತದೆ. 2008ರ ಬೀಜಿಂಗ್‌ ಒಲಿಂಪಿಕ್‌ನಲ್ಲಿ 3,365 ಕೋಟಿ ರೂ. ವ್ಯಯಿಸಿ ಮೈದಾನ ನಿರ್ಮಿಸಲಾಗಿತ್ತು. ಕೂಟ ಮುಗಿದ ಮೇಲೆ ಅದರಿಂದ ಯಾವುದೇ ಪ್ರಯೋಜನವೂ ಇಲ್ಲ! ಬೇರೆ ಬೇರೆ ಕ್ರೀಡೆಗಳಿಗೆ ಅನುಗುಣವಾಗಿ ಬೇರೆ ಅಂಕಣಗಳನ್ನು ನಿರ್ಮಿಸಬೇಕಾಗುತ್ತದೆ. ಈ ಬಾರಿ ಟೋಕ್ಯೋದಲ್ಲಿ 50 ಮುಖ್ಯ ಕ್ರೀಡೆಗಳಿಂದ 339 ಉಪಕ್ರೀಡೆಗಳು ನಡೆಯುತ್ತವೆ. ಇವಕ್ಕೆಲ್ಲ ಅಂಕಣ ಸಿದ್ಧಪಡಿಸಬೇಕಾಗುತ್ತದೆ.

ಸಾವಿರಾರು ಕೋಟಿ ರೂ. ಇಲ್ಲೇ ಹೋಗುತ್ತದೆ. ಇನ್ನು ಆಸ್ಪತ್ರೆಗಳು, ಆಹಾರ, ಸಂಚಾರ ಎಂಬ ಖರ್ಚುಗಳು. ಎಲ್ಲಕ್ಕಿಂತ ಮುಖ್ಯವಾಗಿ ವಿದೇಶಗಳಿಂದ ಲಕ್ಷಗಟ್ಟಲೆ ಪ್ರವಾಸಿಗಳು ಬರುತ್ತಾರೆ. ಅವರಿಗೆಲ್ಲ ಕೊಠಡಿಗಳನ್ನು ನೀಡಬೇಕು. ಯಾವುದೇ ಒಲಿಂಪಿಕ್‌ ನಡೆದಾಗಲೂ ಕನಿಷ್ಠ 40,000 ಹೋಟೆಲ್‌ ಕೊಠಡಿಗಳು ಬೇಕು. 2016ರ ರಿಯೊ ಒಲಿಂಪಿಕ್‌ನಲ್ಲಿ ಇವು ಸಾಕಾಗದೇ 15,000 ಹೆಚ್ಚುವರಿ ಹೋಟೆಲ್‌ ಕೊಠಡಿ ನಿರ್ಮಿಸಬೇಕಾಗಿತ್ತು. ಇನ್ನು ಸಾರಿಗೆ ವ್ಯವಸ್ಥೆ, ನೀರಿನ ವ್ಯವಸ್ಥೆ, ಟ್ರೈನು, ವಿಮಾನ ಹೀಗೆ ಎಲ್ಲರೀತಿಯಿಂದ ಸಾಲು ಸಾಲು ಖರ್ಚಾಗುತ್ತದೆ. 2016 ರಿಯೋ ಕೂಟಕ್ಕೆ ಆರಂಭದಲ್ಲಿ ಅಂದಾಜಿಸಿದ್ದು, 14 ಬಿಲಿಯನ್‌ ಡಾಲರ್‌ ಖರ್ಚು. ಅಂತಿಮವಾಗಿ ಖರ್ಚಾಗಿದ್ದು 20 ಬಿಲಿಯನ್‌ ಡಾಲರ್‌. ಈಗಿನ ರೂ. ದರಕ್ಕೆ ಹೋಲಿಸಿದರೆ 1.47 ಲಕ್ಷ ಕೋಟಿ ರೂ.!

