ನಿಮ್ಮ ಲಾಭದ ಮನೆಯಲ್ಲಿ ಪ್ರಾರಬ್ಧಗಳ ನಿವಾರಣೆ ಹೀಗೆ…


Team Udayavani, Mar 18, 2017, 4:00 AM IST

654.jpg

ಭಾರತೀಯ ಜೋತಿಷ್ಯ ಶಾಸ್ತ್ರದಲ್ಲಿ ಧನಲಾಭ ಪುತ್ರ, ಪ್ರಪೌಪ್ರ ಆಯುರಾರೋಗ್ಯ ಗುಪ್ತ ನಿಧಿ, ಗೋವು, ಗೃಹಧಾನ್ಯ, ಕನಕಾದಿಗಳು, ಆಸ್ತಿ ಸ್ಥಾನಮಾನ ಇತ್ಯಾದಿಗಳೆಲ್ಲ ಲಾಭದ ಪಾಲು ಏನು ಎಂಬುದನ್ನು ಅವಲಂಬಿಸಿರುತ್ತದೆ. ಹಾಗಾದರೆ ಈ ಲಾಭದ ಮನೆಯು ಎಲ್ಲಾ ರೀತಿಯಲ್ಲಿ ಕಳಂಕಗಳಿಲ್ಲದೆ ಇದ್ದರೆ ಲಾಭದ ಮೂಲಕವಾದ ತೃಪ್ತಿ ಸಿಗಬೇಕು. ಒಂದು ಲಾಭ ವ್ಯಕ್ತಿತ್ವದ ಮೆರುಗನ್ನು ಹೆಚ್ಚಿಸುತ್ತದೆ. ವ್ಯಕ್ತಿತ್ವದ ಸೌಹಾರ್ದಕರ ಅನುಪಮತೆ ಲಾಭವನ್ನು ಒದಗಿಸಿಕೊಡುತ್ತದೆ. ಹೀಗಾಗಿ ಮನುಷ್ಯನ ಪ್ರಾರಬ್ಧಗಳ ನಿವಾರಣೆಗೆ ಬೇಕಾದ ವ್ಯಕ್ತಿತ್ವದ ಸಿದ್ಧಿಯು ಲಾಭವನ್ನು ಹೊಂದಿಕೊಂಡು ಲಾಭವು ವ್ಯಕ್ತಿತ್ವವನ್ನು ಸಂವರ್ಧಿಸಿಕೊಂಡು ಇರುತ್ತದೆ. 

