ಕಾಡಿನಲ್ಲಿ ಕುಣಿತ


Team Udayavani, Sep 23, 2017, 12:38 PM IST

65588.jpg

ಸುತ್ತಮುತ್ತಲಿನ ಬೆಟ್ಟಗುಡ್ಡಗಳೇ ಅದುರುವಂತೆ ಕೇಕೆ ಹಾಕುತ್ತಾ ನಿಶಾನಿಯ ಹಲಗೆಯ ಬಡಿತಕ್ಕೆ ಸುಗ್ಗಿ ಕುಣಿತ ಕುಣಿಯತ್ತಾ ಯಾವುದೋ ಪುರಾತನ ಹಬ್ಬದ ವಾತಾವರಣವನ್ನು ಮೂಡಿಸಿದರು. ಅವರ ಲಯಬದ್ಧವಾದ ಕುಣಿತದ ಕಾವಿಗೆ ಮಾರುಹೋದ ನಾವೂ ಕೆಲವರು ಅವರೊಂದಿಗೆ ಆವೇಶ ಬಂದವರಂತೆ ಕುಣಿದೇ ಕುಣಿದೆವು. ಇದನ್ನೆಲ್ಲಾ ವೀಡಿಯೋ ರೆಕಾರ್ಡಿಂಗ್‌ ಮಾಡಿಕೊಳ್ಳುತ್ತಿದ್ದ ಹರ್ಷ, ಕ್ಯಾಮೆರಾವನ್ನು ನನ್ನ ಕೈಗೆ ಕೊಟು,, ದೇವರಮಗನ ಕಠಾರಿಯನ್ನು ಕೈಯಲ್ಲಿ ಹಿಡಿದು, ಕಾಲು ಚಾಚುವಷ್ಟು ದೂರಕ್ಕೆ ಹೆಜ್ಜೆಗಳನ್ನಿಡುತ್ತಾ, ಮೈಮೇಲೆ ದೇವರನ್ನು ಆವಾಹಿಸಿಕೊಂಡವರಂತೆ ಸುಮಾರು ಕಾಲು ಎಕರೆ ಜಾಗದಲ್ಲಿ ಕತ್ತಿ ಬೀಸಿ ಅಲ್ಲಿದ್ದವರನ್ನೆಲ್ಲಾ ರಂಜಿಸಿದರು.

