ಮತ್ತೆ ಬರುತ್ತಿದೆ ಪ್ರೊ ಕಬಡ್ಡಿ 


Team Udayavani, May 19, 2018, 12:05 PM IST

21.jpg

ಭಾರತದಲ್ಲಿ ಕ್ರಿಕೆಟ್‌ ಮಂತ್ರ ತಾರಕಕ್ಕೇರಿದ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದೇ ಪ್ರೊ ಕಬಡ್ಡಿ. ಅಭಿಮಾನಿಗಳಿಗೆ ಕಚಗುಳಿ ನೀಡಿದ್ದು, ರೋಚಕತೆಯ ಮಳೆಯಲ್ಲಿ ಪುಳಕ ನೀಡಿದ್ದು ಇದೇ ಪ್ರೊ ಕಬಡ್ಡಿ. 

ಪ್ರೊ ಕಬಡ್ಡಿಯ ಶುರುವಾತಿನಲ್ಲಿ ಈ ಆಟ, ನಡೆಯದು, ಈ ಟೂರ್ನಿ ಕ್ಲಿಕ್‌ ಆಗದು, ಪ್ರೊ ಕಬಡ್ಡಿಯಂಥ ಆಟ ತುಂಬಾ ದಿನ ಸಾಗದು ಎನ್ನುವ ವ್ಯಾಪಕ ಅಪಸ್ವರ, ಟೀಕೆಗಳು ಕ್ರೀಡಾ ವಲಯದಿಂದ ಕೇಳಿ ಬಂದಿದ್ದವು. ಇದೆಲ್ಲ ಟೀಕೆಗಳ ನಡುವೆ ಲೀಗ್‌ ಕೊನೆಗೂ ಆರಂಭವಾಯಿತು. ನೋಡ ನೋಡುತ್ತಾ ಹೋದಂತೆ ಕೆಲವೇ ದಿನಗಳಲ್ಲಿ ಕೂಟ ವ್ಯಾಪಕ ಜನಮನ್ನಣೆಗಳಿಸಿತು. ಟಿಆರ್‌ಪಿ ರೇಟ್‌ ಹೆಚ್ಚಿಸಿಕೊಂಡಿತು. ನಗರದಿಂದ ಹಿಡಿದು ಗ್ರಾಮೀಣ ಭಾಗದವರೆಗೆ ಪ್ರತಿ ಮನೆಯಲ್ಲೂ ಪ್ರೊ ಕಬಡ್ಡಿಯದ್ದೇ ಚರ್ಚೆ ಶುರುವಾಯಿತು. ಗಂಡಸರು, ಹೆಂಗಸರು, ಮಕ್ಕಳು, ದೊಡ್ಡವರೆನ್ನದೆ ಎಲ್ಲರೂ ಸಂಜೆಯ ಹೊತ್ತಲ್ಲಿ  ಟೀವಿ ಮುಂದೆ. ಮನೆಯಲ್ಲಿ ಟೀವಿ ಇಲ್ಲದವರು ಅಂಗಡಿಗಳ ಮುಂದೆ. ಹೀಗೆ ಗುಂಪಿನಲ್ಲಿ ನಿಂತು ಪ್ರೊ ಕಬಡ್ಡಿ ಆಟದ ಮಜಾ ಅನುಭವಿಸಿದವರು ಅದೆಷ್ಟೋ ಮಂದಿ. ಹೀಗೆ ಸಾಗಿದ ಪ್ರೊ ಕಬಡ್ಡಿ ಇದೀಗ 5 ಆವೃತ್ತಿಯನ್ನು ಯಶಸ್ವಿಯಾಗಿ ಪೂರೈಸಿದೆ. 6ನೇ ಆವೃತ್ತಿಯನ್ನು ಬರಮಾಡಿಕೊಳ್ಳಲು ಸಜ್ಜಾಗುತ್ತಿದೆ. ಮುಂಬರುವ ಅಕ್ಟೋಬರ್‌ನಲ್ಲಿ ಲೀಗ್‌ ಆರಂಭವಾಗಲಿದ್ದು ಒಟ್ಟಾರೆ 12ಪ್ಲಸ್‌ ತಂಡಗಳು ಕೂಟದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅದಕ್ಕೂ ಮೊದಲು ಮೇ 30, 31ರಂದು ಎರಡು ದಿನ ಮುಂಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿನಲ್ಲಿ ವಿವಿಧ ಫ್ರಾಂಚೈಸಿಗಳು ಒಟ್ಟಾರೆ 46.99 ಕೋಟಿ ರೂ. ಖರ್ಚು ಮಾಡಲಿವೆ. 

