ಪರಶುರಾಮ ಕ್ಷೇತ್ರಫ‌ಲ


Team Udayavani, Apr 7, 2018, 10:02 AM IST

1-nn.jpg

ನಂಜನಗೂಡು  ಶ್ರೀಕಂಠೇಶ್ವರ ದೇಗುಲದ  ಎದುರಿಗಿನ ಹೊಳೆಯ ಪಕ್ಕದಲ್ಲೆ ಈ ದೇಗುಲವಿದೆ. ಶ್ರೀಕಂಠೇಶ್ವರ ದೇವಾಲಯದ ಎದುರಿಗಿರುವ ಟಿ . ನರಸೀಪುರಕ್ಕೆ ಸಾಗುವ  ರಸ್ತೆಯಲ್ಲಿ ಸಾಂಡಿಲ ನದಿಗೆ ನಿರ್ಮಿಸಿರುವ ಸೇತುವೆಯ  ನಂತರ ಅರ್ಧ ಕಿ.ಮೀ ಸಾಗಿದರೆ ಎಡಭಾಗಕ್ಕೆ ಈ ದೇಗುಲ ಕಾಣಸಿಗುತ್ತದೆ.

ದಕ್ಷಿಣ ಕಾಶಿಯೆಂದೇ   ಖ್ಯಾತಿ ಗಳಿಸಿರುವ  ನಂಜನಗೂಡು,  ದೇಶದ  ಪ್ರಸಿದ್ಧ ಧಾರ್ಮಿಕ  ಕ್ಷೇತ್ರಗಳಲ್ಲೊಂದಷ್ಟೇ ಅಲ್ಲದೆ ಪುರಾಣೇತಿಹಾಸದಲ್ಲಿ  ಕ್ಷೇತ್ರ  ಮಹಾತೆ¾ಯಿಂದ  ಐತಿಹಾಸಿಕ ದೇಗುಲಗಳ ಬೀಡಾಗಿದೆ.  ಅವುಗಳಲ್ಲಿ ಎಷ್ಟೋ ದೇಗುಲಗಳು ಮಾಹಿತಿಯ ಕೊರತೆಯಿಂದಲೋ, ಪ್ರಚಾರದ ಅಭಾವದಿಂದಲೋ ಏನೋ ತನ್ನಲ್ಲಿ ಶ್ರೇಷ್ಠತೆಯನ್ನ, ಐತಿಹಾಸಿಕ ಹಿನ್ನೆಲೆಯನ್ನ  ಹೊಂದಿದ್ದರೂ  ಬೆಳಕಿಗೆ ಬಂದಿಲ್ಲ.

ಕೆಲ ದೇಗುಲಗಳು ಕಳಾಹೀನವಾಗಿ ನಿಂತಿವೆ. ಅಂತಹ ದೇಗುಲಗಳಲ್ಲಿ ಪ್ರಮುಖವಾದದ್ದು ನಂಜನಗೂಡಿನ ಪರಶುರಾಮ  ದೇವಾಲಯ.ದೇಗುಲದ ಐತಿಹ್ಯ ಸ್ಕಂದ ಪುರಾಣದಲ್ಲಿ ಬರುವ ಪ್ರಮುಖ ಅಧ್ಯಾಯಗಳಲ್ಲಿ ಪರಶುರಾಮನ ವೃತ್ತಾಂತವು  ಗಮನ ಸೆಳೆಯುವ ಅಂಶಗಳಲ್ಲೊಂದು. 

