ಶ್ರೀಜೇಶ್‌ಗೆ ಮತ್ತೆ ಬೆನ್ನತ್ತಿ ಬಂದ ನಾವಿಕ ಪಟ್ಟ
Team Udayavani, May 5, 2018, 1:47 PM IST
ಒಬ್ಬ ಗೋಲ್‌ಕೀಪರ್ ಆಗಿ ಎದುರಾಳಿಗಳ ಗೋಲನ್ನು ತಡೆಯುವುದು ಅಷ್ಟೇ ಅಲ್ಲ, ತಂಡವನ್ನು ಗೆಲ್ಲಿಸಬಹುದು ಎನ್ನುವುದನ್ನು ಸಾಬೀತು ಪಡಿಸಿದವರಲ್ಲಿ ಪಿ.ಆರ್.ಶ್ರೀಜೇಶ್ ಕೂಡ ಒಬ್ಬರು. ಕ್ರೀಡಾ ಜೀವನದಲ್ಲಿ ಅನೇಕ ಏರಿಳಿತವನ್ನು ಕಂಡಂತಹ ಶ್ರೇಷ್ಠ ಗೋಲ್‌ಕೀಪರ್ ಶ್ರೀಜೇಶ್‌ಗೆ ನಾಯಕನ ಪಟ್ಟ ಮತ್ತೆ ಬೆನ್ನತ್ತಿ ಬಂದಿದೆ.
ದಕ್ಷಿಣ ಭಾರತೀಯ ಆಟಗಾರರಿಗೆ ಹಾಕಿಯಲ್ಲಿ ನಾಯಕತ್ವದ ಜವಾಬ್ದಾರಿ ಸಿಕ್ಕಿರುವುದು ತುಂಬಾ ಅಪರೂಪ. ಕೇರಳದ ಶ್ರೀಜೇಶ್ ನಾಯಕತ್ವವನ್ನು ಪಡೆಯಲು ಯಶಸ್ವಿಯಾದರು. ಆದರೆ, ನಾಯಕನಾಗಿ ಯಶಸ್ವಿಯಾದರೂ, ಗಾಯ, ಅಶಿಸ್ತಿನಿಂದ ಆ ಸ್ಥಾನ ಬಹುಸಮಯ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಮನ್‌ಪ್ರೀತ್ ಸಿಂಗ್ ನೇತೃತ್ವದಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನೀಡಿರುವ ಕಳಪೆ ಪ್ರದರ್ಶನ ಮತ್ತೆ ಶ್ರೀಜೇಶ್‌ಗೆ ನಾಯಕತ್ವದ ಸ್ಥಾನ ಸಿಗುವಂತೆ ಮಾಡಿದೆ.
6ನೇ ತರಗತಿಯಲ್ಲಿ ಹಾಕಿ ಆರಂಭ
ಚಿಕ್ಕ ವಯಸ್ಸಿನಲ್ಲಿ ವೇಗವಾಗಿ ಓಡುತ್ತಿದ್ದ ಈ ಬಾಲಕನನ್ನು ನೋಡುತ್ತಿದ್ದ ಈತನ ತಂದೆ, ತಾಯಿ ರನ್ನಿಂಗ್ ತರಬೇತಿಗೆ ಸೇರಿಸಿದರು. ರನ್ನಿಂಗ್ ಅಭ್ಯಾಸ ಮಾಡುತ್ತಲೇ ವಾಲಿಬಾಲ್ ಮತ್ತು ಲಾಂಗ್ ಜಂಪ್ ಅಭ್ಯಾಸ ನಡೆಸುತ್ತಿದ್ದ. ಪ್ರತಿ ದಿನ ಅಭ್ಯಾಸಕ್ಕೆ ತಪ್ಪದೇ ಹಾಜರಾಗುತ್ತಿದ್ದ. ಆದರೆ, ಅಥ್ಲೆàಟಿಕ್ಸ್‌ನಲ್ಲಿದ್ದ ಶ್ರೀಜೇಶ್ ಹಾಕಿ ಅತ್ತ ವಾಲುವಂತೆ ಮಾಡಿದ್ದು, ತಿರುವನಂತಪುರಂನ ಜಿವಿ ರಾಜಾ ಸ್ಫೋರ್ಟ್ಸ್ ಶಾಲೆಯ ಕೋಚ್. ಶ್ರೀಜೇಶ್‌ನ ಕ್ರೀಡಾಸಕ್ತಿಯನ್ನು ಗಮನಿಸುತ್ತಿದ್ದ ಕೋಚ್, ಶ್ರೀಜೇಶ್‌ಗೆ ಗೋಲ್‌ಕೀಪಿಂಗ್ ತರಬೇತಿ ಪಡೆಯುವಂತೆ ಸೂಚನೆ ನೀಡಿದರು. ಮೊದಲಿಗೆ ಸ್ವಲ್ಪ ಬೇಸರದಲ್ಲಿಯೇ ಅಭ್ಯಾಸ ಅರಂಭಿಸಿದ್ದರು. ಯಾಕೆಂದರೆ, ಅಥ್ಲೆàಟಿಕ್ಸ್‌ನಿಂದ ಹಾಕಿಯತ್ತ ವಾಲುವುದು ಸ್ವಲ್ಪ ಕಷ್ಟವಾಗಿತ್ತು.