ಲಾಭಗಳು ಹೇಗೆ ಬರುತ್ತವೆ?: 1984ರ ಲಾಸ್‌ ಏಂಜಲೀಸ್‌ ಒಲಿಂಪಿಕ್‌ ಒಂದರಲ್ಲೇ ಲಾಭ ಬಂದಿದ್ದು. ಉಳಿದೆಲ್ಲ ಬಾರಿ ನಷ್ಟವೇ ಆಗಿದೆ. ಅದಿರಲಿ ಆದಾಯ ಬರುವ ಮಾರ್ಗಗಳು ಹೀಗಿವೆ. 2012ರ ಲಂಡನ್‌ ಒಲಿಂಪಿಕ್‌ ನೇರ ಪ್ರಸಾರದಿಂದ ಈಗಿನ ರೂ. ದರದಲ್ಲಿ 18.76 ಸಾವಿರ ಕೋಟಿ ರೂ. ಲಭಿಸಿದೆ. ಅದೇ ಕೂಟದಲ್ಲಿ ದೇಶೀಯ ಪ್ರಾಯೋಜಕತ್ವ, ಅಂತಾರಾಷ್ಟ್ರೀಯ ಪ್ರಾಯೋಜಕತ್ವ, ಟಿಕೆಟ್‌ ಮಾರಾಟ, ಪರವಾನಗಿ ಮಾರಾಟ ಎಲ್ಲ ಸೇರಿ ಈಗಿನ ರೂಪಾಯಿ ದರಲ್ಲಿ 59.61 ಸಾವಿರ ಕೋಟಿ ರೂ. ಹಣ ಬಂದಿದೆ. ಆದರೆ ಲಂಡನ್‌ ಒಲಿಂಪಿಕ್‌ಗೆ ಖರ್ಚಾಗಿದ್ದು ಈಗಿನ ರೂಪಾಯಿ ದರದಲ್ಲಿ 1.32 ಲಕ್ಷ ಕೋಟಿ ರೂ. ಈ ಖರ್ಚುಗಳಲ್ಲಿ ದೇಶದ ಮೂಲಭೂತ ಸೌಕರ್ಯದ ಮೇಲೆ ಮಾಡಿದ ಹೂಡಿಕೆಗಳು ದೀರ್ಘ‌ಕಾಲ ಬಾಳಿಕೆ ಬರುವುದರಿಂದ, ಅವನ್ನು ನಷ್ಟ ಎನ್ನಲು ಸಾಧ್ಯವಿಲ್ಲ. ಆದರೆ ಕ್ರೀಡಾಗ್ರಾಮ, ಮೈದಾನಗಳು, ಕೆಲವು ಸೌಕರ್ಯಗಳು ಕೂಟ ಮುಗಿದ ಮೇಲೆ ಯಾವ ಲಾಭವನ್ನೂ ತರುವುದಿಲ್ಲ. ಆದ್ದರಿಂದ ನಷ್ಟವಂತೂ ಕಟ್ಟಿಟ್ಟಿದ್ದು.

ಕಾಮನ್‌ವೆಲ್ತ್‌ನಲ್ಲಿ ಭಾರೀ ಹಗರಣ: ಭಾರತ ಒಂದು ಬಾರಿ ಕಾಮನ್‌ವೆಲ್ತ್‌ ಕೂಟ ಸಂಘಟಿಸಿದೆ. ಎರಡು ಬಾರಿ ಏಷ್ಯನ್‌ ಗೇಮ್ಸ್‌ ಅನ್ನೂ ನಡೆಸಿದೆ. 2010ರಲ್ಲಿ ಭಾರತದಲ್ಲಿ ನಡೆದ ಕಾಮನ್‌ವೆಲ್ತ್‌ ಕೂಟ ಹಗರಣಗಳ ಆಗರವಾಗಿ, ಇವತ್ತಿಗೂ ಆ ಪ್ರಕರಣಗಳು ಜೀವಂತ ಇವೆ. ಭಾರತ ಒಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಸುರೇಶ್‌ ಕಲ್ಮಾಡಿ ಕಳೆದುಕೊಂಡು, ಶಾಶ್ವತವಾಗಿ ಭಾರತೀಯರ ದೃಷ್ಟಿಯಲ್ಲಿ ಖಳನಾಯಕರಾಗಿದ್ದಾರೆ. ಆರಂಭದಲ್ಲಿ 1620 ಕೋಟಿ ರೂ. ಎಂದು ಈ ಕೂಟದ ವೆಚ್ಚವನ್ನು ನಿರ್ಧರಿಸಲಾಗಿತ್ತು. ಕೂಟ ಮುಕ್ತಾಯವಾಗುವಾಗ ವೆಚ್ಚ 10,500 ಕೋಟಿ ರೂ.ಗಳಿಗೆ ಏರಿತು. ಆದರೆ ಭ್ರಷ್ಟಾಚಾರದ ಪರಿಣಾಮ ನಿಜವಾದ ಖರ್ಚು 70,000 ಕೋಟಿ ರೂ. ಎಂದು ಪತ್ರಿಕೆಯೊಂದು ಅಂದಾಜಿಸಿದೆ.

