ಒಬ್ಬ ವ್ಯಕ್ತಿಯ ಎರಡು ಮುಖಗಳು ಏಕೆ, ಹೇಗೆ,ಗೊತ್ತಾ?


Team Udayavani, Jul 8, 2017, 10:59 AM IST

20.jpg

ನಾವು ರಾಜಕಾರಣಿಗಳನ್ನು ಮಾತ್ರ ಟೀಕಿಸುತ್ತೇವೆ. ಆದರೆ ಪ್ರತಿರಂಗದಲ್ಲಿಯೂ ತುಂಬಿಕೊಂಡ ಅವಕಾಶವಾದಿಗಳನ್ನು ಟೀಕಿಸುವುದಿಲ್ಲ. ಜೋತಿಷಗಳ ಬಗ್ಗೆಯೂ ಒಂದು ಮಟ್ಟದ ಟೀಕೆ ಇದೆ. ಆದರೆ ನಿಜವಾದ ಧೂರ್ತತನದ ವಿಧಾನಗಳು  ಸಾಕಷ್ಟು ಸಂಖ್ಯೆಯಲ್ಲೇ ಇವೆ. ಇವನ್ನೆಲ್ಲಾ 
ಯಾಕೆ ಹೇಳಿದ್ದು ಎಂದರೆ ವ್ಯಕ್ತಿತ್ವದಲ್ಲಿ ಇರುವ ಕವಲುಗಳು, ದ್ವಿಮುಖಗಳು ಹೇಗೆ? ಏನು? ಎತ್ತ? ಎಂಬುದನ್ನು ವ್ಯಕ್ತಪಡಿಸಲು. ಈ ದ್ವಿಮುಖ ವ್ಯಕ್ತಿತ್ವ ಬಹಳ ಅಪಾಯಕಾರಿ.

ಜನ್ಮ ಕುಂಡಲಿಯಲ್ಲಿ ಪ್ರತಿವ್ಯಕ್ತಿಯ ಲಗ್ನಭಾವದ ಮನೆಯೇ ಮೊದಲ ಮನೆಯಾಗಿದ್ದು, ಇದು ಆತ್ಮಭಾವವನ್ನು ಪ್ರತಿನಿಧಿಸುತ್ತದೆ. ಇವರನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ. ಇವರು ಹೇಳುವುದು ಒಂದು. ಮಾಡುವುದೇ ಇನ್ನೊಂದು. ತಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾರೆಯೇ ವಿನಾ, ಇನ್ನೊಬ್ಬರು ಯೋಚನೆ ಮಾಡುವ ಧಾಟಿಯನ್ನು ಗಮನಿಸಿ ಇನ್ನೊಬ್ಬರ ನೋವು ಚಡಪಡಿಕೆಗಳೇನು ಎಂಬುದನ್ನು ತಿಳಿಯಲು ಹೋಗಲಾರರು ಅಂತ.  ಇನ್ನು ಕೆಲವರು- ಹೀಗೆ ಹೇಳಿದರೆ ಇನ್ನೊಂದು ಅರ್ಥವಾದೀತು ಎಂದು ಗೊಂದಲಕ್ಕೆ ಒಳಗಾಗಿ ಏನೂ ಹೇಳದೆ ತೆಪ್ಪಗಿದ್ದು ಬಿಡುತ್ತಾರೆ. ಮತ್ತಲವರು ತಾವು ಮಾಡಬೇಕಾದ ಕೆಲಸವನ್ನು ಮುಂದುಮುಂದಕ್ಕೆ ತಳ್ಳುತ್ತಾರೆ. ಇವರಿಗೆ ಪುರುಸೊತ್ತೇ ಸಿಗಲಾರದು. ತೀರಾ ಒತ್ತಡ ಬಿದ್ದಾಗ ಖನ್ನತೆಗೊಳಪಡುತ್ತಾರೆ. ಅಲ್ಲಿಯ ತನಕ ಭ್ರಮಾಧೀನರಾಗಿರುತ್ತಾರೆ. 