ತಂದೆ ಜಮದಗ್ನಿಯ ಮಾತು ಕೇಳಿ ಹೆತ್ತ ತಾಯಿಯನ್ನೇ ಕೊಂದ ಪರಶುರಾಮನು ಮಾತೃ ಹತ್ಯೆ ದೋಷಕ್ಕೆ  ಗುರಿಯಾಗಿದ್ದ ಸಂದರ್ಭ ತನ್ನ ತಪ್ಪಿಗೆ  ಪ್ರಾಯಶ್ಚಿತ್ತ  ಪಡೆದುಕೊಳ್ಳಲು  ತಪಸ್ಸಿಗಾಗಿ ತೀರ್ಥಯಾತ್ರೆ ಕೈಗೊಳ್ಳುತ್ತಾನೆ.  ತಪಸ್ಸಿಗಾಗಿ ಒಂದು ಪ್ರಶಾಂತ ತಾಣದ ಹುಡುಕಾಟದಲ್ಲಿದ್ದಾಗ ಪರಶುರಾಮನಿಗೆ ಕಪಿಲಾ ನದಿಯ  ದಡದಲ್ಲಿದ್ದ ಒಂದು ಸ್ಥಳ, ಆತನಿಗೆ ಎಲ್ಲಿಯೂ ಕಾಣದ ಶಾಂತಿ – ನೆಮ್ಮದಿಯನ್ನ ನೀಡುತ್ತದೆ.  ನಂತರ, ಇದೇ ತನ್ನ ತಪಸ್ಸಿಗೆ ಸರಿಯಾದ  ಸ್ಥಳವೆಂದು ಗುರುತಿಸುತ್ತಾನೆ. ಪರಶುರಾಮನು  ಗಿಡ – ಮರಗಳಿಂದ  ಕೂಡಿ ಪೊದೆಯಂತಿದ್ದ ಆ ಪ್ರದೇಶವನ್ನ ಸ್ವತ್ಛಗೊಳಿಸಲು ಕೊಡಲಿಯಿಂದ ಅಲ್ಲಿಯ ಮರ–ಗಿಡಗಳನ್ನ ಕಡಿದು ಹಾಕುತ್ತಿರುತ್ತಾನೆ.   

ಆದರೆ,  ಆ ಪೊದೆಯ ಒಳಗಡೆ ಸಾûಾತ್‌ ಪರಶಿವನು ಅಗೋಚರನಾಗಿ ತಪಸ್ಸಿನಲ್ಲಿ  ನಿರತನಾಗಿರುವುದು ಗೊತ್ತಾಗುವುದಿಲ್ಲ. ಪರಶುರಾಮನ ಕೊಡಲಿಯ ಪೆಟ್ಟು ಶಿವನ ಹಣೆಗೆ ಬೀಳುತ್ತಿದ್ದಂತೆ  ಹಣೆಯಿಂದ ರಕ್ತ ಚಿಮ್ಮುತ್ತಿರುವ  ಸ್ಥಿತಿಯಲ್ಲಿ  ಶಿವನು ಗೋಚರಿಸುತ್ತಾನೆ.
ಪರಶುರಾಮನು  ಈ ಘಟನೆಯಿಂದಾಗಿ ಆಘಾತಕ್ಕೊಳಗಾಗುತ್ತಾನೆ ನಂತರ ಶಿವನು ಆಘಾತಕ್ಕೊಳಗಾದ ಪರಶುರಾಮನನ್ನ ಕುರಿತು,  “ಚಿಂತೆ  ಮಾಡಬೇಡ ಪರಶುರಾಮ.  ನಿನ್ನಿಂದ ಯಾವುದೇ ಅಪಚಾರವಾಗಿಲ್ಲ.  ಬದಲಾಗಿ ನಿನ್ನ ಕೊಡಲಿಯ ಸ್ಪರ್ಶದಿಂದಾಗಿ ನಾನು ಗೋಚರ ಸ್ಥಿತಿಯಲ್ಲಿ ಕಾಣುವಂತಾಯಿತು’   ಎಂದು ಹೇಳುತ್ತಾನೆ.  ಈ ನೆನಪಿನಾರ್ಥವಾಗಿ ಆ ಸ್ಥಳದಲ್ಲಿ ತನ್ನ ಗರ್ಭಗುಡಿ ನಿರ್ಮಿಸುವಂತೆಯೂ, ಸ್ವಲ್ಪ ದೂರದಲ್ಲಿರುವ ನದಿ ದಡದಲ್ಲಿ  ಪರಶುರಾಮನು  ನೆಲೆಸುವಂತೆಯೂ  ಸೂಚಿಸುತ್ತಾನೆ.  ಭಕ್ತರು ತನ್ನ  ದರ್ಶನದ ನಂತರ ನಿನ್ನ (ಪರಶುರಾಮನ) ದೇಗುಲದ ದರ್ಶನ ಪಡೆದಲ್ಲಿ ಅವರಿಗೆ  ಪೂರ್ಣ ಕ್ಷೇತ್ರಫ‌ಲ ದೊರಕುತ್ತದೆಂದು ಶಿವನು ವರ ನೀಡುತ್ತಾನೆ. 

ದೇಗುಲ ಎಲ್ಲಿದೆ ? 

