ರೈತ ಚಳವಳಿ ಹುಟ್ಟೋಕೆ ತೇಜಸ್ವಿಯವರೇ ಕಾರಣ


Team Udayavani, Sep 9, 2017, 12:06 PM IST

9.jpg

“ಸುಮ್ನೆ ಯಾರ್ಯಾರೋ ಏನೇನೋ ಹೇಳ್ತಾರೆ. ಆದರೆ ಸತ್ಯ ಏನು ಗೊತ್ತಾ? ರಾಜ್ಯದಲ್ಲಿ ರೈತ ಚಳವಳಿ ಹುಟ್ಟಲು ಪೂರ್ಣಚಂದ್ರ ತೇಜಸ್ವಿ ಕಾರಣ!ಆಗ ರಾಜ್ಯದಲ್ಲಿ ಗುಂಡೂರಾಯರ ಸರ್ಕಾರ. ಲೆವಿ ಪದ್ಧತಿಯನ್ನು ಜಾರಿಗೆ ತರುವ ಮೂಲಕ ರೈತರ ಹಕ್ಕನ್ನು ಮೊಟಕುಗೊಳಿಸಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ತಾವು ಬೆಳೆದ ಕಾಫಿಯನ್ನು ತಮ್ಮ ಬಂಧುಗಳು, ಸ್ನೇಹಿತರು ಎಂದು ಬಂದವರಿಗೆ ಒಂದೆರಡು ಕೆಜಿ ಕಳುಹಿಸಲು ಕೂಡ ಅಡ್ಡಿ. ಲೆವಿ ಗೇಟ್‌ ಹಾಕಿ, ಎಲ್ಲವನ್ನೂ ತಪಾಸಣೆ ಮಾಡಲಾಗುತ್ತಿತ್ತು. ಆಗ ಇದರ ವಿರುದ್ಧ ಮೊದಲ ಬಾರಿಗೆ ತೇಜಸ್ವಿ ಧ್ವನಿ ತೆಗೆದರು. ಇದರ ವಿರುದ್ಧದ ಲೆವಿ ಚಳವಳಿ ಆರಂಭಿಸಿದರು. ನಾವು ಬೆಳೆದ ಕಾಫಿಯನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ದು ಮಾರುತ್ತೇವೆ.ಇದನ್ನು ಕೇಳಲು ಅವರು ಯಾರು ಎಂದು ಸವಾಲು ಎಸೆದರು. ಅವರ ಘರ್ಜನೆಗೆ ಧ್ವನಿ ಸಿಕ್ಕಿತ್ತು. ಬಹಳ ಜನ ಬೆಂಬಲಕ್ಕೆ ನಿಂತರು.  ಎಷ್ಟು ಎಲ್ಲೆಲ್ಲಿಗೆ ಹೋಗುತ್ತದೆ ಎಂದು ಬೇಕಾದರೆ ಪ್ರಶ್ನಿಸಲಿ. ಆದರೆ ನಾವು ನಮ್ಮ ಬಂಧುಗಳು, ಸ್ನೇಹಿತರಿಗೆ ಕೊಡುವ ಒಂದೆರಡು ಕೆಜಿ ಕಾಫಿಯನ್ನು ಕೂಡ ಇವರು ವಶಪಡಿಸಿಕೊಳ್ಳುತ್ತಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. 