ಒಮ್ಮೆ ನಮ್ಮ ನೇಚರ್‌ ಕ್ಲಬ್‌ನಿಂದ ದೇವರಮನೆ ಕಾಡಿಗೆ ಸ್ನೇಹಿತರೆಲ್ಲಾ ಟ್ರಕ್ಕಿಂಗ್‌ ಹೋಗುವುದು, ಅಲ್ಲಿ ಟೆಂಟ್‌ ಹಾಕಿ ರಾತ್ರಿ ತಂಗುವುದೆಂದು ನಿರ್ಧಾರವಾಯಿತು. ಹ್ಯಾಂಡ್‌ಪೋಸ್ಟ್‌ನಲ್ಲಿ ಎಲ್ಲಾ ಸೇರಿಕೊಂಡು ಜೀಪ್‌ನಲ್ಲಿ ಹೋಗಿ ನಂತರ ಚಾರಣ ಪ್ರಾರಂಭಿಸುವುದು ಎಂದು ನಿಗದಿಯಾಯ್ತು. ಅಡುಗೆ ವ್ಯವಸ್ಥೆಗಾಗಿ ಸುಬ್ರಹ್ಮಣ್ಯರನ್ನು ಕರೆದುಕೊಂಡೆವು. ತೇಜಸ್ವಿಯವರು, ಅವರ ಶ್ರೀಮತಿ ರಾಜೇಶ್ವರಿಯವರು, ಅಳಿಯ ಜಾnನೇಶ್‌ ಸಹ ನಮ್ಮ ಗುಂಪನ್ನು ಸೇರಿಕೊಂಡರು. ಕ್ಯಾಮೆರಾ, ಬಟ್ಟೆಬರೆ ಇತರೆ ವಸ್ತುಗಳಿದ್ದ ತೇಜಸ್ವಿಯವರ ಬ್ಯಾಗ್‌ ಸಾಕಷ್ಟು ತೂಕವಿದ್ದಂತೆ ಕಂಡಿತು. “ಬ್ಯಾಗ್‌ ಕೊಡಿ, ದೂರದಲ್ಲಿ ನಿಂತಿರುವ ಜೀಪಿಗೆ ಇಡ್ತೀನಿ’ ಎಂದು ಅವರ ಕೈನಲ್ಲಿದ್ದ ಬ್ಯಾಗ್‌ ಇಸ್ಕೊಳ್ಳಲು ಹೊರಟರೆ.. ನಮ್ಗೆàನು ಕೈಕಾಲು ಇಲ್ಲಾಂತ ತಿಳ್ಕಂಡಿದ್ದೀಯಾ, ನನ್ನ ಕೈಕಾಲು ಗಟ್ಟಿ ಇದಾವೆ ಕಣೋ ಮಾರಾಯಾ, ನಾನೂ ನಿಮ್ಹಾಗೇ ಅನ್ನಾ ತಿನ್ನೋ ಮನುಷ್ಯ ಕಣÅಯ್ನಾ ಎಂದು ಗದರಿಸಿ ಬ್ಯಾಗ್‌ ಎತ್ತಲೂ ಬಿಡಲಿಲ್ಲ. ದೇವರಮನೆಯಲ್ಲೂ ಸಹ ಜೀಪಿನವ ನನ್ನ ಜೊತೆ ಚೌಕಾಸಿ ಮಾಡುವಾಗ ‘ಏ ಒಂದು ನೂರು ರೂಪಾಯಿ ಜಾಸ್ತಿ ಕೊಟ್ಟು ಕಳಿಸ್ರಯ್ನಾ, ಅವರದ್ದು ಅದೇನು ಕಿರಿಕಿರಿ’ ಎಂದಿದ್ದರು. ದೇವಾಲಯದ ಪಕ್ಕದ ಬಯಲಿನಲ್ಲಿ 10-12 ಜನ ಮಲಗಬಹುದಾದಷ್ಟು ದೊಡ್ಡದಾದ ಟೆಂಟ್‌ ಹಾಕಿ ರಾತ್ರಿ ಕಳೆಯಲು ಸಿದ್ಧರಾದೆವು. 

ಅಷ್ಟರಲ್ಲಿ, ಮಲೆನಾಡಿಗೇ ವಿಶಿಷ್ಟವಾದ ನಿಶಾನಿಯ ಸದ್ದು ಕೇಳಿ ಆ ಕಾಳರಾತ್ರಿಯಲ್ಲಿ ಗಲಿಬಿಲಿಯಿಂದ ಹೊರಬಂದು ನೋಡಿದರೆ, 20-25 ಜನರ ಗುಂಪೊಂದು ಗ್ರಾಮದೇವತೆಯನ್ನು ಹೊತ್ತುಕೊಂಡು ದೇವಾಲಯದ ಆವರಣದತ್ತ ದೊಂದಿಯ ಬೆಳಕಿನಲ್ಲಿ ದಾಪುಗಾಲಿಟ್ಟುಕೊಂಡು ಬರುತ್ತಿದ್ದ ದೃಶ್ಯ ಕಾಣಿಸಿತು. ಅದು, ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಹತ್ತಾರು ಮೈಲುಗಳ ಸುತ್ತಳತೆಯಲ್ಲೆಲ್ಲೂ ಜನವಸತಿಯ ಗ್ರಾಮಗಳಿಲ್ಲದ ಕಾಡಿನ ನಡುವಿನ ಗಾಢಾಂಧಕಾರದಲ್ಲಿ ಅನುರಣಿಸಿದ ಆ ನಿಶಾನಿಯ ಸದ್ದು ಶತಮಾನಗಳ ಹಿಂದಿನ ಯಾವುದೋ ಬುಡಕಟ್ಟುಗಳ ನಡುವಿನ ಕಾಳಗದ ರಣಘೋಷದಂತೆ ನಮ್ಮನ್ನೆಲ್ಲ ನಖಶಿಖಾಂತ ತತ್ತರಗೊಳಿಸಿತು. ಪರವೂರಿನಿಂದ ಹೋಗಿದ್ದ ನಮ್ಮನ್ನು ಅಲ್ಲಿ, ಕಂಡು ಪ್ರೀತಿಯಿಂದ ಆದರಿಸಿದ ಆ ಗ್ರಾಮದೇವತಾ ಆರಾಧಕರು ತಾವು ತಂದಿದ್ದ ಸೌದೆಯನ್ನು ಪೇರಿಸಿ ದೇವಾಲಯದ ಮುಂದೆ ಆಳೆತ್ತರದ ಬೆಂಕಿಯನ್ನು ಹಾಕಿದರು. 