ಶಂಕರ್‌ಪಿಳ್ಳೆ ಮತ್ತು ಕೋಟಿ ಕೋಟಿ ಧನಲಾಭ
ಶಂಕರ್‌ ಪಿಳ್ಳೆ ಕಡುಬಡತನ ಅನುಭವಿಸಿದ ವ್ಯಕ್ತಿ. ಅವರ 67ನೇ ವಯಸ್ಸಿನಲ್ಲಿ ಹೊರದೇಶದಲ್ಲಿ ವಾಸ ಮಾಡಿ ಸಂಪಾದನೆಯಲ್ಲಿ ತಂದೆತಾಯಿಗೆ ಹಣ ಕಳುಹಿಸಿಕೊಡುತ್ತಿದ್ದ ಅವರ ಮಗನಿಗೆ ಒಂದು ದೊಡ್ಡ ಆಸ್ತಿ ಸಿಕ್ಕಿತ್ತು. ವೃದ್ಧರಾಗಿದ್ದ ಶಂಕರ ಪಿಳ್ಳೆಗೆ ಇದು ತುಂಬಾ ಸಂತೋಷದ ಸಂಗತಿಯಾಗಿತ್ತು. ಮಗನ ಹೆಸರು ಷಣ್ಮುಖ ಪಿಳ್ಳಯ. ಇವರು ತುಂಬಾ ಧನವಂತ ಗಂಡಹೆಂಡತಿಯರ ಆರೈಕೆಯನ್ನು ಸ್ವಂತ ಮಗನಂತೆ ಮಾಡಿಕೊಂಡಿದ್ದ. ಆ ದಂಪತಿಗೆ ಅಪಾರ ಪ್ರಮಾಣದ ಉತ್ಪಾದನೆ ಇತ್ತು. ಸಂಪಾದನೆ ಚೆನ್ನಾಗಿತ್ತು ಅತ್ಯಂತ ಶ್ರೀಮಂತರ ಪಾಲಿಗೆ ಸೇರಿದ ಪ್ರಭಾವಶಾಲಿ ಕುಟುಂಬ ಅದು. ಕೊರತೆ ಎಂದರೆ ಮಕ್ಕಳಿರಲಿಲ್ಲ. ಅವರ ಆಸ್ತಿಗಾಗಿ ಹೊಂಚು ಹಾಕಿ ಕುಳಿತವರು ಸಾವಿರಾರು ಮಂದಿ. ಮಕ್ಕಳಿಲ್ಲದ ಶ್ರೀಮಂತ ದಂಪತಿಯನ್ನು ಮೆಚ್ಚಿಸಲು ಅವರ ಆಸ್ತಿಯ ಬಗ್ಗೆ ಕನಸು ಕಂಡಿದ್ದವರ ನಾಟಕದ ರೀತಿ ಒಂದಲ್ಲಾ, ಎರಡಲ್ಲಾ ನಾನಾ ಬಗೆಯವು. ಕೋಟಿಗಟ್ಟಲೆ ಆಸ್ತಿಯನ್ನು ಹೊಂದಿದ್ದ ಮಕ್ಕಳಿಲ್ಲದ ಈ ದಂಪತಿಗೆ ನಾಟಕ ಯಾವುದು, ನಿಜವಾದ ಗೌರವಾದರಗಳು ಯಾವುವು ಎಂಬುದು ತಿಳಿಯದ್ದೇನಲ್ಲ. ಕೇರಳದಿಂದ ಕೆಲಸ ಹುಡುಕಿ ಬಂದಿದ್ದ ಷಣ್ಮುಗಂ ಪಿಳ್ಳೆ ಬಗ್ಗೆ ಈ ದಂಪತಿಗೆ ಅಪಾರ ಮಮತೆ ಬೆಳೆದಿತ್ತು. ಯಾಕೆಂದರೆ ನಿರ್ವಂಚನೆಯಿಂದ ತಮ್ಮ ಸೇವೆ ಮಾಡುತ್ತಿದ್ದ ಷಣ್ಮುಗನನ್ನು ತಮ್ಮ ಸ್ವಂತ ಮಗನೇ ಎಂಬ ರೀತಿಯಲ್ಲಿ ಪರಿಭಾವಿಸಿದರು. ನಂಬಿದವ ನಂಬಿ ಬಿಟ್ಟರೆ ಬಿಡಿ, ಹೊರದೇಶದಿಂದ ಬಂದ ಹುಡುಗ ನಂತರ ತೊಳಲಾಟ ಅನುಭವಿಸಬಾರದೆಂದು ಭಾರತಕ್ಕೇ ಬಂದು ತಮ್ಮ ಜೀವಿತಾವಧಿಯಲ್ಲೇ ಸುಮಾರು ಇಪ್ಪತ್ತು ಕೋಟಿಯಷ್ಟು ಧನಕನಕ ಆಸ್ತಿ ಜಮೀನು ಮನೆಗಳನ್ನು ಷಣ್ಮುಖನ ಹೆಸರಿಗೆ ಮಾಡಿದರು. ಅಲ್ಲದೆ ಅವನ ತಂದೆ ತಾಯಿಗಳಾದ ಶಂಕರಪಿಳ್ಳೆ ದಂಪತಿಗೆ ಸುಮಾರು ಮೂರು ಕೋಟಿ ಇನಾಮನ್ನು ಅವರ ಖಾತೆಗೆ ಜಮಾ ಮಾಡಿದರು. ಇನ್ನೂ ಆಶ್ಚರ್ಯ ಎಂಬಂತೆ ಈ ವಹಿವಾಟಿನ ಸಂದರ್ಭದ ಯಾವ ಯಾವ ರೀತಿಯ ಸುಂಕಗಳು ತೆರಿಗೆಗಳಿವೆಯೋ ತಾವೇ ಭರಿಸಿದರು. ಒಬ್ಬ ನಿಷ್ಕಳಂಕ ಸೇವಾ ಮನೋಭಾವದ ಈ ಹುಡುಗನಿಗೆ ಇಷ್ಟೊಂದು ದೊಡ್ಡ ಲಾಭ ಒದಗಿ ಬಂದಿತ್ತು. ಕೇಳರಿಯದ ಶ್ರೀಮಂತಿಕೆಯೊಂದು ಶಂಕರ ಪಿಳ್ಳೆಗೆ ಇಳಿವಯಸ್ಸಿನಲ್ಲಿ ದೊರಕಿದ್ದು ಕಂಡು ಆದ ಸಂತೋಷ ಅಷ್ಟಿಷ್ಟಲ್ಲ.  ಮಗನ ಮದುವೆಯನ್ನು ಮುಗಿಸಬೇಕು. ಆಗಲೇ ಮಗನಿಗೆ ವಯಸ್ಸು 27. ಹದಿನೆಂಟರ ವಯಸ್ಸಿನಲ್ಲೇ ದೂರ ದೇಶಕ್ಕೆ ಹೋಗಿದ್ದಾನೆ. ದೇವರ ದಯದಿಂದ ಎಲ್ಲವೂ ಇಲ್ಲಿಯತನಕ ಬಂದು ಬದುಕು ಗೆದ್ದಿತು ಎಂದು ಆನಂದಿಸಿದ.
ಬದುಕಿನ ಅರ್ಥ ಏನು? ಆಕಾಶ ಕುಸಿದುಬಿತ್ತು. ಧನದ ರಾಶಿಯು ಬಡ ಶಂಕರ ಪಿಳ್ಳೆಗೆ ಮಗನ ಕಾರಣಕ್ಕಾಗಿ ಬಂತು. ಆದರೆ ವಿಧಿ ಮತ್ತೂಂದನ್ನು ಬರೆದಿತ್ತು. ಮಕ್ಕಳಿಲ್ಲದ ಯಜಮಾನ ಒಡತಿಯ ಜೊತೆ ಕಾರಿನಲ್ಲಿ ಪಯಣಿಸುತ್ತಿದ್ದಾಗ ಷಣ್ಮುಖಪಿಳ್ಳೆ„ಯೂ ಸೇರಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. 
ಇಅದು ಕಥೆಯಲ್ಲ ನಡೆದ ಘಟನೆ. ಜೀವನ ಕಥೆಗಿಂತಲೂ ಹೆಚ್ಚು ರೋಚಕ. ಕಥೆಗಿಂತಲೂ ಹೆಚ್ಚು ಜಟಿಲ ಎಂಬುದನ್ನು ನಾವು ನೆನಪಿಡಬೇಕು. ಶಂಕರಪಿಳ್ಳೆಗೆ ಏನಾಗಿರಬೇಕು. ಮಗನಿಗೆ ಮಕ್ಕಳಿಲ್ಲದ ಯಜಮಾನ ತನ್ನ ಆಸ್ತಿಯ ಶೇ 75ರಷ್ಟು ವಿಲ್‌ ಮಾಡಿದ್ದ. 

