ರೈನಾಗೆ ಅಸಾಧಾರಣ ಪ್ರತಿಭೆಯಿದೆ, ಅದೃಷ್ಟವಿಲ್ಲ!


Team Udayavani, Dec 1, 2018, 8:41 AM IST

45.jpg

ಉತ್ತರ ಪ್ರದೇಶದವರಾದ ಎಡಗೈ ಬ್ಯಾಟ್ಸ್‌ಮನ್‌ ಸುರೇಶ್‌ ರೈನಾರಿಗೀಗ 32 ವರ್ಷ. ಮೊನ್ನೆ ನವೆಂಬರ್‌ 27ಕ್ಕೆ ಅವರು ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. 226 ಏಕದಿನ ಪಂದ್ಯಗಳು, 78 ಟಿ20 ಪಂದ್ಯಗಳು ಹಾಗೂ 18 ಟೆಸ್ಟ್‌ ಪಂದ್ಯಗಳನ್ನಾಡಿರುವ ರೈನಾ ಅವರಿಗೀಗ ಭವಿಷ್ಯದ ಮುಂದೆ ದೊಡ್ಡ ಪ್ರಶ್ನಾರ್ಥಕ ಚಿನ್ಹೆ ಎದುರಾಗಿದೆ. ಅವರನ್ನು ಆಸ್ಟ್ರೇಲಿಯಾ ಪ್ರವಾಸದ ಟಿ20 ಸರಣಿಗೆ ಆಯ್ಕೆ ಮಾಡಿಲ್ಲ. ಅಷ್ಟೇಕೆ, ಜುಲೈನಲ್ಲಿ ಇಂಗ್ಲೆಂಡ್‌ ವಿರುದ್ಧ ಏಕದಿನ ಅರಣಿ ಆಡಿದ ಮೇಲೆ ರೈನಾ ದೇಶದ ಪರ ಆಡಿಯೇ ಇಲ್ಲ! ಭಾರತ ತಂಡದ ನಾಯಕತ್ವವನ್ನು ಧೋನಿ ಬಿಟ್ಟಮೇಲೆ ಅವರ ಕೃಪಾದೃಷ್ಟಿ ಪಡೆದಿದ್ದ ಬಹುತೇಕ ಪ್ರತಿಭಾವಂತರು ಮಸುಕಾಗಿದ್ದಾರೆ. ಅದರಲ್ಲಿ ರೈನಾ ಎಂಬ ಅಪ್ಪಟ ಪ್ರತಿಭೆಯೂ ಒಂದು. ಅತ್ಯುತ್ತಮ ಫೀಲ್ಡರ್‌ ಎನ್ನಿಸಿಕೊಂಡಿರುವ ರೈನಾ ತಮ್ಮ ಕೆರಿಯರ್‌ ಉದ್ದಕ್ಕೂ ದೇಶದ ಪರ ಖಾಯಂ ಆಟಗಾರ ಎಂಬ ನೆಮ್ಮದಿ ಪಡೆದಿದ್ದೇ ಇಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 7,988 ರನ್‌ಗಳನ್ನು ಏಳು ಶತಕ ಹಾಗೂ 48 ಅರ್ಧ ಶತಕಗಳ ಸಹಿತ ಸಂಪಾದಿಸಿರುವ ರೈನಾ ಪ್ರಥಮ ದರ್ಜೆ ಹಾಗೂ ಕಿರಿಯರ ಕ್ರಿಕೆಟ್‌ನ ಯಶಸ್ಸಿನ ನಂತರ 18ರ ವಯಸ್ಸಿನಲ್ಲಿಯೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೂ ಮೊದಲ