ಸುತ್ತಮುತ್ತಲಿನ ಬೆಟ್ಟಗುಡ್ಡಗಳೇ ಅದುರುವಂತೆ ಕೇಕೆ ಹಾಕುತ್ತಾ ನಿಶಾನಿಯ ಹಲಗೆಯ ಬಡಿತಕ್ಕೆ ಸುಗ್ಗಿ ಕುಣಿತ ಕುಣಿಯತ್ತಾ ಯಾವುದೋ ಪುರಾತನ ಹಬ್ಬದ ವಾತಾವರಣವನ್ನು ಮೂಡಿಸಿದರು. ಅವರ ಲಯಬದ್ಧವಾದ ಕುಣಿತದ ಕಾವಿಗೆ ಮಾರುಹೋದ ನಾವೂ ಕೆಲವರು ಅವರೊಂದಿಗೆ ಆವೇಶ ಬಂದವರಂತೆ ಕುಣಿದೇ ಕುಣಿದೆವು. ಇದನ್ನೆಲ್ಲಾ ವೀಡಿಯೋ ರೆಕಾರ್ಡಿಂಗ್‌ ಮಾಡಿಕೊಳ್ಳುತ್ತಿದ್ದ ಹರ್ಷ, ಕ್ಯಾಮೆರಾವನ್ನು ನನ್ನ ಕೈಗೆ ಕೊಟು, ದೇವರಮಗನ ಕಠಾರಿಯನ್ನು ಕೈಯಲ್ಲಿ ಹಿಡಿದು, ಕಾಲು ಚಾಚುವಷ್ಟು ದೂರಕ್ಕೆ ಹೆಜ್ಜೆಗಳನ್ನಿಡುತ್ತಾ, ಮೈಮೇಲೆ ದೇವರನ್ನು ಆವಾಹಿಸಿಕೊಂಡವರಂತೆ ಸುಮಾರು ಕಾಲುಎಕರೆ ಜಾಗದಲ್ಲಿ ಕತ್ತಿ ಬೀಸಿ ಅಲ್ಲಿದ್ದವರನ್ನೆಲ್ಲಾ ರಂಜಿಸಿದರು. ಕುಣಿತದಿಂದ ಸುಸ್ತು ಹೊಡೆದು ಹೋಗಿದ್ದ ನಾವೆಲ್ಲಾ ಬೆಳಗ್ಗೆ ಕಾಟಿಹರಕ್ಕೆ ಚಾರಣ ಹೋದೆವು. 

2000ನೇ ಇಸಯಲ್ಲಿ “ಮಿಲೇನಿಯಂ ಚಾರಣ’ ಎಂಬ ಕಾರ್ಯಕ್ರಮ ಆಯೋಜಿಸಿದ್ದೆವು. ಮಿಲೆನಿಯಂ ಎಂಬ ಪ್ರಿಫಿಕ್ಸ್‌ ನೋಡಿದ ತೇಜಸ್ವಿ -“ಏನಯ್ಯ ಹೀಗೆ ನಾಮಕರಣ ಮಾಡಿದ್ದೀಯಲ್ಲ’ ? ಅಂತ ಕೇಳಿದರು.  “ಏನಿಲ್ಲ, 2000 ಎಂಬುದು ಸಂಖ್ಯಾದೃಷ್ಟಿಯಿಂದ ನಮ್ಮ ಜೀವಿತಾವಧಿಯಲ್ಲಿ ವಿಶಿಷ್ಟವಾದ ವರ್ಷವಾದುದರಿಂದ ಹಾಗೆ ಹೆಸರಿಟ್ಟಿದ್ದೇನೆ’ ಎಂದೆ. 