ಶಂಕರ ಪಿಳ್ಳೆಗೆ ಹೀಗೆ ದೊಡ್ಡ ಲಾಭವೇ ಬಂದಿತ್ತು. ಜೀವಮಾನದಲ್ಲಿ ಕೋಟಿಗಟ್ಟಲೆ ಜನರಿಗೆ ಸಂಪಾದಿಸಲು ಸಾಧ್ಯವಾಗದಷ್ಟು ದೊಡ್ಡ ಲಾಭ ಆದರೆ ಯಾರಿಗೆ ಬೇಕು? ಈ ಆಸ್ತಿ ಎಂಬ ರೀತಿಯಲ್ಲಿ ಬಂತು. ಈಗಲೂ ವೃದ್ಧ ಶಂಕರಪಿಳ್ಳೆ ಇದ್ದಾರೆ. ಜಾತಕ ನೋಡುವ ಅವಕಾಶ ಸಿಕ್ಕಿತ್ತು ನನಗೆ. ಆದರೆ ಒದಗಿದ ಲಾಭಕ್ಕೆ ಕಲ್ಲು ಹಾಕಿದ್ದು ರಾಹುದೋಷ. ಯಾವ ಪುರುಷಾರ್ಥಕ್ಕೆ ಈ ರೀತಿ ಲಾಭ ಬರಬೇಕು ಮಗನನ್ನು ಕಳೆದುಕೊಂಡ ಪಿಳ್ಳೆಯ ರೋದನ ಅಂತಿಥದ್ದಲ್ಲ. ಸ್ಪಷ್ಟವಾದ ದೊಡ್ಡ ದೋಷ ರಾಹುದೋಷ. ಇನ್ನೂ ಹಲವಾರು ರೀತಿಯ ದೋಷಗಳಿದ್ದವು. ಷಣ್ಮುಖ ಪಿಳ್ಳೆ ಯಜಮಾನನಿಗೂ ಪಿತೃದೋಷ, ಸಂತನಹೀನತೆಯ ದೋಷ, ಕೇಮದ್ರುಮ ದುರ್ಯೋಗ ಇತ್ಯಾದಿ ಇದ್ದವು. ನಿಶ್ಚಿತ ನೆಲೆ ಇಲ್ಲದೆ ಕಟ್ಟಿದ ಸಾಮ್ರಾಜ್ಯವಾಗಿತ್ತು. ಅವರ ಲಾಭದ ಅಗಾಧತೆ ಧನಬಲ ಇತ್ಯಾದಿಗಳೆಲ್ಲ ಒಂದು ನಿಟ್ಟಿನಿಂದ ಶೂನ್ಯವೇ ಸರಿ. ಆದರೂ ಬದುಕನ್ನು ಒಂದು ನಿರೀಕ್ಷೆಯೊಂದಿಗೆ ಎದುರಿಸಬೇಕು. ಇದು ಮೊದಲೇ ಬರೆದಿಟ್ಟ ಹಸ್ತಪ್ರತಿಯಂತೆ ಈ ಬದುಕು. ಎಲ್ಲಿ ತೆರೆಗಳು ಮುಳುಗಿಸಬಹುದು. ನಾವೆಗಳು ದಡ ತಲುಪಿಸಬಹುದು ತಿಳಿಯಲಾಗದು.
 
ಇಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ 
ಈ ಜಗತ್ತಿನಲ್ಲಿ ಮನುಷ್ಯನೊಬ್ಬನೇ ಸಂಪಾದಿಸುವ ಪ್ರಾಣಿ. ನಾಗರೀಕತೆಯನ್ನು ಕಟ್ಟಿಕೊಂಡ ಪ್ರಾಣಿ. ಹಣದ ಬದಲಾವಣೆ, ವಹಿವಾಟು, ಕಾರ್ಯತಂತ್ರ, ಹಣಕಾಸಿನ ಕಾರ್ಯಸೂಚಿ ಬಿಸಿನೆಸ್‌ ಇತ್ಯಾದಿ ಇತ್ಯಾದಿ ಬೇರೆ ಜೀವಿಗಳಿಗೆ ತಿಳಿಯದು. ಅವು ಸುಖವಾಗಿದೆಯೇ? ಇಲ್ಲಾ ಮನುಷ್ಯ ಸುಖವಾಗಿದ್ದಾನೆಯೇ? ಹಾಗಾದರೆ ಯಾಕೆ ಸುಖವಾಗಿಲ್ಲ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವಿಲ್ಲ. ಭಾರತದ ಪ್ರಧಾನಿ ಭಾರತದಲ್ಲಿನ ಕಪ್ಪುಹಣ ಹೊರತರಲು ನಡೆಸಿದ ಸರ್ಕಸ್‌ ಅಂತಿಂಥ ರೀತಿಯದ್ದಲ್ಲ. ಆದರೆ ಆತ್ಮಪ್ರಾಮಾಣ್ಯದಿಂದ ಮೋದಿ ನಡೆಸಿದ ಪ್ರಯತ್ನ ಇದು ಎಂದು ಹೇಳಲಾಗಿದ್ದರೂ ಈ ದಿಟ್ಟ ಕ್ರಮ ಸೋಲನ್ನೇ ಕಟ್ಟಿಕೊಟ್ಟಿತೋ ಲಾಭವನ್ನೇ ತಂದಿತೋ ಸೋಲಾಗಿದ್ದರೆ ಏಕೆ ಸೋಲಾಯಿತು? ಗೆಲುವಾಗಿದ್ದರೆ ಹೇಗೆ ಗೆಲುವಾಯಿತು? ಇತ್ಯಾದಿ ಪ್ರಶ್ನೆಗಳು ಇದ್ದೇ ಇವೆ. 