ನಂಜನಗೂಡು ಶ್ರೀಕಂಠೇಶ್ವರ ದೇಗುಲದ  ಎದುರಿಗಿನ ಹೊಳೆಯ ಪಕ್ಕದಲ್ಲೆ ಈ ದೇಗುಲವಿದೆ. ಶ್ರೀಕಂಠೇಶ್ವರ ದೇವಾಲಯದ ಎದುರಿಗಿರುವ  ಟಿ. ನರಸೀಪುರಕ್ಕೆ  ಸಾಗುವ  ರಸ್ತೆಯಲ್ಲಿ ಸಾಂಡಿಲ ನದಿಗೆ ನಿರ್ಮಿಸಿರುವ ಸೇತುವೆಯ  ನಂತರ ಅರ್ಧ ಕಿ.ಮೀ ಸಾಗಿದರೆ ಎಡಭಾಗಕ್ಕೆ ಈ ದೇಗುಲ ಕಾಣಸಿಗುತ್ತದೆ. ನಂಜನಗೂಡಿಗೆ ಬಂದಲ್ಲಿ ಈ ದೇಗುಲಕ್ಕೆ ಬರುವುದನ್ನ ಮರೆಯದಿರಿ.  ಹಿಂದೆ ದಟ್ಟ ಅಡವಿಯಾಗಿದ್ದ ಈ ಸ್ಥಳಕ್ಕೆ ಹೊಳೆ ಹಾಯ್ದು ಬರಬೇಕಾದ್ದರಿಂದ ಕಷ್ಟಕರವಾಗಿತ್ತು.  ಆದರೆ ಇಂದು ಉತ್ತಮ ರಸ್ತೆ ಮತ್ತು ಸೇತುವೆಯಿದ್ದು  ಪ್ರಶಾಂತ ವಾತಾವರಣದಲ್ಲಿ ಕಲ್ಲಿನಿಂದ ನಿರ್ಮಿಸಿದ ದೇಗುಲವಿದೆ.   ಈ ದೇಗುಲವು  ಎರಡು ಕೊಳಗಳನ್ನ ಹೊಂದಿದ್ದು  ಒಂದು ಸುಕನಾಸಿನಿ ( ಭಕ್ತರು ನಿಲ್ಲುವ ಸ್ಥಳ)  ಮತ್ತೂಂದು ಕೋಣೆ ಗರ್ಭಗುಡಿಯಾಗಿದ್ದು  ಪರಶುರಾಮನು  ವಿರಾಜಮಾನವಾಗಿ ನಿಂತಿರುವ ವಿಗ್ರಹವಿದೆ.   ದೇಗುಲದ  ಸುತ್ತಲೂ  ಹಿಂದೆ ಜೀರ್ಣೋದ್ಧಾರ ಕ್ಕಾಗಿ ಬಳಸಲು  ಇಟ್ಟಿದ್ದ ಕಲ್ಲು ಕಂಬಗಳಿವೆ.  ಈ ದೇಗುಲ ಯಾರಿಂದ ಜೀರ್ಣೋದ್ಧಾರವಾಯಿತೆಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಕ್ಷೇತ್ರದ ಮತ್ತೂಂದು ವಿಶೇಷತೆಯೆಂದರೆ ದೇಗುಲದ ಎದುರಿನ ಸುವರ್ಣವತಿ ಹೊಳೆಯಲ್ಲಿ ಭಕ್ತರು  ತಪ್ಪುಗಳನ್ನು,  ಸುಖ- ದುಃಖಗಳನ್ನು ಬೆಲ್ಲ, ಉಪ್ಪಿನ ರೂಪದಲ್ಲಿ ಹೊಳೆಯಲ್ಲಿ ಕರಗಲು ಬಿಡುವ ಪರಿಪಾಠವಿದೆ.  ಆದರೆ, ಸುವರ್ಣವತಿ ಹೊಳೆಯ ಹೊರ ಹರಿವು ಹೆಚ್ಚಾದಾಗ ದೇಗುಲ ಅರ್ಧ ಭಾಗ ಮುಳುಗಿ ಹೋಗುತ್ತದೆ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. 

ಲೋಕೇಶ್‌ ಡಿ.ನಂಜನಗೂಡು

ಟಾಪ್ ನ್ಯೂಸ್

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6

Manipal: ಅಪಾಯಕಾರಿ ರೀತಿಯಲ್ಲಿ ಬೈಕ್‌ ಚಾಲನೆ; ಪ್ರಕರಣ ದಾಖಲು

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

de

Kundapura: ಗುಲ್ವಾಡಿ; ಗಾಯಾಳು ಸಾವು

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.