ಜನೋಪಕಾರಿ ವಾರೆ ಕೊಕ್ಕ
Team Udayavani, Jun 24, 2017, 5:09 PM IST
ದೊಡ್ಡ ಕೊಕ್ಕಿನ ಎತ್ತರದ ಕಪ್ಪು ಬಿಳಿ ಬಣ್ಣದ ಹಕ್ಕಿ ಇದು. ನೀರಿನಾಶ್ರಯದಲ್ಲಿ ಅಂದರೆ ಕೆಸರು, ಜೌಗು, ಗಜನೀ ಪ್ರದೇಶ, ಕೆಸರು ತುಂಬಿದ ಅಣೆ ಕಟ್ಟಿನ ಹಿನ್ನೀರು, ಸಮುದ್ರ ತೀರ, ನದೀ ತೀರದ ಕೆಸರಿನ ಜಾಗ ಇವುಗಳಿಗೆ ಪ್ರಿಯ. ಉದ್ದದ ಕಾಲು, ಕಾಲಿನಲ್ಲಿ ಅರೆ ಜಾಲಪಾದ ಇರುತ್ತದೆ. ಈ ಪಕ್ಷಿಯ ಎತ್ತರ 46 ಸೆಂ.ಮೀ ಎತ್ತರ.
ಈ ಪಕ್ಷಿಯ ರೆಕ್ಕೆಯಲ್ಲಿ ಕಪ್ಪು ಬಿಳಿ ಬಣ್ಣದಿಂದ ಕೂಡಿರುತ್ತದೆ. ಇದು ಕೆಲವೊಮ್ಮೆ ತನ್ನ ಉದ್ದ ಕಾಲನ್ನು ಮಡಿಚಿ ಮೊಳ ಕಾಲಿನ ಮೇಲೆ ಕುಳಿತು ಕೊಳ್ಳುತ್ತದೆ. ತಲೆಯಿಂದ ಆರಂಭವಾಗಿ ಕುತ್ತಿಗೆ, ಅದರ ಹಿಂಭಾಗದ ತನಕ ಕಪ್ಪುಬಣ್ಣದಿಂದ ಕೂಡಿರುತ್ತದೆ. ಇದರ ಪುಕ್ಕದ ತುದಿಯ ಗರಿ ಸಹ ಕಪ್ಪಾಗಿದೆ. ಇವು ಗುಂಪಾಗಿ ಇಲ್ಲವೇ ಏಕಾಂಗಿಯಾಗಿ ಸಹ ಹಾರುತ್ತವೆ. ಗಾಬರಿಯಾದಾಗ ಭಯದಿಂದ ವಿಚಿತ್ರ ಕೀರಲು ದನಿಯಲ್ಲಿ ಕೂಗುತ್ತಾ ಹಾರುವುದು ಇದರ ಲಕ್ಷಣ.
ಇದರ ಚುಂಚು, ಕಾಲು ಕೆಂಪು ಬಣ್ಣದಿಂದ ಕೂಡಿದೆ. ರೆಕ್ಕೆಯು ಕೂಡ ಕಪ್ಪು ಬಣ್ಣದ್ದೇ. ಸಾಮಾನ್ಯವಾಗಿ ನೀರ ಆಶ್ರಯದಲ್ಲಿರುವ ಎಲ್ಲಾ ಹಕ್ಕಿಗಳ ಚುಂಚು ಸ್ವಲ್ಪ ಕೆಳಮುಖವಾಗಿ ಬಾಗಿರುತ್ತದೆ ಇಲ್ಲವೇ ನೇರವಾಗಿರುತ್ತದೆ. ಆದರೆ ವಾರೆ ಕೊಕ್ಕ ಹಕ್ಕಿಯ ಚುಂಚು ಮೇಲ್ಮುಖವಾಗಿ ಬಾಗಿರುತ್ತದೆ. ಇದು ನೀರಿನಲ್ಲಿ ಇಳಿದು, ಇದರ ಸಹಾಯದಿಂದ ಅಡಿಯಲ್ಲಿರುವ ಕೆಸರನ್ನು ಕುಕ್ಕಿ, ಅಲ್ಲಿರುವ ಹುಳ ನೀರಿನ ಕ್ರಿಮಿ, ಇಲ್ಲವೇ ಅದರ ಮೊಟ್ಟೆ ಅಥವಾ ನೀರು ಕ್ರಿಮಿಗಳನ್ನು ತಿಂದು ಹಾಕುತ್ತದೆ. ಇದರ ಕೊಕ್ಕು ಮೇಲ್ಮುಖವಾಗಿ ಬಾಗಿರುವುದರಿಂದ ಇದಕ್ಕೆ ಅನ್ವರ್ಥವಾಗಿ ವಾರೆ ಕೊಕ್ಕ ಎಂಬ ಹೆಸರು ಬಂದಿದೆ.