ಮತ್ತೂಂದಿಷ್ಟು ಮಂದಿಗೆ ಆತ್ಮವಿಶ್ವಾಸ ಜಾಸ್ತಿ. ಮತ್ತೂಬ್ಬರ ಮೂಲಕ ಹಠ ಹಿಡಿದು ತಮ್ಮ ಬೇಳೆ ಬೇಯಿಸಿಕೊಳ್ಳುವ ಸ್ವಭಾವ. ಖಂಡಿತವಾಗಿಯೂ ಇವರು ದುಷ್ಟರು. ಉದಾಹರಣೆಗೆ ಸಂಗೀತದ ಪಾಠಮಾಡುವ ಗುರು ಒಬ್ಬ ತಮ್ಮಲ್ಲಿ ವಿನಯಪೂರ್ವಕವಾಗಿ ಕಲಿಯಲು ಬರುವ ವಿದ್ಯಾರ್ಥಿಗಳನ್ನು ಇಷ್ಟು ಗುರು ದಕ್ಷಿಣೆ ನೀಡಿ. ಕೊಡದೇ ಹೋದರೆ ನನ್ನ ಶಾಪ ತಗಲುತ್ತದೆ ಎಂದು ಬೆದರಿಸುವುದನ್ನು ದುಃಖದಿಂದ ಹೇಳುವುದನ್ನು ಕೇಳಿದ್ದೇವೆ. ಇತರ ರಂಗದಲ್ಲಿಯೂ ಗುರುಗಳು ಇಂಥದೊಂದು ಒತ್ತಡ ತರುವುದು ಸುದ್ದಿಯಾಗುತ್ತಲೇ ಇರುತ್ತದೆ. ನಾವು ರಾಜಕಾರಣಿಗಳನ್ನು ಮಾತ್ರ ಟೀಕಿಸುತ್ತೇವೆ. ಆದರೆ ಪ್ರತಿರಂಗದಲ್ಲಿಯೂ ತುಂಬಿಕೊಂಡ ಅವಕಾಶವಾದಿಗಳನ್ನು ಟೀಕಿಸುವುದಿಲ್ಲ. ಜೋತಿಷಗಳ ಬಗ್ಗೆಯೂ ಒಂದು ಮಟ್ಟದ ಟೀಕೆ ಇದೆ. ಆದರೆ ನಿಜವಾದ ದೂರ್ತನದ ವಿಧಾನಗಳು  ಸಾಕಷ್ಟು ಸಂಖ್ಯೆಯಲ್ಲೇ ಇವೆ. ಇವನ್ನೆಲ್ಲಾ ಯಾಕೆ ಹೇಳಿದ್ದು ಎಂದರೆ ವ್ಯಕ್ತಿತ್ವದಲ್ಲಿ ಇರುವ ಕವಲುಗಳು, ದ್ವಿಮುಖಗಳು ಹೇಗೆ? ಏನು? ಎತ್ತ? ಎಂಬುದನ್ನು ವ್ಯಕ್ತಪಡಿಸಲು. ಈ ದ್ವಿಮುಖ ವ್ಯಕ್ತಿತ್ವ ಬಹಳ ಅಪಾಯಕಾರಿ.