ಪಂದ್ಯದ ಮೊದಲ ಎಸೆತದಲ್ಲಿಯೇ ಔಟ್‌! 2005ರ ಜುಲೈ 30ರಂದು ದಂಬುಲಾದಲ್ಲಿ
ಶ್ರೀಲಂಕಾ ಎದುರಿನ ಆ ಮೊದಲ ಏಕದಿನ ಪಂದ್ಯದಲ್ಲಿ ಮುತ್ತಯ್ಯ ಮುರುಳೀಧರನ್‌ ಎದುರು ಶೂನ್ಯ ಸಂಪಾದಿಸಿದರು, ನಿಜ. ಸಚಿನ್‌ ತೆಂಡೂಲ್ಕರ್‌, ಶಿಖರ್‌ ಧವನ್‌ರದ್ದೂ ಇದೇ ದಾಖಲೆ. ಆದರೆ ಸಚಿನ್‌ ಯಶಸ್ಸಿನ ಬೇರೆಯದೇ ಮಜಲು ತಲುಪಿದರೆ ರೈನಾರ ದುರದೃಷ್ಟದ ಟ್ಯಾಗ್‌ ಈ ಪಂದ್ಯದ “ಡಕ್‌ ಜೊತೆಗೇ ಹಿಂಬಾಲಿಸಿದೆ ಎಂದುಕೊಳ್ಳಲು ಕಾರಣಗಳಿವೆ.

ಶಾರ್ಟ್‌ ಆದ ಟೆಸ್ಟ್‌ ಕೆರಿಯರ್‌!
ಶಾರ್ಟ್‌ ಪಿಚ್‌ ಎಸೆತಗಳನ್ನು ಎದುರಿಸುವ ವಿಚಾರದಲ್ಲಿ ಸುರೇಶ್‌ ರೈನಾ ಎದುರಿಸುವ ಕಷ್ಟಗಳನ್ನು ವಿಶ್ವದ ಬೌಲರ್‌ಗಳು ಯಾವ ಪರಿ ಅರ್ಥ ಮಾಡಿಕೊಂಡಿದ್ದಾರೆ ಎಂದರೆ, ರೈನಾ ಬ್ಯಾಟಿಂಗ್‌ಗೆ ಇಳಿದ ಸಂದರ್ಭದಲ್ಲಿ ಸ್ಪಿನ್ನರ್‌ ಓರ್ವ ಬೌಲಿಂಗ್‌ ಮಾಡುತ್ತಿದ್ದರೆ ಅವನು ಕೂಡ ಆಫ್ ಸ್ಪಿನ್‌, ಲೆಗ್‌ ಬ್ರೇಕ್‌ ಬದಲು ಬೌನ್ಸರ್‌ ಎಸೆದು ಬಿಡಬಹುದು! ಈ ರೀತಿ ಶಾರ್ಟ್‌ ಪಿಚ್‌ ಎಸೆತಗಳ ಎದುರಿನ ದೌರ್ಬಲ್ಯ ಅವರ ಟೆಸ್ಟ್‌ ಕೆರಿಯರ್‌ಗಂತೂ ಕೇವಲ 18 ಅವಕಾಶಗಳ ಸಂಪುಟವಾಗಿದೆ. ಈ ವಯಸ್ಸಿನಲ್ಲಿ ಮತ್ತೂಂದು ಅವಕಾಶ ಅನುಮಾನವೇನೋ… ವಿಚಿತ್ರ ಎಂದರೆ, ರೈನಾ ತಾವಾಡಿದ ಮೊದಲ ಟೆಸ್ಟ್‌ನಲ್ಲಿಯೇ ಶತಕ ಬಾರಿಸಿದ ಗಮನಾರ್ಹ ಸಾಧನೆ ಮಾಡಿದ್ದಾರೆ! ಮತ್ತದೇ ಶ್ರೀಲಂಕಾ, 2010, ಟೆಸ್ಟ್‌ ಶತಕ. 2008ರ ಏಷ್ಯಾ ಕಪ್‌ನಲ್ಲಿ ಹಾಂಕಾಂಗ್‌ ಎದುರಿನ ಏಕದಿನ ಪಂದ್ಯದಲ್ಲಿ ರೈನಾ ಶತಕ. 2010ರ ಐಸಿಸಿ ಟಿ20 ವಿಶ್ವಕಪ್‌ನ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಶತಕ ಬಾರಿಸಿದಾಗ ಇದೇ ರೈನಾ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಮೂರಂಕಿಯ ಸಾಧನೆ ಮಾಡಿದ ಪ್ರಪ್ರಥಮ ಭಾರತೀಯರಾದರು. ಗೌರವ ಸಿಕ್ಕಿತು, ತಂಡದ ಶಾಶ್ವತ ಸ್ಥಾನವಲ್ಲ!