ನೇಚರ್‌ ಕ್ಲಬ್‌ನ ಎಲ್ಲಾ ಮೂವತ್ತೆ„ದು ಜನ ಸದಸ್ಯರೂ ಭಾಗವಹಿಸಿದ್ದರು. ಬೆಳಗ್ಗೆ ಏಳು ಗಂಟೆಗೆ ಭೈರಾಪುರದ ದೇವಾಲಯದ ಆವರಣ ತಲುಪಿದ ನಾವು ರಾತ್ರಿಯಿಡೀ ಸುರಿದಿದ್ದ, ಇನ್ನೂ ತಿಳಿಯಾಗದ ಮಂಜಿನ ನಡುವೆ ನಮ್ಮನ್ನೇ ನಾವು ಹುಡುಕಾಡಿಕೊಳ್ಳತೊಡಗಿದೆವು. ಪಕ್ಕದಲ್ಲೇ ಇದ್ದ ನಮ್ಮ ತಂಡದ ಸದಸ್ಯರನ್ನು ದನಿಯೇರಿಸಿ ಕೂಗಿ ಕರೆದು ಮಾತನಾಡಿಸಲಾರಂಬಿಸಿದೆವು. “ಏ ಧನಂಜಯಾ, ಎಲ್ಲೋ ಮಾರಾಯ ಕಾಫಿ! ಎಂಬ ದೊಡ್ಡ ದನಿಯ ಗದರಿಕೆಗೆ ಬೆಚ್ಚಿಬಿದ್ದು ತಿರುಗಿ ನೋಡಿದರೆ, ಆಜಾನುಬಾಹು ತೇಜಸ್ವಿ ಅಸ್ಪಷ್ಟವಾಗಿ ಗೋಚರಿಸಿದರು.

ನಮ್ಮ ತಂಡದ ಕೇಟರಿಂಗ್‌ ಪ್ಲಾನರ್‌ ಸುರೇಂದ್ರನಾಥ್‌ರವರಿಗೆ ಈ ರೀತಿಯ ಕಾರ್ಯಕ್ರಮಗಳಲ್ಲಿ ಅಡುಗೆ ತಯಾರಿಯ ಉಸ್ತುವಾರಿ ವಹಿಸಿಕೊಳ್ಳುವುದೆಂದರೆ ಎಲ್ಲಿಲ್ಲದ ಉತ್ಸಾಹ. ನಾನು ವಿದ್ಯಾರ್ಥಿಯಾಗಿದ್ದಾಗ ಹೈಡ್ರೋಕಾರ್ಬನ್‌ ಮತ್ತು ಕಾಬೋìಹೈಡ್ರೇಟ್‌ ನಡುವಿನ ವ್ಯತ್ಯಾಸ ತಿಳಿಸಿಕೊಟ್ಟವರು ಇವರು. ಬಿಸ್ಸಿಬಿಸಿ ಕಾಫಿ ಮಾಡಿ ತಂಡದ ಎಲ್ಲರಿಗೂ ತಮ್ಮ ನಳಪಾಕದ ಪರಿಚಯ ಮಾಡಿಕೊಟ್ಟರು. ಸ್ಟಾರ್ಟಿಂಗ್‌ ಪಾಯಿಂಟ್‌ ಆಗಿದ್ದ ದೇವಾಲಯದ‌ ಆವರಣದಲ್ಲಿ ಕೆಲ ಸಮಯ ಅಡ್ಡಾಡಿದೆವು. ಮೂಡಿಗೆರೆಯಿಂದ ಪಾರೆÕಲ್‌ ತಂದಿದ್ದ ಉಪ್ಪಿಟ್ಟು-ಕೇಸರಿಬಾತ್‌ನ ಡಬ್ಬ ತೆರೆದಿದ್ದೇ ತಡ; ಘಮ್ಮನೆಯ ಸ್ವಾದ ನಮ್ಮೆಲ್ಲರನ್ನೂ ಮತ್ತೆ ದೇವಾಲಯದ ಗರುಡಗಂಬದ ಬಳಿಗೆ ಎಳೆದು ತಂದಿತು. ತೇಜಸ್ವಿಯವರು ನಮ್ಮ ತಂಡದ ಹುಡುಗರನ್ನು ಪ್ರೀತಿಯಿಂದ ರೇಗಿಸುತ್ತಾ, ಗದರಿಸುತ್ತಾ ಹಾಸ್ಯಚಟಾಕಿಗಳನ್ನು ಹಾರಿಸುತಿದ್ದರು. 