ಮದುವೆಯಾಗಲಿರುವ ಹುಡುಗಿಯ ವಿಚಿತ್ರ ನಿಲುವು
ಈ ಹುಡುಗಿ ಮೂಲಭೂತವಾಗಿ ಕಂಪ್ಯೂಟರ್‌ ಎಂಜಿನಿಯರ್‌. ವೃಶ್ಚಿಕ ಲಗ್ನದವಳು. ಇಲ್ಲಿ ಮಂಗಳನ ಉಪಸ್ಥಿತಿ ಇರುವುದು ಮರಣಸ್ಥಾನವಾದ ಮಿಥುನದಲ್ಲಿ ಮೇಲ್ನೋಟಕ್ಕೆ ಕುಜದೋಷ ಇದೆಯಾದರೂ, ಇವಳ ಜನ್ಮನಕ್ಷತ್ರ ಬಲದಿಂದಾಗಿ ಈ ಜಾತಕದ ಹುಡುಗಿಗೆ ಕುಜದೋಷ ಎಂಬ ಲಗ್ನದ ಸಂದರ್ಭದ ವೈವಾಹಿಕ ಅಂಶಗಳ ಕುರಿತಾದ ಕುಜದೋಷ ಇಲ್ಲ. ಆದರೆ ಮರಣಸ್ಥಾನದಲ್ಲಿರುವ ವ್ಯಕ್ತಿತ್ವದಲ್ಲಿ ಕೆಲವು ನಿಗೂಢ ಸಂಗತಿಗಳನ್ನು ಭಯವನ್ನು ಭ್ರಮೆಯನ್ನು ಸರ್ರನೆ ಒಂದು ನಿರ್ಣಯಕ್ಕೆ ಬಂದ ಅಷ್ಟೇ ತೀವ್ರವಾಗಿ ನಿರ್ಣಯದಿಂದ ಜಾರಿಕೊಳ್ಳುವ ಅಸಂಗತ ವ್ಯಕ್ತಿತ್ವವನ್ನು ಗಂಟುಹಾಕುತ್ತಾನೆ. ಮರಣಾಧಿಪತಿ ಬುಧನು ವಿಪರೀತ ರಾಜಯೋಗ ಒದಗಿಸಿದರೂ ರಾಹುನ ಉಪಸ್ಥಿತಿಯಿಂದಾಗಿ ರಾಜಯೋಗ ಮಣ್ಣಾಗುತ್ತಲೇ ಇರುತ್ತದೆ. ಸುಖಕ್ಕಾಗಿ ಬಯಸಿ ಪ್ರಾಮಾಣಿಕವಾಗಿ ಮುಂದುವರೆದರೂ ಒಂದು ಲೆಕ್ಕದಿಂದ ಬಿಕ್ಕಟ್ಟುಗಳನ್ನು ಎದುರಿಸಿ ಅನುಕಂಪ ಗಿಟ್ಟಿಸಲಿಕ್ಕೆ ಪ್ರಯತ್ನ ನಡೆಸುವ ವ್ಯಕ್ತಿತ್ವ ಪ್ರಧಾನವಾಗುತ್ತದೆ. ಒಳ್ಳೆಯ ಹುಡುಗಿ ಎಂಬುದಕ್ಕೆ ಬೇರೆ ಮಾತಿಲ್ಲ. ಆದರೆ ಯಾರನ್ನೂ ನಂಬಲು ಅಥವಾ ನಂಬದಿರಲು ಎಲ್ಲಿ ಹೇಗೆ ಎಷ್ಟು ಅಳತೆ ಎಂಬುದನ್ನು ಅರಿಯದ ಬೆಪ್ಪುತನ ಬರುತ್ತಿರುತ್ತದೆ. ಆಕರ್ಷಕವಾದ ಮಾತು ಇದೆ. ಜಾಣ್ಮೆ ಇದೆ. ಆದರೂ ನಿರ್ಣಯದ ಬಗೆಗೆ ನಿರಂತರ ಹೊಯ್ದಾಟ. ಸುಖದ ಅಧಿಪತಿ ಗಟ್ಟಿಯಾಗಿದ್ದರೂ ಬಾಳಸಂಗಾತಿಯ ವಿಚಾರದಲ್ಲಿ ಕೇತುವಿನ ಬಾಧೆ ಅನುಭವಿಸುತ್ತಿರುವ ಚಂದ್ರ ಉತ್ತಮವಾದ ಭಾಗ್ಯ ಒದಗಿಸಲು ನಿರಾಕರಿಸುತ್ತಾನೆ. ಶನೈಶ್ಚರನ ಕಾಟದ ಸಮಯ ಬಂದಾಗ ಸುಖಕ್ಕೂ ಸಮತೋಲನ ತಪ್ಪಿ ಮದುವೆಯಾಗುತ್ತೇನೆ ಎಂದು, ತಾನು ಮಾತುಕೊಟ್ಟಿದ್ದ ಹುಡುಗನಿಗೆ ತಾನು ಕೊಟ್ಟಿದ್ದು ಆಖೈರಿನ ಒಪ್ಪಿಗೆ ಅಲ್ಲ ಎಂದು ವಾದಿಸಿ, ಅವನಿಗೆ ಸಿಟ್ಟು ಬರುವಂತೆ ಮಾಡುತ್ತಾಳೆ. ನಿರಂತರವಾದ ದ್ವಂದ್ವವನ್ನು ಸಮಯ ಸಂದರ್ಭಗಳು ಈ ಹುಡುಗಿಯ ವಿಚಾರದಲ್ಲಿ ಸಮಸ್ಯೆಗಳನ್ನು ಹುಟ್ಟುಹಾಕುತ್ತಿರುತ್ತವೆ. 

