ಕಂಬದ ಮೇಲೆ, ಗರುಡ ಲೀಲೆ
ಮಳೆಯ ಶಕುನ ನುಡಿವ ಗರುಡ
Team Udayavani, Jun 29, 2019, 10:30 AM IST
ಈ ಗರುಡ, ಕಂಬದ ಮೇಲಿನ ಕಲ್ಲಿನ ಮೂರ್ತಿಯೇ ಆದರೂ, ಕಾಲ ಕಾಲಕ್ಕೆ ತನ್ನ ಚಲನೆಗಳ ಮೂಲಕ ಭವಿಷ್ಯ ನುಡಿಯುತ್ತಾನೆಂಬುದು ಅಂಬಲಗೆರೆ ಊರಿನವರ ನಂಬಿಕೆ…
ಮಳೆ ಬರೋದಿಲ್ವಾ? ವರ್ಷವಿಡೀ ಬರವೇ? ಇಲ್ಲವೇ ಈ ವರ್ಷ ಜೋರು ಮಳೆಯಾಗಿ, ಜಲಪ್ರವಾಹ ಉಂಟಾಗುತ್ತದೆಯೇ?- ಈ ಎಲ್ಲ ಮುನ್ಸೂಚನೆಗಳನ್ನು ಬಲ್ಲ ದೇವನೊಬ್ಬ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಂಬಲಗೆರೆ ಗ್ರಾಮದಲ್ಲಿ ಪ್ರತಿಷ್ಠಾಪಿತನಾಗಿದ್ದಾನೆ. ಆತನೇ ಗರುಡಮೂರ್ತಿ! ಇವನು ಕಂಬದ ಮೇಲಿನ ಕಲ್ಲಿನ ಮೂರ್ತಿಯೇ ಆದರೂ, ಕಾಲ ಕಾಲಕ್ಕೆ ತನ್ನ ಚಲನೆಗಳ ಮೂಲಕ ಭವಿಷ್ಯ ನುಡಿಯುತ್ತಾನೆಂಬುದು ಈ ಊರಿನವರ ನಂಬಿಕೆ.
ಅಂಬಲಗೆರೆಯ ರಂಗನಾಥ ದೇಗುಲದ ಮುಂದೆ ಸ್ಥಾಪಿತವಾಗಿರುವ ಗರುಡಮೂರ್ತಿಯ ಶಕುನ, ಈ ದಿನಗಳವರೆಗೂ ನಿಜವಾಗುತ್ತಾ ಬಂದಿದೆಯಂತೆ. 30 ಅಡಿ ಎತ್ತರದ ಕಂಬದ ಮೇಲೆ ನೆಲೆನಿಂತ ಗರುಡ, ತನ್ನ ಭಂಗಿಯ ವಾಲುವಿಕೆಗಳಿಂದ ಬರ, ಪ್ರಕೃತಿ ವಿಕೋಪ, ಮಳೆ ಸೂಚನೆ, ಸಮೃದ್ಧಿ ಬೆಳೆ, ದೇಶದಲ್ಲಿ ನಡೆಯುವ ಮುಖ್ಯ ಘಟನಾವಳಿಗಳ ಕುರಿತು ಶಕುನ ತಿಳಿಸುತ್ತಾ ಬಂದಿದ್ದಾನೆ ಎನ್ನುವ ಬಲವಾದ ನಂಬಿಕೆ ಇಲ್ಲಿನ ಭಕ್ತಾದಿಗಳಲ್ಲಿ ಬೇರೂರಿದೆ.
“ದೇಶಕ್ಕೆ ಕೇಡು ಕಾದಿದ್ದಾಗಲೂ, ಈ ಗರುಡ ವಿವಿಧ ರೀತಿಯ ಸಂಕೇತ ಸೂಚಿಸಿದ್ದನಂತೆ. ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಹತ್ಯೆ ನಡೆದಾಗ ಮತ್ತು ಸುನಾಮಿ ಅಪ್ಪಳಿಸಿದ ಸಂದರ್ಭದಲ್ಲಿ ಗರುಡಮೂರ್ತಿ ಮುಂದಕ್ಕೆ ಬಾಗಿತ್ತು. ಈ ಗರುಡಮೂರ್ತಿಯು ವಿಜ್ಞಾನಕ್ಕೆ ಅಧ್ಯಯನ ವಸ್ತು’ ಎಂದು ಪ್ರತಿಪಾದಿಸುತ್ತಾರೆ ಗ್ರಾಮದ ಹಿರಿಯ ಮುಖಂಡ ಬಿ.ಆರ್.ರಂಗಸ್ವಾಮಿ.
ರಾಮಾನುಜಾಚಾರ್ಯರು ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರ ಪ್ರಭಾವಕ್ಕೆ ಒಳಗಾಗಿ, ಒರಟು ಕಲ್ಲಿನಿಂದ ದೇಗುಲವನ್ನು ಸ್ಥಾಪಿಸಲಾಗಿದೆ ಎನ್ನುವುದಕ್ಕೆ ಪುರಾವೆಗಳೂ ಇವೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಹತ್ಯೆ ನಡೆದಾಗ ಮತ್ತು ಸುನಾಮಿ ಅಪ್ಪಳಿಸಿದ ಸಂದರ್ಭದಲ್ಲಿ ಗರಡುಮೂರ್ತಿ ಮುಂದಕ್ಕೆ ಬಾಗಿತ್ತು. ಹಲವು ವಿಪತ್ತುಗಳನ್ನು ಈ ಗರುಡಮೂರ್ತಿ ಸೂಚಿಸಿದೆ.
– ಬಿ.ಆರ್. ರಂಗಸ್ವಾಮಿ, ಅಂಬಲಗೆರೆ ವಾಸಿ
ಗರುಡ ಶಕುನ ಹೀಗಿರುತ್ತೆ…
ಗರುಡನ ಮುಖದ ನೋಟ ನೇರವಾಗಿದ್ದರೆ ಉತ್ತಮ ಮಳೆಯಾಗಿ ಸಮೃದ್ಧಿ ಬೆಳೆಯಾಗಲಿದೆ. ಮೂರ್ತಿ ಬಾಗಿದ್ದರೆ ತೀವ್ರ ಬರಗಾಲವೆಂದು, ಹಿಂದಕ್ಕೆ ವಾಲಿದ್ದರೆ ಪ್ರಕೃತಿ ವಿಕೋಪ, ಬರ ಸಂಭವಿಸಲಿದೆ ಎನ್ನುವ ಶಕುನಗಳು ಇಂದಿಗೂ ನಿಜವಾಗಿವೆ.
– ಹರಿಯಬ್ಬೆ ಹೆಂಜಾರಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.