![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 6, 2019, 12:43 PM IST
ಪ್ರಪಂಚದಲ್ಲಿ ಎಷ್ಟೋ ಮತಗಳಿವೆ. ಅವುಗಳಲ್ಲೆಲ್ಲ ಹಿಂದೂ ಮತವೆಂದು ಪ್ರಸಿದ್ಧವಾಗಿರುವ ಸನಾತನ ಧರ್ಮವು ಶ್ರೇಷ್ಠವಾದುದು.ಸರ್ವ ಮಾನವರ ಭ್ರಾತೃತ್ವ, ಸರ್ವ ಪ್ರಾಣಿಗಳಲ್ಲೂ ದಯಾಪರತೆ ಎಂಬ ವಿಸ್ತೃ ತವಾದ ಸಿದ್ಧಾಂತದ ಮೇಲೆ ನಿಂತಿರುವ ಈ ಧರ್ಮವೊಂದೇ ಮಾನವ ಸೃಷ್ಟಿ ಇರುವವರೆಗೆ ಇರಬಲ್ಲದು.
ಪರಧರ್ಮದವರ ಅನೇಕ ವಿಧವಾದ ಆಕ್ರಮಣಗಳನ್ನು ಸಹಿಸಿಕೊಂಡು ನಿಂತಿರುವ ಈ ಧರ್ಮಕ್ಕೆ ಎಂದಿಗೂ ಚ್ಯುತಿ ಇಲ್ಲ ಎಂದು ಮಹಾಪುರುಷರೊಬ್ಬರು ನುಡಿದಿದ್ದಾರೆ. ಇಂದು ಅನೇಕರ ಮನಸ್ಸುಗಳನ್ನು ಸಮಸ್ಯೆಯೊಂದು ಪೀಡಿಸುತ್ತಿದೆ. ಅದೇನೆಂದರೆ,ಇಂದಿನ ಕಾಲಗತಿಯನ್ನು ನೋಡುತ್ತಿದ್ದರೆೆ, ಜನರಲ್ಲಿ ಧರ್ಮದ ವಿಚಾರದಲ್ಲಿ ವಿಮುಖತೆ ಜಾಸ್ತಿ ಯಾ ಗು ತ್ತಿದೆ. ಪರಧರ್ಮದವರ ಪ್ರಚಾರಗಳು ಹೆಚ್ಚುತ್ತಿವೆ. ಈ ಸ್ಥಿತಿಯಲ್ಲಿ ಸನಾತನ ಧರ್ಮವು ಇನ್ನೂ ಎಷ್ಟು$ದಿನಗಳು ಇರಬಲ್ಲದು?-ಈ ಪ್ರಶ್ನೆಗೆ ಆ ಮಹಾಪುರುಷನ ಮಾತುಗಳಲ್ಲೇ ಉತ್ತರವಿದೆ. “ಋಷಿಣಾಂ ಪುನರಾಧ್ಯಾನಾಂ ವಾಚ ಮಥೋìನುಧಾವತಿ’ ಎಂದು ಪ್ರಾಚೀನರು ಹೇಳಿದ್ದಾರೆ. “ಮಹಾತ್ಮರ ಮಾತು ನಿಶ್ಚಯವಾಗಿಯೂ ಫಲಿಸುತ್ತದೆ’ ಎಂದು ಅದರ ಅರ್ಥ.
ಇಹಲೋಕದಲ್ಲೂ, ಪರಲೋಕದಲ್ಲೂ ಮಾನವನನ್ನು ರಕ್ಷಿಸುವುದು ಧರ್ಮ.ಶಾಂತಿ-ಸುಖಗಳನ್ನು ಕೊಡುವುದು ಧರ್ಮದಿಂದ ಮಾತ್ರವೇ ಸಾಧ್ಯ.”ಧರ್ಮ’ ಎಂದರೇನು? “ಧರ್ಮಾಚರಣೆ’ಎಂದರೇನು? - ಎಂಬುದು ಬಹಳ ಜನರಿಗೆ ಗೊತ್ತಿಲ್ಲ.ಶಾಶ್ವತವಾಗಿ ಶಾಂತಿ- ಸುಖಗಳನ್ನು ಕೊಡುವುದೇ ಧರ್ಮ.ಆ ಧರ್ಮಕ್ಕೆ ಅನುಗುಣವಾದ ಎಲ್ಲಾ ಕಾರ್ಯಗಳೂ ಧರ್ಮವೇ. ಯಾವುದು ಧರ್ಮ? ಯಾವುದು ಧರ್ಮವಲ್ಲ?-ಎಂಬ ವಿಷಯವನ್ನು ವೇದ ನಿರ್ಣಯಿಸಿದೆ. ಧರ್ಮ ಸ್ವರೂಪವನ್ನು ನಿರ್ಣಯಿಸುವ ಪರಮ ಪ್ರಮಾಣ ವೇದ. ಸೂರ್ಯನ ಬೆಳಕು ಇದ್ದರೆ, ಯಾವ ವಸ್ತುವನ್ನಾಗಲಿ ನೋಡಲು ಅನ್ಯ ದೀಪದ ಅವಶ್ಯಕತೆ ಇರುವುದಿಲ್ಲ. ವೇದಗಳಿಗಿರುವ ಪ್ರಾಮಾಣ್ಯ ಅಂಥದ್ದು.
– ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ
You seem to have an Ad Blocker on.
To continue reading, please turn it off or whitelist Udayavani.