ಆಗ ಚಿಕ್ಕಮಗಳೂರಿನಲ್ಲಿ ಕಾಫಿಗೆ ಸಂಬಂಧಿಸಿದಂತೆ ಹೋರಾಟ ಸಮಿತಿಯೊಂದು ಅಸ್ತಿತ್ವಕ್ಕೆ ಬಂದಿದ್ದು, ನಾನು ಮತ್ತು ಬಸವರಾಜಪ್ಪ ಇದರ ಸದಸ್ಯರಾಗಿದ್ದೆವು. ನಂತರ ದಕ್ಷಿಣ ಭಾರತ ಸಣ್ಣ ಬೆಳೆಗಾರರ ಸಂಘ ಸ್ಥಾಪಿತವಾಗಿತ್ತು. ನಾವು ಅದರಲ್ಲಿ  ತೇಜಸ್ವಿಯ ಜೊತೆಗೆ ಸಕ್ರಿಯ ಸದಸ್ಯರಾಗಿದ್ದೆವು. ಇದೇ ವೇಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಲೆವಿ ಭತ್ತದ ಪ್ರಶ್ನೆ ಎದುರಾಗಿತ್ತು. ಇಲ್ಲಿಯೂ ಲೆವಿ ಗೇಟ್‌ ತೆರೆಯಲಾಗಿತ್ತು. ಭತ್ತವನ್ನು ಮುಕ್ತವಾಗಿ ಮಾರಲು ಅವಕಾಶ ಇರಲಿಲ್ಲ. ಅಲ್ಲಿಯೂ ಪ್ರತಿಭಟನೆ ನಡೆಸಿ ಎಂದು ತೇಜಸ್ವಿ ಹೇಳಿದರು. ಲೆವಿ ಗೇಟ್‌ ಎಂಬುದು ಕಾಫಿಗೆ, ಭತ್ತಕ್ಕೆ ಪ್ರತ್ಯೇಕ ಅಲ್ಲ. ಎಲ್ಲವೂ ಒಂದೇ. ರೈತರನ್ನು ಅಂಕುಶಕ್ಕೆ ಒಳಪಡಿಸುವ ಯತ್ನ. ಇದನ್ನು ಪ್ರತಿಭಟಿಸಬೇಕೆಂದು ಅವರ ಆಶಯವಾಗಿತ್ತು. ರೈತ ತಾನು ಬೆಳೆದ ಪದಾರ್ಥವನ್ನು 

ತನ್ನಿಚ್ಛೆಯಂತೆ ಮಾರಲು ಸಾಧ್ಯವಿಲ್ಲ ಎಂದರೆ ಅದೆಂತಹ ವ್ಯವಸ್ಥೆ? ಬ್ರಿಟೀಷರ ಕಾಲದಲ್ಲಿ ಇದಿರಲಿಲ್ಲ ಎಂದು ಆಕ್ರೋಶ  ವ್ಯಕ್ತಪಡಿಸಿದ್ದರು. ಅದೇ ವೇಳೆಗೆ ರಾಷ್ಟ್ರಮಟ್ಟದಲ್ಲಿ ಕಿಶನ್‌ ಪಟ್ನಾಯಕ್‌ ಚಳವಳಿ ಆರಂಭಿಸಿದ್ದರು. ಪಟ್ನಾಯಕ್‌ ನಮಗೆ ಪಾಠ ಹೇಳಿದರು. ಹೋರಾಟದ ಸ್ವರೂಪ ವಿವರಿಸಿದರು. ಆಗ ರೈತ ಸಂಘದ ಸ್ಥಾಪನೆಗೆ ಮಹೂರ್ತ ಒದಗಿ ಬಂದಿತು. ನಿಜವಾಗಿಯೂ ರಾಜ್ಯದಲ್ಲಿ  ರೈತ ಸಂಘ ಸ್ಥಾಪನೆಯಾಗಲು ತೇಜಸ್ವಿಯವರೇ ಕಾರಣ. ಅವರೇ ಮೂಲ ಪ್ರೇರಣೆ.