ಲೆಕ್ಕಾಚಾರ ಮೀರಿ ಹೆಚ್ಚಿನ ಹಣ ಬ್ಯಾಂಕಿಗೆ ಬಂತು. ಕಪ್ಪು ಹಣದ ಕುಳಗಳು ಯಾರು ಎಂಬುದನ್ನು ತಿಳಿಯಲು ಆಗಲಿಲ್ಲ. ಯಾರ್ಯಾರ ಮೇಲೆಲ್ಲಾ ತೆರಿಗೆ ಅಧಿಕಾರಿಗಳಿಂದ ಅಥವಾ ಭ್ರಷ್ಟಾಚಾರ ತಡೆ ನಿಗ್ರಹ ದಳದಿಂದ ದಾಳಿ ನಡೆಯಿತು ಗೊತ್ತಾಗಲಿಲ್ಲ. ನೋಟಿನ ರದ್ಧತಿಯ ಹೊರತಾಗಿಯೂ ಭ್ರಷ್ಟರನ್ನು ಬೆನ್ನು ಹತ್ತವಂಥ ಶಕ್ತಿ ಭಾರತದಂಥ ಬಲಿಷ್ಠ ರಾಷ್ಟ್ರ ತನಿಖಾ ದಳಗಳಿಗೆ ಇದ್ದೇ ಇದೆಯಲ್ಲವೇ? ಆದರೂ ಮೋದಿ ಇಂಥದೊಂದು ದ್ರಾವಿಡ ಪ್ರಾಣಾಯಾಮ ನಡೆಸಿದರು. ನಾವೆಲ್ಲಾ ತಿಳಿಯಬೇಕಾದ್ದು ಕಪ್ಪು ಹಣವೂ ಪ್ರಾರಬ್ಧವನ್ನು ನಿರ್ಮಿಸುತ್ತದೆ. ಒಟ್ಟಿನಲ್ಲಿ ಪ್ರಾಪ್ತಿ ಎಂಬುದು ಇರಬೇಕು. ಕಳ್ಳ ಹಣ ಹೊರತರುತ್ತೇವೆ ಎಂದು ವಿಶ್ವಾಸದಿಂದ ಮೋದಿ ಹೇಳಿದರೂ ಲಕ್ಷಾಂತರ ಮಂದಿ ತೊಂದರೆ ಇರದಂತೆ ಸಮಸ್ಯೆಯನ್ನು ನಿವಾರಿಸಿಕೊಂಡರು ಎಂದು ಹೇಳಲಾಗುತ್ತಿದೆಯಲ್ಲಾ? ಇದು ಹೇಗೆ ಸಾಧ್ಯವಾಯಿತು? ನಮ್ಮ ವ್ಯಕ್ತಿತ್ವವೇ ನಮ್ಮ ಪ್ರಾಮಾಣಿಕತೆಯನ್ನು ಭ್ರಷ್ಟಾಚಾರವನ್ನು ಪೋಸುವಂಥದ್ದು. ಪ್ರಾಮಾಣಿಕನಿಗೆ ಭಯವೇ ಇಲ್ಲವೇ ಹಾಗಾದರೆ? ತೊಂದರೆಗೊಳಗಾದವರೇ ಹರಿಶ್ಚಂದ್ರ, ನಳ, ಶೀಬಿ, ಧರ್ಮರಾಯ, ರಾಮಚಂದ್ರ ಮುಂತಾದವರು. ಹಾಗಾದರೆ ಲಾಭದ ಪಾತ್ರ ಮತ್ತು ಸಾರ್ಥಕತೆ ಆಯಾ ಮನುಷ್ಯನ ನಿಲುವುಗಳ ಮೇಲೆ ನಿಂತಿದೆ.

ಪ್ರಾರಬ್ಧಗಳ ನಿವಾರಣೆ ಲಾಭ ಬಂದ ಮಾತ್ರಕ್ಕೆ ಸಾಧ್ಯವಾಗುವುದಿಲ್ಲ. ಧನಸಿದ್ಧಿಯ ಹೊರತಾಗಿಯೂ ಇದ್ದಿರುವುದಿಲ್ಲ. ಮೋದಿಯವರು ಎಲ್ಲಾ ರೀತಿಯ ರಾಜಕೀಯ ಶಕ್ತಿಯನ್ನು ಸಂಪಾದಿಸಿಕೊಳ್ಳುತ್ತಿದ್ದಾರೆಯೇ? ಅತ್ಯಂತ ಬಲಾಡ್ಯರಾಗಿ ಭಾರತಕ್ಕೆ ದೊಡ್ಡ ರೀತಿಯ ಲಾಭ ಎಲ್ಲರಿಗೂ ಒದಗುವಂತೆ ಮಾಡಬಲ್ಲರೇ? ಮೋದಿಯವರ ವ್ಯಕ್ತಿತ್ವಕ್ಕೆ ಮನ ಸೋತವರು ಅವರಿಂದ ಇದು ಸಾಧ್ಯ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಮೋದಿ ಎಂದರೆ ಅಲರ್ಜಿ ಇರುವವರು ಇನ್ನೊಂದು ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಾರೆ. ನಮ್ಮ ಜೀವನದ ಲಾಭವೂ ನಮ್ಮ ಪಾಲಿನ ಪ್ರಾಪ್ತಿಯ ಪಾಲು ಇಷ್ಟು ಎಂಬುದಕ್ಕೆ ಸೀಮಿತ. 

 ಅನಂತಶಾಸ್ತ್ರಿ

ಟಾಪ್ ನ್ಯೂಸ್

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Apologize or give 5 crores: Another threat to actor Salman

Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.