ಪ್ರೊಕಬಡ್ಡಿಯ ಮ್ಯಾಸ್ಕಾಟ್ ಮ್ಯಾನ್
Team Udayavani, Oct 28, 2017, 3:55 AM IST
ಪ್ರೊಕಬಡ್ಡಿ ಎಂದರೆ ಬರಿ ಆಟವಲ್ಲ. ಧುನಿಯಾಕಾ ಧಡ್ಕನ್. ಮನೋರಂಜನೆಯ ಸವಿ. ಕಬಡ್ಡಿಗೆ ಒಂದು ನೆಲೆ, ವಿಶ್ವದಲ್ಲೇ ಹೆಗ್ಗುರುತು ಸಿಗಬೇಕು ಎನ್ನುವ ಆಶಯದೊಂದಿಗೆ ಪ್ರೊಕಬಡ್ಡಿ ಹುಟ್ಟು ಹಾಕಲಾಯಿತು.
ಕಬಡ್ಡಿಯ ನ್ನು ಕೇವಲ ಆಟವಾಗಿ ನೋಡದೆ ಅಭಿಮಾನಿಗಳ ರಂಜನೆಗಾಗಿ ಬಗೆಬಗೆಯ ಮನೋರಂಜನಾ ಕಾರ್ಯಕ್ರಮಗಳನ್ನೂ ಶುರು ಮಾಡಲಾಯಿತು. ಅಂತಹುದರಲ್ಲಿ ಮುಖ್ಯವಾಗಿದ್ದು ಮ್ಯಾಸ್ಕಾಟ್ ಕೂಡ ಒಂದು. ಪ್ರತಿ ತಂಡಗಳಿಗೂ ಅದರದ್ದೇ ಆದ ಇತಿಹಾಸ ಇರುತ್ತದೆ. ಈ ಹಿನ್ನಲೆಯಲ್ಲಿ ಮ್ಯಾಸ್ಕಾಟ್ (ಗೊಂಬೆ)ಗಳನ್ನು ತಯಾರು ಮಾಡಲಾಯಿತು. ಪ್ರತಿ ಫ್ರಾಂಚೈಸಿಗಳು ಪೊ›ಕಬಡ್ಡಿಯಲ್ಲಿ ಮ್ಯಾ ಸ್ಕಾಟ್ ಅನ್ನು ಬಳಸಿಕೊಂಡರು. ಇದು ಬಾರಿ ಜನಪ್ರಿಯವಾಯಿತು. ಇಂತಹ ಪೂರ್ಣಕಾಲಿಕ ಮ್ಯಾಸ್ಕಾಟ್ ಅನ್ನು ದೇಶದಲ್ಲಿ ಮೊದಲ ಸಲ ಕ್ರೀಡಾಕೂಟವೊಂದರಲ್ಲಿ ಧರಿಸಿದ್ದು ಎಂದರೆ ವಿವೇಕ್ ಗಾಯಕ್ವಾಡ್. ಅವರು ಎಂಟು ಕೆ.ಜಿಗೂ ಹೆಚ್ಚು ತೂಕವಿರುವ ಮ್ಯಾಸ್ಕಾಟ್ ವೇಷ ಹಾಕುತ್ತಾರೆ. ಡ್ಯಾನ್ಸ್ ಮಾಡಿ ಹಿರಿಯರು ಕಿರಿಯರೆನ್ನದೆ ಎಲ್ಲರನ್ನು ರಂಜಿಸುತ್ತಾರೆ. ಎಷ್ಟೋ ಮಕ್ಕಳಿಗೆ ಕೂಟದ ವೇಳೆ ಇವರನ್ನು ನೋಡುವುದೆಂದರೆ ದೊಡ್ಡ ಖುಷಿ.
ಯಾರಿವರು ವಿವೇಕ್?