ಐಪಿಎಲ್‌ ಎಂದರೆ ಐಶ್ವರ್ಯ!
ರೈನಾರ ಚಿನ್ನದ ದಿನಗಳೆಲ್ಲ ಬಂದಿದ್ದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ. ಈಗಾಗಲೇ ತಾವಾಡುವ ಚೆನ್ನೆç ಸೂಪರ್‌ ಕಿಂಗ್ಸ್‌ಗೆ ಮೂರು ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರೈನಾ 34 ಅರ್ಧ ಶತಕ ಹಾಗೂ 2 ಶತಕಗಳ ಜೊತೆ 4,985 ರನ್‌ ಕೂಡಿಸಿದ್ದಾರೆ. ಇದಕ್ಕೆ ಬೋನಸ್‌ ಸೇರಿಸಬೇಕೆ? 96 ಕ್ಯಾಚ್‌ ಹಾಗೂ 36 ವಿಕೆಟ್‌. ಇನ್‌ಫ್ಯಾಕ್ಟ್ ರೈನಾ ಐಪಿಎಲ್‌ನ ಗರಿಷ್ಠ ರನ್‌ ಸಂಪಾದಕ. ಊಹೂಂ, ಅಷ್ಟೇ ಅಲ್ಲ. ಅವರು ಗಳಿಸಿದ 7,929 ಟಿ20 ರನ್‌ಗಳು ದೇಶದಲ್ಲಿ ಅಗ್ರಸ್ಥಾನ ಪಡೆದಿದೆ. ಅವರ ಸಮಕಾಲೀನ ವಿರಾಟ್‌ ಕೊಹ್ಲಿ (7,809 ರನ್‌), ರೈನಾಗಿಂತ ಕೆಳಗಿದ್ದಾರೆ. ಇಬ್ಬರೂ ನಾಲ್ಕು ಟಿ20 ಶತಕಗಳನ್ನು ಸಂಪಾದಿಸಿರುವುದನ್ನು ಇಲ್ಲಿ ಪ್ರಾಸಂಗಿಕವಾಗಿ ನೆನಪಿಸಿಕೊಳ್ಳಬಹುದು.