ಎತ್ತಿನಭುಜ ಶಿಖರವನ್ನು ಏರಲು ಸಿದ್ಧವಾಗಿ ಬಂದಿದ್ದ ನಾವು ತಿಂದಿದ್ದು ಹೆಚ್ಚಾಗಿ ಹೊಟ್ಟೆ ಭಾರದಿಂದ ಫ‌ಸ್ಟ್‌ ಗೇರ್‌ನಲ್ಲಿಯೇ ಮುಕ್ಕಿರಿಯತೊಡಗಿ ತೇಜಸ್ವಿಯವರಿಂದ ಉಗಿಸಿಕೊಂಡದ್ದೂ ಆಯಿತು. ಬೇಸಿಗೆಯಾಗಿದ್ದರೂ ಕಾಡಿನ ನಡುವೆ ತೇವಾಂಶವಿದ್ದುದರಿಂದ ಜಿಗಣೆಗಳು ಹೇರಳವಾಗಿದ್ದವು. ತಂಡದಲ್ಲಿದ್ದ ಹುಡುಗಿಯರು ಜಿಗಣೆಯನ್ನು ಕಂಡು ಹಾವನ್ನೇ ತುಳಿದವರಂತೆ ಬೊಬ್ಬೆ ಹೊಡೆಯಲಾರಂಭಿಸಿದರು. ಮಧ್ಯಾಹ್ನದ ಊಟಕ್ಕೆಂದು ಮೊಸರನ್ನ, ಪುಳಿಯೊಗರೆ ತಂದಿದ್ದೆವು. ದೈಹಿಕವಾಗಿ ಬಲವಾಗಿದ್ದ ನಾವು ಕೆಲ ಹುಡುಗರು ಸರದಿಯಂತೆ 200-300 ಮೀಟರ್‌ ದೂರದವರೆಗೆ ಕಡಾಯಿಗಳನ್ನು ಹೊತ್ತು ನಡೆಯುತ್ತಿದ್ದೆವು. ಪುಳಿಯೊಗರೆಗಿಂತ ಈ ಮೊಸರನ್ನದ ಪಾರೆÕಲ್‌ ವಿಪರೀತ ಭಾರವಾಗಿತ್ತು. ನಿಮಗೇನಾದ್ರೂ ಬುದ್ಧಿಗಿದ್ದಿ ಇದೆಯೇನÅಯ್ನಾ? ಎಷ್ಟೂ ಅಂತ ಹೊರ್ತೀರಿ. ಸಪರೇಟ್‌ ಪ್ಯಾಕ್‌ ಮಾಡಿಸಿ ಅವರವರಿಗೆ ಕೊಡೋದು ಬಿಟ್ಟು, ಎಲ್ಲರದನ್ನು ಒಬ್ಬೊಬ್ಬರೇ ಹೊತ್ತುಕೊಂಡು ಬರಿ¤ದ್ದೀರಲ್ಲ. ಟ್ರೆಕ್‌ ಮಾಡ್ತೀರೋ ಇಲ್ಲಾ ಹಮಾಲಿ ಕೆಲಸ ಮಾಡ್ತೀರೋ? ಎಂದು ತೇಜಸ್ವಿ ರೇಗಾಡಿದರು. ಸಪರೇಟ್‌ ಪ್ಯಾಕ್‌ ಮಾಡಲೆಂದೇ ನಾವೂ ಪ್ಲಾನ್‌ ಮಾಡಿದ್ದೆವು. ಹಿಂದಿನ ದಿನವೇ ಪ್ಯಾಕ್‌ ಮಾಡಲು ಮುತ್ತುಗದ ಎಲೆ ಹಾಳೆ ಮತ್ತು ಪೇಪರ್‌ ತಂದು ಅಡುಗೆಯವರಿಗೆ ನೀಡಿದ್ದೆವು. ಬಿಸಿಯಾಗಿದ್ದ ಅಡುಗೆ ಪ್ಯಾಕ್‌ ಮಾಡಿದರೆ ಮದ್ಯಾಹ್ನದ ವೇಳೆಗೆ ಬಿಸಿಲಿಗೆ ಹಾಳಾಗುವುದೆಂದು ಬಾಕ್ಸ್‌ನಲ್ಲಿ ಹಾಕಿ ಹಾಗೆಯೇ ಕಳುಸಿಕೊಟ್ಟಿದ್ದರ‌ು. 