ವಿವೇಕ್ ಗಾಯಕ್ವಾಡ್ ಮೂಲತಃ ಮುಂಬೈ ನವರು. ಅವರಿಗೆ ಶಿಕ್ಷಣದಲ್ಲಿ ಇದ್ದ ಆಸಕ್ತಿ ಅಷ್ಟ ಕ್ಕಷ್ಟೇ. ಮುಂದೆ ಅವರು ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರು. ಬಾಲ್ಯದಲ್ಲೇ ಅವರಿಗೆ ಡ್ಯಾನ್ಸ್ ಬಗ್ಗೆ ಅಪಾರ ಆಸಕ್ತಿ ಇತ್ತು. ಹೀಗಾಗಿ ಡ್ಯಾನ್ಸ್ ಬಗ್ಗೆಯೆ ಹೆಚ್ಚಿನ ಗಮನವಹಿಸಿದರು. ಮುಂದೆ ಅವರಿಗೆ ಅಮೆರಿಕದಲ್ಲಿ ವಿಶ್ವ ಮಟ್ಟದ ಡ್ಯಾನ್ಸ್ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ಆದರೆ ಅಷ್ಟು ದೂರ ಹೋಗಲು ಇವರ ಬಳಿ ಹಣ ಇರಲಿಲ್ಲ. ಸ್ನೇಹಿತರು. ತನ್ನವರು ಯಾರೂ ಅವರ ಕೈಹಿಡಿಯಲಿಲ್ಲ, ಬಳಿಕ ಅವರು ಸಾಲ ಮಾಡಿ ಅಮೆರಿಕಕ್ಕೆ ತೆರಳಿದರು. ಅದರಲ್ಲಿ ಭಾಗವಹಿಸಿ ಬಂದ ಬಳಿಕ ಅವರಿಗೆ ಅವಕಾಶ ಬರಲು ಶುರುವಾಯಿತು. ಅದರಲ್ಲೂ ಮುಖ್ಯವಾಗಿ ಸಿಕ್ಕಿದ್ದು ಪೊ›ಕಬಡ್ಡಿಯಲ್ಲಿ ಮ್ಯಾ ಸ್ಕಾ ಟ್ ಆಗಿ ರಂಜಿಸುವ ಸುವರ್ಣಾವಕಾಶ. ಸಿಕ್ಕಿದ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡ ಅವರು ಇಂದು ಪೊ›ಕಬಡ್ಡಿ ಕುಟುಂಬದ ಒಂದು ಭಾಗವೇ ಆಗಿದ್ದಾರೆ. ಜನರನ್ನು ರಂಜಿಸುವುದು, ಆಡುವ ತಂಡವನ್ನು ಮ್ಯಾ ಸ್ಕಾ ಟ್‌ನೊಂದಿಗೆ ಪೋ›ತ್ಸಾಹಿಸುವುದು ಅವರ ಮುಖ್ಯ ಕೆಲಸವಾಗಿದೆ.
ವಿವೇಕ್‌ರದ್ದು ತೂಕದ ಡ್ಯಾನ್ಸ್
ಒಂದು ದಿನ ಎರಡು ಪಂದ್ಯ. ಉಸಿರು ಬಿಗಿ ಹಿಡಿಸುವ ವಾತಾವರಣ. ಮ್ಯಾ ಸ್ಕಾ ಟ್ ಧರಿಸುವುದರಿಂದದೇಹಕ್ಕೆ ಸರಿಯಾಗಿ ಗಾಳಿಯೂ ಸಿಗುವುದಿಲ್ಲ. ಬೆವರು ಕಿತ್ತು ಬರುವಂತಹ ವಾತಾವರಣ. ಇದರ ನಡುವೆ 8 ಕೆ.ಜಿಗೂ ಹೆಚ್ಚು ತೂಕವಿರುವ ಮ್ಯಾ ಸ್ಕಾ ಟ್ ಧರಿಸಿ ಡ್ಯಾನ್ಸ್ ಮಾಡಬೇಕು. ಅಭಿಮಾನಿಗಳನ್ನುರಂಜಿಸಬೇಕು. ಇಷ್ಟೆಲ್ಲ ಸವಾಲುಗಳ ನಡುವೆವಿವೇಕ್ ಮಿಂಚುತ್ತಾರೆ ಎನ್ನುವುದು ವಿಶೇಷ.
ವಿವಿಧ ತಂಡಗಳಿಗೆ ಮ್ಯಾಸ್ಕಾಟ್
ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್, ದಬಾಂಗ್ ದಿಲ್ಲಿ, ಗುಜರಾತ್ ಫಾರ್ಚೂನ್‌ಜೈಂಟ್ಸ್, ಹರ್ಯಾಣ ಸ್ಟೀಲರ್, ತೆಲುಗು ಟೈಟಾನ್ಸ್ ಹಾಗೂ ಯುಪಿ ಯೋಧಾ ತಂಡಗಳಿಗೆ ಮ್ಯಾ ಸ್ಕಾ ಟ್ ಆಗಿ ಕೆಲಸ ಮಾಡಿದ್ದಾರೆ.
ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.