ಕ್ರಿಕೆಟ್‌ ಕೆರಿಯರ್‌ ಸುಸೂತ್ರವಾಗಿ ನಡೆಯಲು ಅದೃಷ್ಟ ಬೇಕು. 2011ರ ಏಕದಿನ ವಿಶ್ವಕಪ್‌ ಗೆದ್ದ ಭಾರತೀಯ ತಂಡದ ಭಾಗವಾಗಿದ್ದ ರೈನಾ ಭಾರತದ ಸಫ‌ಲ ರನ್‌ ಚೇಸ್‌ನಲ್ಲಿ ದಾಖಲಾದ 55 ಪಂದ್ಯಗಳಲ್ಲಿ 66.6 ಸರಾಸರಿಯನ್ನು ಪಡೆದುಕೊಂಡಿದ್ದಾರೆ. ಸ್ಟ್ರೇಕ್‌ ರೇಟ್‌ 101.74. ಅದರಲ್ಲಿ ಎರಡು ಶತಕ ಹಾಗೂ 13 ಅರ್ಧ ಶತಕ. ಬ್ಯಾಟಿಂಗ್‌ನ ಕೆಳ ಹಂತದ ಕ್ರಮಾಂಕದಲ್ಲಿ ರೈನಾ ಬರುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ಕೇವಲ ವಿರಾಟ್‌ ಕೊಹ್ಲಿ, ಎಂ.ಎಸ್‌.ಧೋನಿ ಹಾಗೂ ರಾಯುಡು ರೈನಾಕ್ಕಿಂತ ಹೆಚ್ಚಿನ ಸರಾಸರಿಯನ್ನು ಹೊಂದಿದ್ದಾರೆ. ಸ್ಟ್ರೈಕ್‌ ರೇಟ್‌ ವಿಚಾರಕ್ಕೆ ಬಂದರೆ ರೈನಾ 105 ಸರಾಸರಿ ಹೊಂದಿರುವ ಸೆಹ್ವಾಗ್‌ಗಿಂತ ಒಂದು ಹೆಜ್ಜೆ ಮಾತ್ರ ಹಿಂದೆ ಇದ್ದಾರೆ.

ಕ್ರಿಕೆಟ್‌ ಕೆರಿಯರ್‌ನ ಸುಂದರ ನೆನಪುಗಳಲ್ಲಿ ಬದುಕಬಹುದು. ತಂಡದೊಳಗಿನ ಸ್ಥಾನ ಮಾತ್ರ ಸದ್ಯದ ಲಯವನ್ನು ಅವಲಂಬಿಸಿರುತ್ತದೆ. ರಾಷ್ಟ್ರೀಯ ತಂಡದೊಳಗೆ ಸ್ಥಾನ ಗಿಟ್ಟಿಸಲು ಮೊನ್ನೆ ಮೊನ್ನೆ ದೇವಧರ್‌ ಟ್ರೋμ ಒಂದು ಸಂದರ್ಭವನ್ನು ಒದಗಿಸಿಕೊಟ್ಟಿತ್ತು. ಸಿ ತಂಡದ ಪರ ಆಡಿದ ರೈನಾ ಮೂರು ಮ್ಯಾಚ್‌ಗಳ ಅಷ್ಟೇ ಸಂಖ್ಯೆಯ ಇನಿಂಗ್ಸ್‌ನಿಂದ ಗಳಿಸಿದ್ದು ನಾಲ್ಕು ರನ್‌! 1, 2 ಮತ್ತು 1 ರನ್‌. ಐಪಿಎಲ್‌ನಲ್ಲಿ ಈ ಬಾರಿಯೂ ರೈನಾ ರನ್‌ ಹೊಳೆ ಹರಿಸಬಹುದೇನೋ. ಆದರೆ ರಿಷಭ್‌ ಪಂತ್‌, ಪೃಥ್ವಿ ಶಾ, ಇಶಾನ್‌ ಕಿಶನ್‌ ಮೊದಲಾದ ಹೊಸ ನೀರಿನ ರಭಸದ ಎದುರು ರೈನಾ ನಿಲ್ಲುತ್ತಾರೆಯೇ ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ.

ಕೊನೆಯ ಕಿರಣ ಬಹುಶಃ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ರದ್ದೂ ಇಂತಹದ್ದೇ ಕಥೆ. ಧೋನಿ ಕಾಲಘಟ್ಟದಲ್ಲಿ ಅವರು ಪರದೆಯ ಆ ಕಡೆಗೇ ಹೆಚ್ಚು ಕಾಲ ವಿಶ್ರಾಂತಿ ಪಡೆಯಬೇಕಾಯಿತು. ಇಂತಿಪ್ಪ ಅವರೇ ಈಗ “ಬ್ಯಾಟ್ಸ್‌ಮನ್‌ ಪಾತ್ರದಲ್ಲಿ ವಾಪಸು ಬಂದಿದ್ದಾರೆ ಮತ್ತು ಸಫ‌ಲರಾಗುತ್ತಿದ್ದಾರೆ!