ಚಿಕ್ಕಮಗಳೂರಿನಲ್ಲಿ ಹೋರಾಟ ಒಂದು ತಾರ್ಕಿಕ ಸ್ವರೂಪ ಪಡೆಯುತ್ತಿತ್ತು. ಇತ್ತ ಶಿವಮೊಗ್ಗದಲ್ಲಿಯೂ ಲೆವಿ ವಿರುದ್ಧ ಹೋರಾಟ ಚುರುಕುಗೊಳ್ಳುತ್ತಿತ್ತು. ಆಗ ನಾನು ಹತ್ತಾರು ಗಾಡಿಗಳ ಜೊತೆ ನೂರಾರು ಮೂಟೆ ಭತ್ತವನ್ನು ತೆಗೆದುಕೊಂಡು ಆಗುಂಬೆ ಗೇಟಿನಿಂದ ದಕ್ಷಿಣ ಕನ್ನಡದತ್ತ ಸಾಗಿದೆ.ಆಗುಂಬೆಯಲ್ಲಿದ್ದ ಲೆವಿ ಗೇಟ್‌ ಅನ್ನು ಅಕ್ಷರಶಃ ಮುರಿದು ಹೋದೆವು. ಆಗ ಉಪವಿಭಾಗಾಧಿಕಾರಿಯಾಗಿದ್ದವರು ಅನಿತಾಕೌಲ್‌ ಅವರು. ನಾವು ಯಾವುದಕ್ಕೂ ಕೇರ್‌ ಮಾಡದೆ ಗೇಟನ್ನು ಮುರಿದು ಹಾಕಿ ದಕ್ಷಿಣ ಕನ್ನಡಕ್ಕೆ ಹೋಗಿ ಭತ್ತ ಮಾರಿ ವಾಪಸ್ಸಾದೆವು. ಅದು ಸುದ್ದಿಯಾಯಿತು. ಆಗ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್‌ ಅವರ ತಂದೆ ತಮ್ಮ  ಮಗನಿಗೆ ಸರಿಯಾಗಿ ಮನವರಿಕೆಯಾಗುವಂತೆ ತಿಳಿ ಹೇಳಿದರು. “ಯಾವ ರಾಜ್ಯದಲ್ಲಿ ರೈತರು ದಂಗೆ ಏಳುತ್ತಾರೋ ಆ ರಾಜ್ಯ ಉದ್ಧಾರವಾಗುವುದಿಲ್ಲ. ಅದೊಂದು ಅವಮಾನ. ತಕ್ಷಣ ಈ ಲೆವಿ ಗೇಟ್‌ ತೆಗೆದು ಹಾಕು’ ಎಂದರು. ಅದರಂತೆ ಸ್ವತಃ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್‌ ಅವರೇ ಲೆವಿ ಗೇಟ್‌ ತೆಗೆದು ಹಾಕಲು ಆದೇಶ ಹೊರಡಿಸಿದರು.

ಬಳಿಕ ರೈತ ಸಂಘ ಹುಟ್ಟಿ ಅದು ಬೆಳೆದ ರೀತಿ ಅನೂಹ್ಯ. ಯಾರೂ ಊಹಿಸದ ರೀತಿಯಲ್ಲಿ ಬೆಳೆಯಿತು. ರೈತ ಸಂಘದ ಹುಟ್ಟಿಗೆ ಕಾರಣರಾದ ತೇಜಸ್ವಿ ಸಕ್ರಿಯವಾಗಿ ಈ ಹೋರಾಟದಲ್ಲಿ ಭಾಗಿಯಾಗಲು ಇಚ್ಛಿಸಲಿಲ್ಲ. ಹಸಿರು ಟವೆಲ್‌ ಹಾಕಲಿಲ್ಲ. “ನಾನು ನನ್ನ ಕೆಲಸ ಮಾಡಿದ್ದೇನೆ. ಮುಂದಿನ ದಾರಿ ನಿಮ್ಮದು. ಅಗತ್ಯವಾದರೆ ನನ್ನ ಕರೆಯಿರಿ. ಬಂದು ಭಾಗವಹಿಸುತ್ತೇನೆ. ಬೇಕಾದರೆ ಭಾಷಣ ಮಾಡುತ್ತೇನೆ. ಆದರೆ ಪದಾಧಿಕಾರಿಯಾಗುವುದಿಲ್ಲ. ನಿತ್ಯ ಸಕ್ರಿಯವಾಗಲು ನನ್ನಿಂದ ಸಾಧ್ಯವಿಲ್ಲ. ನನಗೆ ನನ್ನದೇ ಆದ ಬೇರೆ ಕೆಲಸಗಳಿವೆ’ ಎನ್ನುತ್ತಿದ್ದರು. ಅವರಿಗೆ ಆಗಲೇ ಕಂಪ್ಯೂಟರ್‌ನಲ್ಲಿ ಕನ್ನಡಕ್ಕೆ ಸರಿಯಾದ ಮಾನ್ಯತೆ ಸಿಗುತ್ತಿಲ್ಲ ಎಂಬ ಕೋಪ ಬಂದಿತ್ತು. ಯೂನಿಕೋಡ್‌ ಫಾಂಟ್‌ ಬಗ್ಗೆ ತೀವ್ರ ಗಮನ ಹರಿಸಿದ್ದರು. ಕಂಪ್ಯೂಟರ್‌ನಲ್ಲಿ ಕನ್ನಡದ ಸಮರ್ಪಕ ಬಳಕೆಯಾಗಬೇಕು ಎನ್ನುತ್ತಿದ್ದರು. ಆಗಲೇ ಬೇರೆ ಸಾಹಿತಿಗಳು ಕಂಪ್ಯೂಟರ್‌ ಅನ್ನು ಬಳಸುವ ರೀತಿ ಕಂಡು ಕನ್ನಡದಲ್ಲಿಯೂ ಇದೇ ರೀತಿಯ ಬಳಕೆಯಾಗಬೇಕು. ಆಧುನಿಕ ತಂತ್ರಜ್ಞಾನದೊಂದಿಗೆ ನಮ್ಮ ಸಾಹಿತ್ಯ ಕೂಡ ಬೆಳೆಯಬೇಕು. ಕನ್ನಡದ ಲೇಖಕರಿಗೆ  ಸರಿಯಾದ ಲಾಭ ಸಿಗಬೇಕು ಎನ್ನುತ್ತಿದ್ದರು.