ಸದ್ಯ ಭಾರತಕ್ಕೆ ಸಾಧ್ಯವಿಲ್ಲ!: 2014ರಲ್ಲಿ ಮೋದಿ ಸರ್ಕಾರ ಮೊದಲ ಬಾರಿ ಅಧಿಕಾರಕ್ಕೆ ಬಂದಾಗ, ಒಲಿಂಪಿಕ್‌ ಆಯೋಜನೆಯ ಆತಿಥ್ಯ ಪಡೆಯಲು ಭಾರತ ಯತ್ನಿಸಲಿದೆ ಎಂದು ಜೋರು ಸುದ್ದಿಯಾಗಿತ್ತು. ಅದಾದ ಮೇಲೆ ಸುದ್ದಿ ತಣ್ಣಗಾಯಿತು. ಯುವ ಒಲಿಂಪಿಕ್‌ ಹೊರತುಪಡಿಸಿದರೆ, ಭಾರತಕ್ಕೆ ಮಾಮೂಲಿ ಒಲಿಂಪಿಕ್‌ ಆಯೋಜಿಸುವ ಆಸಕ್ತಿಯಿಲ್ಲ ಎಂದು ಆಮೇಲೆ ಗೊತ್ತಾಯಿತು. ಇದಕ್ಕೆ ಕಾರಣ ಇಷ್ಟೇ. ಒಲಿಂಪಿಕ್‌ ಆಯೋಜಿಸುವ ದೇಶ ಆರ್ಥಿಕವಾಗಿ ಸುಭದ್ರವಾಗಿರಬೇಕು. ಯಾವುದೇ ಆರ್ಥಿಕ ಹೊಡೆತವನ್ನು ತಡೆದುಕೊಳ್ಳುವ ಶಕ್ತಿಯಿರಬೇಕು. ಈ ಕೂಟವನ್ನು ಯಶಸ್ವಿಗೊಳಿಸಲುಬೇಕಾದ ಅತ್ಯಂತ ಪ್ರಬಲ ಅಧಿಕಾರಿ ವರ್ಗವಿರಬೇಕು. ಏಕಮನಸ್ಸಿನಿಂದ ದುಡಿಯುವ ನಾಯಕತ್ವವಿರಬೇಕು. ಒಂದು ಕೂಟ ಆಯೋಜಿಸುವುದೆಂದರೆ ಅದಕ್ಕೆ ಕನಿಷ್ಠ 10 ವರ್ಷಗಳ ಅಗಾಧ ಪೂರ್ವಸಿದ್ಧತೆ ಬೇಕಾಗುತ್ತದೆ. ಸದ್ಯ ಭಾರತದಲ್ಲಿ ಅಂತಹ ಪರಿಸ್ಥಿತಿಯಿಲ್ಲ. ಮುಖ್ಯವಾಗಿ ಆರ್ಥಿಕ ಸಾಮರ್ಥ್ಯವಿಲ್ಲ.

ಟಾಪ್ ನ್ಯೂಸ್

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.