ರೈನಾ ದಾಖಲೆಗಳೇ ವಿಚಿತ್ರ!
ವೈರುಧ್ಯಗಳೇ ಹಾಗೆ, ಇದೇ ರೈನಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 23ರ  ಯೋಮಾನದಲ್ಲಿಯೇ ನಾಯಕ ಎನ್ನಿಸಿಕೊಂಡದ್ದನ್ನೂ ಕಾಣುತ್ತೇವೆ. ಅದೇ ಏಕದಿನದಲ್ಲಿ ಇನ್ನೊಂದು ರೀತಿ. ಸಚಿನ್‌ ಹೊರತುಪಡಿಸಿ ದರೆ ಹಿರಿಯ ವಯಸ್ಸಿನಲ್ಲಿ ನಾಯಕತ್ವ ಪಡೆದ ಆಟಗಾರ ರೈನಾ! ನೆನಪುಗಳನ್ನು ಕಲಕುವುದಾದರೆ, 2011ರ ವಿಶ್ವಕಪ್‌ ನಂತರ ವೆಸ್ಟ್‌ಇಂಡೀಸ್‌ ಪ್ರವಾಸಕ್ಕೆ ತೆರಳುವ ಭಾರತ ತಂಡದಿಂದ ನಾಯಕ ಮಹೇಂದ್ರಸಿಂಗ್‌ ಧೋನಿ ಹಾಗೂ ಉಪನಾಯಕ ವೀರೇಂದ್ರ ಸೆಹ್ವಾಗ್‌ ವಿಶ್ರಾಂತಿ ಪಡೆಯುತ್ತಾರೆ.

ನಾಯಕತ್ವ ಸಿಕ್ಕ ಗೌತಮ್‌ ಗಂಭೀರ್‌ ಕೂಡ ಗಾಯಗೊಳ್ಳುವುದರಿಂದ ಉಪನಾಯಕ ಸುರೇಶ್‌ ರೈನಾ
ನೇತೃತ್ವ ವಹಿಸಿ ಸರಣಿ ಗೆಲ್ಲಿಸಿಕೊಡುತ್ತಾರೆ. 2014ರ ಬಾಂಗ್ಲಾ ಪ್ರವಾಸಕ್ಕೆ ಹಿರಿಯರೆಲ್ಲ ವಿರಾಮದೆಡೆಗೆ
ತೆರಳಿದ್ದರಿಂದ ಮತ್ತೆ ರೈನಾ ನಾಯಕ. ವಿಂಡೀಸ್‌ ಸರಣಿ ಹಾಗೂ ಇದು ರೈನಾರ ನಾಯಕತ್ವದ ಶಕ್ತಿಯನ್ನು ತೋರಿಸುತ್ತದೆ. ಒಮ್ಮೆ ಮೊದಲು ಬ್ಯಾಟ್‌ ಮಾಡಿ 104ಕ್ಕೆ ಆಲ್‌ಔಟ್‌ ಆಗುವ ಭಾರತ ಪಂದ್ಯವನ್ನು 54 ರನ್‌ಗಳಿಂದ ಗೆಲ್ಲಿಸಿಕೊಡುವಲ್ಲಿ ರೈನಾ ನಾಯಕತ್ವ ಅಪ್ಪಟ ಕಾರಣ. ಆದರೆ ತಂಡದಲ್ಲಿ ಖಾಯಂ ಸ್ಥಾನ ಹೊಂದಲಾಗದವನನ್ನು ಚುಕ್ಕಾಣಿ ಹಿಡಿಯುವಂತೆ ಮಾಡುವ ಪ್ರಯೋಗ ಈವರೆಗೆ ನಡೆದಿಲ್ಲ!

ಟಾಪ್ ನ್ಯೂಸ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.