ಸುಮಾರು ನೂರಕ್ಕೂ ಹೆಚ್ಚು ಹುಡುಗಿಯರನ್ನು ನೋಡಿದರೂ, ಮದುವೆಗೆ ಒಪ್ಪಿಗೆಯಾಗದ ಹುಡುಗನಿಗೆ ಈಕೆ ಮನಸ್ಸಿಗೆ ಹಿಡಿಸಿದ್ದಳು. ಮನಸ್ಸಿಗೆ ಆಗಬಹುದು ಎಂಬ ವಿಚಾರ ಬರುತ್ತಿದ್ದಂತೆ ಒಂದು ಚಿಕ್ಕ ಒತ್ತಡವನ್ನು ಆ ಹುಡುಗನಿಗೂ, ಹುಡುಗನ ತಂದೆತಾಯಿಗೂ, ಹುಡುಗಿಗೆ ಹುಡುಗ ಇಷ್ಟವಾದನೇ ಎಂದು ವಿಚಾರಿಸುತ್ತಾ ಅವಳಿಗೂ ಕಿರಿಕಿರಿ ಮಾಡಿದ್ದಾರೆ. ಇವಳು ಆಗಬಹುದು ಆದರೆ ತಂದೆತಾಯಿಯನ್ನು ಕೇಳಿ ಅವರ ಒಪ್ಪಿಗೆಯ ವಿಚಾರ ತಿಳಿದುಕೊಳ್ಳಿ ಎಂದು ಎರಡು ವಿಧವಾದ ಅಭಿಪ್ರಾಯ ಹೊರಹಾಕಿದ್ದಾಳೆ. ಕೂಡಲೇ ತಂದೆತಾಯಿಗೆ ಹುಡುಗಿ ಒಪ್ಪಿದ್ದಾಳೆ ಎಂದು ತಿಳಿಸಿ ನಿಮ್ಮ ಅಭಿಪ್ರಾಯ ಏನು ಎಂದು ವಿರಾಮ ವಿರದೆ ಕೇಳಿ, ಅವಳು ಒಪ್ಪಿದ್ದರೆ ನಮ್ಮ ಅಭ್ಯಂತರವಿಲ್ಲ ಎಂಬ ಉತ್ತರ ಹೊರಡಿಸಿದ್ದಾರೆ. ಇಷ್ಟೆಲ್ಲಾ ರೀತಿಯ ಅವಸರ ಹುಡುಗಿಗೆ ಕಿರಿಕಿರಿ ತಂದಿದೆ. 

ಬದಲಾಗುತ್ತ ಹೋದಳು ಹುಡುಗಿ
ಆದರೆ ಹುಡುಗಿಯೂ ತನ್ನನ್ನು ಒಂದೇ ನಿಶ್ಚಿತ ದಿಕ್ಕಿನಲ್ಲಿ ಸಾಗಲಾಗದ ದಾರಿಯಲ್ಲಿ ಸಿಲುಕಿ ಹಾಕಿಕೊಂಡ ಕುತೂಹಲಕಾರಿ ಅಂಶವನ್ನು ನಾವಿಲ್ಲಿ ಗಮನಿಸಬೇಕು. ತಾನು ಕೆಲಸ ಮಾಡುವ ಆಫೀಸಿಗೆ ಫೋನ್‌ ಮಾಡಿ ಒಪ್ಪಿಗೆಯೇ ಎಂದು ಹುಡುಗನ ಮಾವ ಕೇಳಿದಾಗ, ಸರಿ. ಆದರೆ ನೀವು ನಮ್ಮ ತಂದೆತಾಯಿಯನ್ನು ಕೇಳಿ ಎಂದು ಹೇಳಿದ ಹುಡುಗಿ ನಂತರ ಹುಡುಗನ ಬಳಿ ನಾನು ಆಖೈರಿನ ಒಪ್ಪಿಗೆ ಕೊಟ್ಟಿರಲಿಲ್ಲ. ಪೂರ್ತಿ ನಿಶ್ಚಯ ಮಾಡಿಲ್ಲ ಎಂದು ಹೇಳಿದಾಗ ಹುಡುಗ ಕೆರಳುತ್ತಾನೆ. ಏನು ನಮಗೆ ಬೇರೆ ಕೆಲಸಗಳಿಲ್ಲ ಎಂಬುದಕ್ಕೆ ನಿಮ್ಮ ಮನೆಗೆ ಬಂದು ವಧು ಪರೀಕ್ಷೆ ನಡೆಸಿ, ತಿಂಡಿ, ಕಾಫಿ ಕುಡಿದು ಹೊಟ್ಟೆ ತುಂಬಿಸಿಕೊಂಡು ಹೋಗಲು ಬಂದದ್ದಾ ಎಂದು ಕೇಳಿ ಬಿಟ್ಟಿದ್ದಾನೆ. ಈ ಒರಟು ಮಾತು ಹುಡುಗಿಗೆ ಛೇ ಇವನು ಇಷ್ಟೆಯೇ ಎನಿಸಿಬಿಟ್ಟಿದೆ.