ದಿನಕಳೆದಂತೆ ಶ್ರೀಜೇಶ್ ಗೋಲ್‌ಕೀಪಿಂಗ್‌ನತ್ತ ಸಂಪೂರ್ಣ ಗಮನಹರಿಸಿದ. ಚಿಕ್ಕವಯಸ್ಸಿನಲ್ಲಿ ಈತ ಗೋಲ್‌ಕೀಪ್‌ನಲ್ಲಿ ಎದುರಾಳಿಯ ಚೆಂಡನ್ನು ತಡೆಯುವ ರೀತಿಯನ್ನು ನೋಡಿದ ಕೋಚ್ ಮುಂದೊಂದುದಿನ ಈತ ದೊಡ್ಡ ತಾರಾ ಆಟಗಾರನಾಗುವ ಕನಸು ಕಂಡಿದ್ದರು. ಅದರಂತೆ ಇಂದು, ಶ್ರೇಷ್ಠ ಗೋಲ್‌ಕೀಪರ್ ಆಗಿ ಕಾಣಿಸಿಕೊಂಡಿದ್ದಾರೆ.
ಶ್ರೀಜೇಶ್ ಸಾಧನೆ
2004ರಲ್ಲಿ ರಾಷ್ಟ್ರೀಯ ಜೂನಿಯರ್ ತಂಡಕ್ಕೆ ಆಯ್ಕೆ. ಇಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದಿಂದಾಗಿ 2006ರಲ್ಲಿಯೇ ಹಿರಿಯರ ರಾಷ್ಟ್ರೀಯ ತಂಡಕ್ಕೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. 2008ರಲ್ಲಿ ಜೂನಿಯರ್ ಏಷ್ಯಾಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರಹಿಸಿದರು. ಈ ಕೂಟದಲ್ಲಿ ಶ್ರೇಷ್ಠ ಗೋಲ್‌ಕೀಪರ್ ಪ್ರಶಸ್ತಿ ಪಡೆದರು. 2011ರಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪಾಕ್ ವಿರುದ್ಧ ಅದ್ಭುತ ಗೋಲ್‌ಕೀಪಿಂಗ್ ಪ್ರದರ್ಶಿಸುವ ಮೂಲಕ ಭಾರತಕ್ಕೆ ಗೆಲುವು ತಂದರು. 2013ರಲ್ಲಿ ನಡೆದ ಏಷ್ಯಾಕಪ್‌ನಲ್ಲಿಯೂ ಶ್ರೇಷ್ಠ ಗೋಲ್‌ಕೀಪರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಇಷ್ಟೇ ಅಲ್ಲ, ಶ್ರೇಷ್ಠ ಗೋಲ್‌ಕೀಪರ್ ಸಮಸ್ಯೆ ಎದುರಿಸುತ್ತಿದ್ದ ಭಾರತಕ್ಕೆ ಶ್ರೀಜೇಶ್ ಆಪತಾºಂಧವರಾದರು. 2014ರಲ್ಲಿ ನಡೆದ ಕಾಮನ್‌ವೆಲ್ತ್‌ನಲ್ಲಿ ಭಾರತ ಬೆಳ್ಳಿ ಪದಕ ಗೆಲ್ಲುವಲ್ಲಿಯೂ ಮಹತ್ವದ ಕೊಡುಗೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.