ಇದರ ರೆಕ್ಕೆಯ ಅಗಲ 76 ರಿಂದ 80 ಸೆಂ.ಮೀ. ಗಂಡು ಹೆಣ್ಣು ಸುಮಾರು ಒಂದೇ ರೀತಿ ಇರುವುದು. ಪ್ರೌಢಾವಸ್ಥೆಗೆ ಬರುವ ಮುನ್ನ ಬೂದು ಮೈಬಣ್ಣ ಕಾಣುತ್ತದೆ. ಪ್ರೌಢಾವಸ್ಥೆ ತಲುಪಿದಾಗ ಕಪ್ಪು ಬಿಳಿಪಿನ ಬಣ್ಣ ಪ್ರಧಾನವಾಗಿ ಕಾಣುತ್ತದೆ. ಇದರ ಮೂಲಕವೇ ಇತರೆ ಹಕ್ಕಿಗಳಿಂದ ಪ್ರತ್ಯೇಕವಾಗಿ ಗುರುತಿಸಬಹುದು.
ನೀರಿನ ಆಶ್ರಯವನ್ನೇ ತಮ್ಮ ಇರುನೆಲೆ ಮಾಡಿಕೊಂಡ ಹಕ್ಕಿಗಳ ಅಧ್ಯಯನ ಮಾಡುವಾಗ ತುಂಬಾ ಸೂಕ್ಷ ಅವಲೋಕನ ಅವಶ್ಯ. ಬಣ್ಣ , ಗಾತ್ರ ಅವುಗಳ ತಲೆ, ಕುತ್ತಿಗೆ, ಬಾಲ, ಹೊಟ್ಟೆ, ವಸತಿ ಜಾಗ , ಆಹಾರ ದೊರಕಿಸುವ ರೀತಿ, ಹಾರುವಾಗ ತೆಗೆಯುವ ದನಿ ಇವೆಲ್ಲವುಗಳನ್ನೂ ಗಮನಿಸಿದರೆ ಅವುಗಳಲ್ಲಿರುವ ಸೂಕ್ಷ ವ್ಯತ್ಯಾಸ ಭಿನ್ನತೆ ತಿಳಿಯಬಹುದಾಗಿದೆ.
ಈ ಪಕ್ಷಿ ಭಾರತ ಪಾಕಿಸ್ತಾನ, ಶ್ರೀಲಂಕಾಗಳಲ್ಲಿ ಕಂಡುಬರುತ್ತವೆ. ಬಾಂಗ್ಲಾದೇಶ, ಬರ್ಮಾ, ಆಗ್ನೇಯ
ಏಷಿಯಾಗಳಲ್ಲಿ ಇವು ಇಲ್ಲ. ಉದ್ದುದ್ದ ಕಾಲಿರುವುದರಿಂದ ಕೆಸರಿನ ಪ್ರದೇಶದಲ್ಲಿ ಸುಲಭವಾಗಿ ಓಡಾಡುತ್ತವೆ. ಕೆಲವೊಮ್ಮ ನೀರಿನಲ್ಲಿ ಈಜುವುದೂ ಉಂಟು. ಇದರ ಕಾಲಿನಲ್ಲಿರುವ ಅರೆ ಜಲಪಾದ ಸಾಮಾನ್ಯ ಆಳದ ನೀರಿನಲ್ಲಿ ಈಜಲು ಸಹಕಾರಿ. ಡೊಂಕಾದ ಕೊಕ್ಕಿನ ಸಹಾಯದಿಂದ ನೀರಿನ ಕೆಸರನ್ನು ಜರಡಿಯಾಡಿದಂತೆ ಮಾಡುತ್ತದೆ. ಚಿಕ್ಕ ಪುಟ್ಟ ಮೀನು, ಶಂಕದ ಹುಳು, ಕಪ್ಪೆ ಚಿಪ್ಪನ್ನು ಸಹ ತಿನ್ನುತ್ತದೆ.
ಸಮುದ್ರ ತೀರದ ûಾರದ ಭೂಮಿಯಲ್ಲಿ ಗುಳಿಗಳನ್ನು ಮಾಡಿ ಅಲ್ಲಿ ಮೊಟ್ಟೆ ಇಡುತ್ತವೆ. ಒಂದು ಮೀಟರ್ ಅಂತರದಲ್ಲಿ ಇಲ್ಲವೇ, ಅನೇಕ ಹಕ್ಕಿಗಳು ಮೊಟ್ಟೆ ಇಡುವುದು ಸಾಮಾನ್ಯ.
ನೋಡಲು ಸುಂದರವಾಗಿರುವ ಇದೊಂದು ಪುಟ್ಟ ನಿರುಪದ್ರವಿ ಜಲ ಹಕ್ಕಿ. ಅದರಲ್ಲೂ ಕೆಸರಿನಲ್ಲಿ ಓಡಾಡುತ್ತ -ಅಲ್ಲಿರುವ ಹುಳ ಕ್ರಿಮಿಗಳನ್ನು ತಿಂದು ಜಲ ಮಾಲಿನ್ಯವನ್ನು ಪರೋಕ್ಷವಾಗಿ ಕಡಿಮೆ ಮಾಡುತ್ತದೆ. ಇದರ ದೇಹದಲ್ಲಿರುವ ಮಿಲೆನಿನ್ ದ್ರವ ಬಿಳಿ ,ಹಳದಿ, ಕಪ್ಪು ಇಲ್ಲವೇ ಕೆಂಪುಬಣ್ಣ, ಇದರ ಗರಿಗಳಲ್ಲಿ ಮೂಡಲು ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.