ಮಾರನೆಯ ದಿನವಾದರೂ ಏನೋ ಒರಟು ಮಾತಾಡಿದೆ. ತಪ್ಪು ತಿಳಿ¿ಬೇಡ ಎಂದು ಹುಡುಗ ತಪ್ಪು ಒಪ್ಪಿಕೊಳ್ಳಬಹುದು  ಎಂದರೆ  ಆತ ಹಾಗೆ ಮಾಡಲಿಲ್ಲ. ನಯವಾಗಿಯೇ ಆತ ಮದುವೆಗೆ ಒಪ್ಪು ಎಂದು ಭಿನ್ನವಿಸುತ್ತಲೇ ಇದ್ದಾನೆ. ಹುಡುಗಿಯ ತಂದೆತಾಯಿಗೂ ಕಿರಿಕಿರಿ ಯಾಗುತ್ತಿದೆ. ಮಗಳು ಒಪ್ಪಿಗೆ ನೀಡಿ ಹಿಂದೆ ಸರಿಯುತ್ತಿದ್ದಾಳೆ ಎಂದು ಆಕ್ಷೇಪವಿದೆ. ಆಫೀಸಿನಲ್ಲಿ ಕೆಲಸದ ನಡುವೆ ಇರುವಾಗ ಫೋನ್‌ ಮಾಡಿ ಒಪ್ಪಿಗೆಯೇ ಎಂದು ಕೇಳಿದ ಹುಡುಗನ ತಂದೆ, ನನ್ನದೇನು? ತಂದೆತಾಯಿಯನ್ನು ಕೇಳಿ ಎಂದು ಹೇಳಿದ ಮಾತನ್ನೇ ಒಪ್ಪಿಗೆ ಎಂದು ತಿಳಿದು ಕೂಡಲೇ ತಂದೆತಾಯಿ ಬಳಿ ಫೋನ್‌ ಮಾಡಿ ಇನ್ನೇನೋ ಹೇಳಿದ್ದಾರೆ. ಈ ಸತ್ಯವನ್ನು ಮಾರನೇ ದಿನ ಹುಡುಗ ಹೇಳಲು ಹೋದರೆ ಅವಳಿಗೆ ಕ್ಲಿಷ್ಟ ಎನಿಸುತ್ತಿದೆ.

ಹುಡುಗ ತನ್ನ ಗೆಳೆಯರ ಬಳಿ ಬಹುಶಃ ಹೇಳಿಕೊಂಡು ಬಿಟ್ಟಿದ್ದಾನೆ; ಹುಡುಗಿ ನಿಶ್ಚಯ ಆದಳು ಎಂದು. ಅದಕ್ಕೆ ಅವರು ಮತ್ತೆ ಹುಡುಗಿ ವಿಚಾರ ಕೇಳಿದರೆ, ಅವನು ನನ್ನ ಆಖೈರಿನ ನಿರ್ಣಯ ಮಾಡಿಲ್ಲ ಎಂದು ಹೇಳಿ ಕೆರಳಿ ಮಾತನಾಡಿದ್ದಾನೆ. ಹುಡುಗಿಗೆ ಈ ಕಟುಮಾತು ಹಿಡಿಸಿಲ್ಲ. ಆದರೆ ಹುಡುಗ ಹಿಡಿಸಿದ್ದಾನೆ. ರೂಪ, ವಿದ್ಯೆ, ಕೆಲಸ ಇತ್ಯಾದಿ ಎಲ್ಲ ಸಿದ್ದಿಸಿರಬಹುದಾದರೂ ಒರಟು ಮಾತುಗಳನ್ನು ಜೀವನದಲ್ಲಿ ಕೇಳಿಸಿಕೊಳ್ಳುವುದಾದರೆ ಇಡೀ ಜೀವನದಲ್ಲಿ ಇದನ್ನು ಸಹಿಸಲಾಗದು ಎಂಬ ನಿಲುವು ಬಲವಾಗಿದೆ. ವ್ಯಕ್ತಿತ್ವದಲ್ಲಿನ ಸೀಳು ಒಂದೆಡೆ ಭಯ ಹುಟ್ಟಿಸಿದೆ. 

ಅನಂತಶಾಸ್ತ್ರೀ 

ಟಾಪ್ ನ್ಯೂಸ್

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.