ರೈತ ಹೋರಾಟದ ದಿಕ್ಕನ್ನು ಅವರು ಗಮನಿಸುತ್ತಲೇ ಇದ್ದರು. ಬೇರೆ ಬೇರೆ ಕಾರಣಕ್ಕೆ ಎರಡಾಗಿದ್ದನ್ನು ನೋಡಿದರು. ರೈತ ಸಂಘ ಚುನಾವಣೆಯಲ್ಲಿ ಸ್ಪರ್ಧಿಸಿದ್ದನ್ನು ಸಮರ್ಥಿಸಿದರು. ರೈತರ ಧ್ವನಿ ಸದನದಲ್ಲಿ ಇರಬೇಕು ಎಂಬುದು ಅವರ ಆಶಯವಾಗಿತ್ತು.ಅಲ್ಲಿಗೆ ಹೋಗಿ ಹೋರಾಡಿ ಎನ್ನುತ್ತಿದ್ದರು. ಅದು ನೆರವೇರಿತು.

ಆದರೆ ಈಗಲೂ ನಮಗೆ ನ್ಯಾಯ ಸಿಕ್ಕಿಲ್ಲ ಎಂಬ ದುಃಖ ಅವರಲ್ಲಿತ್ತು. ರಾಷ್ಟ್ರಮಟ್ಟದಲ್ಲಿ ಕಿಶನ್‌ ಪಟ್ನಾಯಕ್‌ ಏನು ಮಾಡಿದ್ದಾರೆ ಎಂಬುದನ್ನು ನೋಡಿ. ಅದರಂತೆ ನೀವೂ ಮಾಡಿ ಎನ್ನುತ್ತಿದ್ದರು. ಸಾರಾಯಿ ನಿಷೇಧ, ನೀರಾ ಚಳವಳಿಯ ಹೋರಾಟಕ್ಕೆ ಸರ್ಕಾರ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಬೇಸರ ಅವರಲ್ಲಿತ್ತು. ಹೀಗಾಗಿ ಅವರು ಚಳವಳಿಯಿಂದ ಮತ್ತಷ್ಟು ದೂರ ಸರಿದರು. ಅವರು ದೂರ ಹೋಗಿದ್ದು ಸಕ್ರಿಯ ಚಟುವಟಿಕೆಯಿಂದಲೇ ಹೊರತು ಆಶಯದ ದೃಷ್ಟಿಯಿಂದಲ್ಲ. ಅವರ ಒಂದು ಕಣ್ಣು ಈ ಹೋರಾಟದ ಮೇಲೆಯೇ ಇತ್ತು.

ಕಡಿದಾಳು ಶಾಮಣ್ಣ

ನಿರೂಪಣೆ : ಗೋಪಾಲ್‌ ಯಡಗೆರೆ

ಟಾಪ್ ನ್ಯೂಸ್

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Shiggavi-candidate

By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್‌ ಪಠಾಣಗೋ?

Kalinga-King-cobra

King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!

Mysuru-Nirmala

Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.