ಹರಾಜಿನಲ್ಲಿ ಒಟ್ಟಾರೆ 422 ಆಟಗಾರರು
ಇದುವರೆಗೆ ವಿವಿಧ ಫ್ರಾಂಚೈಸಿಗಳು ಒಟ್ಟಾರೆ 21 ಆಟಗಾರರನ್ನು ಉಳಿಕೆ ಮಾಡಿಕೊಂಡಿವೆ. ಉಳಿದಂತೆ ಎಫ್ಕೆಎಚ್‌ (ಫ್ಯೂಚರ್‌ ಕಬಡ್ಡಿ ಹೀರೋಸ್‌) ಯೋಜನೆಯಡಿ 87 ಆಟಗಾರರು, 14 ರಾಷ್ಟ್ರಗಳ 58 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 422 ಆಟಗಾರರು ಈ ಸಲದ ಹರಾಜಿನಲ್ಲಿರಲಿದ್ದಾರೆ ಎನ್ನುವುದು ವಿಶೇಷ. 

58 ವಿದೇಶಿ ಆಟಗಾರರು ಆಕರ್ಷಣೆ
ಇರಾನ್‌, ಬಾಂಗ್ಲಾದೇಶ, ಜಪಾನ್‌, ಕೀನ್ಯಾ, ರಿಪಬ್ಲಿಕ್‌ ಆಫ್ ಕೊರಿಯಾ, ಮಲೇಷ್ಯಾ ಹಾಗೂ ಶ್ರೀಲಂಕಾ ತಂಡಗಳ ಆಟಗಾರರು ಹರಾಜಿನಲ್ಲಿದ್ದಾರೆ. ಒಟ್ಟಾರೆ 14 ರಾಷ್ಟ್ರದಿಂದ 58 ವಿದೇಶಿ ಆಟಗಾರರು ಪ್ರೊ ಕಬಡ್ಡಿಗೆ ಆಗಮಿಸಲಿದ್ದಾರೆ. 

ವಿವಿಧ ತಂಡಕ್ಕೆ ಉಳಿಕೆ ಆದವರು?
ಸುರ್ಜಿತ್‌ ಸಿಂಗ್‌, ಮಣೀಂದರ್‌ ಸಿಂಗ್‌ (ಬೆಂಗಾಲ್‌ ವಾರಿಯರ್), ರೋಹಿತ್‌ ಕುಮಾರ್‌ (ಬೆಂಗಳೂರು ಬುಲ್ಸ್‌), ಮಿರಾಜ್‌ ಶೇಖ್‌ (ದಬಾಂಗ್‌ ಡೆಲ್ಲಿ), ಸಚಿನ್‌, ಸುನಿಲ್‌ ಕುಮಾರ್‌,    
  ಮಹೇಂದ್ರ ಗಣೇಶ್‌ ರಜಪೂತ್‌ (ಗುಜರಾತ್‌ ಫಾರ್ಚೂನ್‌ಜೈಂಟ್ಸ್‌), ಕುಲದೀಪ್‌ ಸಿಂಗ್‌ (ಹರ್ಯಾಣ ಸ್ಟೀಲರ್), ಪರ್‌ದೀಪ್‌ ನರ್ವಲ್‌, ಜೈದೀಪ್‌, ಜವಾಹರ್‌ ದಾಗರ್‌, ಮನೀಶ್‌ ಕುಮಾರ್‌ (ಪಾಟ್ನಾ ಪೈರೇಟ್ಸ್‌), ಸಂದೀಪ್‌ ನರ್ವಲ್‌, ರಾಜೇಶ್‌ ಮೊಂದಲ್‌, ಮೋರೆ, ಗಿರೀಶ್‌ ಎರ್ನಾಕ್‌ (ಪುನೇರಿ ಪಲ್ಟಾನ್‌), ಅಜಯ್‌ ಠಾಕೂರ್‌, ಅಮಿತ್‌ ಹೂಡಾ, ಸಿ.ಅರುಣ್‌ (ತಮಿಳ್‌ ತಲೈವಾಸ್‌), ನಿಲೇಶ್‌ ಸಾಳುಂಕೆ, ಮೊಹ್ಸಿàನ್‌ (ತೆಲುಗು ಟೈಟಾನ್ಸ್‌)

ಹೇಮಂತ್‌ ಸಂಪಾಜೆ 

ಟಾಪ್ ನ್ಯೂಸ್

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.