ತೇಜಸ್ವಿಯವರಿಗೆ ಇದನ್ನು ಹೇಳಿದೆ. ‘ನಿನ್ನ ಮ್ಯಾನೇಜ್‌ಮೆಂಟ್‌ನಲ್ಲಿ ಇಂಥವೇ ಆಗುವುದು, ಕಂತ್ರಿ ನೀನು’ ಎಂದರು. ಅಲ್ಲಲ್ಲಿ ನಿಂತು ದಣಿವಾರಿಸಿಕೊಂಡು ತಮಾಷೆ, ಹರಟೆ, ಅನುಭವಗಳ ಮೆಲುಕು, ಕಂಡ ಸಸ್ಯಗಳ ಕುರಿತಾದ ಮಾಹಿತಿ ಪಡೆಯುತ್ತಾ$¤ ನಡೆದಿದ್ದ ನಾವು ಸುಮಾರು ಮೂರು ಕಿಲೋಮೀಟರ್‌ ನಡೆದಿದ್ದೆವು. 

ಸೂರ್ಯ ಬಿರಬಿರನೆ ನೆತ್ತಿಯ ಮೇಲೆ ಬಂದಿದ್ದ. ಕಾಡ‌ನ್ನು ದಾಟಿ ಬಟಾಬಯಲು ಪ್ರದೇಶಕ್ಕೆ ಬಂದಿದ್ದೆವು. ಸುಮಾರು ಹನ್ನೆರಡೂವರೆಯ ಸಮಯ. ತಂಡದವರ ನಡಿಗೆ ಕ್ರಮೇಣ ನಿಧಾನವಾಯ್ತು. ಸೂರ್ಯ ಬೇರೆ ಬೆಳಗಿನ ಮಂಜಿನ ಮೇಲೆ ಸೇಡು ತೀರಿಸುವವನಂತೆ ಕರುಣೆ ಇಲ್ಲದೇ ನಮ್ಮನ್ನು ಹಣಿಯುತಿದ್ದ. ಕಡಾಯಿ ಹೊತ್ತಿದ್ದವರ ಗೋಳಾಟ ನೋಡಲಾರದೇ ತೇಜಸ್ವಿ ನಿಲÅಯ್ಯ ಎಲ್ಲರೂ ಸ್ವಲ್ಪ ಹೊತ್ತು. ಉಪ್ಪಿಟ್ಟು-ಕೇಸರಿಬಾತು ಪವರ್‌ ಕಳ್ಕೊಂಡಿರೋ ಹಾಗೆ ಕಾಣಿಸುತ್ತೆ. ಹೇಗಿದ್ದರೂ ತಿನ್ನೋಕ್ಕೇ ತಾನೇ ಮೊಸರನ್ನ ತಂದಿರೋದು. ಇಲ್ಲಿಂದ ಆ ನೆತ್ತಿಯವರೆಗೆ ಯಾಕಯ್ನಾ ಕಡಾಯಿ ಹೊರಬೇಕು? ಇಲ್ಲೇ ತಿಂದು ಬಿಡೋಣ, ಎಲ್ಲರೂ ಅವರವರ ಲಗೇಜು ಅವರವರೇ ಹೊತ್ತುಕೊಂಡಂತೆ ಆಗುತ್ತೆ. ನನಗೆ‌ ಇವರ ಪರದಾಟ ನೋಡೋಕ್ಕೆ ಆಗ್ತಿಲ್ಲ. ಎಂದು ನಮ್ಮ ಹೆಗಲ ಮೇಲಿದ್ದ ದೊಡ್ಡ ಭಾರವನ್ನು ಉಪಾಯವಾಗಿ ಕೆಳಗಿಳಿಸಿದ್ದರು.

ಧನಂಜಯ ಜೀವಾಳ

ಟಾಪ್ ನ್ಯೂಸ್

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.